ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡ್ರಾಮಾಕ್ರಸಿ-3: ಕನ್ನಡದ ಸಂಬಂಜ ಅನ್ನೋದು ದೊಡ್ಡದು ಕನಾ...

ಎಡ್ಡ: ಮನ್ನಿ ‘ಮೊದಲು ಅರಿ ಆಮೇಲೆ ಇರಿ’ ಅಂತೆಲ್ಲಾ ಚಂಪಾ ಡೈಲಾಗ್ ಹೊಡದಿ. ಅಂಥ ಬಂಡಾಯದ ಬರಹಗಾರರು ಚಿಂತಕರು ಇಂಥಾ ಸಂದಿಗ್ಧ ಪರಿಸ್ಥಿತಿಯೊಳಗೂ ಮಂಕಾಗಿ ಕೂತಾರಲೇ ಏನ್‌ ಮಾಡೂನ ಇದಕ್ಕ. ಗಿಡ್ಡ: ನಾನೂ ಅದನ್ನ ಹೇಳೂದು. ಅರ್ಧ ಸತ್ಯದ ಹುಡುಗಿ ಗುಂಗಿನಾಗ ಅದಾರ್ರಿ ಅವ್ರಿನ್ನೂ. ಅಕಿ ಸತ್ ಸ್ವರ್ಗಾ ಸೇರಿಳೋ, ನರಕದಾಗ ಅದಾಳೋ ಗೊತ್ತಿಲ್ಲ. ಸತ್ತದ್ದಂತೂ ಖರೇ. ರಾಜಬಬ್ಬರ್ ಅಕಿನ್ ಮರತು ಜಮಾನಾನ ಆತು. ಎಡ್ಡ: ಸೈದ್ಧಾಂತಿಕ ಜಗಳದೊಳಗ ಹೆಚ್ಚು ಕಾಲ ಕಳದ ಚಂಪಾ ಸಾಹಿತ್ಯ ರಚನಾದಿಂದ ದೂರ ಸರದ ಭಾಳ ವರ್ಷನ ಆತು. ಅವ್ರ ಹೋರಾಟ, ಬಂಡಾಯದ ಮೊನಚು ಯಾಕೋ ಕಮ್ಮಿ ಆತು. ಅದ್ಭುತ ಅಸಂಗತ ನಾಟಕಗಳನ್ನ ಕೊಟ್ಟ ಮನಶ್ಯಾ ಸಾಹಿತ್ಯದೊಳಗ ಇನ್ನೂ ಎಂಥಾ ಅದ್ಭುತ ಸೃಷ್ಟಿ ಮಾಡಬಹುದಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ, ಸ್ವಾಭಿಮಾನಿ ಕರ್ನಾಟಕ ಅಂತೆಲ್ಲ ಅವ್ರೂ ರಗಡ ಖಟಪಟಿ ಮಾಡಿದ್ರು ಖರೆ. ಏನಾತು? ಪಾಟೀಲ ಪುಟ್ಟಪ್ಪ ಅಂದ್ರ ನಮ್ ‘ಪಾಪು’ ಕಿತ್ತೂರ ಚೆನ್ನಮ್ಮ ಸರ್ಕಲ್‌ನಿಂದ ಹೆಂಗ್ ಆಚೆ ಬರಲೇ ಇಲ್ಲಲಾ, ಹಾಂಗ ಇವ್ರು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಅನ್ನೂದ ಬಿಟ್ಟ ಬ್ಯಾರೆ ಏನೂ ಖಡಕ್ ಆಗಿ ಮಾಡಲೇ ಇಲ್ಲ. ಗಿಡ್ಡ: ಅರ್ಧಾ ಜೀವನಾ ‘ಒಕ್ಕಣ್ಣಿನ ರಾಕ್ಷಸ’ ಅಂತ ಲಂಕೇಶ್‌ ಮ್ಯಾಲ ಲೇವಡಿ ಮಾಡೂದರಾಗ ಕಳೀತು. ಇನ್ನರ್ಧಾ ಜೀವನಾ ಕನ್ನಡ ಹೋರಾಟ. ಈ ಹೋರಾಟಕ್ಕರೇ ಸೀರಿಯಸ್ ಆಗಿ ಸರಿಯಾದ ದಿಕ್ಕು ದೆಸಿ ತೋರಿಸ್ಬಹುದಾಗಿತ್ತು. ಅದೂ ಮಾಡ್ಲಿಲ್ಲ. ಪ್ರಾಧಿಕಾರದೊ

