ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 13, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ಕಾಯಲಾರ್ಕ್ ಹಕ್ಕಿಯಂತಾಗಿದ್ದಳು ನನ್ನಮ್ಮಾ...

ಮೊದಲ ಬಾರಿಗೆ ಸ್ಕಾಯಲಾರ್ಕ್ ಹಕ್ಕಿಯಾಗಿದ್ದಳು ನನ್ನಮ್ಮಾ... ವಿಮಾನದ ಗುಂಯ್ ಗುಡುವ ಸದ್ದಿಗೆ, ಒಳಗಿನ ಚಳಿಗೆ, ತಣ್ಣನೆಯ ಟೀಗೆ, ಸಪ್ಪೆ ಊಟಕ್ಕೆ ಸುಸ್ತಾಗಿ ಹೋಗಿದ್ದಳು... ಮೊದಲ ಸಲ ಆಕಾಶಕ್ಕೆ ನೆಗೆದಾಗ ಅಮ್ಮಾ ಎಂದು ದಂಗಾದವಳು... ಮಗಳ ಕಾಣುವ ತವಕದಲ್ಲಿ ವಿಮಾನದ ಸಂಭ್ರಮವನ್ನೂ ಲೆಕ್ಕಿಸದವಳು.. ಮಗಳ ಮಡಿಲಲ್ಲಿ ಹೊಸ ಜೀವವೊಂದು ನಲಿದಾಡುವುದನ್ನು ಕಾಣುವ ಕನಸಲ್ಲಿ ಮುಳುಗಿಹೋದಾಕೆ... ಅಮ್ಮನನ್ನು ನೋಡಿದಾಗೆಲ್ಲ ಒಂದು ಮುಗ್ಧ ಮಗುವನ್ನು ನೋಡಿದ ಹಾಗೆನಿಸುತ್ತಿತ್ತು... ನಾನದರ ತಾಯಿ ಅನಿಸುತ್ತಿತ್ತು... ಇಬ್ಬರೂ ಮಕ್ಕಳಂತಾಗಿದ್ದರು. ಯಾವುದನ್ನೂ ತಿನ್ನದ ಮತ್ತು ಕುಡಿಯದ ಇಬ್ಬರಿಗೂ ಬರಿಯ ಬಿಸಿನೀರು ಮಾತ್ರ ಆಹಾರವಾಗಿತ್ತು. ಅದನ್ನು ನೀಡುತ್ತಿದ್ದ ಪರಂಗಿ ಹೆಣ್ಣುಗಳು ಮಾತ್ರ ಇವರಿಗೆ ಅಚ್ಚುಮೆಚ್ಚಾಗಿದ್ದರು. ಇವರನ್ನು ಕಂಡರೆ ಅವರಿಗೂ ಬಲು ಅಕ್ಕರೆ... ಅವರ ನಗೆ, ನಯ, ವಿನಯ, ವೈಯ್ಯಾರ ಇಬ್ಬರಿಗೂ ಇಷ್ಟವಾಗಿತ್ತು. ಇವರ ವೇಷಭೂಷಣ, ಮುಗ್ಧತೆ ಅವರಿಗೂ ಅಚ್ಚುಮೆಚ್ಚಾಗಿತ್ತು. ಕಂಡಾಗೆಲ್ಲ ತಲೆಬಾಗಿ ನಮಸ್ತೆ ಎನ್ನುತ್ತಿದ್ದುದು ಅಪ್ಯಾಯಮಾನವೆನಿಸುತ್ತಿತ್ತು.. ಕಿಟಕಿಯಿಂದ ತೂರಿ ಬಂದ ಬೆಳಕು ಇಬ್ಬರನ್ನು ಸುಸ್ತು ಮಾಡಿಹಾಕಿತ್ತು. ಪ್ಯಾರಿಸ್ ಬಂದಾಗಲೇ ಕಣ್ಣು ತೆರೆದದ್ದು... ಏರ್ ಫ್ರಾನ್ಸ್ ವಿಮಾನದ ಒಳನೋಟ... ವಿಮಾನದ ಕ್ಯಾಮೆರಾ ಭೂಮಿಯ ಚಿತ್ರಣ ಕಟ್ಟಿಕೊಡುತ್ತಿತ್ತು ... ವಿಮಾನ ಹಾರುವ ಸ್ಥಿತಿ ಗತಿ ಮುಂದಿನ ಸೀಟಿಗಂಟಿಸಿದ ಪರದೆಯ ಮೇಲೆ ಸ್