ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೃಶ್ಯಮಾಧ್ಯಮಕ್ಕೊಂದು ಅರ್ಥಪೂರ್ಣ ಮಾದರಿ ‘ಪೂರ್ವೋತ್ತರ ರಂಗೋತ್ಸವ’

ಬ ರಿಯ ಸಾಹಿತ್ಯಕ ಶಬ್ದ ಸೊಕ್ಕಿನ ಸಂಭಾಷಣೆಗಳಿಂದ ಸೊರಗುತ್ತಿರುವ ಕನ್ನಡ ರಂಗಭೂಮಿ ಮುಟ್ಟಿ ನೋಡಿಕೊಳ್ಳುವಂತೆ ‘ಪೂರ್ವೋತ್ತರ’ ರಂಗೋತ್ಸವದ ನಾಟಕಗಳ ಪ್ರಸ್ತುತಿ ಇತ್ತು. ರಂಗಭೂಮಿ ಅದ್ಭುತ ದೃಶ್ಯ ಮಾಧ್ಯಮ. ಮಾತುಗಳಿಗಿಂತ ದೃಶ್ಯಗಳ ಮೂಲಕ ವಸ್ತುವಿನ ಸಂವೇದನೆಗಳನ್ನು ರಂಗದ ಮೇಲೆ ಅಭಿವ್ಯಕ್ತಿಸುವ ವಿಶಿಷ್ಠ ಕಲಾಪ್ರಕಾರ. ಬಳಸಿದ ಪರಿಕರಗಳು, ಕಲಾತ್ಮಕ ಅಭಿವ್ಯಕ್ತಿಯ ಕಸಬುದಾರಿಕೆ ಏನೇ ಇರಲಿ. ನಾಟಕವೊಂದು ರಂಗಮುಖೇನ ಹೇಳಬೇಕಾದ್ದನ್ನು ದೃಶ್ಯಗಳಲ್ಲಿಯೇ ಹೇಳುವ ಸಾಧ್ಯತೆಗಳನ್ನು ರಂಗೋತ್ಸವ ಸ್ಪಷ್ಟಪಡಿಸಿತು. ಬರಿಯ ಸಂಭಾಷಣೆಗಳು, ಅದದೇ ರಂಗ ಸಂಗೀತದ ಸೋಗಲಾಡಿತನಗಳನ್ನು ನೋಡಿ, ಕೇಳಿ ಬೇಸತ್ತಿದ್ದ ಪ್ರೇಕ್ಷಕರಿಗೆ ದೃಶ್ಯದ ಅನನ್ಯ ಸ್ಪರ್ಶಾನುಭವ ನೀಡಿತು.  ‘ಲೈಫ್‌ ಕ್ಯಾನ್ವಾಸ್‌’ ರಚನೆ ಮತ್ತು ನಿರ್ದೇಶನ: ಅಸೀಮ ಕುಮಾರ್‌ ನಾಥ್‌ ತಂಡ: ಸರ್ಸಾ. ಅಸ್ಸಾಂ ಭಾಷೆ: ಅಸ್ಸಾಮಿ ಉತ್ಸವದಲ್ಲಿ ನನ್ನ ತುಂಬ ಸೆಳೆದ ನಾಟಕ ‘ಲೈಫ್‌ ಕ್ಯಾನ್ವಾಸ್‌’. ಮನುಷ್ಯನ ಅಂತರಂಗದಲ್ಲಿರುವ ಒಂದು ಸ್ಮಶಾನ ಕುರುಕ್ಷೇತ್ರದ ಚಿತ್ರಣ ಇಡೀ ನಾಟಕದ ಜೀವಾಳ. ಪ್ರೀತಿ, ಪ್ರೇಮ, ಕಾಮ ಮತ್ತಿತರ ಅಭಿಲಾಷೆಗಳಿಂದ ಒಳಗೇ ನಡೆಯುವ ಅಂತಃಯುದ್ಧದ ಚಿತ್ರಣ ಕಟ್ಟಿಕೊಟ್ಟ ಬಗೆಯಲ್ಲಿ ಹಲವು ಹೊಸ ಸಾಧ್ಯತೆಗಳಿದ್ದವು. ಭಿನ್ನ ಲೈಟಿಂಗ್‌ವಿನ್ಯಾಸ, ಪರಿಕರಗಳ ಜತೆ ವಾಸ್ತವಿಕತೆಯನ್ನು ಅದೆಷ್ಟು ಸಾಧ್ಯವೊ ಅಷ್ಟು ಸಾಕಾರಗೊಳಿಸಿ ನಾಟಕ ಕಟ್ಟಿಕೊಟ್ಟ ಬಗೆ ನಿಬ್ಬೆರಗುಗೊಳಿಸುವಂತಿತ್ತು. ನ

