Theater Olympic 2018 Play: Gunamukha Enacted bu NSD bengaluru Direction: C Basavalingaiah C Basavalingaiah Basu ಅ ರೆ ಅಲೆಮಾರಿಯ ಮಗನೊಬ್ಬನಿಗೆ ಅಧಿಕಾರ, ದೌಲತ್ ಸುಖದ ಕಲ್ಪನೆಯಷ್ಟೇ ಆಗಿರಲಿಲ್ಲ. ಅದು ಒಟ್ಟೊವಿಯನ್ ಸಾಮ್ರಾಜ್ಯದ ವೈಭವವನ್ನು ಮೀರಿಸುವಂತೆ ಬೆಳೆದು ನಿಲ್ಲುವ ಕನಸು, ಛಲವೂ ಆಗಿತ್ತು. ಸಾಧಾರಣ ಗ್ಯಾಂಗ್ ಕಟ್ಟಿಕೊಂಡು ತನ್ನ ಕಾಲದ ಅರಸು ಮನೆತನಗಳ ಮೇಲೆ ಕಣ್ಣಿಟ್ಟು ಸೈನ್ಯ ಸೇರುವ ಆತ ಅದರ ನಾಯಕನೂ ಆಗುತ್ತಾನೆ. ದೊರೆಯಾಗಿ ರಾಜಕೀಯ ಮಹತ್ವಾಕಾಂಕ್ಷೆ ಈಡೇರಿಸಿಕೊಂಡು ಪರ್ಷಿಯಾ ಸೇರಿದಂತೆ ಜಾರ್ಜಿಯಾ, ರಷ್ಯದ ಹಲವು ಭಾಗಗಳನ್ನು ಆಗಲೇ ಆಕ್ರಮಿಸಿಕೊಳ್ಳುತ್ತಾನೆ. ಅವನು ಧೈರ್ಯಶಾಲಿ ನಾದಿರ್ ಷಾ. ಕೆಲ ಕಾಲ ಹಿಂದೂಸ್ತಾನದ ದೊರೆಯೂ ಆಗಿ ಮೆರೆದಿದ್ದು ಒಂದು ಆಕಸ್ಮಿಕ. ಪರ್ಷಿಯಾ ದೇಶಗಳ ಸಮೇತ ಆಪ್ಘನ್, ಲಾಹೋರ್ ಗೆಲ್ಲುತ್ತ ದೆಹಲಿಗೂ ಕಾಲಿಟ್ಟಾಗ ಇಲ್ಲಿದ್ದ ಮುಘಲ್ ಸೈನ್ಯ ದೈನೇಸಿ ಸ್ಥಿತಿಯಲ್ಲಿತ್ತು. ಸುಲ್ತಾನಗಿರಿಯೂ ಅವಸಾನದಂಚಿನಲ್ಲಿತ್ತು. ಮುಘಲ್‌ರನ್ನು ಮಣಿಸಿ ನಾದಿರ್ ಷಾ ದೆಹಲಿಯ ದೊರೆಯಾಗಿಬಿಡುತ್ತಾನೆ. ಮುಘಲ್‌ರನ್ನು ಸೋಲಿಸಬಹುದು ಎನ್ನುವ ಮೊದಲ ಸೂಚನೆಯನ್ನು ಈತ ಜಗತ್ತಿಗೆ ತೋರಿಸಿಕೊಡುತ್ತಾನೆ. ಹೀಗಾಗಿಯೇ ಫ್ರೆಂಚರು ಮತ್ತು ಬ್ರಿಟೀಷರಿಗೆ ಈತ ಹೀರೋ! ಆನಂತರದಲ್ಲಿ ಸಾಮ್ರಾಜ್ಯಷಾಹಿಯಾಗಿ ಮೆರೆದ ನಾದಿರ್...