ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಿಯರ್‌ ಜಿಂದಗೀ... ನವಿರು ಭಾವನೆಯ ಆತ್ಮಶೋಧ ಯತ್ನ

Directed by Gauri Shinde Starring Alia Bhatt Shah Rukh Khan Cinematography Laxman Utekar  ಸಂಭಾಷಣೆಗಳಿಂದ ಉಪದೇಶ ಅನಿಸಿದರೂ, ನಿರೂಪಣೆಯಲ್ಲಿ ವಸ್ತುವನ್ನು ಮನದಟ್ಟು ಮಾಡುವ ಸೊಗಸುಗಾರಿಕೆ ಇದೆ. ಸಮಕಾಲೀನ ಯುವ ಸಮಸ್ಯೆಯೊಂದನ್ನು ನೇರವಾಗಿ ಮತ್ತು ಅಷ್ಟೇ ನವಿರಾಗಿ ಬಿಚ್ಚಿಟ್ಟು ಪರಿಹಾರವನ್ನೂ ಸೂಚಿಸುವ ಯತ್ನವಿದೆ. ಹೀಗಾಗಿ ಇಡೀ ಚಿತ್ರ ಟಚೀ ಅನಿಸುತ್ತದೆ.  ಆಲಿಯಾ ಭಟ್‌  ಸಮಕಾಲೀನ ಹೆಣ್ಣುಗಳ ಚಿತ್ರಣವನ್ನು ಅಭಿನಯದಲ್ಲಿ ಸಮರ್ಥವಾಗಿ ಕಟ್ಟಿಕೊಡುತ್ತಾರೆ. ಶಾರುಕ್‌ ಖಾನ್‌ ಹೀರೋಯಿಸಂನಿಂದ ಹೊರಬಂದು ಒಂದು ಪಾತ್ರವಾಗಿ ಗುಡ್‌ ಹ್ಯುಮನ್‌ ಬೀಯಿಂಗ್‌ ತರಹ ಕಾಣಿಸಿಕೊಂಡ ಪರಿ ಸೊಗಸಾಗಿದೆ.  ಯಾವ ಹಮ್ಮು ಬಿಮ್ಮು ಇಲ್ಲದ ಒಬ್ಬ ಮನೋವೈದ್ಯನ ಪಾತ್ರವನ್ನು ಆಪ್ತವೆನಿಸುವಂತೆ ಕಟ್ಟಿಕೊಟ್ಟಿದ್ದು ಖುಷಿ ಕೊಡುವಂಥದು.   ಚಿತ್ರದ ಆಶಯ ಪ್ರೀತಿ, ಪ್ರೇಮ ಸಂಬಂಧಗಳು, ಕೆರಿಯರ್‌, ನಿರೀಕ್ಷೆಗಳು ಅಸಹಿಷ್ಣುತೆಯಿಂದ ನರಳಿ ಎಲ್ಲ ಒಂದಕ್ಕೊಂದು ಭಿನ್ನ ದಿಕ್ಕಿಗೆಳೆಯುತ್ತ ಸಮಕಾಲೀನ ಜನ ಬದುಕೇ ಸೂತ್ರವಿಲ್ಲದ ಗಾಳಿಪಟದಂತಾಗಿದೆ. ತಪ್ಪಿದ ತಾಳವನ್ನು ಸರಿಪಡಿಸಿಕೊಳ್ಳಲಾಗದು ಎನ್ನುವ ಮೌಢ್ಯವೂ ಜೊತೆ ಸೇರಿಕೊಂಡಿದೆ. ಇಂಥದೊಂದು ಸಾಮಾಜಿಕ ಸಂಕೀರ್ಣ ಸ್ಥಿತಿಗೆ ತಲುಪಿದ ಹೆಣ್ಣೊಂದರ ಕೇಸ್‌ ಸ್ಟಡಿಯಂಥ ವಸ್ತುವನ್ನಿಟ್ಟುಕೊಂಡು ಪರಿಹಾರಗಳನ್ನು ಕಂಡುಕೊಳ್ಳುವ ಆಶಯ ಈ ಚಿತ್ರದ್ದು.  ಮಾಡಿದ ತಪ್ಪುಗಳಿಗೆ ಸದಾ ಪರಿತಪಿಸಿ ಬದುಕನ