ಡ್ರಾಮಾಕ್ರಸಿ-2

ಎಡ್ಡ: ನೋಡ್ತಾ ಇರೀ ನಾ ಏನೇನ್.... ಅಂತೆಲ್ಲ ಕೊಚ್ಕೋತಾ ಇದ್ದಿ. ಈಗ ಹೇಳ್. ಗಿಡ್ಡ: ಹೇಳೂದೇನೂ ಇಲ್ರಿ ಬರೀ ಕೇಳೂದು. ಎಡ್ಡ: ಎಲ್ಲಾ ನಮ್ಮ ದೊಡ್ಡ ಸಾಹೇಬ್ರ ಹೇಳ್ತಿರೋವಾಗ ನಾವೇನ್‌ ಹೇಳೂದೈತಿ ಅಂತೀ ಹೌದಿಲ್ಲೋ. ಗಿಡ್ಡ: ಅವರು ಎಲ್ಲಾ ತಿಳಕೊಂಡಾರಿ. ಪರ್‌ದಾನಿ (ಪ್ರಧಾನಿ) ಅಷ್ಟ ಅಲ್ರಿ ಅವ್ರು ಜ್ಞಾನಿ. ಎಡ್ಡ: ಹೌದೌದು... ಹಿಮಾಲಯ ಕಂಡ ಬಂದಾವ್ರ ಬ್ಯಾರೆ. ಅವ್ರು ಪ್ರವಚನ ಹೇಳ್ತಾರು ನೀವು ಕೇಳ್ಕೊತ ಹೊಂಟ್ರಿ. ಕಾಯಕಾ ಯಾರ್ ಮಾಡಬೇಕು? ಗಿಡ್ಡ: ಅದನ್ನರೀ ನಾ ಹೇಳೂದು ಪರ್ ಪರ್ ಅಂತ. ಎಡ್ಡ: ಪರ್ ಪರ್ ಅಂದ್ರ ಏನಲೇ ಅದ. ಗಿಡ್ಡ: ಪರ್‌ವಚನ ಪರ್‌ದಾನಿ. ಎಡ್ಡ: ಹೌದ್ ಅನ್ನಿ ನೋಡ್ ಮಗನಾ. ಗಿಡ್ಡ: ಹೋಗ್ಲಿ ಬಿಡ್ರಿ. ಅಲ್ರೀ ಚೀನಾದವರು ಮುಂದ ಬಂದಿದ್ದು ಕಾಯಕಾ ನಂಬಕೊಂಡಿದ್ದರ ಫಲಾ ಅಂತ ಮನ್ನೇರ ಹೇಳಿದ್ರಿ. ನಾವೇನ್ ಕಮ್ಮಿ ಕಾಣ್ತೀವೆನ್ ನಿಮಗ... ಎಡ್ಡ: ನಾವೂ ಏನ್ ಕಮ್ಮಿ ಇಲ್ಲ. ಅವರಿಗಿಂತ ಒಂದ್ ಕೈ ಮುಂದ ಅದೀವಿ. ಇಂದಿರಾಗಾಂಧಿ ಎರಡು ಬೇಕು ಮೂರು ಸಾಕು ಅಂತ ಜರ ಕಡತಾ ಹೇಳಿರಲಿಲ್ಲ ಅಂದ್ರ ನೋಡ್ತಿದ್ದಿ, ಚೀನಾ ಮೀರಸತಿದ್ವಿ. ಪುತು ಪುತು ಅಂತ ಜಗತ್ ತುಂಬ ನಾವ ಕಾಣಿಸ್ತಿದ್ವಿ ಹುಳದಗತ್ಲೆ. ಗಿಡ್ಡ: ಅದನ್ನರೀ ನಾ ಹೇಳೂದು. ಅಲ್ರೀ, ಸವ್ವಾ ಸೌ ಕರೋಡ್ ಅದೀವಲ್ರಿ. ಕಮ್ಮಿ ಆತೇನ್ ನಿಮಗ. ಅದ್ರಾಗ ನಮ್ಮ ಮುಸಲ್ಮಾನ್ರ ಏರಿಯಾದೊಳಗ ಹ್ವಾದ್ರ ಮುಗೀತ್. ಮಂದೀನ ಮಂದಿ.ಮುಸಲ್ಮಾನರು ಹಿಂಗ ಬೆಳಕೋತ ಹೋದ್ರು ಅತಂದ್ರ, ಸ್ವಲ್ಪ ಸಮಯದೊಳಗ ಇಡೀ ದೇಶನ ಅ

