ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ 10, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚೌಗಲೆಯವರ 'ಕಸುವಿನ ಕಸ್ತೂರಬಾ'

ಗಾಂಧೀಜಿಯವರ ಮೊಮ್ಮಗಳು (ರಾಮದಾಸ್ ಗಾಂಧಿ ಮಗಳು) ಸುಮಿತ್ರಾ ಕುಲಕರ್ಣಿ ತಮ್ಮ "ಮಹಾತ್ಮಾ ಗಾಂಧಿ- ಮೇರೆ ಪಿತಾಮಹ" ಪುಸ್ತಕದಲ್ಲಿ  ಋಷಿಪತ್ನಿ ಅರುಂಧತಿಯ ಪ್ರಸ್ತಾಪ ಮಾಡಿದ್ದಾರೆ. ಅರುಂಧತಿ ಬ್ರಹ್ಮರ್ಷಿ ವಸಿಷ್ಠರ (ರಾಮನ ತಂದೆ ದಶರಥನಿಗೆ ಇವರು ರಾಜಗುರುವಾಗಿದ್ದರಂತೆ) ಸಹಧರ್ಮಿಣಿ.  ಋಷಿಯ ಶ್ರೇಷ್ಠ ಪತ್ನಿ. ತ್ರಿಕಾಲಜ್ಞಾನಿ ವಶಿಷ್ಠರದು ನ್ಯಾಯನೀತಿಯ ಬದುಕು. ಹೀಗಾಗಿ ಸಪ್ತಋಷಿ ಮಂಡಲದಲ್ಲಿ ವಶಿಷ್ಠರಿಗೆ ಸ್ಥಾನ ಕಲ್ಪಿಸಲಾಗಿದೆಯಂತೆ. ರಾತ್ರಿ ಆಕಾಶದಲ್ಲಿ ಏಳು ಚುಕ್ಕೆಗಳ ಒಂದು ಆಕೃತಿ ಥೇಟು ಸುಂದರ ಸ್ತ್ರೀಯ ಮೂಗುನತ್ತಿನಂತೆ ಹೊಳೆಯುತ್ತಿರುವುದನ್ನು ಗಮನಿಸಿರಬಹುದು. ಅದಕ್ಕೆ ಸಪ್ತರ್ಷಿ ಮಂಡಲ (ಹೀಗೊಂದು ನಂಬಿಕೆಯಷ್ಟೇ)  ಎಂದು ಕರೆಯುತ್ತಾರೆ. ಅದರ ಜತೆಗೊಂದು ಪುಟಾಣಿ ನಕ್ಷತ್ರ ಫಳ ಫಳಂತ ಹೊಳೆಯುತ್ತಿರುತ್ತದೆ. ತಾರಾಮಂಡಲದಲ್ಲಿ ಅದೆಷ್ಟೊ ನಕ್ಷತ್ರಗಳ ರಾಶಿಯಲ್ಲಿ ಸಪ್ತರ್ಷಿ ಮಂಡಲದ ಜತೆ ಹೊಳೆಯುವ ಸೌಭಾಗ್ಯ ಈ ಪುಟಾಣಿ ನಕ್ಷತ್ರಕ್ಕೆ ಮಾತ್ರವಿದೆ ಎನ್ನುವುದು ವಿಶೇಷ. ಅದಕ್ಕೆ ಅರುಂಧತಿ ಎಂದು ಹೆಸರು. ಗಾಂಧೀಜಿ ಎನ್ನುವ ಮಹಾಸಂತ, ಋಷಿಗುಣದ ವ್ಯಕ್ತಿಗೆ ಸೂಕ್ತ ಪತ್ನಿಯಾಗಿ ಅವರೆಲ್ಲ ನ್ಯಾಯನೀತಿಯ ಹೋರಾಟಕ್ಕೆ ಸಾಥ್ ಕೊಟ್ಟವರು ಕಸ್ತೂರಬಾ. ಹೀಗಾಗಿ ಕಸ್ತೂರಬಾ ನಿಸ್ಸಂದೇಹವಾಗಿ ಅರುಂಧತಿಯ ಸ್ಥಾನಕ್ಕೇರುವಂಥ ಹೆಣ್ಣು ಎನ್ನುವುದು ಸುಮಿತ್ರಾ ಕುಲಕರ್ಣಿಯವರ ವರ್ಣನೆ, ಮತ್ತು ಹೋಲಿಕೆ. ಕಸ್ತೂರಬಾ ಗಾಂಧಿ ವ್ಯಕ್ತಿತ್ವದ ಪ್ರಖರತೆ ಮ