ಡಿಯರ್‌ ಜಿಂದಗೀ... ನವಿರು ಭಾವನೆಯ ಆತ್ಮಶೋಧ ಯತ್ನ

Directed by Gauri Shinde Starring Alia Bhatt Shah Rukh Khan Cinematography Laxman Utekar  ಸಂಭಾಷಣೆಗಳಿಂದ ಉಪದೇಶ ಅನಿಸಿದರೂ, ನಿರೂಪಣೆಯಲ್ಲಿ ವಸ್ತುವನ್ನು ಮನದಟ್ಟು ಮಾಡುವ ಸೊಗಸುಗಾರಿಕೆ ಇದೆ. ಸಮಕಾಲೀನ ಯುವ ಸಮಸ್ಯೆಯೊಂದನ್ನು ನೇರವಾಗಿ ಮತ್ತು ಅಷ್ಟೇ ನವಿರಾಗಿ ಬಿಚ್ಚಿಟ್ಟು ಪರಿಹಾರವನ್ನೂ ಸೂಚಿಸುವ ಯತ್ನವಿದೆ. ಹೀಗಾಗಿ ಇಡೀ ಚಿತ್ರ ಟಚೀ ಅನಿಸುತ್ತದೆ.  ಆಲಿಯಾ ಭಟ್‌  ಸಮಕಾಲೀನ ಹೆಣ್ಣುಗಳ ಚಿತ್ರಣವನ್ನು ಅಭಿನಯದಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಶಾರುಕ್‌ ಖಾನ್‌ ಹೀರೋಯಿಸಂನಿಂದ ಹೊರಬಂದು ಒಂದು ಪಾತ್ರವಾಗಿ ಗುಡ್‌ ಹ್ಯುಮನ್‌ ಬೀಯಿಂಗ್‌ ತರಹ ಕಾಣಿಸಿಕೊಂಡ ಪರಿ ಸೊಗಸಾಗಿದೆ.  ಯಾವ ಹಮ್ಮು ಬಿಮ್ಮು ಇಲ್ಲದ ಒಬ್ಬ ಮನೋವೈದ್ಯನ ಪಾತ್ರವನ್ನು ಆಪ್ತವೆನಿಸುವಂತೆ ಕಟ್ಟಿಕೊಟ್ಟಿದ್ದು ಖುಷಿ ಕೊಡುವಂಥದು.   ಚಿತ್ರದ ಆಶಯ ಪ್ರೀತಿ, ಪ್ರೇಮ ಸಂಬಂಧಗಳು, ಕೆರಿಯರ್‌, ನಿರೀಕ್ಷೆಗಳು ಅಸಹಿಷ್ಣುತೆಯಿಂದ ನರಳಿ ಎಲ್ಲ ಒಂದಕ್ಕೊಂದು ಭಿನ್ನ ದಿಕ್ಕಿಗೆಳೆಯುತ್ತ ಸಮಕಾಲೀನ ಜನ ಬದುಕೇ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ತಪ್ಪಿದ ತಾಳವನ್ನು ಸರಿಪಡಿಸಿಕೊಳ್ಳಲಾಗದು ಎನ್ನುವ ಮೌಢ್ಯವೂ ಜೊತೆ ಸೇರಿಕೊಂಡಿದೆ. ಇಂಥದೊಂದು ಸಾಮಾಜಿಕ ಸಂಕೀರ್ಣ ಸ್ಥಿತಿಗೆ ತಲುಪಿದ ಹೆಣ್ಣೊಂದರ ಕೇಸ್‌ ಸ್ಟಡಿಯಂಥ ವಸ್ತುವನ್ನಿಟ್ಟುಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಆಶಯ ಈ ಚಿತ್ರದ್ದು.  ಮಾಡಿದ ತಪ್ಪುಗಳಿಗೆ ಸದಾ ಪರಿತಪಿಸಿ ಬದುಕನ

