ವಿಷಯಕ್ಕೆ ಹೋಗಿ

ಜಾತಿ ಆಧಾರಿತ ತಾರತಮ್ಯ: ಭಾರತಕ್ಕೆ ಸಮ್ಮತ ಸಿದ್ಧಾಂತ?

ಜಾತಿ ಆಧಾರಿತ ತಾರತಮ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸುವ ಮಹತ್ವದ ಚಿಂತನೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಮಹತ್ವದ ಬೆಳವಣಿಗೆ. ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಇದೊಂದು ಅತ್ಯಂತ ಶ್ರೇಷ್ಠ ಹೆಜ್ಜೆ. ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಮ್ಮೇಳನ ಇಂಥದೊಂದು ದಿಟ್ಟ ಕ್ರಮಕ್ಕೆ ಯೋಚಿಸುತ್ತಿರುವುದು ಇಡೀ ವಿಶ್ವವನ್ನು ಆರೋಗ್ಯಕರ ಬದುಕಿನತ್ತ ಕೊಂಡೊಯ್ಯುವಂಥದು.
ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆಗೆ ತೆರಕೊಳ್ಳುವ ಇಂಗಿತ ಹೊಂದಿದ್ದನ್ನು ಸೂಚ್ಯವಾಗಿ ಹೇಳಿದಂತಾಗಿದೆ. ವರ್ಗ ಸಂಘರ್ಷದಿಂದ ನಲುಗಿ ಹೋಗಿರುವ ಯುರೋಪ್ ನಾಗರಿಕತೆಯಲ್ಲಿ ಮಾಸ್ಟರ್-ಸ್ಲೇವರ್ ಒಂದು ದೊಡ್ಡ ಪಿಡುಗೇ ಆಗಿದೆ. ಭಾರತದ ಚತುರ್ವರ್ಣ ವ್ಯವಸ್ಥೆ ಇದಕ್ಕೂ ಹೀನವಾಗಿರುವಂಥದು. ಯುರೋಪ್ ಇದರಿಂದ ಹೊರಬರಲು ಹವಣಿಸುವುದು ಗಮನಸೆಳೆಯುತ್ತದೆ.
ದಕ್ಷಿಣ ಆಫ್ರಿಕಾ ಮತ್ತಿತರ ರಾಷ್ಟ್ರಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷಗಳು ಅತ್ಯಂತ ಹೀನಾಯ ಸ್ಥಿತಿಗೆ ಮನುಷ್ಯ ಬದುಕನ್ನು ಎಳೆದೊಯ್ದ ಉದಾಹರಣೆಗಳಿವೆ. ಭಾರತದ ಗಾಂಧಿ, ಅಂಬೇಡ್ಕರ್ ಮತ್ತು ಆಫ್ರಿಕಾದ ನೆಲ್ಸನ್ ಮಂಡೆಲಾ ಇದರ ರಾಕ್ಷಸಿ ರೂಪವನ್ನು ಕಂಡವರು. ಇದಕ್ಕೆ ದೊಡ್ಡ ಪ್ರತಿಭಟನೆ ವ್ಯಕ್ತಪಡಿಸಿದವರು. ಅದರ ವಿರುದ್ಧ ಹೋರಾಡಿ ತಕ್ಕಮಟ್ಟಿನ ಯಶಸ್ಸು ಕಂಡವರು. ಮತ್ತೆ ಇಂಥ ಹೋರಾಟಗಳು ನಡೆಯಲೇಬೇಕಾದ ತುರ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಈ ಕ್ರಮ ಚಳವಳಿಯ ಸ್ವರೂಪ ಪಡಕೊಳ್ಳಬೇಕಿದೆ.
ಭಾರತದಲ್ಲಿನ ಸಾಮಾಜಿಕ ಸ್ಥಿತಿಯಲ್ಲಿ ಜಾತಿ ತಾರತಮ್ಯ ಮೇಲ್ವರ್ಗದ ಮತ್ತು ಅದರಲ್ಲೂ ಬ್ರಾಹ್ಮಣರ ಬಹುದೊಡ್ಡ ಅಸ್ತ್ರವಾಗಿದೆ. ಹುಟ್ಟಿನ ಕಾರಣಕ್ಕೆ ಶ್ರೇಷ್ಠ ಎನ್ನುವ ಬಿಟ್ಟಿ ಪಟ್ಟ ಅಲಂಕರಿಸುವ ಭಾರತದ ಬ್ರಾಹ್ಮಣರು ಇಡೀ ದೇಶವನ್ನು ದಟ್ಟ ದಾರಿದ್ರ್ಯಕ್ಕೆ ನೂಕಿದ್ದಾರೆ. ಈ ಚಾಳಿ ಇತರ ಮೇಲ್ವರ್ಗಕ್ಕೂ ವ್ಯಾಪಿಸಿದ್ದು ನಾಚಿಕೆ ಪಡುವಂಥ ಬೆಳವಣಿಗೆ. ಕೆಳಗಿನವರನ್ನು ಆದಷ್ಟು ಅದುಮುತ್ತಲೇ ಮೇಲಾಟವನ್ನು ಕಾಪಾಡಿಕೊಂಡು ಬಂದ ಮೇಲ್ವರ್ಗದ ದರ್ಪ ಕೊಂಚವಾದರೂ ಸಡಿಲಗೊಂಡಿದ್ದು ಅಂಬೇಡ್ಕರ್ ನಡೆಸಿದ ಹೋರಾಟದಿಂದ. ಆದರೆ, ಅದರ ಫಲಾನುಭವಿಗಳು (ಎಲ್ಲರೂ ಅಲ್ಲ ) ಮಾತ್ರ ಆರ್ಥಿಕವಾಗಿ ಸಬಲಗೊಳ್ಳುತ್ತಿದ್ದಂತೆ ನವಬ್ರಾಹ್ಮಣರಾಗುತ್ತಿರುವುದು ವಿಷಾದಕರ.
