ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಲದ ಅನಂತತೆಯ ಸ್ಲೇಟಿನ ಮೇಲೆ...

ಮಂಜಿನ ಮಳೆ ಸುರಿಯುತ್ತಿದೆ. ಏರ್ ಫ್ಲಾರಿಡಾ- 90  ವಿಮಾನ ರನ್ ವೇ ಮೇಲೆ ಸಾಗುತ್ತಿದೆ. ಅದರ ರೆಕ್ಕೆಗಳ ಮೇಲೆ ಭಾರಿ ಪ್ರಮಾಣದ ಮಂಜು ಬಿದ್ದಿದೆ. ಯಾವ ಎಚ್ಚರಿಕೆಯನ್ನೂ ಲೆಕ್ಕಿಸದ ಪೈಲಟ್ ಟೇಕಾಫ್ ಗೆ ಮುಂದಾಗುತ್ತಾನೆ. ಮಂಜಿನ ಭಾರಿ ಮಳೆಯ ನಡುವೆ ವಿಮಾನ ನೆಲ ಬಿಟ್ಟು ಮೇಲಕ್ಕೇಳುತ್ತದೆ. ಟೇಕಾಫ್ ಗೆ ಸ್ವಲ್ಪವೇ ಮುಂಚಿನ ಸಮಯದಲ್ಲಿ ಕೋ ಪೈಲಟ್ ಗೆ ಏನೋ ಸಂಶಯ. ಅವನು ಪೈಲಟ್ ಗೆ ಎಚ್ಚರಿಸುತ್ತಾನೆ. ಕೋ ಪೈಲಟ್: ಏನೋ ತೊಂದರೆ ಕಾಣಿಸ್ತಿದೆ. ಪೈಲಟ್: ರೀಡಿಂಗ್ಸ್ ಸರಿಯಾಗೇ ತೋರಿಸ್ತಿದೆ. ಕೋ ಪೈಲಟ್:   ಆ ರೀಡಿಂಗ್ ಫಾಲ್ಸ್ ಸೆಕ್ಯುರಿಟಿ ಫೀಲಿಂಗ್ ತರಿಸ್ತಿರಬಹುದೇನೋ. (ಪೈಲಟ್ ಮತ್ತಷ್ಟು ಗುಂಡಿಗಳನ್ನು ಒತ್ತುತ್ತಾನೆ. ರೆಕ್ಕೆಯ ಮೇಲಿನ ಮಂಜು ತೆರವಿಗೆ ಯತ್ನಿಸುತ್ತಾನೆ. ಕೀ ಎಂಜಿನ್ ಸೆನ್ಸರೀಸ್ ಫ್ರೋಜನ್ ಆಗಿರುತ್ತದೆ. ವಿಂಗ್ ಆಂಟಿ ಐಸ್  ಸಿಸ್ಟಂ (anti ice system)  ಆಫ್ ಆಗಿದ್ದನ್ನು ಮತ್ತೆ ಕೋ ಪೈಲಟ್ ಎಚ್ಚರಿಸುತ್ತಾನೆ). ಕೋ ಪೈಲಟ್ : ಓ ಗಾಡ್! ಏನೋ ತೊಂದರೆ ಇದೆ. ನೋಡಿಲ್ಲಿ ಇದ್ಯಾಕೊ ಸರಿ ಕಾಣಿಸ್ತಿಲ್ಲ. ಇಲ್ಲ ಇದೇನೋ ಸರಿ ಇಲ್ಲ... (ಕೋ ಪೈಲಟ್ ಚಡಪಡಿಸುತ್ತಲೇ ಇರುತ್ತಾನೆ) ಪೈಲಟ್: ಹೌದು ಸರಿ ಇದೆ. ನೋಡಿಲ್ಲಿ ಎಕ್ಸಿಲರೇಷನ್ 80 ನಾಟ್ಸ್ ರೀಡಿಂಗ್ ತೋರಿಸ್ತಿದೆ. ಕೋ ಪೈಲಟ್: ಇಲ್ಲ ಖಂಡಿತ ಇದೇನೋ ಸರಿ ಇಲ್ಲ... (ಬ್ಲ್ಯಾಕ್ ಬಾಕ್ಸ್ ಪ್ರಕಾರ ಕಾಕ್ಪಿಟ್ ರೀಡಿಂಗ್ ಸೂಕ್ತ ಅಂಕಿಯನ್ನೇ ತೋರಿಸ್ತಿತ್ತು. ಎಂಜಿನ್ ಬೇಕಾದ ಪ

ಮಲೆಗಳಲ್ಲಿ ಮದುಮಗಳು: ಅದ್ಭುತ ರಂಗಾನುಭವ! ಆದರೆ...

