ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಗಡಿಯಾರ!

ಅದೊಂದು ಛೋಟೆಖಾನ್ ಸಾಹೇಬರ ಖಾನದಾನಿ ದುಕಾನು. ಅದರ ದರವಾಜಾದ ಮೇಲೆ ಅಜ್ಜನ ಕಾಲದ ದೊಡ್ಡದೊಂದು ಗಡಿಯಾರ. ಖಾನ್ ಸಾಹೇಬರು ಮುಂಜಾವಿನ ನಮಾಜಿಗೆ ಹೊರಡುವ ಹೊತ್ತಿಗೆ ಸರಿಯಾಗಿ,  ತನ್ನ ಪ್ರೇಯರ್ ಗೆಂದು ತೆರಳುತ್ತಿರುವ ಮತ್ತೊಬ್ಬ ವ್ಯಕ್ತಿ ಎದುರಾಗುತ್ತಿದ್ದ. ನಿತ್ಯ ದುಕಾನು ಮುಂದೆಯೇ ಹಾದುಹೋಗುತ್ತಿದ್ದ. ದುಕಾನಿನ ದೊಡ್ಡ ಗಡಿಯಾರ ನೋಡಿಕೊಂಡು ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿದ್ದ. ನಿತ್ಯವೂ ಇದನ್ನು ತಪ್ಪದೇ ಮಾಡುತ್ತಿದ್ದನಾತ. ಛೋಟೆಖಾನ್ ಸಾಹೇಬರು ಇದನ್ನು ತುಂಬ ದಿನಗಳಿಂದ ಗಮನಿಸುತ್ತಲೇ ಇದ್ದರು. ವಿಚಿತ್ರ ಕುತೂಹಲ ಇವರ ತಲೆ ತಿನ್ನತೊಡಗಿತ್ತು. ಇವನ್ನ ತಡೆದು ಒಮ್ಮೆ ವಿಚಾರಿಸಿಕೊಳ್ಳಲೇಬೇಕು ಎಂದು ತೀರ್ಮಾನಕ್ಕೆ ಬಂದುಬಿಟ್ಟರು.  ಎಂದಿನಂತೆ ಆ ವ್ಯಕ್ತಿ ದುಕಾನಿನೆದುರು ನಿಂತ. ಗಡಿಯಾರ ನೋಡಿ, ತನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳತೊಡಗಿದ. ಛೋಟೆಖಾನ್ ಸಾಹೇಬರು ಚಂಗನೆ ಆ ವ್ಯಕ್ತಿಯತ್ತ ನೆಗೆದು ಗಬಕ್ಕನೆ ಹಿಡಿದುಕೊಂಡುಬಿಟ್ಟರು. ಆತ ಗಾಬರಿಗೊಳ್ಳಲಿಲ್ಲ. ಸುಮ್ಮನೇ ನಿಂತುಬಿಟ್ಟ. ಅವನ ಸ್ಥಿತಪ್ರಜ್ಞೆಗೆ ಛೋಟೆಖಾನ್ ಸಾಹೇಬರು ದಂಗಾದರು.  ಅಲ್ಲ ಮೀಯಾ, ನಿತ್ಯ ನಮ್ಮ ದುಕಾನಿನ ಗಡಿಯಾರ ನೋಡಿಕೊಂಡೇ ನಿನ್ನ ಕೈಗಡಿಯಾರ ಸೆಟ್ ಮಾಡಿಕೊಳ್ಳುತ್ತಿಯಲ್ಲಾ ಯಾಕೆ? 'ಖಾನ್ ಸಾಹೇಬರೆ ನಾನು ಮಿಲ್ ನಲ್ಲಿ ಫೋರಮನ್ ಆಗಿದ್ದೆ. ನಿತ್ಯ ಇದೇ ಸಮಯಕ್ಕೆ ಸೈರನ್ ಮೊಳಗುವಂತೆ ನೋಡಿಕೊಳ್ಳುವುದು ನನ್ನ ಜವಾಬುದಾರಿಯಾಗಿತ್ತು. ಈಗಲೂ

ಈ ಬಂಧ, ಸಂಬಂಧ...

