1968ರಲ್ಲಿ ರಫೀ ಕುಟುಂಬದ ಮೊತ್ತ ಮೊದಲ ಮದುವೆ ಸಮಾರಂಭ. ಮೊದಲ ಮಗಳು ಪರ್ವೀನ್ ಹಸೆಮಣೆ ಹತ್ತುವ ಸಂಭ್ರಮ. ಆ ಸಂದರ್ಭದಲ್ಲೇ ’ನೀಲ್ ಕಮಲ್’ ಚಿತ್ರದ ’ಬಾಬುಲ್ ಕಿ ದುವಾಯ್ಞೆ ಲೇತಿ ಜಾ...’
ಹಾಡಿನ ರೆಕಾರ್ಡಿಂಗ್ ನಡೆಯಿತು. ಹಸೆಮಣೆ
ಏರಿದ ಮಗಳನ್ನು ತವರು ಮನೆಯಿಂದ ಬೀಳ್ಕೊಡುವ ಸಂದರ್ಭಕ್ಕೆಂದು ಬರೆದ ಹಾಡು ಅದಾಗಿತ್ತು. ಈ
ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೆಲ್ಲ ಅಬ್ಬಾ ಮಗಳ ಬಿದಾಯಿಯನ್ನೇ ನೆನಪಿಸಿಕೊಂಡು ತುಂಬ
ಭಾವುಕರಾಗುತ್ತಿದ್ದರು. ಹಾಡಿನ ಪ್ರತಿಯೊಂದು ಪದ ತಂದೆಯೊಬ್ಬನ ಬಾವತೀವ್ರತೆಯನ್ನು ಧ್ವನಿಸುತ್ತಿತ್ತು. ಇವತ್ತಿಗೂ ಈ ಹಾಡು ಕೇಳಿದಾಗೆಲ್ಲ ನನ್ನ ಕಣ್ಣುಗಳು ತೇವವಾಗುತ್ತವೆ.
ಹಾಡಿನ ರೆಕಾರ್ಡಿಂಗ್ ಕ್ಷಣಗಳನ್ನು ಮೆಲುಕು ಹಾಕುವಾಗಲೆಲ್ಲ ಅಬ್ಬಾ ದನಿ
ತಡವರಿಸುತ್ತಿತ್ತು. ಅದರಲ್ಲಿ ತಂದೆಯೊಬ್ಬನ ಮಗಳ ಬಗೆಗಿನ ಕಕ್ಕುಲಾತಿ ಭಾವನೆ ಮಿಡಿಯುತ್ತಿತ್ತು.
1968ರಲ್ಲಿ ಅಬ್ಬಾಗೆ ಇದೇ ಹಾಡಿಗಾಗಿ ನ್ಯಾಷನಲ್ ಅವಾರ್ಡ್ ಅರಸಿ ಬಂತು. ’ಹಮ್ ಕಿಸೀಸೆ
ಕಮ್ ನಹೀ’ ಚಿತ್ರದ ’ಕ್ಯಾ ಹುವಾ ತೇರಾ ವಾದಾ...’ ಎನ್ನುವ ಅದ್ಭುತ ಹಾಡಿಗೆ 1977ರಲ್ಲಿ
ಮತ್ತೊಂದು ನ್ಯಾಷನಲ್ ಅವಾರ್ಡ್ ಅಬ್ಬಾ ಮುಡಿಗೇರಿತು.