ವೆಡ್ಡಿಂಗ್‌ ಹೆರಲ್ಡ್‌ : ಪ್ರಾಂಜಲ ಮನದ ಚಿತ್ತ–ಭಿತ್ತಿ

ಜಗದ ಅಚ್ಚರಿ, ಸಂಭ್ರಮ ಮತ್ತು ಇತರ ವಿದ್ಯಮಾನಗಳನ್ನು ದಾಖಲಿಸುವ ಮಾಧ್ಯಮ ಲೋಕ ತನ್ನದೇ ಪಾರಿವಾರಿಕ ಸಾಧನೆ, ಸಂಭ್ರಮಗಳನ್ನು ಅಷ್ಟಾಗಿ ದಾಖಲಿಸಿಕೊಳ್ಳುವುದಿಲ್ಲ.  ಇದು ಒಂದರ್ಥದಲ್ಲಿ ಮಾಧ್ಯಮ  ಬದುಕಿನ ಅಘೋಷಿತ ಮೌಲ್ಯ ಕೂಡ. ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕುಟುಂಬ ವರ್ಗ ಕಳೆದ ಮೂರು ದಶಕಗಳ ನಂತರದಲ್ಲಿ ಒಂದು ಕೌಟುಂಬಿಕ ಸಂಭ್ರಮವನ್ನು (ನವೆಂಬರ್‌ 6, 2016  ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭ ಎಂದಾಗ ಏನೆಲ್ಲ ವೈಭವ, ಆಡಂಬರ ಕಲ್ಪನೆಗೆ ಬರುತ್ತದೆ! ಆದರೆ ಟಿಪಿಎಂಎಲ್‌ ಸಂಸ್ಥೆಯ  ಪ್ರಜಾವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಶಾಂತಕುಮಾರ್ ಅವರ ಪುತ್ರ ನಿಖಿಲ್‌  ವಿವಾಹ ಸಮಾರಂಭ ಸರಳ, ಸಹಜ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಭಿನ್ನ ಮತ್ತು ಅರ್ಥಪೂರ್ಣ ಅನ್ನಿಸಿದ್ದು ಸಹಜತೆಯ ಕಾರಣಕ್ಕೆ. ಮಾನವೀಯ ಸ್ಪಂದನೆ ಇಡೀ ಸಮಾರಂಭದ  ಜೀವಕಳೆಯಾಗಿದ್ದು ಅನುಭವಕ್ಕೆ ದಕ್ಕಿದ್ದರಿಂದ.   ಮಾಧ್ಯಮ ಲೋಕದ ದಿಗ್ಗಜ ಕೆ.ಎನ್‌. ಹರಿಕುಮಾರ್‌ ಸರ್‌ (ಕೆ.ಎನ್‌. ಶಾಂತಕುಮಾರ್ ಅವರ ಹಿರಿಯಣ್ಣ) ಸಂಪಾದಕರಾಗಿದ್ದ ಅವಧಿಯಲ್ಲಿ ಅವರ ಜೊತೆ ಸಂದರ್ಶನದ ಸಂದರ್ಭ ಕೆಲ ನಿಮಿಷ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅಂಥ ಅವಕಾಶವೇ ಬರಲಿಲ್ಲ.  ನಿಖಿಲ್‌ ಮದುವೆ ಸಮಾರಂಭದಲ್ಲಿ ಒಂದೆಡೆ ಹರಿಕುಮಾರ್‌ ಸರ್‌ ತಮ್ಮ ಆಪ್ತರ ಜೊತೆ ಚರ್ಚೆಯ