ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್ 15, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾನು ಓದಿದ ಒಂದು ಸಿನಿಮಾ

ಸಾವಿನ ನಾಲಗೆಯ ಚಲನೆ ನಯವಾದ ದನಿಯಲ್ಲಿ ಕೇಳಿಸುತ್ತಿದೆ. ‘ನಾನು ಎಲ್ಲೆಂದರಲ್ಲಿ ಹೀಗೆ ಬಂದೆರಗುವೆನು. ಬದುಕಿನ ಯಾವ ಕ್ಷಣದಲ್ಲೂ, ಯಾವ ಪಯಣದಲ್ಲೂ  ..  ಪ್ರತಿ ಜೀವವನ್ನು ಬೆನ್ನಟ್ಟುವುದೇ ನನ್ನ ಕಾಯಕ...’ - ಪರದೆಯ ತುಂಬ ದಟ್ಟ ಬೆಳ್ಮೋಡಗಳು. ನಿಧಾನಕ್ಕೆ ಅದರೊಳಗಿಂದ ಕ್ಯಾಮೆರಾ ಕಣ್ಣು ತೂರಿಕೊಂಡಾಗ ದಕ್ಕಿದ್ದು  ದಟ್ಟವಾಗಿ ಹಿಮ ಸುರಿದ ಬೆಟ್ಟಗಳು. ನಡುವೆ ಮೈಚಾಚಿ ಮಲಗಿದ ಹಳಿಗಳು. ಅದರ ಮೇಲೆ ರೈಲೊಂದು ಹೊಗೆಯುಗುಳುತ್ತ ಶರವೇಗದಲ್ಲಿ ಸಾಗುತ್ತಿದೆ. ಪಯಣದಲ್ಲಿರುವ ರೈಲಿನ ಹೊಗೆ ಮೋಡಗಳ ಜತೆ ಸೇರಿ ಆಕಾಶವನ್ನೇ ವ್ಯಾಪಿಸಿಕೊಂಡಂತಿದೆ. ಇಡೀ ಮೂಡ್ ಮನುಷ್ಯನ ಹುಟ್ಟು, ಬದುಕು ಮತ್ತು ಸಾವು ಇದರ ನಡುವಣ ಪಯಣ... ಎಲ್ಲ ಪರಸ್ಪರ ಹೊಂದಿದ ಅವಿನಾಭಾವ ಸಂಬಂಧದಂತೆ, ಒಂದು ಮತ್ತೊಂದರ ಪ್ರತಿರೂಪದಂತೆ.  ವಿಷಾದದ ಛಾಯೆಯಂತೆ ಇಡೀ ಸ್ಕ್ರೀನ್ ಒಂದಷ್ಟು ಕ್ಷಣ ದಿವ್ಯ ಮೌನಿ. ಕ್ಯಾಮೆರಾ ಮೆಲ್ಲಗೆ ರೈಲಿನ ಬೋಗಿಯೊಳಕ್ಕೆ ತೂರಿಕೊಳ್ಳುತ್ತದೆ. ತೂಕಡಿಸುತ್ತ, ಕೆಮ್ಮುತ್ತ, ಚಳಿಗೆ ಮುದುಡಿ ಕುಳಿತ ಪ್ರಯಾಣಿಕರ ದರ್ಶನ ಮಾಡಿಸುತ್ತದೆ. ಪ್ಯಾನ್ ಮಾಡುತ್ತ ಬಾಲೆಯೊಂದರ ಪ್ರೊಫೈಲ್ ಸೆರೆ ಹಿಡಿದು ಕ್ಷಣ ನಿಲ್ಲುತ್ತದೆ. ನುಣುಪಾದ ಕೆನ್ನೆ, ಮುಗ್ಧ ನಗೆಯ ಇವಳ ಹೆಸರು ಲೀಸಲ್. ಮುಖವನ್ನು ಕೊಂಚ ಬಲಕ್ಕೆ ತಿರುಗಿಸಿ ಕುಳಿತ ಲೀಸಲ್ ಈಗಷ್ಟೇ ಅರಳಿ ನಿಂತ ಗುಲಾಬಿ. ಓಹ್! ಅವಳ ಬಿರಿದ ತೆಳು ಗುಲಾಬಿ ರಂಗಿನ ಕೋಮಲ ತುಟಿ, ಕಣ್ಣುಗಳಲ್ಲಿನ ಜೀವಚೈತನ್ಯ, ಮುಗ್ಧ