ಮೈಸೂರು ರಂಗಾಯಣದಂಗಳದಲ್ಲಿ  ಸೃಷ್ಟಿಯಾಗಿದ್ದ 'ಮಲೆಗಳಲ್ಲಿ' ಮದುಮಗಳು  ಸಂಭ್ರಮಿಸಿದ ಪರಿಗೆ ರಂಗಪ್ರೇಕ್ಷಕರೆಲ್ಲ ಮೂಕವಿಸ್ಮಿತ! ಕನ್ನಡದ ಮಹಾಕಾದಂಬರಿ  "ಮಲೆಗಳಲ್ಲಿ ಮದುಮಗಳು" (ರಚನೆ: ಕುವೆಂಪು)  ಹೀಗೆ ಅಕ್ಷರಶಃ ಜೀವಪಡಕೊಂಡು ಒಂದಿಡೀ ರಾತ್ರಿ ಬದುಕಿತು! (ಮದುಮಗಳು ಈಗ ಹಲವು ರಾತ್ರಿಗಳನ್ನೂ ಕಾಣುತ್ತಿದ್ದಾಳೆ) ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಕಾದಬಂಬರಿಯೊಂದು ಹೀಗೆ ರಂಗರೂಪ ಕಂಡಿದ್ದು ಬಹುಶಃ ಇದೇ ಮೊದಲಿರಬೇಕು. "ಮಲೆಗಳಲ್ಲಿ ಮದುಮಗಳು" ಹೆಸರಾಂತ ರಂಗಕರ್ಮಿ ಸಿ. ಬಸವಲಿಂಗಯ್ಯ ಅವರ ಮಹತ್ವಾಕಾಂಕ್ಷೆಯ ರಂಗಸಾಹಸ. ಪ್ರಯೋಗದಲ್ಲಿ ಬಹುವಾಗಿ ಸೆಳೆದಿದ್ದು ರಂಗವಿನ್ಯಾಸ (ವಿನ್ಯಾಸ: ದ್ವಾರ್ಕಿ). ಮಲೆನಾಡಿನ ಒಂದು ಭಾಗವನ್ನೇ ಕತ್ತರಿಸಿ ತಂದು ರಂಗಾಯಣದ ಆವರಣದಲ್ಲಿಟ್ಟಂತಿತ್ತು. ನಾಟಕದ ಜೀವಾಳವೇ ಈ ವಿನ್ಯಾಸ ಎಂದರೆ ತಪ್ಪಲ್ಲ. ಒಟ್ಟಾರೆಯ ಕಥೆಯ ಮೂಡ್ ಸೃಷ್ಟಿಯಾಗೋದೇ ಮಲೆನಾಡಿನ ಪರಿಸರದಿಂದ. ಪಾತ್ರಗಳನ್ನು ಇದರಿಂದ ಹೊರಕ್ಕಿಟ್ಟರೆ ಕಥೆಯೇ ನೀರಸ. ಹೀಗಾಗಿ ರಂಗದ ಮೇಲೆ ಕಾದಂಬರಿ ತರಲು ಇಂಥ ಪರಿಸರದ ಮರುಸೃಷ್ಟಿಯ ಸಾಹಸ ಅನಿವಾರ್ಯ. ಒಟ್ಟು ರಂಗವನ್ನು ನಾಲ್ಕು ಸ್ಥಳಗಳಲ್ಲಿ ವಿಂಗಡಿಸಿಕೊಳ್ಳಲಾಗಿತ್ತು. ಕಥೆಯ ಓಘ ಮತ್ತು ಅದು ಬಯಸುವ ಪರಿಸರ, ಮೂಡ್ ಗೆ ತಕ್ಕಂತೆ ರಂಗಸಜ್ಜಿಕೆ ಮಾಡಲಾಗಿತ್ತು. ಕಥೆಯ ಒಂದು ಭಾಗ ಮೊದಲ ರಂಗಸಜ್ಜಿಕೆಯಲ್ಲಿ ಕೊನೆಗೊಂಡರೆ ಮುಂದಿನದು ಮಿಕ್ಕ ರಂಗಸಜ್ಜಿಕೆಗಳಲ್ಲಿ... ಹೀಗೆ ದೃಶ್ಯಗ