ವೆಡ್ಡಿಂಗ್‌ ಹೆರಲ್ಡ್‌ : ಪ್ರಾಂಜಲ ಮನದ ಚಿತ್ತ–ಭಿತ್ತಿ

ಜಗದ ಅಚ್ಚರಿ, ಸಂಭ್ರಮ ಮತ್ತು ಇತರ ವಿದ್ಯಮಾನಗಳನ್ನು ದಾಖಲಿಸುವ ಮಾಧ್ಯಮ ಲೋಕ ತನ್ನದೇ ಪಾರಿವಾರಿಕ ಸಾಧನೆ, ಸಂಭ್ರಮಗಳನ್ನು ಅಷ್ಟಾಗಿ ದಾಖಲಿಸಿಕೊಳ್ಳುವುದಿಲ್ಲ.  ಇದು ಒಂದರ್ಥದಲ್ಲಿ ಮಾಧ್ಯಮ  ಬದುಕಿನ ಅಘೋಷಿತ ಮೌಲ್ಯ ಕೂಡ. ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕುಟುಂಬ ವರ್ಗ ಕಳೆದ ಮೂರು ದಶಕಗಳ ನಂತರದಲ್ಲಿ ಒಂದು ಕೌಟುಂಬಿಕ ಸಂಭ್ರಮವನ್ನು (ನವೆಂಬರ್‌ 6, 2016  ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭ ಎಂದಾಗ ಏನೆಲ್ಲ ವೈಭವ, ಆಡಂಬರ ಕಲ್ಪನೆಗೆ ಬರುತ್ತದೆ! ಆದರೆ ಟಿಪಿಎಂಎಲ್‌ ಸಂಸ್ಥೆಯ  ಪ್ರಜಾವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಶಾಂತಕುಮಾರ್ ಅವರ ಪುತ್ರ ನಿಖಿಲ್‌  ವಿವಾಹ ಸಮಾರಂಭ ಸರಳ, ಸಹಜ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಭಿನ್ನ ಮತ್ತು ಅರ್ಥಪೂರ್ಣ ಅನ್ನಿಸಿದ್ದು ಸಹಜತೆಯ ಕಾರಣಕ್ಕೆ. ಮಾನವೀಯ ಸ್ಪಂದನೆ ಇಡೀ ಸಮಾರಂಭದ  ಜೀವಕಳೆಯಾಗಿದ್ದು ಅನುಭವಕ್ಕೆ ದಕ್ಕಿದ್ದರಿಂದ.   ಮಾಧ್ಯಮ ಲೋಕದ ದಿಗ್ಗಜ ಕೆ.ಎನ್‌. ಹರಿಕುಮಾರ್‌ ಸರ್‌ (ಕೆ.ಎನ್‌. ಶಾಂತಕುಮಾರ್ ಅವರ ಹಿರಿಯಣ್ಣ) ಸಂಪಾದಕರಾಗಿದ್ದ ಅವಧಿಯಲ್ಲಿ ಅವರ ಜೊತೆ ಸಂದರ್ಶನದ ಸಂದರ್ಭ ಕೆಲ ನಿಮಿಷ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅಂಥ ಅವಕಾಶವೇ ಬರಲಿಲ್ಲ.  ನಿಖಿಲ್‌ ಮದುವೆ ಸಮಾರಂಭದಲ್ಲಿ ಒಂದೆಡೆ ಹರಿಕುಮಾರ್‌ ಸರ್‌ ತಮ್ಮ ಆಪ್ತರ ಜೊತೆ ಚರ್ಚೆಯ

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದೆ. ಕೆಲವು ಸಾವಯವವಾಗಿ ಮತ್ತೆ ಕೆಲವ

