ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
ಅಯ್ಯೋಧ್ಯಾಯಣ ಇನ್ನೇನು ತೀರ್ಪು ಹೊರಬೀಳತಾ ಇದೆ. ಇಡೀ ಬೆಂಗಳೂರಿನ ಅಂಗಡಿಗಳೆಲ್ಲ ಶೆಟರ್ ಎಳಕೊಂಡು ಮಲಗುತ್ತಿವೆ. ಜನಾ ಭರ್ರ ಅಂತ ಮನೆ ಕಡೆ ಧಾವಿಸುತ್ತಿದ್ದಾರೆ. ಕಳ್ಳರು, ಭಂಡರು, ಕಿರಾತಕರು ಕತ್ತಿ, ಲಾಂಗು ಮಸಿದಿಟ್ಟುಕೊಳ್ಳತೊಡಗಿದ್ದಾರೇನೊ. ಬಾಯಿಯಲ್ಲಿ ರಾಮ-ರಹೀಮ ಬಗಲಿನಲ್ಲಿ ಬಾಂಬು, ಬಂದೂಕು, ಚೂರಿ ಹಿಡಿದು ತಿರುಗುವವರೂ ಇರ್ತಾರೆ. ದೇವ, ದೈವದ ಹೆಸರಲ್ಲಿ ಇಂಥದೊಂದು ಭಯ ಉತ್ಪಾದನೆ (ಭಯೋತ್ಪಾದನೆ) ಸಾಧ್ಯವಾಗಿದ್ದು ಏನು ಸೂಚಿಸುತ್ತದೆ? ಶಾಂತಿ ಮಂತ್ರ ಹೇಳಿದ ಬುದ್ಧನ ನೆಲದಲ್ಲಿ ಎರಡೂ ಕೋಮುಗಳ ನಡುವೆ ಇದೇ ಮೊದಲ ಸಲ ಸೌಹಾರ್ದದ ಮಾತುಗಳು ಕೇಳಿಸುತ್ತಿವೆ. ಎಲ್ಲೆಡೆ ಶಾಂತಿ ಮನವಿಗಳ ಮಹಾಪೂರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ಕಟ್ಟೆಚ್ಚರ ವಹಿಸುತ್ತಿದೆ. ಅದರದೂ ಅಳಿವು-ಉಳಿವಿನ ಪ್ರಶ್ನೆಯೇ. ತೀರ್ಪು ಹೊರಕ್ಕೆ ಬೀಳುವ ಮುನ್ನವೇ ಅದೆಷ್ಟು ಮುನ್ನೆಚ್ಚರಿಕೆಗಳು! ತೀರ್ಪು ಏನೇ ಬರಲಿ. ಅಯ್ಯೋಧ್ಯಾ ಬಗ್ಗೆ ಈಗಲೇ ನೆಟ್ ಚತುರರು ಏನೆಲ್ಲ ಜೋಕುಗಳನ್ನು ಕಟ್ಟತೊಡಗಿದ್ದಾರೆ. ಕಾರ್ಟೂನ್ ಬಿಡಿಸತೊಡಗಿದ್ದಾರೆ ನೋಡೋಣ. ಒಂದು ಸ್ಯಾಂಪಲ್ ಇಲ್ಲಿದೆ ನೋಡಿ. ಇದು ಸೆನ್ಸ್ ಆಫ್ ಹ್ಯೂಮರ್ ದೃಷ್ಟಿಯಿಂದ. ಟವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಉಭಯ ಕೋಮುಗಳ ನಾಯಕರನ್ನು ಸಂವಾದಕ್ಕೆಳೆಯುತ್ತ ಟಿವಿ ನಿರೂಪಕ ಕೇಳುತ್ತಾನೆ. ನಿರೂಪಕ: ಅಯ್ಯೋಧ್ಯಾ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಮ್ಮ ಉಡುಪಿಯ ಕಲ್ಮಾಡಿಯವರಿಗೆ ವಹಿಸಿಕೊಡುವ ನಿ

ತಪಸ್ಸು! ಹೀಗೂ ಒಂದು ಬಂಡಾಯ

ಅಂಗೀ ತೆಗೆದು ಅಂಗಾತಾಗಿ ಮಲಗಿದ್ದ ಸಂಗಾತಿಯನ್ನು ಕಂಡು ಸಂಗೀತವಾದಳು ಅವಳು ಕಾಮ್ರೇಡ್, ಕಾಮ್ರೇಡ್ ಅನ್ನುತ್ತ... ಕಾಮಾಗಿ ರೇಡ್ ಮಾಡಿದಳು ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ,  ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ  ಇದೀನಿ' ಅಂದ್ರು.  ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ. ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು. -ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತಿಂಗಳ ಕಾಲ ತಪಸ್ಸು ಕೈಗೊಂಡಿದ್ದಾರಂತೆ ಎಂದೆಲ್ಲ ಹೇಳಿದರು. ಸ್ವಾಮೀಜಿ