ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‘ಡಿಗ್ರೇಡ್‌’: ಒಂದು ಅದ್ಭುತ ರಾಜಕೀಯ ಲೇವಡಿ

ಚಿತ್ರ: ಡಿಗ್ರೇಡ್‌ Directed by- Arab and Tarzan ಚಿತ್ರದ ನಿರ್ದೇಶಕರು ಅವಳಿ ಸಹೋದರರು. ಸಮಾಜ ಅಥವಾ ಸಮುದಾಯಗಳೊಳಗಿನ ಸೊಕ್ಕು, ಸಹಜತೆ ಮತ್ತು ಆಸಕ್ತಿಗಳೇ ದೇಶದ್ದೂ ಆಗಿರುತ್ತದೆ. ಹಾಗೆಯೇ ದೇಶವೊಂದರ ಹಿಂಸೆ, ಅತಿರೇಕಗಳು ಅಲ್ಲಿನ ಸಮಾಜದ ಒಳಗಿನ ಹಿಂಸೆಯ ಲಕ್ಷಣಗಳನ್ನೇ ಹೋಲುತ್ತವೆ. ಇಂಥ ಲಾಕ್ಷಣಿಕ ಚಿತ್ರಣವನ್ನು ಅತ್ಯಂತ ಕಾಮಿಡಿಯಾಗಿ ಕಟ್ಟಿಕೊಡುವ ಚಿತ್ರ ‘ಡಿಗ್ರೇಡ್‌’. ದೇಶ, ಧರ್ಮ ಭಕ್ತಿಗಳ ಅತಿರೇಕ ಮತ್ತು ಪುಂಡುಗಾರಿಕೆಯನ್ನು ಮೆಲುದನಿಯಲ್ಲೇ ಲೇವಡಿಗೊಳಪಡಿಸುತ್ತದೆ. ನಿರೂಪಣೆ ಚಿತ್ರದ ಹೈಲೈಟ್‌. ಸಹಜ ಚಿತ್ರಣಗಳಿಂದ ತೆರಕೊಳ್ಳುವ ‘ಡಿಗ್ರೇಡ್‌’ ಕ್ರಮೇಣ ಒಂದು ಪ್ರದೇಶದ ಸಮಾಜೋ-ರಾಜಕೀಯ ಕಾರ್ಟೂನ್‌ ಕಟ್ಟಿಕೊಡುತ್ತದೆ. ಫಲಿಸ್ತಾನದ (ಪೆಲಿಸ್ಟೀನ್‌) ಗಾಝಾ ಪಟ್ಟಿಯಲ್ಲಿ ಅದೊಂದು ಬೇಸಿಗೆ ಕಾಲ, ಬ್ಯೂಟಿ ಪಾರ್ಲರ್‌ನಲ್ಲಿ ಹದಿಮೂರು ಹೆಣ್ಣು ಮಕ್ಕಳು ಸಿಂಗಾರಕ್ಕೆಂದು ಸೇರಿಕೊಂಡ ಸಂದರ್ಭವನ್ನಿಟ್ಟುಕೊಂಡು ಚಿತ್ರ ಶುರುವಾಗುತ್ತದೆ. ಮಧುಮಗಳಿಗೆ ಮೇಕ್‌ಅಪ್‌, ಆಂಟೀಗೆ ಬ್ಯೂಟಿ ಟಚ್‌ ಅಪ್‌, ಮಧ್ಯವಯಸ್ಸಿನ ಹೆಂಗಸಿಗೆ ಫೇಸಿಯಲ್‌.. ಇಲ್ಲಿ ಒಬ್ಬೊಬ್ಬರದು ಒಂದೊಂದು ಬ್ಯೂಟಿ ಕಾನ್ಸಿಯಸ್‌. ಈ ಗಿರಾಕಿಗಳನ್ನು ನಿಭಾಯಿಸಲು ಹೆಣಗುವ ಸಲೂನಿನ ಒಡತಿ ರಷ್ಯನ್‌ ಹೆಂಗಸು ವಿಕ್ಟೋರಿಯಾಗೆ ಬೇಗ ಸಲೂನ್‌ ಮುಚ್ಚಿ ಗಂಡನ ತೆಕ್ಕೆ ಸೇರುವ ಕಾತರ. ಮಂದಗತಿಯ ಅವಳ ಸಹಾಯಕಿ ಕ್ರಿಸ್ಟಿನಾಗೆ ಕೆಲಸದ ಮೇಲೆ ಗಮನವಿಲ್ಲ. ಸದಾ ತನ್ನ ಹುಚ್ಚುತನದ ಪ್ರಿ