ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜರ್ನಲಿಸಂ ಅಧ್ಯಯನ- ಅಲುಮ್ನಿ ಮೀಟ್., ತೋಬತೇಕ ಸಿಂಗ್ ನಾಟಕ. ಮಧುರ ನೆನಪುಗಳು ಮತ್ತು ಮಡುಗಟ್ಟಿರುವ ನೋವು

ವಿಶ್ವವಿದ್ಯಾಲಯ... ಅರಿವಿನ (ಜ್ಞಾನ) ದೊಡ್ಡ ವಿಶ್ವವೇ ತೆರಕೊಳ್ಳುವ ತಾಣ. ನಾವು ಆಯ್ದುಕೊಂಡ ವಿಷಯದ ಸಮಗ್ರ ವಿಶ್ವವೇ ಅಲ್ಲಿ ದರ್ಶನವಾಗಬೇಕು. ಹೀಗಾಗುವುದುಂಟೆ!(?) ಪತ್ರಿಕೋದ್ಯಮ ಎಂದರೆ ಪತ್ರಿಕೆಗೆ ಕೆಲಸ ಮಾಡುವುದು... ಅದನ್ನು ಹೇಗೆ ಮಾಡಬೇಕು? ಇದನ್ನು ಕಲಿಸುವುದೇ ವಿಶ್ವವಿದ್ಯಾಲಯ! ಹೀಗೆಂದುಬಿಟ್ಟರೆ... ಬರವಣಿಗೆ, ವರದಿ, ಎಡಿಟಿಂಗ್... ಬಗ್ಗೆ ಟಿಪ್ಸ್ ಕೊಡುವ ಕೆಲಸ ಮಾತ್ರ ವಿವಿಗಳದ್ದಾಗಿಬಿಡುತ್ತದೆ. ಸುಮಾರು ವರ್ಷಗಳ ಹಿಂದೆ ವಿವಿಗಳ ಸ್ಥಿತಿ (ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನಕ್ಕೆ ಸಂಬಂಧಿಸಿ) ಇದಕ್ಕೂ ಭಿನ್ನವೇನಿರಲಿಲ್ಲ. ಇದೇ ಸ್ಥಿತಿ ಈಗಲೂ ಇರಬಹುದು. ಕಾಲೇಜುಗಳಲ್ಲೂ... ಆದರೆ, ಇದೆಲ್ಲ ಮಿತಿಗಳನ್ನು ಮೀರಿ ಎಂಎ ಮಾಸ್ ಕಮ್ಯುನಿಕೇಷನ್ ಅಂಡ್ ಜರ್ನಲಿಸಂ ಅನ್ನು ತುಂಬ ಆಸ್ಥೆಯಿಂದ, ಆಸಕ್ತಿಯಿಂದ ಮತ್ತು ಅರ್ಥಪೂರ್ಣವಾಗಿ ಅಧ್ಯಯನ ಮಾಡುವ ಉಮೇದಿಯ ನನ್ನಂಥ ಹುಡುಗರು ಅನೇಕರಿದ್ದರು. ಸಮೂಹ ಮಾದ್ಯಮ ಅಥವಾ ಒಟ್ಟಾರೆ ಮಾಧ್ಯಮ ಪರಿಕಲ್ಪನೆಯ ಬಗ್ಗೆ ನನಗಂತೂ ಚೆನ್ನಾಗಿ ತಿಳಿದಿತ್ತು. ಥಿಯೇಟರ್, ಸಿನಿಮಾ, ಟಿವಿ, ಡಾಕ್ಯುಮೆಂಟರಿ, ಬೀದಿನಾಟಕ, ಸಾಕ್ಷರತಾ ಚಳವಳಿ, ಜಾಥಾ, ಶಿಬಿರ... ಹೀಗೆ ಮಾಧ್ಯಮದ ಹಲವು ಆಯಾಮಗಳಲ್ಲಿ ನಾನಾಗಲೇ ಸಕ್ರಿಯನಾಗಿ ತೊಡಗಿಕೊಂಡಿದ್ದವ. ಸಮೂಹ ಮಾದ್ಯಮದ ಕೆಲಸ, ಪಾತ್ರ ಮತ್ತು ಅದರ ಪರಿಣಾಮ, ಫಲಿತಾಂಶಗಳ ಬಗ್ಗೆಯೂ ಚೆನ್ನಾಗಿ ಅರಿವಿಟ್ಟುಕೊಂಡೇ ವಿವಿ ಶಿಕ್ಷಣದ ಹೊಸ್ತಿಲು ತುಳಿದಿದ್ದೆ (ಈ ವಿಭಾಗಕ್ಕೆ