ಡ್ರಾಮಾಕ್ರಸಿ-1

 (ಮೊದಲನೇ ಅಂಕ- ರಸ್ತಾ ಸೀನ್) ಗಿಡ್ಡ: ಪರ್ ಪರ್... ಎಡ್ಡ: ಏನಲೇ ಅದ ಮುಂಜ ಮುಂಜಾಲೆ ಹೊರಕಾಡಿಗರೇ ಹೋಗಿದ್ಯೋ ಇಲ್ಲೋ. ಗಿಡ್ಡ: ಪರ್ ಪರ್... ಎಡ್ಡ: ಥೂ ಇವನೌನ್, ಹೊಲಸ ವಾಸನಿ ಬರತೈತಲೇ. ಹೊಂಡ ಲಗೂನ.. ಹ್ಞೂಂ ಹೊಂಡ ಇನ್ನ. ಗಿಡ್ಡ: ಅದನ್ನರೀ ನಾ ಹೇಳಾಕ ಹೊಂಟಿದ್ದು. ಸಾಹೇಬ್ರ ಮನ್ಯಾಗ ಟಿವಿ ಹಾಕಿದ್ರ ಸಾಕ್ ಪರ್ ಪರ್. ಎಡ್ಡ: ಗಿಡ್ಡಾ ಏನರೇ ಹೇಳಬೇಕಂತೀ, ಟಿವಿ ಅಂತೀ. ಪರ್ ಪರ್ ಅಂತೀ... ಒಂದೂ ತಿಳಿವಲ್ದು. ಸರಿ ಬೊಗಳ. ಗಿಡ್ಡ: ಸಾಹೇಬ್ರ ನಮ್ಮ ಉತ್ತರ ಕರ್ನಾಟಕದಾಗ ಅದರಾಗೂ ಲಿಂಗಾತರೊಳಗ ಇದೇನು ಹೊಸಾದೇನ್ರಿ? ನಾವು ದಿನಾ ಮುಂಜಾಲೆ ಎದ್ದು ನಮ್ಮ ನಮ್ಮ ಮನೀ ಮುಂದಿನ ಅಂಗಳ ಪರಾ ಪರಾಂತ ಗುಡಸಂಗಿಲೇನ್ರಿ. ಎಡ್ಡ: ಗುಡುಸೂದು ಅಷ್ಟ ಅಲ್ಲ, ಬಕೀಟ್ ನೀರಾ ಒಂದು ಚಂಬೂ.... ಚಂಬೂ ನೀರಾಗ ಎದ್ದೋದು ಫಸಲ್ ಫಸಲ್ ಅಂತ ದೂರ ದೂರಕ್ಕ ನೀರ ಹೊಡಿಯೋದು. ಮುಂಜೇಲೊಮ್ಮೆ ಸಂಜೀಕೊಮ್ಮೆ ಇದನ್ನ ಮಾಡಿಕೋತ ಬಂದೀವು. ಗಿಡ್ಡ: ಅದನ್ನರೀ ನಾನು ಹೇಳೋದು. ಎಡ್ಡ: ಅದ್ಸರಿ ಕಸ ಗುಡಸೂದು, ನೀರ ಚುಮುಕಿಸೋದು, ಪರ್ ಪರ್... ಏನೇನೋ ಮಾತಾಡಾಕಹತ್ತಿ. ನಿಮ್ಮನ್ನ ನಂಬಕೊಂಡ ನಾಂವ ಉದ್ಧಾರ ಆಗಿಲ್ಲ. ಇನ್ನ ದೇಶಾ ಏನ್ ಉದ್ಧಾರ ಆದೀತು? ಲೇ ಗಿಡ್ಡಾ, ಮೋದಿ ಕಸಾ ಗುಡಸೋದು ನೋಡಾಕ ಆಗಲ್ದಕ್ಕ ಸುತ್ತೂ ಬಳಸಿ ಹಿಂಗ್ ಮಾತಾಡಕ್ಹತ್ತಿ ಹೌಂದಿಲ್ಲೋ. ಗಿಡ್ಡ:  ಅಲ್ರೀ ನಾನೂ ಅದನ್ನ ಹೇಳಾಕತ್ತೀನಿ. ಕಸಾ ಗುಡಸೂದೇನ್ ದೊಡ್ಡ ಸಾಧನಾ ಅಂತ ಹೇಳತೀರಿ. ಕಸ ಗುಡಸೋದು ನಮ್ಮ

ನಾನು ಓದಿದ ಒಂದು ಸಿನಿಮಾ

ಸಾವಿನ ನಾಲಗೆಯ ಚಲನೆ ನಯವಾದ ದನಿಯಲ್ಲಿ ಕೇಳಿಸುತ್ತಿದೆ. ‘ನಾನು ಎಲ್ಲೆಂದರಲ್ಲಿ ಹೀಗೆ ಬಂದೆರಗುವೆನು. ಬದುಕಿನ ಯಾವ ಕ್ಷಣದಲ್ಲೂ, ಯಾವ ಪಯಣದಲ್ಲೂ  ..  ಪ್ರತಿ ಜೀವವನ್ನು ಬೆನ್ನಟ್ಟುವುದೇ ನನ್ನ ಕಾಯಕ...’ - ಪರದೆಯ ತುಂಬ ದಟ್ಟ ಬೆಳ್ಮೋಡಗಳು. ನಿಧಾನಕ್ಕೆ ಅದರೊಳಗಿಂದ ಕ್ಯಾಮೆರಾ ಕಣ್ಣು ತೂರಿಕೊಂಡಾಗ ದಕ್ಕಿದ್ದು  ದಟ್ಟವಾಗಿ ಹಿಮ ಸುರಿದ ಬೆಟ್ಟಗಳು. ನಡುವೆ ಮೈಚಾಚಿ ಮಲಗಿದ ಹಳಿಗಳು. ಅದರ ಮೇಲೆ ರೈಲೊಂದು ಹೊಗೆಯುಗುಳುತ್ತ ಶರವೇಗದಲ್ಲಿ ಸಾಗುತ್ತಿದೆ. ಪಯಣದಲ್ಲಿರುವ ರೈಲಿನ ಹೊಗೆ ಮೋಡಗಳ ಜತೆ ಸೇರಿ ಆಕಾಶವನ್ನೇ ವ್ಯಾಪಿಸಿಕೊಂಡಂತಿದೆ. ಇಡೀ ಮೂಡ್ ಮನುಷ್ಯನ ಹುಟ್ಟು, ಬದುಕು ಮತ್ತು ಸಾವು ಇದರ ನಡುವಣ ಪಯಣ... ಎಲ್ಲ ಪರಸ್ಪರ ಹೊಂದಿದ ಅವಿನಾಭಾವ ಸಂಬಂಧದಂತೆ, ಒಂದು ಮತ್ತೊಂದರ ಪ್ರತಿರೂಪದಂತೆ.  ವಿಷಾದದ ಛಾಯೆಯಂತೆ ಇಡೀ ಸ್ಕ್ರೀನ್ ಒಂದಷ್ಟು ಕ್ಷಣ ದಿವ್ಯ ಮೌನಿ. ಕ್ಯಾಮೆರಾ ಮೆಲ್ಲಗೆ ರೈಲಿನ ಬೋಗಿಯೊಳಕ್ಕೆ ತೂರಿಕೊಳ್ಳುತ್ತದೆ. ತೂಕಡಿಸುತ್ತ, ಕೆಮ್ಮುತ್ತ, ಚಳಿಗೆ ಮುದುಡಿ ಕುಳಿತ ಪ್ರಯಾಣಿಕರ ದರ್ಶನ ಮಾಡಿಸುತ್ತದೆ. ಪ್ಯಾನ್ ಮಾಡುತ್ತ ಬಾಲೆಯೊಂದರ ಪ್ರೊಫೈಲ್ ಸೆರೆ ಹಿಡಿದು ಕ್ಷಣ ನಿಲ್ಲುತ್ತದೆ. ನುಣುಪಾದ ಕೆನ್ನೆ, ಮುಗ್ಧ ನಗೆಯ ಇವಳ ಹೆಸರು ಲೀಸಲ್. ಮುಖವನ್ನು ಕೊಂಚ ಬಲಕ್ಕೆ ತಿರುಗಿಸಿ ಕುಳಿತ ಲೀಸಲ್ ಈಗಷ್ಟೇ ಅರಳಿ ನಿಂತ ಗುಲಾಬಿ. ಓಹ್! ಅವಳ ಬಿರಿದ ತೆಳು ಗುಲಾಬಿ ರಂಗಿನ ಕೋಮಲ ತುಟಿ, ಕಣ್ಣುಗಳಲ್ಲಿನ ಜೀವಚೈತನ್ಯ, ಮುಗ್ಧ

