ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

DILSE: ಸೋರುತಿಹುದು ಮನೆಯ ಮಾಳಿಗಿ...

DILSE: ಸೋರುತಿಹುದು ಮನೆಯ ಮಾಳಿಗಿ... : "HOME Directed By: Yann Arthus-Bertrand Plot: With aerial footage from 54 countries, Home is a depiction of how the Earth's problem..."

ಸೋರುತಿಹುದು ಮನೆಯ ಮಾಳಿಗಿ...

HOME Directed By: Yann Arthus-Bertrand Plot: With aerial footage from 54 countries, Home is a depiction of how the Earth's          problems are all interlinked. Genre(s): Documentary Released: June, 2009 Running Time: 1 Hour, 35 Minutes HOME has been made for you : share it! And act for the planet." ಸೋರುತಿಹುದು ಮನೆಯ ಮಾಳಿಗಿ... ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ... ಷರೀಫರು ಶತಮಾನದ ಹಿಂದೆಯೇ  ಈ ದೇಹವೆನ್ನುವ ಮತ್ತು ಒಟ್ಟಾರೆ ವಿಶ್ವವೆನ್ನುವ ಮನೆಯ ಬಗ್ಗೆ  ತುಂಬ ಸ್ಪಷ್ಟವಾಗಿ ಗ್ರಹಿಸಿದರು! ಕಲ್ಲಿಂದ, ಮಣ್ಣಿಂದ ಕಟ್ಟಿಕೊಂಡ ನಾವಿರುವ ಮನೆಯೇ ಎಷ್ಟೊಂದು ತೂತುಗಳಿಂದ ತುಂಬಿಕೊಂಡಿರುತ್ತದೆ ಅಲ್ವಾ? (ತೂತು ತುಂಬಿಕೊಳ್ಳಲು ಸಾಮಾನ್ಯರಿಗೆ ಅವಕಾಶವಿದೆಯೇ? ಕಲ್ಲು, ಮಣ್ಣಿಗೆ ಕೈ ಹಚ್ಚುವ ಸ್ಥಿತಿಯಲ್ಲೂ ಅವರಿಲ್ಲ! ಅದೆಲ್ಲದರ ಮೇಲೆ ಪಾಟೀಲರು, ಶೆಟ್ಟರು, ಗೌಡರು, ರೆಡ್ಡಿ, ಲಾಡ್, ಘೋರ್ಪಡೆ, ಜೆ.ಕೆ. ಸಿಂಘಾನಿಯಾ... ಅಂಥವರದಷ್ಟೇ ಲೈಸನ್ಸ್ ಇದೆ, ಅಧಿಕಾರವಿದೆ! ಆ ಮಾತು ಬೇರೆ.) ಮನೆಯಲ್ಲಿ ಆಹಾರಕ್ಕಾಗಿ ಒಲೆ ಹೊತ್ತಿ ಉರಿಯುತ್ತದೆ. ಹೊಗೆ ಜಾಸ್ತಿಯಾದಾಗ, ಉಸಿರುಗಟ್ಟುವ ಸ್ಥಿತಿ ಬಂದಾಗ ಒಲೆಯನ್ನು ಆರಿಸುವ ಬದಲು ಕಿಟಕಿ, ಬಾಗಿಲು, ಹೊಗೆ ಮಾಳಿಗೆ ಮಾತ್ರ ತೆರೆದಿಟ್ಟುಬಿಡುತ್ತೇವೆ. ಒಲೆ ಆರಬಾರದು. ಯಾಕೆಂದರೆ ಊಟ ರೆಡಿಯಾಗಬೇಕು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

ತಮಸ್ಸು: ಕಗ್ಗತ್ತಲಲ್ಲೊಂದು ಆಶಾಕಿರಣ...

