ಇದು ನಾರ್ವೆ ರಾಜಧಾನಿ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಒಂದು ಪ್ಲ್ಯಾಟಫಾರ್ಮ್. ಹಳಿಯಗುಂಟ ಹುಡುಕಿದರೂ ಕಾಣದ ಒಂಚೂರು ಕೊಳೆ. ಇಲ್ಲಿ ಯಾರೂ ಗಲೀಜು ಮಾಡುವುದಿಲ್ಲ, ಉಗುಳುವುದಿಲ್ಲ. ಜನರೇ ಇಟ್ಟುಕೊಂಡ, ಕಾಯ್ದುಕೊಂಡ ವ್ಯವಸ್ಥೆ. ಆದರೆ ನಾವ್ಯಾಕೆ ಹೀಗೆ ಉಳಿಸಿಕೊಳ್ಳುತ್ತಿಲ್ಲ! ಇಲ್ಲಿ ಯಾರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಜನರೇ ಕಮ್ಮಿ ಇರುವ ಈ ದೇಶದಲ್ಲಿ ಜನಜಂಗುಳಿ ಇರುವುದಿಲ್ಲ. ಈ ಮಾತು ಸತ್ಯವಾದರೂ ಟ್ರೈನ್ ಪ್ರತಿ ಐದು ನಿಮಿಷಗಳಿಗೊಮ್ಮೆ ಕರಾರುವಕ್ಕಾಗಿ ಬರುತ್ತಲೇ ಇರುವುದರಿಂದ ಹಾಗೆ ಜನಜಂಗುಳಿಯಾಗುವುದಕ್ಕೆ ಅವಕಾಶವಾಗುವುದಿಲ್ಲ ಎನ್ನುವುದು ಇಲ್ಲಿನ ವಾಸ್ತವ. ನಮ್ಮ ದೇಶಕ್ಕೆ ಇದನ್ನು ಕಂಪೇರ್ ಮಾಡುವುದಲ್ಲ. ನಾವು ಇಂಥದೊಂದು ವ್ಯವಸ್ಥೆಯನ್ನು ಹೊಂದಲು ಸಾಧ್ಯವಿದೆ ಎನ್ನುವುದಷ್ಟೇ ನನ್ನ ಕಾಳಜಿ. ಇದು ಜನರಲ್ ಟ್ರೈನ್. ನಗರದಿಂದ ದೇಶದ ಪ್ರತಿ ಪ್ರದೇಶಕ್ಕೆ ಇಂಥದೇ ಟ್ರೈನ್ ವ್ಯವಸ್ಥೆ ಇದೆ. ನಾನು ರಾಜಧಾನಿಯಿಂದ ದೂರದ ಸ್ಯಾಂಡ್ ವಿಕಾ ಎನ್ನುವ ಒಂದು ಪುಟ್ಟದಾದ ಸುಂದರ ಪ್ರದೇಶಕ್ಕೆ ಈ ಟ್ರೈನ್ ನಲ್ಲಿ ಪ್ರಯಾಣಿಸಿದೆ. ಅಲ್ಲಿರುವ ಮುರಳಿ ಶರ್ಮಾ, ಸುಜಾತಾ ಎನ್ನುವ ದಂಪತಿ ಮನೆಗೆ ಭೇಟಿ ನೀಡುವುದು ನನ್ನ ಪ್ರಯಾಣದ ಉದ್ದೇಶವಾಗಿತ್ತು. ಅದೊಂದು ಅದ್ಭುತ ಆತಿಥ್ಯ ಕಂಡ ಕ್ಷಣ. ಸ್ಯಾಂಡವಿಕಾ ಬಗ್ಗೆ ಮತ್ತೆ ಬರೆಯುತ್ತೇನೆ. ರಾಜಧಾನಿಯ ಸೆಂಟ್ರಲ್ ಸ್ಟೇಷನ್ ನಿಂದ ಪ್ರತಿಯೊಂದು ಪ್ಲ್ಯಾಟಫಾರ್ಮ್ ಗೆ ಹೀಗೆ ಕನೆಕ್ಟ್ ಮಾಡುವ...