ನೊಬೆಲ್ ಅಂಗಳದಲ್ಲಿ ನಾನು ಹಾಕಿ ಬಂದ ಕಪ್ಪು ರಂಗೋಲಿ...

ನಾರ್ವೆ ದೇಶದ ಒಸ್ಲೊ ಶಹರಿನಲ್ಲಿರುವ ನನ್ನ ತಂಗಿ ಮತ್ತು ಭಾವನ ಮನೆಗೆ ಸಮೀಪದಲ್ಲೇ ಇಬ್ಸನ್ ನ್ಯಾಷನಲ್ ಥಿಯೇಟರ್ ಇದೆ. ಸಮೀಪದಲ್ಲೇ ಅಕೇರ್ ಬ್ರಿಗೇ ಎನ್ನುವ ದೋಣಿಗಳ ತಂಗುದಾಣ. ಅದಕ್ಕೆ ಹೊಂದಿಕೊಂಡೇ ನೊಬೆಲ್ ಶಾಂತಿ ಧಾಮವಿದೆ. ‘ನೊಬೆಲ್ ಶಾಂತಿ’ ಪುರಸ್ಕೃತರ ದರ್ಶನ ಮಾಡಿಸುವ ಈ ಶಾಂತಿ ಧಾಮದಲ್ಲಿ ವಿಶ್ವಮಹಾಮಹಿಮರ ಬಗ್ಗೆ ಸಮಗ್ರ ವಿವರಗಳಿವೆ. ಅವರ ಪುಸ್ತಕಗಳಿವೆ. ಅವರ ಸಾಧನೆಯ ಹಾದಿ, ಹೆಜ್ಜೆಗಳು ಇಲ್ಲಿ ಸ್ಪಷ್ಟವಾಗೇ ಮೂಡಿವೆ. ಅದಕ್ಕೆ ಕೂಗಳತೆ ದೂರದಲ್ಲಿ ಸಿಟಿ ಹಾಲ್ ಇದೆ. ಇಲ್ಲಿಯೇ ನೊಬೆಲ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯುತ್ತದೆ.   ನಿತ್ಯದ ನನ್ನ ಸುತ್ತಾಟ ಮುಗಿಯುತ್ತಿದ್ದುದೇ ನೊಬೆಲ್ ಶಾಂತಿಧಾಮದ ಭೇಟಿಯೊಂದಿಗೆ. ಪ್ರಶಸ್ತಿ ಪ್ರದಾನ ಮಾಡುವ ಸಿಟಿ ಹಾಲ್ ಸಭಾಂಗಣಕ್ಕೂ ಭೇಟಿ ಇದ್ದೇ ಇರುತ್ತಿತ್ತು. ಸಭಾಂಗಣದ ಕಟ್ಟೆ ಮತ್ತು ವಿಶ್ವ ಗಣ್ಯರು ಆಸೀನರಾಗುವ ಜಾಗದಲ್ಲಿ ಸುಮ್ಮನೇ ಕೂತು ಬರುವುದು ನನಗೆ ತುಂಬ ಖುಷಿ ಮೂಡಿಸುತ್ತಿತ್ತು.  ನೊಬೆಲ್ ಶಾಂತಿಧಾಮಕ್ಕೆ ಭೇಟಿ ಕೊಟ್ಟವರೆಲ್ಲ ತಮ್ಮ ದೇಶದ ಮಹಾನ್ ವ್ಯಕ್ತಿಗಳನ್ನು ವೇದಿಕೆಯ ಮೇಲೆ ಕಲ್ಪಿಸಿಕೊಳ್ಳುತ್ತಾರೆ ಎನ್ನುವುದು ನನ್ನ ನಂಬಿಕೆ. ಇಲ್ಲಿ ಬಂದಾಗೆಲ್ಲ. ’ದಿಲ್ ಸೇ’ ಹೇಳುತ್ತೇನೆ. ನೊಬೆಲ್ ಶಾಂತಿ ಪ್ರಶಸ್ತಿ ನೆನಪಿಸಿಕೊಂಡಾಗೆಲ್ಲ ನನಗೆ ನೆನಪಾಗುತ್ತಿದ್ದ ಒಂದೇ ಒಂದು ಹೆಸರು. ಮಹಾದೇವ.  ಪ್ರಶಸ್ತಿಗೆ ನಿಮ್ಮ ನೆಚ್ಚಿನ ಹೆಸರು ಎನ