ಚರ್ಚ್ ದಾಳಿಯಂಥ ಬೂಟಾಟಿಕೆ ತಡೆಗೆ ಗಣರಾಜ್ಯೋತ್ಸವ ಆಚರಣೆ ಅಗತ್ಯ

ಮೈಸೂರಿನ ಹಿನಕಲ್ ಹೋಲಿ ಚರ್ಚ್ ಮತ್ತು ಮುರುಡೇಶ್ವರ ಸಮೀಪದ ಪೆರ್ನಮಕ್ಕಿ ಗ್ರಾಮದ ಚರ್ಚ್ ಮೇಲೆ ದಾಳಿ ನಡೆದಿದೆ. ದೇಶದ ಗಣರಾಜ್ಯೋತ್ಸವಕ್ಕೆ 60 ವರ್ಷಗಳೇ ಸಂದಿವೆ. ಗಣರಾಜ್ಯೋತ್ಸವವನ್ನು ಸ್ವಾತಂತ್ರ್ಯೋತ್ಸವಕ್ಕಿಂತ ಸಂಭ್ರಮದಿಂದ ಮತ್ತು ತುಂಬ ಹೆಮ್ಮೆಯಿಂದ ಆಚರಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಹಕ್ಕುಗಳ ಬಗ್ಗೆ ಹೇಳುವ ಆಚರಣೆ. ಆಗಸ್ಟ್ 15  ಸಾಧನೆ. ಗಣರಾಜ್ಯೋತ್ಸವ ನಿತ್ಯದ ಬದುಕಿನ ಸಂಭ್ರಮಕ್ಕೆ ಭದ್ರ ಅಡಿಪಾಯ. ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಧಾರ್ಮಿಕ ಹಕ್ಕು. ನಂಬಿಕೆಗಳ ಹಕ್ಕು, ಆಚರಣೆ, ಸಂಪ್ರದಾಯ ಪಾಲನೆ, ಪೂಜಿಸುವ, ಪ್ರಾರ್ಥಿಸುವ ಹಕ್ಕು. ಇದಕ್ಕೆ ಲಿಖಿತ ಸಂವಿಧಾನದ ಹಕ್ಕುಪತ್ರವಿದೆ. ಇದಕ್ಕಾಗಿ ಯಾರಪ್ಪನ ಅನುಮತಿಯೂ ಬೇಕಿಲ್ಲ. ಮತ್ತು ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಥವಾ ಬಲಪ್ರಯೋಗದ ಮೂಲಕ, ಪುಂಡಾಟಿಕೆ, ಬೂಟಾಟಿಕೆ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ. ಭಾರತದಂಥ ಬಹುಮುಖಿ ಸಂಸ್ಕೃತಿಯ ದೇಶಕ್ಕೆ ಇದೆಲ್ಲ ಬಹುದೊಡ್ಡ ಸವಾಲೇನಲ್ಲ. ಒಂದು ಪ್ರಭುತ್ವ ಮೂಲದಲ್ಲಿ ನೆಲದ ಆಶಯಗಳನ್ನು, ಪರಂಪರೆಯ ಮೌಲ್ಯಗಳನ್ನು ಅಡಿಪಾಯಾಗಿಟ್ಟುಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ರಾಜ್ಯದ ಕಥೆಯೇ ಬೇರೆಯಾಗಿದೆ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಯಶಸ್ವಿಯಾದ ಕೇಸರಿ ಪ್ರಾಜೆಕ್ಟ್ ಅನ್ನು ಅದೇ ಸ್ವರೂಪದಲ್ಲಿ ಇಲ್ಲಿಯೂ ತುರುಕುವ ಯತ್ನ ಇಲ್ಲೀಗ ನಡೆಯುತ್ತಿದೆ. ಈಗೀಗ ಹೆಚ್ಚುತ್ತಿರುವ ಚರ್

