ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 23, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ರೀತಿ ಎನ್ನುವ ದೊಡ್ಡ ಬಾಂಬ್!

ಸ್ಕೂಲ್ ಮಕ್ಕಳ ಸಮಾರಂಭದಲ್ಲಿ ಏನು ಮಾತಾಡಬೇಕು? ಅದೂ ವಾರ್ಷಿಕೋತ್ಸವದಂಥ, ಉತ್ಸವದಂಥ ಸಂದರ್ಭದಲ್ಲಿ?... ಗುಬ್ಬಚ್ಚಿ ಗೂಡುಗಳ ಸುತ್ತ ಸಂಜೆ ಹೊತ್ತಲ್ಲಿ ಕೊಂಚ ಜೋರಾಗೇ ಚಿಲಿ ಪಿಲಿಗುಟ್ಟುವಂತೆ ಮಕ್ಕಳು ಮಾತಾಡ್ತಾನೇ ಇರ್ತಾರೆ. ಹಾಕಿದ ದಿರಿಸು, ಮೇಕಪ್ ಸಮೇತ ತಮ್ಮ ಡಾನ್ಸ್ ಪಾಳಿ ಯಾವಾಗ ಬರುತ್ತೊ ಎನ್ನುವ ಧಾವಂತದಲ್ಲಿರ್ತಾರೆ. ಮಕ್ಕಳು ಬಣ್ಣ ಹಚ್ಕೊಂಡು, ತಮ್ಮ ಜೇಬುಗಳಿಗೆ, ಪರ್ಸ್ ಗಳಿಗೆಲ್ಲ ಅಷ್ಟು ದೊಡ್ಡ ಕತ್ತರಿ ಹಾಕಿ ಖರೀದಿಸಿದ ದಿರಿಸು ಹಾಕ್ಕೊಂಡು ಸ್ಟೇಜ್ ಮೇಲೆ ಹೇಗೆ ಕಾಣ್ತಾರೆ! ಅಂತ ನೋಡುವ ಏಕಮಾತ್ರ ಕುತೂಹಲದಿಂದ ಬಂದ ಪಾಲಕರು, ಪೋಷಕರು ಭಾಷಣ ಕೇಳುವ ತಾಳ್ಮೆಯನ್ನೆಲ್ಲಿ ಹೊತ್ತು ತಂದಿರ್ತಾರೆ?  ಉದ್ದುದ್ದ ಬೋರ್ ಹೊಡಿಸುವ ವಿಷಯಗಳನ್ನು ಚಚ್ಚುವ ಬಹುತೇಕ ಭಾಷಣಕಾರರು ಇಂಥ ಸಮಾರಂಭಗಳಲ್ಲಿ ಕಿರಿ ಕಿರಿ ಹುಟ್ಟಿಸಿ ಭಾಷಣಕಾರರ ಬಗ್ಗೆ  ಭಯ ಹುಟ್ಟಿಸಿಟ್ಟಿದ್ದಾರೆ. ಇನ್ನು ಕೆಲವರು ಜೋಕುಗಳ ಮೂಲಕ, ಚಾಣಾಕ್ಷ ಮಾತುಗಳ ಮೂಲಕ ಪ್ರೇಕ್ಷಕರಿಗೆ ಸರ್ಕಸ್ ಜೋಕರ್, ಪ್ರಾಣಿಗಳ ಕೌಶಲ್ಯದಂತೆ ಪ್ರತಿಭೆ ಮೆರೆದು ಟೈಂ ಪಾಸ್, ಎಂಟರ್ಟೇನ್ಮೆಂಟ್ ಮಟ್ಟಕ್ಕೆ ಭಾಷಣಗಳನ್ನು ಇಳಸಿಬಿಟ್ಟಿದ್ದಾರೆ. ಇನ್ನು ಕೆಲವರು ಬಿಟ್ಟಿ ಪ್ರವಚನ ಹೇಳಿ ದೇವಾಂಶ ಸಂಭೂತರಂಥ, ಡಿಪ್ಲೋಮೆಸಿಯಂಥ ಬರಿಯ ಸೋಗು ಮೆರೆದಿದ್ದಾರೆ.  ಹೀಗಾಗಿ ಇದೆಲ್ಲ ನೆನಪಿಸಿಕೊಂಡು ನನಗೂ ಭಾಷಣ ಎಂದರೆ ಒಂದು ರೀತಿಯ ಭಯ ಹುಟ್ಟಿಕೊಂಡಿದ್ದು ಒಂದು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ. ಇದರಲ್ಲಿ