‘ಇಜಾಜತ್‘ ಒಂದು ಅದ್ಭುತ ಪ್ರೇಮ ಕಾವ್ಯ ಗುಲ್ಜಾರ್ ಗೆ ನನ್ನದೊಂದು ದಿಲ್ ಸೇ ಬಧಾಯೀ

ಅವನು ರೈಲಿನಿಂದ ಇಳಿದ. ಮಳೆ ಸುರಿಯುತ್ತಿದ್ದುದರಿಂದ ಸ್ಟೇಷನ್ ನ ವೇಟಿಂಗ್ ರೂಂ ಪ್ರವೇಶಿಸಿದ. ಆಕೆ ಅಲ್ಲಿ ಯಾರದೋ ನಿರೀಕ್ಷೆಯಲ್ಲಿದ್ದಂತೆ ಕೂತಿದ್ದಾಳೆ. ಅನಿರೀಕ್ಷಿತ ಭೇಟಿಯಿಂದ ಇಬ್ಬರಿಗೂ ಶಾಕ್. ಅರೇ ನೀನಿಲ್ಲಿ!, ಅಂತೂ ಸಿಕ್ಕೆಯಲ್ಲಾ, ಥ್ಯಾಂಕ್ ಗಾಡ್ ಎಟ್ ಲಾಸ್ಟ್ ವಿ ಆರ್ ಮೀಟಿಂಗ್ ನೌ... ಎನ್ನುವ ಭಾವಗಳು ಪೈಪೋಟಿಯಂತೆ ಮನದೊಳಗೆ ಪುಟಿದೇಳುತ್ತಿವೆ. ಇಬ್ಬರಲ್ಲೂ. ಆಕೆ ಮುಖ ಮುಚ್ಚಿಕೊಳ್ಳಲು ಯತ್ನಿಸಿ ಸ ೋಲುತ್ತಾಳೆ. ಅವನದು ಮತ್ತದೇ ಬ್ರಾಡ್ ಸೆನ್ಸ್. ಹೊರಗೆ ಮಳೆ, ಮಿಂಚು. ಇಬ್ಬರ ನಡುವೆ ಬಾಳಿ ಬದುಕಿದ ಪ್ರೇಮಕಾವ್ಯವೊಂದು ಬಿಚ್ಚಿಕೊಳ್ಳತೊಡಗುತ್ತದೆ. * * * ಇವನಿಗೆ ಫೊಟೊಗ್ರಫಿಯಲ್ಲಿ ಎಂಥದೋ ಒಂದು ಬಿಸಿನೆಸ್. ಅವನ ಪ್ರೀತಿಯ ತಾತ ಒಂದು ಹುಡುಗಿಯನ್ನು ಇವನಿಗೆಂದೇ ಗೊತ್ತು ಮಾಡಿ ಮದುವೆಗೂ ಸಿದ್ಧಗೊಳಿಸುತ್ತಾನೆ. ಇಂದು ನಾಳೆ ಎನ್ನುತ್ತ ಹೇಗೂ ಸಾಗಹಾಕಲೆತ್ನಿಸಿ ಸೋಲುವ ಇವನು ತಾನೊಂದು ಹುಡುಗಿಯನ್ನು ಪ್ರೀತಿಸಿದ ವಿಷಯ ಪ್ರಸ್ತಾಪಿಸಿಬಿಡುತ್ತಾನೆ. ಆಕೆ ಆಧುನಿಕ ಸ್ತ್ರೀ ಸಂವೇದನೆಯ ಹುಡುಗಿ. ಅಂಥದೇ ಹೆಣ್ಣೊಂದರ ಹಂಬಲದಲ್ಲಿದ್ದ ತನಗೆ ಅವಳೇ ತಕ್ಕವಳು ಎಂದೆಲ್ಲ ಹೇಳಿಬಿಡುತ್ತಾನೆ. ಅವಳೊಂದಿಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾನೆ. ಆದರೆ ಅವಳೀಗ ನಾಪತ್ತೆ. ಪ್ರೇಮ ಕಾವ್ಯವೊಂದನ್ನು ಬರೆದಿಟ್ಟು ಮಾಯವಾಗಿದ್ದಾಳೆ.  ಕಡೆಗೆ ಅವನು ತಾತ ನೋಡಿದ ಹೆಣ್ಣನ್ನೇ ಮದುವೆಯಾಗುತ್ತಾನೆ. ಒಂದು ಸರಳ, ಸಹಜ ಮತ್ತು ಸುಂದ