ಚೌಗಲೆಯವರ 'ಕಸುವಿನ ಕಸ್ತೂರಬಾ'

ಗಾಂಧೀಜಿಯವರ ಮೊಮ್ಮಗಳು (ರಾಮದಾಸ್ ಗಾಂಧಿ ಮಗಳು) ಸುಮಿತ್ರಾ ಕುಲಕರ್ಣಿ ತಮ್ಮ "ಮಹಾತ್ಮಾ ಗಾಂಧಿ- ಮೇರೆ ಪಿತಾಮಹ" ಪುಸ್ತಕದಲ್ಲಿ  ಋಷಿಪತ್ನಿ ಅರುಂಧತಿಯ ಪ್ರಸ್ತಾಪ ಮಾಡಿದ್ದಾರೆ. ಅರುಂಧತಿ ಬ್ರಹ್ಮರ್ಷಿ ವಸಿಷ್ಠರ (ರಾಮನ ತಂದೆ ದಶರಥನಿಗೆ ಇವರು ರಾಜಗುರುವಾಗಿದ್ದರಂತೆ) ಸಹಧರ್ಮಿಣಿ.  ಋಷಿಯ ಶ್ರೇಷ್ಠ ಪತ್ನಿ. ತ್ರಿಕಾಲಜ್ಞಾನಿ ವಶಿಷ್ಠರದು ನ್ಯಾಯನೀತಿಯ ಬದುಕು. ಹೀಗಾಗಿ ಸಪ್ತಋಷಿ ಮಂಡಲದಲ್ಲಿ ವಶಿಷ್ಠರಿಗೆ ಸ್ಥಾನ ಕಲ್ಪಿಸಲಾಗಿದೆಯಂತೆ. ರಾತ್ರಿ ಆಕಾಶದಲ್ಲಿ ಏಳು ಚುಕ್ಕೆಗಳ ಒಂದು ಆಕೃತಿ ಥೇಟು ಸುಂದರ ಸ್ತ್ರೀಯ ಮೂಗುನತ್ತಿನಂತೆ ಹೊಳೆಯುತ್ತಿರುವುದನ್ನು ಗಮನಿಸಿರಬಹುದು. ಅದಕ್ಕೆ ಸಪ್ತರ್ಷಿ ಮಂಡಲ (ಹೀಗೊಂದು ನಂಬಿಕೆಯಷ್ಟೇ)  ಎಂದು ಕರೆಯುತ್ತಾರೆ. ಅದರ ಜತೆಗೊಂದು ಪುಟಾಣಿ ನಕ್ಷತ್ರ ಫಳ ಫಳಂತ ಹೊಳೆಯುತ್ತಿರುತ್ತದೆ. ತಾರಾಮಂಡಲದಲ್ಲಿ ಅದೆಷ್ಟೊ ನಕ್ಷತ್ರಗಳ ರಾಶಿಯಲ್ಲಿ ಸಪ್ತರ್ಷಿ ಮಂಡಲದ ಜತೆ ಹೊಳೆಯುವ ಸೌಭಾಗ್ಯ ಈ ಪುಟಾಣಿ ನಕ್ಷತ್ರಕ್ಕೆ ಮಾತ್ರವಿದೆ ಎನ್ನುವುದು ವಿಶೇಷ. ಅದಕ್ಕೆ ಅರುಂಧತಿ ಎಂದು ಹೆಸರು. ಗಾಂಧೀಜಿ ಎನ್ನುವ ಮಹಾಸಂತ, ಋಷಿಗುಣದ ವ್ಯಕ್ತಿಗೆ ಸೂಕ್ತ ಪತ್ನಿಯಾಗಿ ಅವರೆಲ್ಲ ನ್ಯಾಯನೀತಿಯ ಹೋರಾಟಕ್ಕೆ ಸಾಥ್ ಕೊಟ್ಟವರು ಕಸ್ತೂರಬಾ. ಹೀಗಾಗಿ ಕಸ್ತೂರಬಾ ನಿಸ್ಸಂದೇಹವಾಗಿ ಅರುಂಧತಿಯ ಸ್ಥಾನಕ್ಕೇರುವಂಥ ಹೆಣ್ಣು ಎನ್ನುವುದು ಸುಮಿತ್ರಾ ಕುಲಕರ್ಣಿಯವರ ವರ್ಣನೆ, ಮತ್ತು ಹೋಲಿಕೆ. ಕಸ್ತೂರಬಾ ಗಾಂಧಿ ವ್ಯಕ್ತಿತ್ವದ ಪ್ರಖರತೆ ಮ

ಈ ಕವಿ ಜತೆ ಅದೆಷ್ಟು ಕಾವ್ಯ-ನೋವು ಮಣ್ಣಾಯಿತೋ!