ರಫೀ ಸಾಹೇಬರ ಮಾತೃಭಾಷೆ ಪಂಜಾಬಿ. ಉರ್ದು ಮಾತನಾಡುವಾಗಲೂ ಅದರಲ್ಲಿ ಪಂಜಾಬಿ ಸೊಗಡೇ ಧ್ವನಿಸುತ್ತಿತ್ತು. ಮನೆಯಲ್ಲಿ ಮಕ್ಕಳ ಜತೆ ಅಬ್ಬಾ ಉರ್ದುವಿನಲ್ಲೇ ಮಾತನಾಡುತ್ತಿದ್ದರು. ಕಾರಣ ಇಷ್ಟೇ, ಅಮ್ಮಾಗೆ ಪಂಜಾಬಿ ಭಾಷೆ ಅರ್ಥವಾಗುತ್ತಿರಲಿಲ್ಲ. ಅಬ್ಬಾ ಎಲ್ಲಾ ಭಾಷೆಗಳಲ್ಲಿ ಹಾಡುವ ಲಾಲಿತ್ಯ ಹೊಂದಿದ್ದರು. ಅವರು ಯಾವುದೇ ಭಾಷೆಯಲ್ಲಿ ಹಾಡಲಿ, ಅದು ಅವರದೇ ಮಾತೃಭಾಷೆಯ ಹಾಡು ಅನ್ನಿಸಿಬಿಡುವಷ್ಟು ಸಹಜತೆಯನ್ನು ಮೆರೆಯುತ್ತಿದ್ದರು. ಅವರ ಒಟ್ಟು 39 ವರ್ಷಗಳ ಗಾಯನದ ಸುದೀರ್ಘ ಬದುಕಿನಲ್ಲಿ ಹಿಂದಿ, ಇಂಗ್ಲಿಷ್, ಮರಾಠಿ, ಪಂಜಾಬಿ, ಗುಜರಾತಿ, ಸಿಂಧಿ, ತಮಿಳು, ಬಂಗಾಳಿ, ಪುರ್ವಾಬಿಯಾ, ಪಾಶ್ತೊ, ಪರ್ಷಿಯನ್, ಅರಬ್ಬೀ ಮತ್ತಿತರ ಹಲವಾರು ಭಾಷೆಗಳಲ್ಲಿ ಹಾಡಿದ್ದಾರೆ. ಕನ್ನಡದಲ್ಲಿಯೂ ಹಾಡಿದ್ದಾರೆ. ನೀನೆಲ್ಲಿ ನಡೆವೆ ದೂರ, ಎಲ್ಲೆಲ್ಲೂ ಲೋಕವೇ... ಎನ್ನುವ 'ಒಂದೇ ಬಳ್ಳಿಯ ಹೂಗಳು' ಚಿತ್ರಕ್ಕೆ (ಸಾಹಿತ್ಯ: ಗೀತಪ್ರಿಯ) ರಫೀ ಹಾಡಿದ ಕನ್ನಡ ಹಾಡು ಅತ್ಯಂತ ಜನಪ್ರಿಯ.

1947ರಲ್ಲಿ ಇಂಡಿಯಾ ವಿಭಜನೆಯಾದಾಗ ಅಬ್ಬಾ ಮುಂಬೈನಲ್ಲೇ ಉಳಿಯುವ ನಿರ್ಧಾರ ಕೈಗೊಂಡರು. ಒಂದೆಡೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಭ್ರಮ. ಮತ್ತೊಂದೆಡೆ ತನ್ನ ತಾಯ್ನಾಡಿನ ಕರುಳಬಳ್ಳಿಯ ನಂಟಿನಿಂದ ದೂರಾಗುವ ನೋವು. ಇದೇ ಸಂದರ್ಭದಲ್ಲಿ ಹೆಮ್ಮೆಯ ಅವಕಾಶವೊಂದು ಅವರನ್ನು ಅರಸಿ ಬಂದಿತು. ಅದು ಆಗಸ್ಟ್ 15, 1947. ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ದಿನ. ದೇಶದ ಹೆಸರಾಂತ ಸಂಗೀತಗಾರರನ್ನು ಕೆಂಪುಕೋಟೆಯ ಆ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿತ್ತು. ದೆಹಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಂಗೀತಗಾರರ ತಂಡವನ್ನು ಅಬ್ಬಾ ಸೇರಿಕೊಂಡರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದರು. ಅಂಥದೊಂದು ಭವ್ಯ ಸಮಾರಂಭದಲ್ಲಿ ದೇಶದ ಮೊದಲ ಪ್ರಧಾನಿ ಎದುರು ತನಗೂ ಹಾಡು ಹೇಳುವ ಅವಕಾಶ ಸಿಗಬಹುದೆನ್ನುವ ನಿರೀಕ್ಷೆಯಲ್ಲಿ ಅಬ್ಬಾ ತುಂಬ ಭಾವುಕರಾಗಿದ್ದರು. ಅವಕಾಶ ಒದಗಿ ಬಂದಿತು ಕೂಡ. ಅದೂ ಕೇವಲ ಮೂರು ನಿಮಿಷಗಳ ಕಾಲ ಹಾಡುವ ಅವಕಾಶ. ಏನೇ ಆಗಲಿ ಪಂಡಿತ್ ಜವಾಹರಲಾಲ್ ನೆಹರು ಸಮ್ಮುಖದಲ್ಲಿ ಹಾಡಲು ಅವಕಾಶ ಸಿಕ್ಕಿತಲ್ಲ! ಎನ್ನುವ ಸಂಭ್ರಮದಲ್ಲಿ ಅಬ್ಬಾ ತುಂಬ ಖುಷಿಯಾಗಿದ್ದರು. 'ಲೆಹರಾವೋ ತಿರಂಗಾ ಲೆಹರಾವೋ..' ಎಂದು ಅಬ್ಬಾ ಹಾಡಲು ಪ್ರಾರಂಭಿಸುತ್ತಿದ್ದಂತೆ ನೆರೆದ ಜನಸ್ತೋಮ ಶಾಂತಚಿತ್ತದಿಂದ ಹಾಡನ್ನು ಆಲಿಸುತ್ತ, ತಲೆದೂಗತೊಡಗಿತು. ಇನ್ನೂ ಒಂದಷ್ಟು ಹಾಡುಗಳನ್ನು ಹಾಡುವಂತೆ ಸಭಿಕರಿಂದ ಕರತಾಡನದೊಂದಿಗೆ ಬೇಡಿಕೆ ಬರತೊಡಗಿತು. ಅಬ್ಬಾ ಹಾಡು ಮುಂದುವರಿಸಬೇಕಾಯಿತು. ರಫೀ ಆ ಸಮಾರಂಭದಲ್ಲಿ ಒಟ್ಟು ಇಪ್ಪತ್ತೈದು ನಿಮಿಷಗಳ ಕಾಲ ಸುಶ್ರಾವ್ಯವಾಗಿ ಹಾಡಿದರು. ಅಬ್ಬಾ ಗಾಯನ ಆಲಿಸಿದ ಪಂಡಿತ್ ನೆಹರೂ ತುಂಬ ಖುಷಿಪಟ್ಟರು. ಅಭಿಮಾನದಿಂದ ರಫೀ ಬೆನ್ನು ತಟ್ಟಿ ಭೇಷ್ ಅಂದರು. ಖುಷಿಯಿಂದ ಬಾಚಿ ಬಿಗಿಯಾಗಿ ತಬ್ಬಿಕೊಂಡರು. ತೀನ್ ಮೂರ್ತಿ ಭವನದಲ್ಲಿ ಗಾಯನ ಪ್ರಸ್ತುತಪಡಿಸುವಂತೆ ಆಹ್ವಾನಿಸಿದರು. ಇದು ರಫೀ ಬದುಕಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ಅಬ್ಬಾ ನಮ್ಮ ಜತೆ ಈ ಸಂಭ್ರಮದ ಕ್ಷಣವನ್ನು ಆಗಾಗ ಮೆಲುಕು ಹಾಕುತ್ತಿದ್ದರು.

(ಮುಂದುವರಿಯುವುದು)
ಅಮರ ಗಾಯಕನ ಸೊಸೆ ಇಡೀ ಪುಸ್ತಕವನ್ನು ಅತ್ಯಂತ ಸರಳ ಭಾಷೆಯಲ್ಲಿ ಬರೆದಿದ್ದಾರೆ.
ನಿರೂಪಣೆ ತುಂಬ ಸರಳ ಮತ್ತು ಸಹಜ. ಅವರದೇ ಸರಳ ಭಾಷೆಯಲ್ಲಿ ಪರ್ಫೆಕ್ಟ್ ಡಾಕ್ಯುಮೆಂಟರಿ ಆಗಿದ್ದರಿಂದ ಬದಲಾವಣೆ, ನಮ್ಮದೇ ಕೃತಕ ಜೋಡಣೆ ಬೇಡ ಅನಿಸಿತು.
ಕಾಮೆಂಟ್‌ಗಳು