ನನ್ನ ಜಿಲ್ಲೆ ನನ್ನ ಅಭಿಮತ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ವಾಸ್ತವ

ಹೊಸಪೇಟೆಯಿಂದ ಬಾಗಲಕೋಟೆ ಮತ್ತಲ್ಲಿಂದ ವಿಜಾಪುರ, ಸೊಲ್ಲಾಪುರ ಸಂಪರ್ಕದ ಆಲಮಟ್ಟಿ ಹೆದ್ದಾರಿ ಅಂತರರಾಷ್ಟ್ರೀಯ ಗುಣಮಟ್ಟದ್ದು ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ. ರಸ್ತೆ, ರಸ್ತೆಗುಂಟ ಕಟ್ಟಿದ ಬೇಲಿ, ಟನಲ್.. ಎಲ್ಲವೂ ಹೌಹಾರುವಂತಿವೆ. ಇಂಡಿಯಾದಲ್ಲಿದೀವಾ ಫಾರೀನ್‌ನಲ್ಲಿದಿವಾ ಅನ್ನುವಷ್ಟು.  ಬಾಗಲಕೋಟೆಯಿಂದ ಬೀಳಗಿ, ಮುಧೋಳ, ಜಮಖಂಡಿ, ವಿಜಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇಡೀ ಭಾಗವನ್ನು ಬೇರೆಯದೇ ನೆಲೆಯಲ್ಲಿ ನೋಡುವಂತೆ ಪ್ರೇರೇಪಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ದ್ರಾಕ್ಷಿ, ದಾಳಿಂಬೆ ಮತ್ತು ಉಳ್ಳಾಗಡ್ಡಿ ಬೆಳೆ (ಈರುಳ್ಳಿ) ನಳನಳಿಸುತ್ತದೆ. ಜೋಳ, ಗೋಧಿಯ ನೆಲದಲ್ಲಿ ಈಗ ಕಮರ್ಷಿಯಲ್ ಕ್ರಾಪ್‌ಗಳದ್ದೇ ಕಾರುಬಾರು. ಮೇನ್ ರೋಡ್‌ನಿಂದ ಕೊಂಚ ದೂರದಲ್ಲೇ ಸಕ್ಕರೆ, ಸಿಮೆಂಟ್ ಕಾರ್ಖಾನೆಗಳು, ಗ್ರಾನೈಟ್ ಉದ್ಯಮ ಮತ್ತು ವೈನ್ ಪ್ಲ್ಯಾಂಟ್‌ಗಳು ಹೆಜ್ಜೆ ಹೆಜ್ಜೆಗೆ ಅನ್ನುವಷ್ಟಿವೆ. ರಸ್ತೆಗಳು ಮಿರಿ ಮಿರಿ ಮಿಂಚುವುದರ ಹಿಂದಿನ ಹಿಕ್ಮತ್ತು ಇಂಥ ಉದ್ಯಮಗಳದ್ದೇ.  ಬೆಳೆಹಾನಿ, ಬಂಪರ್ ಬೆಲೆ, ಸಬ್ಸಿಡಿ ದಂಧೆ, ಸಾಲ ಮನ್ನಾ ಇಂಥದ್ದರಲ್ಲೇ ಮಿಂದೇಳುವ ಕೆಲ ಮೇಲ್ವರ್ಗದ ಶ್ರೀಮಂತ ರೈತರ ಕಾರು, ಜೀಪು ಮತ್ತು ಬೈಕ್  ಭರಗುಟ್ಟಲು ರೂಪಿಸಿದಂತಿರುವ ರಸ್ತೆಗಳೇ ಅಭಿವೃದ್ಧಿ ಎನ್ನುವ ಭ್ರಮೆ ಹುಟ್ಟಿಸಿವೆ.  ಪುಟ್ಟ ಜಮೀನು ಹೊಂದಿದ ರೈತರ ಎತ್ತಿನ ಗಾಡಿ, ಅಸಂಖ್ಯ ಭೂರಹಿತರು, ಕೂಲಿ ಕಾರ್ಮಿಕರು ಮತ್ತು ಪಾದಚಾರಿಗಳ ಓಡಾ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಭಾಗ 5