‘ಡಿಗ್ರೇಡ್‌’: ಒಂದು ಅದ್ಭುತ ರಾಜಕೀಯ ಲೇವಡಿ

ಚಿತ್ರ: ಡಿಗ್ರೇಡ್‌ Directed by- Arab and Tarzan ಚಿತ್ರದ ನಿರ್ದೇಶಕರು ಅವಳಿ ಸಹೋದರರು. ಸಮಾಜ ಅಥವಾ ಸಮುದಾಯಗಳೊಳಗಿನ ಸೊಕ್ಕು, ಸಹಜತೆ ಮತ್ತು ಆಸಕ್ತಿಗಳೇ ದೇಶದ್ದೂ ಆಗಿರುತ್ತದೆ. ಹಾಗೆಯೇ ದೇಶವೊಂದರ ಹಿಂಸೆ, ಅತಿರೇಕಗಳು ಅಲ್ಲಿನ ಸಮಾಜದ ಒಳಗಿನ ಹಿಂಸೆಯ ಲಕ್ಷಣಗಳನ್ನೇ ಹೋಲುತ್ತವೆ. ಇಂಥ ಲಾಕ್ಷಣಿಕ ಚಿತ್ರಣವನ್ನು ಅತ್ಯಂತ ಕಾಮಿಡಿಯಾಗಿ ಕಟ್ಟಿಕೊಡುವ ಚಿತ್ರ ‘ಡಿಗ್ರೇಡ್‌’. ದೇಶ, ಧರ್ಮ ಭಕ್ತಿಗಳ ಅತಿರೇಕ ಮತ್ತು ಪುಂಡುಗಾರಿಕೆಯನ್ನು ಮೆಲುದನಿಯಲ್ಲೇ ಲೇವಡಿಗೊಳಪಡಿಸುತ್ತದೆ. ನಿರೂಪಣೆ ಚಿತ್ರದ ಹೈಲೈಟ್‌. ಸಹಜ ಚಿತ್ರಣಗಳಿಂದ ತೆರಕೊಳ್ಳುವ ‘ಡಿಗ್ರೇಡ್‌’ ಕ್ರಮೇಣ ಒಂದು ಪ್ರದೇಶದ ಸಮಾಜೋ-ರಾಜಕೀಯ ಕಾರ್ಟೂನ್‌ ಕಟ್ಟಿಕೊಡುತ್ತದೆ. ಫಲಿಸ್ತಾನದ (ಪೆಲಿಸ್ಟೀನ್‌) ಗಾಝಾ ಪಟ್ಟಿಯಲ್ಲಿ ಅದೊಂದು ಬೇಸಿಗೆ ಕಾಲ, ಬ್ಯೂಟಿ ಪಾರ್ಲರ್‌ನಲ್ಲಿ ಹದಿಮೂರು ಹೆಣ್ಣು ಮಕ್ಕಳು ಸಿಂಗಾರಕ್ಕೆಂದು ಸೇರಿಕೊಂಡ ಸಂದರ್ಭವನ್ನಿಟ್ಟುಕೊಂಡು ಚಿತ್ರ ಶುರುವಾಗುತ್ತದೆ. ಮಧುಮಗಳಿಗೆ ಮೇಕ್‌ಅಪ್‌, ಆಂಟೀಗೆ ಬ್ಯೂಟಿ ಟಚ್‌ ಅಪ್‌, ಮಧ್ಯವಯಸ್ಸಿನ ಹೆಂಗಸಿಗೆ ಫೇಸಿಯಲ್‌.. ಇಲ್ಲಿ ಒಬ್ಬೊಬ್ಬರದು ಒಂದೊಂದು ಬ್ಯೂಟಿ ಕಾನ್ಸಿಯಸ್‌. ಈ ಗಿರಾಕಿಗಳನ್ನು ನಿಭಾಯಿಸಲು ಹೆಣಗುವ ಸಲೂನಿನ ಒಡತಿ ರಷ್ಯನ್‌ ಹೆಂಗಸು ವಿಕ್ಟೋರಿಯಾಗೆ ಬೇಗ ಸಲೂನ್‌ ಮುಚ್ಚಿ ಗಂಡನ ತೆಕ್ಕೆ ಸೇರುವ ಕಾತರ. ಮಂದಗತಿಯ ಅವಳ ಸಹಾಯಕಿ ಕ್ರಿಸ್ಟಿನಾಗೆ ಕೆಲಸದ ಮೇಲೆ ಗಮನವಿಲ್ಲ. ಸದಾ ತನ್ನ ಹುಚ್ಚುತನದ ಪ್ರಿ

ಹರೆಯ ಬಯಸುವುದು ತಾಜಾ ತಾಜಾ ಹವಾ..

