ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 2, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ...- ಭಾಗ 3

ಅಬ್ಬಾಗೆ ಒಂದು ಕಡೆ ತಾನು ಹುಟ್ಟಿ ಬೆಳೆದ ನಾಡು ಮತ್ತು ಬಂಧು ಬಳಗವನ್ನೆಲ್ಲ ತೊರೆದು ಬಂದ ಹಳವಂಡ. ಮತ್ತೊಂದೆಡೆ ಅಂದುಕೊಂಡಂತೆ ಮುಂಬೈ ಎಂಬ ಮಾಯಾನಗರಿಗೆ ಬಂದ ಖುಷಿ. ಮುಂಬೈ ಒಂಥರ ತುಂಬ ಕುತೂಹಲಕರವಾದ ನಗರ. ಅಬ್ಬಾ ಮತ್ತು ಹಮೀದ್ ಭಾಯ್ ಗೆ ಹೊಸ ವಾತಾವರಣಕ್ಕೆ ತೆರಕೊಳ್ಳುವ ಮತ್ತು ಇರುವುದಕ್ಕೊಂದು ಸೂರು ಹುಡುಕಿಕೊಳ್ಳುವ ಧಾವಂತ. ಅದರಲ್ಲೂ ಕಡಿಮೆ ಬೆಲೆಗೆ ಬಾಡಿಗೆ ಮನೆ ಹುಡುಕುವ ಅನಿವಾರ್ಯತೆ. ಅಬ್ಬಾಗೆ ಅದೃಷ್ಭದ ಮೇಲೆ ನಂಬಿಕೆ ಇತ್ತು. ಏನಾದರೊಂದು ವ್ಯವಸ್ಥೆ ಆದೀತೆಂಬ ವಿಶ್ವಾಸ ಬಲವಾಗಿತ್ತು. ಅಂತೂ ಮೊಹಮ್ಮದ್ ಅಲಿ ರಸ್ತೆಯ ಪ್ರಿನ್ಸೆಸ್ ಬಿಲ್ಡಿಂಗ್ ನಲ್ಲಿ ಇರುವುದಕ್ಕೆ ಒಂದು ನೆಲೆ ದಕ್ಕಿತು. ಸಿರಾಜುದ್ದೀನ್ ಅಹಮದ್ ಬಾರಿ ಎನ್ನುವವರು ಈ ಬಿಲ್ಡಿಂಗ್ ಒಡೆಯ. ಮೇಲ್ಮಹಡಿಯಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಅಬ್ಬಾ ಅಂದುಕೊಂಡಂತೆ ಅತ್ಯಂತ ಕಡಿಮೆ ಬೆಲೆಗೆ ಬಾಡಿಗೆಯ ಕೋಣೆಯ ವ್ಯವಸ್ಥೆ ಆಯ್ತು.  ರಫೀ ಎದುರಿಸುತ್ತಿದ್ದ ಬಲು ಕಷ್ಟದ ಸಮಯ ಇದಾಗಿತ್ತು. ಅಪರಿಚಿತ ನಗರ, ಮೇಲೆ ಜೇಬಿನಲ್ಲಿ ಕಿಲುಬು ಕಾಸಿಲ್ಲ.. ಸ್ಟುಡಿಯೋ ಮತ್ತು ಮನೆಗೆ ಮೈಲುಗಟ್ಟಲೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ. ರೆಕಾರ್ಡಿಂಗ್, ಪೈಲಟ್ ಸಿಂಗಿಂಗ್, ರಿಹರ್ಸಲ್ ಹೀಗೆ ಎಲ್ಲದಕ್ಕೂ ದೂರದ ಸ್ಟೂಡಿಯೋಗೆ ನಡೆದುಕೊಂಡೇ ಹೋಗಬೇಕಿತ್ತು. ವಾಪಸ್ ನಡೆದೇ ಮನೆ ಸೇರಬೇಕಿತ್ತು. ಎಷ್ಟೋ ಸಾರಿ ನಡೆದು ಸುಸ್ತಾಗಿ ಸ್ಟುಡಿಯೋ ತಲುಪಿ, ಒಳಕ್ಕೆ ಕಾಲಿಡುತ್ತಿದ್ದಂತೆ