ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ 4, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ತಮಸ್ಸು: ಕಗ್ಗತ್ತಲಲ್ಲೊಂದು ಆಶಾಕಿರಣ...

 ಆಲ್ಟರನೇಟ್ ಪವರ್ ಸೊಲ್ಯುಷನ್ ಎನ್ನುವ ಮಾರುಕಟ್ಟೆಯ ಲಾಬಿಗೆ ಆಡಳಿತ ಶರಣಾಗಿದ್ದರಿಂದ ಇಡೀ ರಾಜ್ಯವೀಗ ಕಗ್ಗತ್ತಲಲ್ಲೇ ಇದೆ. ಕತ್ತಲು ಕವಿದಾಗೆಲ್ಲ ಟ್ಯೂಬ್ ಲೈಟ್ ಹಚ್ಚುವ ಹಿಂದೂ-ಹಿಂದೂತ್ವದ ಪೌರೋಹಿತ್ಯ ನಡೆಸುವವರಿಗೆ ಅದರ ಜನಕ ಥಾಮಸ್ ಆಲ್ವಾ ಎಡಿಸನ್ ಕ್ರೈಸ್ತ ಅನ್ನೋದು ಗಮನಕ್ಕೆ ಬರೋದಿಲ್ಲ!?  ಮತಾಂತರ ವಿರೋಧದ ಹೆಸರಲ್ಲಿ ಕ್ರೈಸ್ತ ಮಷಿನರಿಗಳ ಕನಿಷ್ಠ ಧಾರ್ಮಿಕ ಆಶಯಗಳ ಮೇಲೆ ಹರಿಹಾಯುವುದು ಇಲ್ಲಿ ನಡೆಯುತ್ತಲೇ ಇದೆ. ಇದೊಂದು ಥರದ ತಮಸ್ಸು!  ಅಮೀರ್ ಖಾನ್, ರಷೀದ್ ಖಾನ್, ಅಮ್ಜದ್ ಅಲಿ ಖಾನ್, ಝಾಕೀರ್ ಹುಸೇನ್, ಅಲಿ ಅಕ್ಬರ್ ಖಾನ್ ಅವರಂಥವರ ಕೈಯಲ್ಲಿ ಅಸಂಖ್ಯ ಮುಸ್ಲಿಮೇತರರು ಹಿಂದೂಸ್ತಾನಿ ಸಂಗೀತದ ದೀಕ್ಷೆ ಪಡೆಯುವಾಗ ಈ ಉಸ್ತಾದ್ ಗಳೆಲ್ಲ ಮುಸಲ್ಮಾನರು ಎನ್ನುವುದು ಮುಖ್ಯವಾಗೋದೇ ಇಲ್ಲ. "ಕಭೀ ಕಭೀ ಮೇರೆ ದಿಲ್ ಮೇ ಖಯಾಲ್ ಆತಾ ಹೈ, ಕೆ ಜೈಸೆ ತುಝಕೋ ಬನಾಯಾ ಗಯಾ ಹೈ ಮೇರೆ ಲಿಯೆ, ತೂ ಅಬ್ ಸೇ ಪೆಹಲೇ ಸಿತಾರೋಂ ಮೆ ಬಸರಹೀ ಥಿ ಕಹ್ಞೀ, ತುಝೇ ಜಮೀನ್ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ..." ಎನ್ನುವ ಸಾಹಿರ್ ಸಾಲುಗಳು ಕನ್ನಡದಲ್ಲಿ "ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗಿ ಬಂದವಳೆಂದು" ಎಂದು ಹಾಡಾಗಿ ವರ್ಲ್ಡ್ ಫೇಮಸ್ ಆಗುತ್ತದೆ! ಸಾಹಿರ್ ಕೂಡ ಒಬ್ಬ ಮುಸಲ್ಮಾನ.  ಇದೆಲ್ಲ ನಾವು ಮುಸಲ್ಮಾನರಿಂದ ಸಾಂಸ್ಕೃತಿಕವಾಗಿ ...