ಟರ್ಕಿ ಪರಿಪೂರ್ಣ ಇಸ್ಲಾಮಿಕ್‌ ರಾಷ್ಟ್ರವಾಗುಳಿದಿಲ್ಲ. ಸಂಪೂರ್ಣ ಆಧುನಿಕವೂ ಅಲ್ಲ. ಅದರ ಒಂದು ಕಾಲು ಪೂರ್ವ ಯುರೋಪ್‌ನಲ್ಲಿದ್ದರೆ ಮತ್ತೊಂದು ಪಶ್ಚಿಮ ಏಷ್ಯದಲ್ಲಿದೆ. ಐತಿಹಾಸಿಕವಾಗಿ ಅತ್ಯಂತ ಭಿನ್ನ ಮತ್ತು ಹಲವು ಸಂಸ್ಕೃತಿಗಳಿಗೆ ತೆರಕೊಂಡುದದರ ಜೊತೆಗೆ ಸಂಘರ್ಷಗಳಿಗೂ, ಆಕ್ರಮಣಗಳಿಗೂ ಒಳಗಾದ ದೇಶ. ಜೂಲಿಯಸ್‌ ಸೀಜರ್‌ ಅಮಾಸ್ಯದ ಬಳಿ ಆಕ್ರಮಣ ಮಾಡಿದ. ಬೈಜಂಟೈನ್‌ ಕ್ರೈಸ್ತರು ಚರ್ಚ್‌ಗಳನ್ನು ಕಟ್ಟಿದರು. ಒಟ್ಟೊಮನ್‌ ಸುಲ್ತಾನರಂತೂ ಇಸ್ತಾನಬುಲ್‌ನಲ್ಲಿ ಟಾಪ್‌ಕ್ಯಾಪ್‌ ಅರಮನೆಗಳನ್ನು ಕಟ್ಟಿಸಿ ವೈಭವದ ರಾಜ್ಯಭಾರ ನಡೆಸಿದರು (ಅವರ ಸಾಮ್ರಾಜ್ಯ ಬುಡಾಪೆಸ್ಟ್‌ನಿಂದ ಕಾಬೂಲಿನವರೆಗೂ ವ್ಯಾಪಿಸಿತ್ತು). ರೋಮನ್‌ರ ಅಟ್ಟಹಾಸಕ್ಕೆ ಕಡಿವಾಣ ಬಿದ್ದದ್ದು ಇಲ್ಲಿಯೇ. ಮಧ್ಯಯುಗೀನ ಅರ್ಮೇನಿಯನ್ನರು ಚರ್ಚ್‌ಗಳನ್ನು ಕಟ್ಟಿದ್ದು, ಅನುಭಾವ ಪರಪಂಚದ ಸೂಫಿಗಳು ಬಹುಕಾಲ ನೆಲೆ ಕಂಡುಕೊಂಡಿದ್ದು ಇಲ್ಲೇ. ಪ್ರಾಚೀನ ಗ್ರೀಕ್‌ ಸಂಸ್ಕೃತಿಯಿಂದ ಹಿಡಿದು, ಪರ್ಷಿಯನ್‌, ರೋಮ್‌, ಬೈಜಂಟೈನ್‌ ಮತ್ತು ಒಟ್ಟೊಮನ್‌ ಸಾಮ್ರಾಜ್ಯ... ಹೀಗೆ ಒಟ್ಟು ಎಲ್ಲದರಿಂದ ಒಂದೊಂದಷ್ಟು ಪಡಕೊಂಡ ಟರ್ಕಿ ಸಂಸ್ಕೃತಿ ಮಿಸಳ್‌ ಭಾಜೀಯಂತೆ. ಇಸ್ತಾನಬುಲ್‌ ಈಗಂತೂ ಅತ್ಯಂತ ಕಾಸ್ಮೊಪಾಲಿಟನ್‌. ಕ್ರೈಸ್ತರ ಚರ್ಚ್‌, ಇಸ್ಲಾಂನ ನೀಲಿ ಮಸೀದಿಗಳು ಇಲ್ಲಿನ ಭವ್ಯ ಮತ್ತು ದಿವ್ಯ ತಾಣಗಳು. ‘ಒಂದು ಲೋಟ ಕಾಫೀ ಒಂದರಿಂದ ನಲವತ್ತು ವರ್ಷದ ಸ್ನೇಹಕ್ಕೆ ಅಣಿಗೊಳಿಸಿಬಿಡುತ್ತದೆ’ ಎನ್ನುವುದು ಇಲ್ಲಿನ