ಗೂಡು ಕಳಕೊಂಡ ಗುಬ್ಬಚ್ಚಿಗಳು...!

ಈ ಚಿತ್ರ ನೋಡಿ ನಿಮಗೇನನ್ನಿಸಿತು? ಯಾವುದೋ ಕಟ್ಟಡದೊಳಗೆ ಗುಬ್ಬಚ್ಚಿಗಳು  ಕೂತಿದ್ದನ್ನು ಮೊಬೈಲ್ ಫೋನಿನಲ್ಲಿ ಸೆರೆಹಿಡಿದಿದ್ದು ಅಂತನ್ನಿಸಿರಬೇಕು. ಹೌದು ಇದು ಮೋಬೈಲ್ ಫೋನಿನ ಕ್ಯಾಮೆರಾದಿಂದ ನಾನೇ ಸೆರೆಹಿಡಿದಿದ್ದು. ಈ ಕಟ್ಟಡ ನಮ್ಮ ಬೆಂಗಳೂರು ಇಂಟರ್ ನ್ಯಾಷನಲ್  ಏರ್ ಪೋರ್ಟ್...  ಅದರೊಳಗಿನ ಕ್ಯಾಂಟಿನ್ ನಲ್ಲಿ ತೆಗೆದ ಚಿತ್ರಗಳಿವು. ಅಲ್ಲಿ ಗುಬ್ಬಚ್ಚಿಗಳದ್ದೇ ಸದ್ದು, ಪಿಸುಮಾತು, ಚಿನಕುರಳಿ ಮಾತು... ನೋವಿನ ದನಿ...  ಕೇಳಿಸುತ್ತಿತ್ತು...!                                                                                                                                                                                                                      ಅದೆಷ್ಟು ಸ್ವಚ್ಚಂದವಾಗಿ ಹಾರಾಡುತ್ತಿದ್ದ ಗುಬ್ಬಚ್ಚಿಗಳ ಗೂಡುಗಳಿಲ್ಲಿ ಮುರುಟಿಹೋಗಿವೆಯೋ? ನೂರಾರು ಎಕರೆ ಜಮೀನಿನಲ್ಲಿ  ಹೀಗೆ ಕಾಂಕ್ರೀಟ್ ಕಾಡೊಂದನ್ನು ಕಟ್ಟಿ ಅಲ್ಲಿಂದ ಲೋಹದ ಹಕ್ಕಿಗಳ ಹಾರಾಟಕ್ಕೆ ಜಾಗ ಮಾಡಿಕೊಡಲು ಅದೆಷ್ಟು ಮರಗಳು ಉರುಳಿದವೋ.. ಅಲ್ಲೆಲ್ಲ ಗೂಡು ಕಟ್ಟಿ ಪ್ರೀತಿ, ಪ್ರಣಯ, ಮೈಥುನ, ಮರಿಗಳ ಆರೈಕೆಯಲ್ಲಿ ತೊಡಗಿದ್ದ  ಗುಬ್ಬಚ್ಚಿಗಳು ಇದ್ದಕ್ಕಿದ್ದಂತೆ ಕಳಕೊಂಡ ನೆಲೆಯಿಂದ ಅದೆಷ್ಟು  ಕಂಗಾಲಾದವೋ... ಬಹುಶಃ ಈ ಗುಬ್ಬಚ್ಚಿಗಳು ತಾವು ಕಳಕೊಂಡ ಬದುಕನ್ನಿಲ್ಲೇ ಮತ್ತೆ ಹುಡುಕಿಕೊಳ್ಳಲು ಅಲೆಯುತ್ತಿರಬಹುದ

ಪೊನ್ನಪ್ಪ ಅವರ ಪ್ರಗತಿಪರ ಧೋರಣೆಗೆ ದಿಲ್ ಸೇ ಸಲಾಂ...