ವೀರಶೈವ, ಲಿಂಗಾಯತರ ವಿಷಯದಲ್ಲೂ ಇದೇ ಸ್ಥಿತಿ. ಜಾತಿ ವಿನಾಶದ ಮೂಲ ಅಜೆಂಡಾ ಇಟ್ಟುಕೊಂಡು ಸಾಮಾಜಿಕ ಕ್ರಾಂತಿಯೊಂದನ್ನು ರೂಪಿಸಿದ ಬಸವಣ್ಣ ದೇವರ ಸ್ಥಾನಕ್ಕೆ ಏರಿದರು. ಅನುಯಾಯಿಗಳು ಜಾತಿ ವಿನಾಶದ ಬದಲು ಅವರೇ ಒಂದು ಜಾತಿಯಾಗಿ ಪ್ರಭುತ್ವ, ಅಧಿಕಾರಕ್ಕಾಗಿ ಮತ್ತದೇ ಶೋಷಣೆಯ ಮಾರ್ಗ ಹಿಡಿಯುತ್ತಿರುವುದು ಎಂಥ ವಿಪರ್ಯಾಸ!
ಇಂದು ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಇದು ಢಾಳಾಗಿ ಕಾಣಿಸುವ ಸತ್ಯ. ಮೈಸೂರಿನ ಸುತ್ತೂರು ಮಠದಲ್ಲಿ, ಆರ್ ಎಸ್ ಎಸ್ ಪೌರೋಹಿತ್ಯದಲ್ಲಿ ಗೋಧ್ರಾ ನರಹತ್ಯೆಯ ರೂವಾರಿ ಎಂದೇ ಟೀಕೆಗೆ ಒಳಗಾದ ಮತ್ತು ಅಮೆರಿಕದಂಥ ರಾಷ್ಟ್ರಗಳ ವೀಸಾ ಪಡೆಯುವುದಕ್ಕೂ ಅನರ್ಹತೆ ಗಳಿಸಿಕೊಂಡ ನರೇಂದ್ರ ಮೋದಿಯಿಂದ ಇಡೀ ಕರ್ನಾಟಕ ಸರ್ಕಾರದ ಸಚಿವರು ಪ್ರವಚನ ಕೇಳುವ ಪರಿಸ್ಥಿತಿ! ಭಾರತದ ಪ್ರಜಾಪ್ರಭುತ್ವಕ್ಕೆ ಬಂದ ಇಂಥ ಗಂಡಾಂತರಕ್ಕೆ ಏನು ಹೇಳಬೇಕು?
ವಿಶ್ವದ ೨೦ ಕೋಟಿಗೂ ಹೆಚ್ಚು ಜನ ಜಾತೀಯ ತಾರತಮ್ಯದಿಂದ ನಲುಗುತ್ತಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಕರಡು ಸಿದ್ದಾಂತ ಮತ್ತು ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಇದಕ್ಕೆ ಕಾನೂನಿನ ಕಸುವು ತುಂಬಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿಗೆ ಯತ್ನಿಸುತ್ತಿದೆ.
ಜಾತಿ, ವೃತ್ತಿ ಮತ್ತು ಜನಾಂಗ ಆಧಾರಿತ ತಾರತಮ್ಯ ಮಾನವೀಯ ಮೌಲ್ಯ ಅಲ್ಲ ಎನ್ನುವುದು ಈ ಮೂಲಕ ವಿಶ್ವಕ್ಕೆ ಮನದಟ್ಟು ಮಾಡುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದ ಇತರ ರಾಷ್ಟ್ರಗಳು ಸಂಕಲ್ಪ ಮಾಡಿಕೊಂಡಲ್ಲಿ ಮಹತ್ತರ ಬದಲಾವಣೆಗೆ ದಾರಿಯಾಗುತ್ತದೆ.
ವಿಪರ್ಯಾಸವೆಂದರೆ ಭಾರತ ವಿಶ್ವದ ಈ ನಡೆಯನ್ನೇ ವಿರೋಧಿಸಿದೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...