‘ನಮೋ..’ ರಾಜಕೀಯ ಸಂಸ್ಕೃತಿಯ ಕ್ಯಾರಿಕೇಚರ್

ಒಂದು ದೇಶೀಯ ಜಾನಪದ ಕಥೆಯ ಪ್ಯಾಲಿ ಯಂಕಟೇಸಾ ಒಂದೇ ಏಟಿಗೆ ಐದು ನೊಣಗಳನ್ನು ತನ್ನ ಮುಷ್ಠಿಯಲ್ಲಿ ಹಿಡಿದಾಗ ಏನೋ ದೊಡ್ಡ ಪವಾಡವನ್ನೇ ಸಾಧಿಸಿದಂತೆ ಸಂಭ್ರಮಪಡುತ್ತಾನೆ. ಜನ ಕೂಡ ಪವಾಡಕ್ಕೆ ತಲೆದೂಗುತ್ತಾರೆ.ಮುಂದೆ ನೊಣಗೇಶನಾಗಿ ಆಕಸ್ಮಿಕವಾಗಿ ನಡೆಯುವ ಘಟನೆಗಳನ್ನೇ ಪವಾಡ ಎನ್ನುವಂಥ ಭ್ರಮೆಯನ್ನಾಗಿಸಿ  ಜನರನ್ನು ಹುಚಪ್ಯಾಲಿ ಮಾಡುವ ಕಾಯಕಕ್ಕೆ ಇಳಿದುಬಿಡುತ್ತಾನೆ. ತಾನು ಮದುವೆಯಾಗಿದ್ದ ಹೆಣ್ಣನ್ನು ನೋಡಲು ಅತ್ತೆ ಮನೆಗೆ ಹೋದಾಗ ಈತನ ಪವಾಡ ದೊಡ್ಡ ಹರವನ್ನೇ ಪಡೆದುಕೊಳ್ಳುತ್ತದೆ. ಕಟ್ಟಿಕೊಂಡ ಹೆಂಡತಿಯನ್ನು ಬಿಟ್ಟು ಕಡೆಗೆ ಅವಳನ್ನು ಮರೆತೇ ಹೋಗುವ ಈತ ವೆಂಕಟೇಶನಾಗಿ ಅವತಾರಿ ಪುರುಷನೇ ಆಗಿ ‘ನಮೋ ವೆಂಕಟೇಶ’ನಾಗುತ್ತಾನೆ. ನಾಡ ಅರಸನಿಗೂ ಪವಾಡದ ಮಂಕು  ಬೂದಿ ಎರಚಿ ರಾಜಕುಮಾರಿಯನ್ನೇ  ವರಿಸುತ್ತಾನೆ. ಅಂದರೆ ಅಧಿಕಾರ ಎನ್ನುವ ಮೋಹಿನಿಯನ್ನು ವರಸಿ ರಾಜನೇ ಆಗುತ್ತಾನೆ. ಆ ಕ್ಷಣದಿಂದ ಈತನ ಪವಾಡ ಮೇಲ್ದರ್ಜೆಗೇರುತ್ತಲೇ ಸಾಗುತ್ತದೆ. ಜನರನ್ನು ಹುಚಪ್ಯಾಲಿ ಮಾಡುವುದಕ್ಕೆ ಅಧಿಕೃತ ಲೈಸನ್ಸದಾರನಂತೆ ವಿಜೃಂಭಿಸ ತೊಡಗುತ್ತಾನೆ. ಇದು ರಾಜಸ್ಥಾನೀ ಜಾನಪದೀಯ ಕಥೆ.  ಇದನ್ನು ಸಮಕಾಲೀನ ಸಮಾಜೋ-ರಾಜಕೀಯ ಮತ್ತು ಧಾರ್ಮಿಕ ಪರಿಸ್ಥಿತಿಗಳ ಸಂದರ್ಭಕ್ಕೆ ಹೋಲಿಸಿ ನೋಡಿದರೆ ನಮ್ಮ ನಡುವೆಯೂ ಇಂಥ ಒಬ್ಬ ‘ನಮೋ’ ಸೃಷ್ಟಿಯಾಗಿದ್ದಾನೆ ಮತ್ತು ಇಂಥದೇ ಪವಾಡದ ಪುಡಿ, ಹುಡಿ ಚೆಲ್ಲಿ ಗೆಲುವಿನ ನಗೆ ಬೀರುತ್ತಿದ್ದಾನೆ,.. ಒಟ್ಟು ಈ ಅರ್ಥದ ರಂಗಪ್ರಯೋಗವೊಂದನ್ನು ಸಮುದಾ

