ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ-2

ಕೆಎಲ್ ನುಡಿದ ಭವಿಷ್ಯ ನಿಜವಾಗಲು ಹೆಚ್ಚೆನೂ ಸಮಯ ಹಿಡಿಯಲಿಲ್ಲ. ಗಾಯನ ಮತ್ತು ಸಂಗೀತ ಅಬ್ಬಾ ಬದುಕಿನ  ಉಸಿರೇ ಆಗಿ ಹೋಗಿತ್ತು.  ಹಿಂದಿರುಗಿ ನೋಡುವ ಪ್ರಶ್ನೆಯೇ ಇರಲಿಲ್ಲ. ಅವಕಾಶಗಳು ಅವರನ್ನು ಅರಸಿ ಬರತೊಡಗಿದವು. ಲಾಹೋರಿನ ಆಲ್ ಇಂಡಿಯಾ ರೇಡಿಯೋದಲ್ಲಿ ಹಾಡುವ ಅವಕಾಶ ಒದಗಿ ಬಂದಿತು. 'ಜನ ನನ್ನ ಬಗ್ಗೆ ಏನೇನೋ ಕೇಳುತ್ತಿರುತ್ತಾರೆ. ನಾನವರಿಗೆ ಏನು ಹೇಳಲಿ? ಬಾಲ್ಯದಿಂದಲೇ ಸಂಗೀತ ನನ್ನನ್ನಾವರಿಸಿಕೊಂಡಿತ್ತು. ನನ್ನ ಮನಸು ಸಂಗೀತಕ್ಕೆ ಮಾತ್ರ ಹಾತೊರೆಯುತ್ತಿತ್ತು ಎಂದಷ್ಟೇ ಹೇಳಿ ಸುಮ್ಮನಾಗಿಬಿಡುತ್ತೇನೆ. ನಾನೀ ಹಂತಕ್ಕೆ ಬರಲು ತುಂಬ ಶ್ರಮ ಪಟ್ಟಿದ್ದೇನೆ. ಈ ಶ್ರಮದ ಗುರಿಯನ್ನು ನಾನು ಮುಟ್ಟಲೇಬೇಕು. ಎಲ್ಲವೂ ಅಲ್ಲಾಹುವಿನ ಕೃಪೆ. ನಾನು ಸರಿಯಾದ ವ್ಯಕ್ತಿಗಳನ್ನು ಸರಿಯಾದ ಸಮಯದಲ್ಲಿ ಭೇಟಿ ಮಾಡಿದೆ. ಎಲ್ಲವೂ ಸುಸೂತ್ರವಾಗಿ ಸಾಗಿತು..’ ಅಬ್ಬಾ ಆಗಾಗ ಹೇಳುತ್ತಿದ್ದ ಈ ಮಾತು ನನಗೀಗಲೂ ನೆನಪಿದೆ.  ಹಲವಾರು ಕಷ್ಟ, ಸಂಕಷ್ಟಗಳ ನಡುವೆಯೂ ಹಗಲು ರಾತ್ರಿ ಅವರಲ್ಲಿ ಒಂದೇ ತುಡಿತ. ಅದು ಸಂಗೀತ. ರಫೀ ತಮ್ಮ ಹದಿಮೂರನೇ ವಯಸ್ಸಿನಲ್ಲಿ ಸಂಬಂಧಿ ಬಶೀರನ್ ಬೇಗಂ (ತಂದೆಯ ಸಹೋದರನ ಮಗಳು) ಅವರನ್ನು ಮದುವೆಯಾಗಬೇಕಾಗಿ ಬಂದಿತು. ಅವರ ಹಿರಿಯ ಮಗ ಸಯೀದ್ ಈ ಸಂಬಂಧದಿಂದ ಹುಟ್ಟಿದ್ದು. ಈ ಮದುವೆ ತುಂಬ ಕಾಲ ಬಾಳಲಿಲ್ಲ. ಅಬ್ಬಾ ಬೇಗ ವಿವಾಹ ವಿಚ್ಛೇದನ ಪಡೆದುಕೊಂಡರು. ಅಬ್ಬಾ ಮೊದಲ ಮದುವೆಯ ವಿಷಯ ಮನೆಯ ಎಲ್ಲರಿಗೂ ಗೊತ್ತಿದ್ದ ವಿಚಾರವೇ ಆಗಿತ್ತು.

ಸಾವು...

