ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 25, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹ್ಯಾಪಿ ಮೇರಿ ಕ್ರಿಸ್ಮಸ್..

ಕ್ರಿಸ್ ಮಸ್ ಅಂದರೆ ಪಶ್ಚಿಮದ ದೇಶಗಳಲ್ಲಿ ಕ್ರೈಸ್ತ ಜಗತ್ತು. ಇಂಡಿಯಾದಲ್ಲಿ ಅದೊಂದು ಧಾರ್ಮಿಕ ಆಚರಣೆ ಅಲ್ಲ. ಪ್ರೀತಿ, ಸ್ನೇಹ, ಸೌಹಾರ್ದತೆಯ ಸಂಭ್ರಮ. ಡಿಸೆಂಬರ್ 24ರಿಂದಲೇ ಕೇಕ್ ಸುಗ್ಗಿ ಶುರುವಾಗಿಬಿಡುತ್ತದೆ. ಬೆಂಗಳೂರಿನ ನೀಲಗಿರಿಸ್ ಕೇಕ್, ಕೇಕ್ ಶೋ.. ಕ್ರೈಸ್ತೇತರರೇ ಜಾಸ್ತಿ ಇರುವ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ, ಬ್ರಿಗೇಡ್ ರೋಡ್, ಪ್ರತಿ ಶಾಪಿಂಗ್ ಮಾಲುಗಳಲ್ಲಿ ಕ್ರಿಸ್ ಮಸ್ ಕಳೆಕಟ್ಟುತ್ತದೆ. ಬೆಳಕಿನ ಭವ್ಯತೆ, ಬಣ್ಣ ಬಣ್ಣದ ಸ್ಟಾರ್, ಅಬ್ಬರದ ಸಂಗೀತ... ಥೇಟು ಗಣಪನ ಹಬ್ಬದಂಥ ವಾತಾವರಣ ಸೃಷ್ಟಿಯಾಗಿರುತ್ತದೆ. ಹೌದು ಅಷ್ಟಕ್ಕೂ ಇಂಡಿಯಾ ತುಂಬ ಕ್ರೈಸ್ತರೇ ತುಂಬಿಕೊಂಡಿದ್ದಾರಾ! ಎಂದು ಪಶ್ಚಿಮದ ಕ್ರೈಸ್ತರೂ ನಾಚುವಂಥ ಕ್ರಿಸ್ ಮಸ್ ಇಲ್ಲಿ ವಿಜೃಂಭಿಸುತ್ತದೆ. ಧಾರವಾಡದ ಕಿಟೆಲ್ ಸೈನ್ಸ್ ಕಾಲೇಜಿನಲ್ಲಿ ನಾನು ಪದವಿ ಓದುತ್ತಿದ್ದಾಗ ಕ್ರಿಸ್ ಮಸ್ ಬಂತೆಂದರೆ ನಮಗೆಲ್ಲ ಈವೆಂಟು, ರಜಾಕಾಲ. ನಾನೂ ಕಾಲೇಜಿನ ಗ್ರೂಪ್ ಸಾಂಗ್ ಟೀಂನಲ್ಲಿ ಹಾಡುಗಾರನಾಗುತ್ತಿದ್ದೆ. ಎಲ್ಲ ಚರ್ಚ್ ಸಂಗೀತದ ಧುನ್ ಗಳೇ. ಕೆಲ ಕ್ರೈಸ್ತ ಹುಡುಗರು ನನ್ನನ್ನು ಅದೆಷ್ಟು ಬಾರಿ ಪಿಯಾನೊ, ವಯೊಲಿನ್, ಗಿಟಾರ್ ಕಲಿಸ್ತೀನಿ ಬಾ ಎಂದು ಗೋಗರೆಯುತ್ತಿದ್ದರು. ಅದರಲ್ಲಿನ ಕೆಲ ಗೆಳೆಯರು ಈಗ ರಾಜ್ಯದ ವಿವಿಧ ಭಾಗಗಳಲ್ಲಿ ಪಾದ್ರಿಗಳಾಗಿದ್ದಾರೆ. ಮ್ಯಾಡ್ಸ್ MADS ಎನ್ನುವ ನಮ್ಮ ಗೆಳೆಯರ ಗುಂಪಿನ ಮೊದಲ  ಅಕ್ಷರ M ಅಂದರೆ ಮ್ಯಾಥ್ಯು ನಮ್ಮ ಅಕ್ಕರೆಯ ಮಿತ್ರ. ಆತ ಬಹುಶಃ ಎಲ್ಲಾ ಇನ