ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 20, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಒಸ್ಲೊ ಶಹರಿನ ಮೊದಲ 'ಸೊಳ್ಳಿ' ಮುಂಜಾವು....

ನನ್ನ ತಂಗಿಯ ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಸಾಕು ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತದೆ. ನಗರದ ಹೃದಯ ಭಾಗವಾಗಿರುವ ಈ ಪ್ರದೇಶದಲ್ಲೇ ಅರಮನೆ ಇದೆ. ಕೂಗಳತೆ ದೂರದಲ್ಲೇ ನೊಬೆಲ್ ಇನಸ್ಟಿಟ್ಯೂಟ್, ಇಬ್ಸೆನ್ ಬಾಳಿ ಬದುಕಿದ ಮನೆ, ನ್ಯಾಷನಲ್ ಥಿಯೇಟರ್ ಇದೆ. ತಂಗಿ ನೆಲೆಸಿರುವ ಅಪಾರ್ಟಮೆಂಟಿನ ಹಿಂದೆ ಬೃಹತ್ ನ್ಯಾಷನಲ್ ಲೈಬ್ರರಿ ಇದೆ. ನಡೆದುಕೊಂಡೇ ಸೆಂಟ್ರಲ್ ಸ್ಟೇಷನ್ ಹೋಗಬಹುದು. ಹಾರ್ಬರ್ ಹತ್ತಿರದಲ್ಲೇ ಇದೆ. ನಡೆದಷ್ಟು ದೂರ ಕಾಣುವುದೆಲ್ಲ ರಮ್ಯ. ಕಣ್ಣಿಗೆ ಬೀಳುವವರೆಲ್ಲ ಬಿಳಿಯ ಚೆಲುವೆಯರು, ಬಿಳಿ ಮೂತಿಗಳು... ಇದಕ್ಕೆ ಸೊಳ್ಳಿ ಎಂದು ಹೆಸರು. ಎಸ್ ಒ ಎಲ್ ಎಲ್ ಐ... ಇಲ್ಲಿನವರು ಸೋಳ್ಳಿ ಎಂದು ಉಲಿದಾಗ ಬಲು ಮಜವೆನಿಸುತ್ತದೆ.