ಕವಿ ಜಿ.ಎಸ್. ಶಿವರುದ್ರಪ್ಪ ಕಾವ್ಯ ಕಟ್ಟಿದರು. ಅದನ್ನು ಎದೆ ತುಂಬಿ ಹಾಡಿದವರೆಷ್ಟೋ. ಅವರು ಪ್ರೇಮ, ಪ್ರೀತಿಯ ಮಾತು ಹೇಳಿದರು. ಅದೆಷ್ಟೋ ಮಾನವ ಪ್ರೇಮಿಗಳು ಎದೆಗಿಳಿಸಿಕೊಂಡರು. ಕಾವ್ಯ, ಹಾಡು, ಪ್ರೇಮ ... ನಿರಂತರ.   ಇವು ಎಂದೂ ನಿಲ್ಲದ ಧಾರೆಗಳು. ಕವಿತೆಗೆ ಸಾವಿಲ್ಲ, ಕವಿಗೂ... * * *  ಬದುಕಿನೊಟ್ಟಿಗಿನ ಸಂಬಂಧವನ್ನು ಪದ್ಯ, ಗದ್ಯಗಳಲ್ಲಿ ಹಿಡಿದಿಡುವ ಯತ್ನ ಮನುಷ್ಯ ಸೂಕ್ಷ್ಮದ ಸಹಜ ನಡೆ. ಅವನಿಟ್ಟ ಹೆಜ್ಜೆ, ಆಡಿದ ನುಡಿ, ಕನಸಿದ ಭಾವ  ಎಲ್ಲದರ ಪಡಿನೆರಳನ್ನು ಪದ ಪದಗಳಲ್ಲೂ ವಿಸ್ಮಯದಂತೆ ಮೂಡಿಸುವುದು ಕಾವ್ಯಕ್ಕೆ ಸಾಧ್ಯವಿದೆ. ಸಾಲು, ಸಾಲುಗಳ ನಡುವಿನುಸಿರು, ಪಸೆ ಮತ್ತು ಎಲ್ಲ ಎಲ್ಲದರ ಗುಟ್ಟನ್ನು ಒಡಲಲ್ಲಿಟ್ಟುಕೊಂಡ ಕುತೂಹಲ ಧಾರೆಯಂತೆ ಹರಿದು ನಮ್ಮೊಳಗೂ ಇಳಿದಾಗ ಆಗುವ ಅನುಭೂತಿ ... ಭಾವುಕ ಜಗತ್ತನ್ನು ಕಲಾತ್ಮಕಗೊಳಿಸಿದ ಕವಿ ಜಿಎಸ್ಎಸ್ ಜೀವಪ್ರೀತಿಯನ್ನೇ ನೆಚ್ಚಿಕೊಂಡಿದ್ದರು. ಅಂತಃಕರಣ, ಸಹಜತೆ, ಸರಳತೆ ಮತ್ತು ಮುಗ್ಧತೆಯನ್ನು ಕಾವ್ಯಕ್ಕಿಳಿಸಿ ಮಾನವ ಪ್ರೇಮದ ಹೊನಲಾಗಿಸಿದರು. ಕಾವ್ಯ ಒಳಗಿನದೆಲ್ಲವನು ಬಟಾಬಯಲುಗೊಳಿಸಿಕೊಳ್ಳುವ ಕ್ರಿಯೆಯೂ ಹೌದು. ತಮ್ಮ ಮನದಾಳದ ಮಾನವ ಪ್ರೇಮವನ್ನು ಅವರೆಂದೂ ಬಚ್ಚಿಟ್ಟುಕೊಂಡವರಲ್ಲ. ಧಾರೆ ಎರೆದವರು. 'ಪ್ರೀತಿ ಇಲ್ಲದ ಮೇಲೆ...' ಇಲ್ಲಾವುದೂ, ಏನೂ ಇಲ್ಲ  ಎನ್ನುವುದರಲ್ಲಿ ದೊಡ್ಡ ನಂಬಿಕೆ ಇಟ್ಟುಕೊಂಡೇ ಮೊನ್ನೆ ಹೊರಟು ಹೋದರು. ಕಾಣದ ಕಡಲಿನತ್ತ... * * * ವಿಷಾದವೆಂದರೆ ಅ

ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ...

