ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 16, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೇವಾಮನೋಭಾವ, ಕಾಯಕ ಮತ್ತು ನಾವು-ಅವರು

ಯಾವುದೇ ಕೆಲಸವಾಗಿರಲಿ, ಅದಕ್ಕೆ ಡಿಗ್ನಿಟಿ ಆಫ್ ಲೇಬರ್ ಮನೋಧರ್ಮ ಮುಖ್ಯ. ಕಾಯಕ ಸಂಸ್ಕೃತಿಯ ಧರ್ಮವೆಂದರೆ ಅಲ್ಲಿ ಯಾವುದೂ ದೊಡ್ಡದಿರುವುದಿಲ್ಲ ಮತ್ತು ಯಾವುದೂ ಚಿಕ್ಕದಿರುವುದಿಲ್ಲ. ಇಲ್ಲಿ ಯಾರೂ ಅಮುಖ್ಯರಲ್ಲ... ಕುವೆಂಪು ಹೇಳಿದ್ದೂ ಅದನ್ನೇ ಅಲ್ಲವೇ. ಜನಜೀವನದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮತ್ತು ಯುರೋಪಿಯನ್ನರ ನಡುವೆ ಕೆಲವು ಬಹುಮುಖ್ಯವಾದ ಭಿನ್ನತೆಗಳಿವೆ. ಯುರೋಪಿಯನ್ನರು ಅದರಲ್ಲೂ ನಾರ್ವೆಜಿಯನ್ನರು ಯಾವ ಕೆಲಸವನ್ನು ಲಘುವೆಂದು ಪರಿಗಣಿಸುವುದಿಲ್ಲ. ಅದರಲ್ಲೇ ಬಹುದೊಡ್ಡ ಸಮಾಧಾನ ಮತ್ತು ಸಾರ್ಥ್ಯಕ್ಯವನ್ನು ಕಾಣಲೆತ್ನಿಸುತ್ತಾರೆ. ಅವರಿಗದು ಒಂದು ಕಾಯಕವೂ ಹೌದು ಧ್ಯಾನವೂ ಹೌದು. ಅವರಿಗದು ಸ್ಪಿರಿಚುಯಾಲಿಟಿ ಮನೋಧರ್ಮದಿಂದ ಸಾಧ್ಯವಾಗಿದೆ ಎಂದು ನನಗನ್ನಿಸುತ್ತದೆ. ಮಾತು ಮಾತಿಗೂ ಅವರು ಗಾಡ್ ಬ್ಲೆಸ್ ಯು ಎನ್ನುವುದು ಸುಮ್ಮನೇ ಒಂದು ತೋರಿಕೆಯಲ್ಲ ಅನಿಸುತ್ತದೆ. ರಿಲಿಜಿಯಸ್ ಲೈಫಿನಿಂದ ಅವರ ಸ್ಪಿರಿಚುಯಲ್ ಲೈಫ್ ಕೂಡ ರೂಪುಗೊಂಡಿದ್ದರೂ ಅದನ್ನವರು ನಿಜ ಜೀವನದಲ್ಲಿ ಸಿವಿಕ್ ಸೆನ್ಸ್ ಮನೋಧರ್ಮದಲ್ಲಿ ತರಲು ಯತ್ನಿಸುತ್ತಾರೆ. ಇದಕ್ಕೆ ಅಪವಾದಗಳೂ ಇರಬಹುದು. ನಮ್ಮ ದೇಶದ ಅತಿ ಅಮಾನುಷವಾದ ಜಾತಿ ಪದ್ಧತಿಯಿಂದಾಗಿ ಕಾಯಕ ಎನ್ನುವುದು ಒಂದು ಕೆಲಸವಾಗಷ್ಟೇ ಕಾಣುತ್ತದೆ. ಮೇಲು, ಕೀಳು ಎನ್ನುವುದನ್ನು ಕೆಲಸಕ್ಕೆ ಸಂಬಂಧಿಸಿಯೂ ಕಾಣುವಂಥ ಬಹು ಕೆಟ್ಟದಾದ ಚಾಳಿ ನಮ್ಮದಾಗಿದೆ. ಇದರಿಂದ ನಾವು ಹೊರಬರುವುದು ಯಾವಾಗ? ಇನ್ನೆಷ್ಟು ಅಂಬೇಡ್ಕರ್ ಹೋರಾಟಗ