Whoso loveth father or mother more than me is not worthy of me.... Conflicts between conscience and law, in which the true Christian will feel bound to honour the man who follows his own conscience rather than the dictates of the law... ಹೀಗೆ ಒಂದಷ್ಟು ಕ್ರೈಸ್ತ ನಂಬಿಕೆಗಳನ್ನಿಟ್ಟುಕೊಂಡು ಬರ್ಟ್ರಂಡ್ ರಸೆಲ್ ಕುಟುಂಬ ಕಲ್ಪನೆಯ ಬಗ್ಗೆ ಪುಸ್ತಕವೊಂದರಲ್ಲಿ ಚರ್ಚಿಸಿದ್ದಾನೆ. ಮದುವೆ ಮತ್ತು ಆದರ್ಶ ಕಲ್ಪನೆಯ ಬಗ್ಗೆ  ಅರ್ಥಪೂರ್ಣ ಪ್ರಸ್ತಾಪ ಮಾಡಿದ್ದಾನೆ. ಅವನ ಒಟ್ಟು ಉದ್ದೇಶ ಹೇಗೆ ಕುಟುಂಬ ಕಲ್ಪನೆಗಳು ಮತ್ತು ಅದರ ಮೇಲೆ ಧರ್ಮದ ಹಿಡಿತಗಳು ಆದರ್ಶದ ಹೆಸರಲ್ಲಿ ಕಟ್ಟಲ್ಪಡುತ್ತವೆ, ಪುರಾತನ ನಂಬಿಕೆಗಳು ಮತ್ತು ಆಧುನಿಕ ಧೋರಣೆಗಳ ನಡುವಿನ ಸಂಘರ್ಷಗಳು ಹೇಗೆ ಒಂದಕ್ಕೊಂದು ತಿಕ್ಕಾಟ ನಡೆಸುತ್ತವೆ... ಎಂದು ಅದರಲ್ಲಿ ವಿವರಿಸುವ ಯತ್ನ ಮಾಡಿದ್ದಾನೆ. ಧರ್ಮ ಮತ್ತು ಸಂಪ್ರದಾಯಗಳ ಸೀಮಿತ ಕಟ್ಟಳೆಗಳನ್ನು ಮೀರಿ ಮನುಷ್ಯ ತನ್ನ ಅಂತಃಪ್ರೇರಣೆಗೆ ಹೆಚ್ಚು ಮಹತ್ವ ಕೊಡುವುದರ ಮೂಲಕ ಅವನ ವ್ಯಕ್ತಿತ್ವ ಪ್ರಖರಗೊಳ್ಳುತ್ತಾ ಸಾಗುತ್ತದೆ ಎನ್ನುವುದು ಮಾತ್ರ ಸ್ಪಷ್ಟ. ಪುರಾತನ ಕಾಲದ ಕ್ರೈಸ್ತರು ಧರ್ಮದ ಕಟ್ಟಳೆಗಳಿಗೆ ಮಹತ್ವ ಕೊಡುತ್ತ ಬಂದಿದ್ದರು. ಅದಕ್ಕೂ ಹಿಂದೆ ಯಾವ ಮಿತಿಗಳೂ ಇರಲಿಲ್ಲ. ಆಗಿನ ಭೀಕರ ಸ್ಥಿತಿಯಿಂದ ಒಂದಷ್ಟು ಪ್ರಗತಿ ಸಾಧನೆಗೆ ಆ ಥರದ ಧರ್ಮ ಬಳಕೆಯಾಯ್ತಾದರೂ ಕಾಲಾ ನಂತರದಲ್ಲಿ ಅದರ