ಉಪಖಂಡದ ಮಹಾನ್ ಗಾಯಕನ ಬಗ್ಗೆ ಅವರ ಸೊಸೆ ಬರೆದ ಪುಸ್ತಕ ಓದಿದೆ.  ಅಬ್ಬಾ (ತಂದೆ ಎಂದರ್ಥ. ಸೊಸೆಗೆ ಮಾವ, ತಂದೆಯಾಗೋದು ಎಂಥ ಅದ್ಭುತ ಭಾವನೆ..) ಎಂದೇ  ಆ ಗಾಯಕನನ್ನು ಗೌರವಿಸುವ ಸೊಸೆಯ ಅಭಿಮಾನ, ಅಂತಃಕರಣದ ಮಾನವೀಯ ಪರಿ ನನಗಂತೂ ಖುಷಿಕೊಟ್ಟಿತು. ಇಡೀ ಪುಸ್ತಕದ ತುಂಬ ಅಬ್ಬಾ ನಸುನಕ್ಕಿದ್ದಾರೆ. ಹೆಮ್ಮೆಯ ಭಾವದಲ್ಲಿ ಕಾಣುತ್ತಾರೆ. ನನ್ನ ಅಮ್ಮೀಗೂ ಈ ಗಾಯಕನ ಹಾಡುಗಳೆಂದರೆ ಪ್ರಾಣ. ಆಕೆಯ ಬಾಯಿಂದ ಹಲವು ಹಾಡುಗಳನ್ನು ಕೇಳಿಸಿಕೊಂಡಿದ್ದೇನೆ. ಕಲಿತಿದ್ದೇನೆ. ನನ್ನ ದೊಡ್ಡ ಮಾಮ (ಮಾಸ್ಟರ್ ಮೊಹಮ್ಮದ್ ಅಲೀ ಮುದ್ನಾಳ್) ಇವರನ್ನು ಹತ್ತಿರದಿಂದ ಕಂಡಿದ್ದರ ಬಗ್ಗೆ ಕೇಳಿ ರೋಮಾಂಚಿತಗೊಂಡಿದ್ದೆ.  ಆ ಅಪ್ರತಿಮ ಗಾಯಕನ ಹಳೆಯ ಹಾಡು ಹಾಡುತ್ತ, ಅನುವಾದ ಮಾಡುತ್ತ ಅಂತೂ ಆತನ ಒಂದಿಡೀ ಚರಿತ್ರೆಯನ್ನು ಕಣ್ಮುಂದೆ ಕಂಡೆ. ಆನಂದಿಸಿದೆ. ಅವಾಕ್ಕಾದೆ. ಅಭಿಮಾನಪಟ್ಟೆ. ಅದನ್ನು ಹೀಗೆ ಬರೆದು ಬಿಟ್ಟೆ. ಇಡೀ ಪುಸ್ತಕದ ಅನುವಾದ ಮಾಡುತ್ತಿದ್ದೇನೆ. ಅದರ ಆಯ್ದ ಭಾಗಗಳನ್ನು ಇಲ್ಲಿ ನೀಡುತ್ತಿದ್ದೇನೆ. ಇಂದು ಗಾಯಕನ ಜನ್ಮದಿನ (ಡಿಸೆಂಬರ್ 24). ಅಬ್ಬಾ... ದೇಶ ವಿಭಜನೆಗೂ ಮುನ್ನ ಅಬ್ಬಾ ಕುಟುಂಬ ಲಾಹೋರಿನಲ್ಲಿತ್ತು. ಸ್ಥಿತಿವಂತ ಮತ್ತು ಧಾರ್ಮಿಕ ಸಂಪ್ರದಾಯಸ್ಥ ಕುಟುಂಬ ಅವರದ್ದಾಗಿತ್ತು. ಅಬ್ಬಾ ಹೊಂದಿದ್ದ ಲೈಫ್ ಸ್ಟೈಲ್ ಮತ್ತು ಗತ್ತು ಇದಕ್ಕೆ ಸಾಕ್ಷಿಯಂತೇ ಇತ್ತು. ತಂದೆ ಹಾಜಿ ಮೊಹಮ್ಮದ್ ಅಲೀ ಮತ್ತು ತಾಯಿ ಅಲ್ಲಾರಖೀ. ಈ ದಂಪತಿಗೆ ಒಟ್ಟು ಎಂ

ಮುಸ್ಸಂಜೆಯ ಮುಲುಕು...

ರವೀಂದ್ರ ಕಲಾಕ್ಷೇತ್ರ-50, ಸುವರ್ಣ ಸಂಭ್ರಮ ನಾಟಕೋತ್ಸವ ಸೋಮವಾರ, 2 ಡಿಸೆಂಬರ್ 2013, ಸಂಜೆ 7.00 ನಾಟಕ: ಮುಸ್ಸಂಜೆ ಕಥಾಪ್ರಸಂಗ (ಪಿ. ಲಂಕೇಶ್ ಕೃತಿ ಆಧಾರಿತ)  ಟಿಕೆಟ್: ರೂ. 50 ರಂಗರೂಪ: ಬಸವರಾಜ್ ಸೂಳೇರಿಪಾಳ್ಯ ಅಭಿನಯ: ರೂಪಾಂತರ ತಂಡ, ಬೆಂಗಳೂರು ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. . * * * ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