 ಆಲ್ಟರನೇಟ್ ಪವರ್ ಸೊಲ್ಯುಷನ್ ಎನ್ನುವ ಮಾರುಕಟ್ಟೆಯ ಲಾಬಿಗೆ ಆಡಳಿತ ಶರಣಾಗಿದ್ದರಿಂದ ಇಡೀ ರಾಜ್ಯವೀಗ ಕಗ್ಗತ್ತಲಲ್ಲೇ ಇದೆ. ಕತ್ತಲು ಕವಿದಾಗೆಲ್ಲ ಟ್ಯೂಬ್ ಲೈಟ್ ಹಚ್ಚುವ ಹಿಂದೂ-ಹಿಂದೂತ್ವದ ಪೌರೋಹಿತ್ಯ ನಡೆಸುವವರಿಗೆ ಅದರ ಜನಕ ಥಾಮಸ್ ಆಲ್ವಾ ಎಡಿಸನ್ ಕ್ರೈಸ್ತ ಅನ್ನೋದು ಗಮನಕ್ಕೆ ಬರೋದಿಲ್ಲ!?  ಮತಾಂತರ ವಿರೋಧದ ಹೆಸರಲ್ಲಿ ಕ್ರೈಸ್ತ ಮಷಿನರಿಗಳ ಕನಿಷ್ಠ ಧಾರ್ಮಿಕ ಆಶಯಗಳ ಮೇಲೆ ಹರಿಹಾಯುವುದು ಇಲ್ಲಿ ನಡೆಯುತ್ತಲೇ ಇದೆ. ಇದೊಂದು ಥರದ ತಮಸ್ಸು!  ಅಮೀರ್ ಖಾನ್, ರಷೀದ್ ಖಾನ್, ಅಮ್ಜದ್ ಅಲಿ ಖಾನ್, ಝಾಕೀರ್ ಹುಸೇನ್, ಅಲಿ ಅಕ್ಬರ್ ಖಾನ್ ಅವರಂಥವರ ಕೈಯಲ್ಲಿ ಅಸಂಖ್ಯ ಮುಸ್ಲಿಮೇತರರು ಹಿಂದೂಸ್ತಾನಿ ಸಂಗೀತದ ದೀಕ್ಷೆ ಪಡೆಯುವಾಗ ಈ ಉಸ್ತಾದ್ ಗಳೆಲ್ಲ ಮುಸಲ್ಮಾನರು ಎನ್ನುವುದು ಮುಖ್ಯವಾಗೋದೇ ಇಲ್ಲ. "ಕಭೀ ಕಭೀ ಮೇರೆ ದಿಲ್ ಮೇ ಖಯಾಲ್ ಆತಾ ಹೈ, ಕೆ ಜೈಸೆ ತುಝಕೋ ಬನಾಯಾ ಗಯಾ ಹೈ ಮೇರೆ ಲಿಯೆ, ತೂ ಅಬ್ ಸೇ ಪೆಹಲೇ ಸಿತಾರೋಂ ಮೆ ಬಸರಹೀ ಥಿ ಕಹ್ಞೀ, ತುಝೇ ಜಮೀನ್ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ..." ಎನ್ನುವ ಸಾಹಿರ್ ಸಾಲುಗಳು ಕನ್ನಡದಲ್ಲಿ "ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗಿ ಬಂದವಳೆಂದು" ಎಂದು ಹಾಡಾಗಿ ವರ್ಲ್ಡ್ ಫೇಮಸ್ ಆಗುತ್ತದೆ! ಸಾಹಿರ್ ಕೂಡ ಒಬ್ಬ ಮುಸಲ್ಮಾನ.  ಇದೆಲ್ಲ ನಾವು ಮುಸಲ್ಮಾನರಿಂದ ಸಾಂಸ್ಕೃತಿಕವಾಗಿ  ಪಡಕೊಂಡದ್ದು ಎಂದೆನಿಸೋದೇ ಇಲ್ಲ.!!  ಸಿತಾರ್ ನಂಥ ವಾದ್