1968ರಲ್ಲಿ ರಫೀ ಕುಟುಂಬದ ಮೊತ್ತ ಮೊದಲ ಮದುವೆ ಸಮಾರಂಭ. ಮೊದಲ ಮಗಳು ಪರ್ವೀನ್ ಹಸೆಮಣೆ ಹತ್ತುವ ಸಂಭ್ರಮ. ಆ ಸಂದರ್ಭದಲ್ಲೇ ’ನೀಲ್ ಕಮಲ್’ ಚಿತ್ರದ  ’ಬಾಬುಲ್ ಕಿ ದುವಾಯ್ಞೆ ಲೇತಿ ಜಾ...’ ಹಾಡಿನ ರೆಕಾರ್ಡಿಂಗ್ ನಡೆಯಿತು.  ಹಸೆಮಣೆ ಏರಿದ ಮಗಳನ್ನು ತವರು ಮನೆಯಿಂದ ಬೀಳ್ಕೊಡುವ ಸಂದರ್ಭಕ್ಕೆಂದು ಬರೆದ ಹಾಡು ಅದಾಗಿತ್ತು. ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೆಲ್ಲ ಅಬ್ಬಾ ಮಗಳ ಬಿದಾಯಿಯನ್ನೇ ನೆನಪಿಸಿಕೊಂಡು ತುಂಬ ಭಾವುಕರಾಗುತ್ತಿದ್ದರು. ಹಾಡಿನ ಪ್ರತಿಯೊಂದು ಪದ ತಂದೆಯೊಬ್ಬನ  ಬಾವತೀವ್ರತೆಯನ್ನು ಧ್ವನಿಸುತ್ತಿತ್ತು.  ಇವತ್ತಿಗೂ ಈ ಹಾಡು ಕೇಳಿದಾಗೆಲ್ಲ ನನ್ನ ಕಣ್ಣುಗಳು ತೇವವಾಗುತ್ತವೆ. ಹಾಡಿನ ರೆಕಾರ್ಡಿಂಗ್ ಕ್ಷಣಗಳನ್ನು ಮೆಲುಕು ಹಾಕುವಾಗಲೆಲ್ಲ ಅಬ್ಬಾ ದನಿ ತಡವರಿಸುತ್ತಿತ್ತು. ಅದರಲ್ಲಿ ತಂದೆಯೊಬ್ಬನ ಮಗಳ ಬಗೆಗಿನ ಕಕ್ಕುಲಾತಿ ಭಾವನೆ ಮಿಡಿಯುತ್ತಿತ್ತು. 1968ರಲ್ಲಿ ಅಬ್ಬಾಗೆ ಇದೇ ಹಾಡಿಗಾಗಿ ನ್ಯಾಷನಲ್ ಅವಾರ್ಡ್ ಅರಸಿ ಬಂತು. ’ಹಮ್ ಕಿಸೀಸೆ ಕಮ್ ನಹೀ’ ಚಿತ್ರದ  ’ಕ್ಯಾ ಹುವಾ ತೇರಾ ವಾದಾ...’ ಎನ್ನುವ ಅದ್ಭುತ ಹಾಡಿಗೆ 1977ರಲ್ಲಿ ಮತ್ತೊಂದು ನ್ಯಾಷನಲ್ ಅವಾರ್ಡ್ ಅಬ್ಬಾ ಮುಡಿಗೇರಿತು. ರಫೀ ಸಾಹೇಬರ ಮಾತೃಭಾಷೆ ಪಂಜಾಬಿ. ಉರ್ದು  ಮಾತನಾಡುವಾಗಲೂ ಅದರಲ್ಲಿ ಪಂಜಾಬಿ ಸೊಗಡೇ ಧ್ವನಿಸುತ್ತಿತ್ತು. ಮನೆಯಲ್ಲಿ ಮಕ್ಕಳ ಜತೆ ಅಬ್ಬಾ ಉರ್ದುವಿನಲ್ಲೇ ಮಾತನಾಡುತ್ತಿದ್ದರು. ಕಾರಣ ಇಷ್ಟೇ, ಅಮ್ಮಾಗೆ ಪಂಜಾಬಿ ಭಾಷೆ ಅರ್ಥವಾಗು

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.... ಭಾಗ 4

1944. ಆಗ ಅಬ್ಬಾಗೆ ಇಪ್ಪತ್ತರ ಹರೆಯ. ಸಿರಾಜುದ್ದೀನ್ ಅಹ್ಮದ್ ಸಾಹೇಬ್ ಮತ್ತು ತಾಲೀಮುನ್ನೀಸಾ ಅವರ ಮಗಳು ಬಿಲ್ಖೀಸ್ ಅವರನ್ನು ಅಬ್ಬಾ (ಮೊಹಮ್ಮದ್ ರಫೀ) ವಿವಾಹವಾದರು. ನನಗಿದ್ದ ಮಾಹಿತಿಯಂತೆ ಸಿರಾಜುದ್ದೀನ್ ಅವರಿಗೆ ನಾಲ್ವರು ಹೆಂಡತಿಯರು ಮತ್ತು ಒಂಭತ್ತು ಮಕ್ಕಳು. ಹೆಂಡತಿಯರ ಪೈಕಿ ಮೂವರು ಒಬ್ಬರ ನಂತರ ಒಬ್ಬರಂತೆ ಅತ್ಯಂತ ಕಡಿಮೆ ಅಂತರದ ಅವಧಿಯಲ್ಲೇ ನಿಧನರಾಗಿದ್ದರು. ನಾಲ್ಕನೇ ಹೆಂಡತಿಯೇ ತಾಲೀಮುನ್ನೀಸಾ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳು. ಅವರಲ್ಲಿ ಬಿಲ್ಖೀಸ್ ಕೂಡ ಒಬ್ಬರು. ಅಮ್ಮಾಗೆ (ಬಿಲ್ಖೀಸ್) ಆಗ ಕೇವಲ ಹದಿಮೂರರ ವಯಸ್ಸು. ಮದುವೆ ಬಗ್ಗೆ ಏನೂ ತಿಳಿಯದ ವಯಸ್ಸು. 'ಒಂದು ದಿನ ನಾನು ಶಾಲೆಯಿಂದ ವಾಪಸ್ ಬಂದೆ. ಅದೇ ದಿನ ನನಗೆ ಮದುವೆ ಅಂತ ಹೇಳಿದರು. ಮದುವೆ ಗಂಡು ಈ ನಿನ್ನ ಅಬ್ಬಾ. ನಾನಾಗ ನಿನ್ನ ಅಬ್ಬಾನನ್ನು ಭಾಯ್ ಎಂದು ಕರೆಯುತ್ತಿದ್ದೆ' ಎಂದು ಅವರು ಆಗಾಗ ನನ್ನ ಬಳಿ ನೆನಪಿಸಿಕೊಳ್ಳುತ್ತಿದ್ದರು.. ಹಮೀದ್ ಭಾಯ್ ಅಬ್ಬಾ ಅವರ  ಎಲ್ಲಾ ವೃತ್ತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹಮೀದ್ ಭಾಯ್ ಕೂಡ ಸಿರಾಜುದ್ದೀನರ ಮಗಳು ಮೆಹರುನ್ನೀಸಾಳನ್ನು ಮದುವೆಯಾದರು. ಈಕೆ ಸಿರಾಜುದ್ದೀನ್ ಅವರ ಮೊದಲ ಪತ್ನಿಯ ಮಗಳು. ಹಮೀದ್ ಭಾಯ್ ಅಬ್ಬಾ ಜತೆ 1950ರವರೆಗೂ ಇದ್ದರು. ಆನಂತರದಲ್ಲಿ ಅವರು ತಮ್ಮ ಪರಿವಾರ ಸಮೇತ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆಗ ಅಬ್ಬಾ ವ್ಯವಹಾರಗಳನ್ನೆಲ್ಲಾ ಅಮ್ಮಾ ಸಹೋದರ ಜ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...- ಭಾಗ 3