ಬದನಾಮ್‌ ಕಾಶ್ಮೀರ ಬದ್ಮಾಶ್‌ ‘ವಜೀರ’

ವಜೀರ್, ಅಂದರೆ ಪ್ರಧಾನಿ. ಶತರಂಜ್‌ (ಚದುರಂಗ) ನ ಆಟದಲ್ಲಿ ಇದೊಂದು ಪ್ರಮುಖ ದಾಳ. ಬಾದಷಾಹನನ್ನು ರಕ್ಷಿಸುವ ಹೊಣೆ ದಳಪತಿಯದು. ರಾಜನ ಆಡಳಿತದ ಆಶಯಗಳನ್ನು ಪ್ರಜೆಗಳಿಗೆ ತಲುಪಿಸುವುದಕ್ಕಿರುವ ಒಂದು ವ್ಯವಸ್ಥೆಯಲ್ಲಿ ವಜೀರನದು ಪ್ರಮುಖ ಪಾತ್ರ. ಯುದ್ಧ ಹೊರಗೆ ನಡೆದಷ್ಟು ಒಳಗೂ ನಡೆಯುತ್ತದೆ. ಸಾಮ್ರಾಜ್ಯ ವಿಸ್ತರಣೆಗೆ ಯಾ ಸಾಮ್ರಾಜ್ಯ ರಕ್ಷಣೆಗೆ ಬಾದಷಾಹ ತಲೆಕೆಡಿಸಿಕೊಳ್ಳುವಷ್ಟು ಸಾಮ್ರಾಜ್ಯಕ್ಕೆ ಅಧಿಪತಿಯಾಗುವ ಕನಸಿನ ಬಗ್ಗೆ ವಜೀರನೂ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾನೆ. ಬಾದಷಾಹನಿಗೆ ಹತ್ತಿರದ ಈ ಪದವಿ ಒಮ್ಮೊಮ್ಮೆ  ನೇರ ಬಾದಷಾಹನಿಗೇ ಮುಳುವಾದ ಕಥೆಗಳು ಸಾಕಷ್ಟಿವೆ. ವಜೀರ ಹುದ್ದೆ ಬಹುತೇಕ ಸೃಷ್ಟಿ ಅಥವಾ ನೇಮಕಾತಿ. ಅತ್ಯಂತ ಅರ್ಹನಾದವನು ಈ ಹಂತಕ್ಕೆ ಏರುವುದು ಕಷ್ಟ. ಬಹುಶಃ ಇದು ಬಾದಷಹ ಆದವನಿಗೂ ಇಷ್ಟವಾಗುವಂಥದ್ದಲ್ಲ. ಬಾದಷಾಹ ತನಗೆ ಅನುಕೂಲವಾಗಬಲ್ಲ ಮತ್ತು ತನ್ನ ಮಾತುಗಳನ್ನು ಶಿರಸಾವಹಿಸಿ ಪಾಲಿಸುವ ವ್ಯಕ್ತಿಯನ್ನೇ ವಜೀರನನ್ನಾಗಿಸುವುದು. ಕೆಲವು ಸಂದರ್ಭಗಳಲ್ಲಿ ವಜೀರನಾದವನು ಬಾದಷಾಹನ ಚಮಚ್ಯಾ ಆಗುವುದೂ ಇದೆ. ಇವೆಲ್ಲ ರಾಜಕೀಯ ಗುರಿ ಮತ್ತು ಅಧಿಕಾರ ಚದುರಂಗದಾಟಕ್ಕೆ ಪೂರಕವಾಗಬಲ್ಲ ಮೊಹರುಗಳಷ್ಟೇ. ಹೀಗಾಗಿ ವಜೀರ್‌ ಎನ್ನುವುದು ನಿಜವಾದರ್ಥದಲ್ಲಿ ಒಂದು ಮೊಹರಾ ಅಷ್ಟೇ. ವಜೀರ ಸಿನಿಮಾ ಇಂಥದೊಂದು ರಾಜಕೀಯ ಚದುರಂಗದಾಟದ ಪ್ಲಾಟ್‌ ಹೊಂದಿದೆ. ಇಲ್ಲಿ ವಜೀರ ಒಂದು Ghost. ಜನಾಂಗದ ಅಂತಃಕಲಹ, ಜನಾಂಗಗಳ ನಡುವಿನ ಸಂಘರ್ಷದಲ್ಲಿಯೂ

ಪರ್ದಾ ನಹೀ ಜಬ್ ಕೋಯೀ ಖುದಾ ಸೇ,..