ಈ ಇರುವೆಯ ಮೇಲೆ ನನ್ನ ಭಾರದ ಹೆಜ್ಜೆಯನಿಟ್ಟೆ ತುಸು ಕಾಲದ ನಂತರ ತೆಗೆದೆ ಇರುವೆ ಮತ್ತೆ ಚಲಿಸುತ್ತಿದೆ ಏ ಸೂಜಿಯ ಗಾತ್ರದ ಜೀವವೇ ನನ್ನ ಭಾರ ಹೊರುವ ನಿನ್ನ ಬೆನ್ನಿಗೆ ಶರಣು... ... ಆ ಬೇಲಿಯ ದಡದಿ ನಿಧಾನಕ್ಕೆ ತೆವಳುತ್ತಿರುವ ಬಸವನ ಹುಳುವೇ ನನ್ನ ಭಾರ ಹೊರಲಾರದ ನಿನ್ನ ಮೃದುತ್ವಕ್ಕೂ ಶರಣು... ನಾಗತಿಹಳ್ಳಿ ರಮೇಶ್ ಒಂದೆರಡು ಪೆಗ್ ಏರಿಸಿ ಹೀಗೆ ಹಾಡುತ್ತಿದ್ದುದನ್ನು ಕೇಳಿದಾಗ, ಎನ್ಕೆ ಕಾವ್ಯದ ಈ ಪರಿಯ ಕಸುವಿಗೆ, ಮುಗ್ಧತೆಗೆ ಮನಸೋತಿದ್ದೆ. ರಮೇಶ್ ಭೇಟಿ ಮಾಡಿದಾಗೆಲ್ಲ ಮತ್ತೆ ಮತ್ತೆ ಈ ಹಾಡನ್ನು ಹೇಳುತ್ತಿದ್ದ. ತಾನೇ ಬರೆದಷ್ಟು ಖುಷಿಯಿಂದ ಅದನ್ನು ರಮೇಶ್ ಹಾಡುತ್ತಿದ್ದ.  ಹೀಗೆ ಕಾವ್ಯದ ಮೂಲಕವೇ ಎನ್. ಕೆ. ಹನುಮಂತಯ್ಯ ಪರಿಚಯವಾಯಿತು.  ಆ ನಂತರದ ಕೆಲ ಭೇಟಿಗಳಲ್ಲಿ ಕೆಲ ವಿಷಯಗಳ ಮೇಲೆ ಹರಟಿದ್ದೆವು.   ಎಸ್.ವಿಷ್ಣುಕುಮಾರ್ ಮೂಲಕವೇ ಹನುಮಂತಯ್ಯ ಹೆಚ್ಚು ಆಪ್ತವಾಗಿ ಪರಿಚಯವಾಗಿದ್ದು. ಎಂಜಿ ರಸ್ತೆಗೆ ಒಂದೆರಡು ಬಾರಿ ಹನುಮಂತಯ್ಯ ಬಂದಿದ್ದರು. ಟೆಂಪ್ಟೇಷನ್ ಬಾರ್ ನಲ್ಲಿ (ವಿಷ್ಣೂವಿನ ಕಾಯಂ ಶೆಡ್ ಆಗಿತ್ತು) ಹನುಮಂತಯ್ಯ ಜತೆ ಕೆಲ ವಿಚಾರಗಳ ಬಗ್ಗೆ ಉತ್ತಮ ಚರ್ಚೆ ಕೂಡ ನಡೀತು. ಎಂಜಿ ರಸ್ತೆಯ ಹುಡುಗಿಯರು ಮತ್ತು ಅವರ ಬಿಂದಾಸ್ ಅಟಿಟ್ಯೂಡ್ ಅನ್ನು ನೋಡಿ ಹನುಮಂತಯ್ಯ ದಂಗಾಗುತ್ತಿದ್ದರು. ಪದೇ ಪದೇ  'ಇವರೆಲ್ಲ ಅದೆಷ್ಟು ಖುಷಿ ಖುಷಿಯಾಗಿ, ಸಲೀಸಾಗಿ ಪ್ರೀತಿ, ಪ್ರೇಮ, ಪ್ರಣಯ ಮಾಡ್ತಾರೆ! ಇವರ ಮಿಥುನವೂ ಇಷ್ಟೇ ಬಿಂದ