ಈಗ ಗಡಿಗಳೇ ಇಲ್ಲ. ಭಾವಸಮುದ್ರ ಎಲ್ಲೆಂದರಲ್ಲಿ ಆವರಿಸಿಕೊಂಡುಬಿಡುತ್ತದೆ. ಮಾಹಿತಿ ತಂತ್ರಜ್ಞಾನ ಇಡೀ ಜಗತ್ತನ್ನು ಒಂದು ಹಳ್ಳಿಯಂತಾಗಿಸಿದ್ದು ಹೌದು. ಆದರೆ, ಮನುಷ್ಯನ ಆಳದಲ್ಲೇ ಅಂತಃಕರಣ, ಬಂಧ, ಸಂಬಂಧ, ಸೆಳೆತಗಳ ಅಗಾಧ ಶಕ್ತಿ ಇದೆಯಲ್ಲ ಅದು ಎಂದಿನಿಂದ ಎಲ್ಲ ಮಿತಿ, ಬೇಲಿಗಳನ್ನು ಕಿತ್ತು ಬಿಸಾಕುತ್ತ ಸಾಗುತ್ತಿಲ್ಲವೇನು... ಭಾಷೆ, ಜಾತಿ, ಬಣ್ಣಗಳ ಮಿತಿಯಲ್ಲಿ ಅಷ್ಟು ಸುಲಭಕ್ಕೆ ಕರಗಿ ಹೋಗುವಂಥದಲ್ಲ ಮನುಷ್ಯ ಪ್ರೀತಿ. ಕರಗುವುದಾದರೂ ಯಾಕೆ? ಮಲೆಗಳಲ್ಲಿ, ಮರದ ಕೊಂಬೆಗಳಲ್ಲಿ ಅಲೆದಾಡಿ, ನಲಿದಾಡಿ ಬೆಳೆದುಬಂದ ಮನುಷ್ಯ ಜೀವ ಹೊಸ ಹೊಸ ನಾಗರಿಕತೆಯ ಹೊಳೆಯಲ್ಲಿ ಈಜುತ್ತಲೇ ಇದೆ. ಕಾಡಿಂದ ನೆಲ, ನೆಲದಿಂದ ನೀರು, ಆಕಾಶ, ಬಾಹ್ಯಾಕಾಶ, ಚಂದ್ರ, ಮಂಗಳ... ಮಿತಿಯುಂಟೇ ಈ ನೆಗೆತಕ್ಕೆ! ಸ್ವಿಜರಲ್ಯಾಂಡ್ ನ ಜ್ಯುರಿಚ್ ಗೆ ಪಯಣಿಸುತ್ತಿದ್ದೆ. ಸಹ ಪಯಣಿಗರಾಗಿ ನನ್ನ ಪಕ್ಕದ ಸೀಟ್ ನಲ್ಲಿ ನಾರ್ವೆ ದಂಪತಿ ಇದ್ದರು. ನಾನು ಆಕಾಶ ನೋಡುತ್ತಿದ್ದೆ. ಅಪರೂಪಕ್ಕೆ ಸೂರ್ಯ ಇಣುಕುತ್ತಿದ್ದ. ಕ್ಯಾಮೆರಾ ಕೊರಳಲ್ಲೇ ನೇತಾಡುತ್ತಿತ್ತು. ಎತ್ತಿಕೊಂಡು ಕ್ಲಿಕ್ಕಿಸುತ್ತಲೇ ಇದ್ದೆ. ಚಳಿ ಎನ್ನುವ ಛಿನಾಲಿಯಿಂದ ಬೇಸತ್ತ ದಿಲ್  ಸೂರ್ಯನ ಬಿಸಿಲಿಗೆ ಗುಲ್ ಮೊಹರಿನಂತೆ ಅರಳುತ್ತಿತ್ತು. ಆಕಾಶ ನಮ್ಮ ಮನಸುಗಳಂತೆ ತೆರಕೊಳ್ಳುತ್ತಲಿತ್ತು. ನಾನು ಮೋಡಗಳ ಜತೆ ಮೋಡವಾಗಿದ್ದೆ ಚಣ ಕಾಲ... ಪಕ್ಕದ ಸೀಟ್ ನಲ್ಲಿ ಕುಳಿತ ಮಹಿಳೆ ನನ್ನ ಭುಜದ ಮೇಲೆ ಕೈ ಇಟ್ಟು, ಅದೆಷ್ಟು ಮುಳುಗಿಹೋಗುತ

ಏಯ್ ಧೀರ ಅಮ್ಮನಿಗೊಂದು ಸೆಲ್ಯೂಟ್ ಹೊಡಿಯೋ, ನನ್ನ ಪರವಾಗಿ...