ಅವಳು ನಖಾಬ್ (ಬುರ್ಖಾ) ಧರಿಸುತ್ತಾಳೆ. ನೆಲ ನೋಡುತ್ತ ಸಾಗುತ್ತಾಳೆ. ಸಂಪರ್ಕಕ್ಕೆ ಬಂದ ಎಲ್ಲರೊಂದಿಗೆ ಖುಷಿಯಿಂದ ಮಾತನಾಡುತ್ತಾಳೆ. ಮನೆಗೆ ಸಂತೆ, ಹಾಲು ... ಎಲ್ಲ ಅವಳೇ ತರುತ್ತಾಳೆ. ಮಾರ್ಕೆಟ್‌, ಅಂಗಡಿ ಅಲೆದಾಡಿ. ಸಬ್ಜಿ ಮಂಡಿಯಲ್ಲಿ ಕಾಯಕಕ್ಕೂ ಹೋಗುತ್ತಾಳೆ. ಅವಳ ಶೋಹರ್‌ (ಗಂಡ)  ಗಡ್ಡ ನೆರೆತಿದೆ. ಶುಭ್ರ ಮತ್ತು ಸ್ವಚ್ಛ ಜುಬ್ಬಾ, ಪೈಜಾಮು ಮತ್ತು ತಲೆ ಮೇಲೊಂದು ಗೋಲ್‌ ಟೋಪಿ, ಸದಾ ನಗುಮುಖ ಹೊತ್ತ ಷರೀಫ್‌ ಆದಮಿ. ಅವಳು ಅವನನ್ನು ತುಂಬ ಜತನದಿಂದ ನೋಡಿಕೊಳ್ಳುತ್ತಾಳೆ. ಊಟ, ಬಟ್ಟೆ ಮತ್ತು ಬಹುಶಃ ಮೊಹಬ್ಬತ್‌ ... ಇದಾವುದರಲ್ಲೂ ಕಮ್ಮಿ ಮಾಡಿಲ್ಲ ಎನ್ನುವುದು ಅವನ ಪ್ರಶಾಂತ ಮತ್ತು ಟೆನ್ಶನ್‌ ಮುಕ್ತ ನಗುಮುಖದಿಂದಲೇ ತಿಳಿಯುತ್ತದೆ. ಫಜರ್‌ ನಮಾಜಿಗೆ ಅವನ ಕೈಹಿಡಿದು ಮಸೀದಿ ಬಾಗಿಲವರೆಗೂ ಕರೆತರುತ್ತಾಳೆ. ಅವನು ನಮಾಜು ಮುಗಿಸಿ ಬರುವವರೆಗೆ ಮಸೀದಿ ಗೇಟ್‌ ಬಳಿ, ನಡುಗುವ ಚಳಿಯಲ್ಲಿ ಬುರ್ಖಾದೊಳಗೆ ಅವುಚಿ ಕುಳಿತುಕೊಳ್ಳುತ್ತಾಳೆ. ರಾತ್ರಿ ಈಶಾ ನಮಾಜಿಗೂ ಹಾಗೆಯೇ. ಅವನು ನಮಾಜು ಮುಗಿಸಿ ಬಂದೊಡನೆ ದುವಾ ಮಾಡಿ ಅವಳ ತಲೆ ನೇವರಿಸುತ್ತಾನೆ. ಮತ್ತೆ ಅವಳು ಅವನ ಕೈಹಿಡಿದು ಜೋಪಡಿಯತ್ತ ಸಾಗುತ್ತಾಳೆ. ಅವನು ಹುಟ್ಟು ಕುರುಡ. ಅವಳು ಅವನ ಕಣ್ಣಬೆಳಕು! ಅಲ್ಲಾಹು, ಅವನ ರಸೂಲ್‌ ಮೊಹಮ್ಮದರು, ಆಯೇಷಾ ಮತ್ತು ಈಮಾನ್ ಮನುಷ್ಯ ಬದುಕಿನಲ್ಲಿ ಬಾಳುತ್ತಿರುವುದು ಕಾಣಿಸುತ್ತದೆ.