ನನ್ನ ತಂಗಿಯ ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಸಾಕು ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತದೆ. ನಗರದ ಹೃದಯ ಭಾಗವಾಗಿರುವ ಈ ಪ್ರದೇಶದಲ್ಲೇ ಅರಮನೆ ಇದೆ. ಕೂಗಳತೆ ದೂರದಲ್ಲೇ ನೊಬೆಲ್ ಇನಸ್ಟಿಟ್ಯೂಟ್, ಇಬ್ಸೆನ್ ಬಾಳಿ ಬದುಕಿದ ಮನೆ, ನ್ಯಾಷನಲ್ ಥಿಯೇಟರ್ ಇದೆ. ತಂಗಿ ನೆಲೆಸಿರುವ ಅಪಾರ್ಟಮೆಂಟಿನ ಹಿಂದೆ ಬೃಹತ್ ನ್ಯಾಷನಲ್ ಲೈಬ್ರರಿ ಇದೆ. ನಡೆದುಕೊಂಡೇ ಸೆಂಟ್ರಲ್ ಸ್ಟೇಷನ್ ಹೋಗಬಹುದು. ಹಾರ್ಬರ್ ಹತ್ತಿರದಲ್ಲೇ ಇದೆ. ನಡೆದಷ್ಟು ದೂರ ಕಾಣುವುದೆಲ್ಲ ರಮ್ಯ. ಕಣ್ಣಿಗೆ ಬೀಳುವವರೆಲ್ಲ ಬಿಳಿಯ ಚೆಲುವೆಯರು, ಬಿಳಿ ಮೂತಿಗಳು... ಇದಕ್ಕೆ ಸೊಳ್ಳಿ ಎಂದು ಹೆಸರು. ಎಸ್ ಒ ಎಲ್ ಎಲ್ ಐ... ಇಲ್ಲಿನವರು ಸೋಳ್ಳಿ ಎಂದು ಉಲಿದಾಗ ಬಲು ಮಜವೆನಿಸುತ್ತದೆ.
ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...
ಕಾಮೆಂಟ್‌ಗಳು