ಕಳೆದೆರಡು ದಿನ ಇಲ್ಲಿ ಜೀವ ಸಣ್ಣಗೆ ನಡುಗುತ್ತಿತ್ತು. ಹೆರಿಗೆಯ ನೋವುಗಳಲ್ಲಿ ಹೆಣ್ಣುಜೀವವೊಂದು ಚಡಪಡಿಸುತ್ತಿತ್ತು, ಬಿಕ್ಕುತ್ತಿತ್ತು, ಹೊಸ ಜೀವಕ್ಕೊಂದು ಜನ್ಮ ಕೊಡುವುದು ತಮಾಷೆಯಾ... ಮನೆ ತುಂಬ ನಂಬುಗೆಯ ದೀಪಗಳನ್ನಿಟ್ಟು ಹಾರೈಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದೆವು. ಕಾತರದಿಂದ ಕಾಯುತ್ತಿದ್ದ ಕ್ಷಣ ಬರುತ್ತಿದ್ದಂತೆ ಅವಕ್ಕೂ ಜೀವ ಬಂತು. ದೀಪಗಳು ಬೆಳಗತೊಡಗಿದವು. ನನ್ನವ್ವ ಮಾಡಿದ ಸಿಹಿ ಘಮ ಘಮಸತೊಡಗಿತು. ಅಮ್ಮನ ಒಡಲಿಂದ ಹೊರ ಬರುವ ಮುನ್ನ ಅವಳ ಲೋಕದಲ್ಲಿ ಬೆಚ್ಚಗಿದ್ದವ, ಈಗ ನಾರ್ವೆ ಚಳಿಗೆ ತೆರಕೊಂಡುಬಿಟ್ಟ. ಒಂಬತ್ತು ತಿಂಗಳು ಒಂಬತ್ತು ದಿನ ಒಡಲಲ್ಲೇ ಅದಾವ ಲೋಕ ಕಂಡನೋ, ಅದೆಷ್ಟು ಪ್ರೀತಿ ಉಂಡನೋ ಹೊರಕ್ಕೆ ಬರಲು ಒಲ್ಲೆ ಎನ್ನುವಂತೆ ವರ್ತಿಸಿದ. ವೈದ್ಯರು ಕೊಟ್ಟ ತಾರೀಕು ನವೆಂಬರ್ 24, 30... ಎಲ್ಲ ಕಳೆದುಹೋದವು. ವರ್ಷದ ಕ್ಯಾಲೆಂಡರ್  ಕಡೆಯ ತಿಂಗಳ ಹಾಳೆ ಬದಲಿಸುವುದಕ್ಕೆ ಇವನೇ ಬೇಕಿದ್ದನೆನ್ನುವಂತೆ ಹೊಸ ಜಗತ್ತಿಗೆ ದುತ್ತನೇ ಬಂದು ನಿಂತ. ಎಲಾ ಕಿಲಾಡಿ! ಆಗಲೇ ಹೊಕ್ಕಳುಹುರಿ ಕತ್ತರಿಸ ಹೊರಟ ವೈದ್ಯರ ಕತ್ತರಿ ಹಿಡಿಯನ್ನೆ ಗಟ್ಟಿ ಹಿಡಿದುಕೊಂಡಿದ್ದನಂತೆ! ಆ ಸಂದರ್ಭದಲ್ಲಿ ಅವರಪ್ಪ ಅಲ್ಲೇ ಇದ್ದರು. ವೈದ್ಯರ ತಂಡವೆಲ್ಲ ನಕ್ಕಿದ್ದೇ ನಕ್ಕಿದ್ದಂತೆ. ಆಸ್ಪತ್ರೆಯೊಳಗೆ ನನ್ನ ತಂಗಿಯನ್ನು ಕಾಣಲಾಗಲಿಲ್ಲ. ಒಳಕ್ಕೆ ಬಿಡಲಿಲ್ಲ. ಗಂಡನ ಬಿಟ್ಟರೆ ಅವಳ ಬಳಿ ಯಾರೂ ಇರುವಂತಿಲ್ಲ ಇಲ್ಲಿ. ಇಷ್ಟು ದಿನ ಇಲ್ಲಿ ಇದ್ದು ಅವಳ ಹೆರಿಗೆಯ ಮುಂಚೆ