ಅಬ್ಬಾಗೆ ಒಂದು ಕಡೆ ತಾನು ಹುಟ್ಟಿ ಬೆಳೆದ ನಾಡು ಮತ್ತು ಬಂಧು ಬಳಗವನ್ನೆಲ್ಲ ತೊರೆದು ಬಂದ ಹಳವಂಡ. ಮತ್ತೊಂದೆಡೆ ಅಂದುಕೊಂಡಂತೆ ಮುಂಬೈ ಎಂಬ ಮಾಯಾನಗರಿಗೆ ಬಂದ ಖುಷಿ. ಮುಂಬೈ ಒಂಥರ ತುಂಬ ಕುತೂಹಲಕರವಾದ ನಗರ. ಅಬ್ಬಾ ಮತ್ತು ಹಮೀದ್ ಭಾಯ್ ಗೆ ಹೊಸ ವಾತಾವರಣಕ್ಕೆ ತೆರಕೊಳ್ಳುವ ಮತ್ತು ಇರುವುದಕ್ಕೊಂದು ಸೂರು ಹುಡುಕಿಕೊಳ್ಳುವ ಧಾವಂತ. ಅದರಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆ ಹುಡುಕುವ ಅನಿವಾರ್ಯತೆ. ಅಬ್ಬಾಗೆ ಅದೃಷ್ಭದ ಮೇಲೆ ನಂಬಿಕೆ ಇತ್ತು. ಏನಾದರೊಂದು ವ್ಯವಸ್ಥೆ ಆದೀತೆಂಬ ವಿಶ್ವಾಸ ಬಲವಾಗಿತ್ತು. ಅಂತೂ ಮೊಹಮ್ಮದ್ ಅಲಿ ರಸ್ತೆಯ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಇರುವುದಕ್ಕೆ ಒಂದು ನೆಲೆ ದಕ್ಕಿತು. ಸಿರಾಜುದ್ದೀನ್ ಅಹಮದ್ ಬಾರಿ ಎನ್ನುವವರು ಈ ಬಿಲ್ಡಿಂಗ್ ಒಡೆಯ. ಮೇಲ್ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅಬ್ಬಾ ಅಂದುಕೊಂಡಂತೆ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆಯ ಕೋಣೆಯ ವ್ಯವಸ್ಥೆ ಆಯ್ತು.  ರಫೀ ಎದುರಿಸುತ್ತಿದ್ದ ಬಲು ಕಷ್ಟದ ಸಮಯ ಇದಾಗಿತ್ತು. ಅಪರಿಚಿತ ನಗರ, ಮೇಲೆ ಜೇಬಿನಲ್ಲಿ ಕಿಲುಬು ಕಾಸಿಲ್ಲ.. ಸ್ಟುಡಿಯೋ ಮತ್ತು ಮನೆಗೆ ಮೈಲುಗಟ್ಟಲೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ. ರೆಕಾರ್ಡಿಂಗ್, ಪೈಲಟ್ ಸಿಂಗಿಂಗ್, ರಿಹರ್ಸಲ್ ಹೀಗೆ ಎಲ್ಲದಕ್ಕೂ ದೂರದ ಸ್ಟೂಡಿಯೋಗೆ ನಡೆದುಕೊಂಡೇ ಹೋಗಬೇಕಿತ್ತು. ವಾಪಸ್ ನಡೆದೇ ಮನೆ ಸೇರಬೇಕಿತ್ತು. ಎಷ್ಟೋ ಸಾರಿ ನಡೆದು ಸುಸ್ತಾಗಿ ಸ್ಟುಡಿಯೋ ತಲುಪಿ, ಒಳಕ್ಕೆ ಕಾಲಿಡುತ್ತಿದ್ದಂತೆ