ಅಯ್ಯೋಧ್ಯಾಯಣ ಇನ್ನೇನು ತೀರ್ಪು ಹೊರಬೀಳತಾ ಇದೆ. ಇಡೀ ಬೆಂಗಳೂರಿನ ಅಂಗಡಿಗಳೆಲ್ಲ ಶೆಟರ್ ಎಳಕೊಂಡು ಮಲಗುತ್ತಿವೆ. ಜನಾ ಭರ್ರ ಅಂತ ಮನೆ ಕಡೆ ಧಾವಿಸುತ್ತಿದ್ದಾರೆ. ಕಳ್ಳರು, ಭಂಡರು, ಕಿರಾತಕರು ಕತ್ತಿ, ಲಾಂಗು ಮಸಿದಿಟ್ಟುಕೊಳ್ಳತೊಡಗಿದ್ದಾರೇನೊ. ಬಾಯಿಯಲ್ಲಿ ರಾಮ-ರಹೀಮ ಬಗಲಿನಲ್ಲಿ ಬಾಂಬು, ಬಂದೂಕು, ಚೂರಿ ಹಿಡಿದು ತಿರುಗುವವರೂ ಇರ್ತಾರೆ. ದೇವ, ದೈವದ ಹೆಸರಲ್ಲಿ ಇಂಥದೊಂದು ಭಯ ಉತ್ಪಾದನೆ (ಭಯೋತ್ಪಾದನೆ) ಸಾಧ್ಯವಾಗಿದ್ದು ಏನು ಸೂಚಿಸುತ್ತದೆ?
ಶಾಂತಿ ಮಂತ್ರ ಹೇಳಿದ ಬುದ್ಧನ ನೆಲದಲ್ಲಿ ಎರಡೂ ಕೋಮುಗಳ ನಡುವೆ ಇದೇ ಮೊದಲ ಸಲ ಸೌಹಾರ್ದದ ಮಾತುಗಳು ಕೇಳಿಸುತ್ತಿವೆ. ಎಲ್ಲೆಡೆ ಶಾಂತಿ ಮನವಿಗಳ ಮಹಾಪೂರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ಕಟ್ಟೆಚ್ಚರ ವಹಿಸುತ್ತಿದೆ. ಅದರದೂ ಅಳಿವು-ಉಳಿವಿನ ಪ್ರಶ್ನೆಯೇ. ತೀರ್ಪು ಹೊರಕ್ಕೆ ಬೀಳುವ ಮುನ್ನವೇ ಅದೆಷ್ಟು ಮುನ್ನೆಚ್ಚರಿಕೆಗಳು!
ತೀರ್ಪು ಏನೇ ಬರಲಿ.
ಅಯ್ಯೋಧ್ಯಾ ಬಗ್ಗೆ ಈಗಲೇ ನೆಟ್ ಚತುರರು ಏನೆಲ್ಲ ಜೋಕುಗಳನ್ನು ಕಟ್ಟತೊಡಗಿದ್ದಾರೆ. ಕಾರ್ಟೂನ್ ಬಿಡಿಸತೊಡಗಿದ್ದಾರೆ ನೋಡೋಣ. ಒಂದು ಸ್ಯಾಂಪಲ್ ಇಲ್ಲಿದೆ ನೋಡಿ.
ಇದು ಸೆನ್ಸ್ ಆಫ್ ಹ್ಯೂಮರ್ ದೃಷ್ಟಿಯಿಂದ.
ಟವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಉಭಯ ಕೋಮುಗಳ ನಾಯಕರನ್ನು ಸಂವಾದಕ್ಕೆಳೆಯುತ್ತ ಟಿವಿ ನಿರೂಪಕ ಕೇಳುತ್ತಾನೆ.
ಹಿಂದೂ: ಇಲ್ಲಾ ಇಲ್ಲಾ... ನೀವು ಮಸೀದಿ ಕಟ್ಟಿಕೊಳ್ಳಿ...
ಶಾಂತಿ ಮಂತ್ರ ಹೇಳಿದ ಬುದ್ಧನ ನೆಲದಲ್ಲಿ ಎರಡೂ ಕೋಮುಗಳ ನಡುವೆ ಇದೇ ಮೊದಲ ಸಲ ಸೌಹಾರ್ದದ ಮಾತುಗಳು ಕೇಳಿಸುತ್ತಿವೆ. ಎಲ್ಲೆಡೆ ಶಾಂತಿ ಮನವಿಗಳ ಮಹಾಪೂರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ಕಟ್ಟೆಚ್ಚರ ವಹಿಸುತ್ತಿದೆ. ಅದರದೂ ಅಳಿವು-ಉಳಿವಿನ ಪ್ರಶ್ನೆಯೇ. ತೀರ್ಪು ಹೊರಕ್ಕೆ ಬೀಳುವ ಮುನ್ನವೇ ಅದೆಷ್ಟು ಮುನ್ನೆಚ್ಚರಿಕೆಗಳು!
ತೀರ್ಪು ಏನೇ ಬರಲಿ.
ಅಯ್ಯೋಧ್ಯಾ ಬಗ್ಗೆ ಈಗಲೇ ನೆಟ್ ಚತುರರು ಏನೆಲ್ಲ ಜೋಕುಗಳನ್ನು ಕಟ್ಟತೊಡಗಿದ್ದಾರೆ. ಕಾರ್ಟೂನ್ ಬಿಡಿಸತೊಡಗಿದ್ದಾರೆ ನೋಡೋಣ. ಒಂದು ಸ್ಯಾಂಪಲ್ ಇಲ್ಲಿದೆ ನೋಡಿ.
ಇದು ಸೆನ್ಸ್ ಆಫ್ ಹ್ಯೂಮರ್ ದೃಷ್ಟಿಯಿಂದ.

ನಿರೂಪಕ: ಅಯ್ಯೋಧ್ಯಾ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಮ್ಮ ಉಡುಪಿಯ ಕಲ್ಮಾಡಿಯವರಿಗೆ ವಹಿಸಿಕೊಡುವ ನಿರ್ಣಯ ಕೈಗೊಳ್ಳಲಾಗಿದೆಯಂತೆ. ಇದಕ್ಕೆ ನೀವೇನು ಹೇಳ್ತೀರಿ?
ಮುಸ್ಲೀಮ: ನೀವೇ ಅಲ್ಲಿ ಮಂದಿರ ಕಟ್ಟಿಕೊಳ್ಳಿ.ಹಿಂದೂ: ಇಲ್ಲಾ ಇಲ್ಲಾ... ನೀವು ಮಸೀದಿ ಕಟ್ಟಿಕೊಳ್ಳಿ...
ಕಾಮೆಂಟ್‌ಗಳು