ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.  ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇದನೆಯ