ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 21, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೆಡ್ಡಿಂಗ್‌ ಹೆರಲ್ಡ್‌ : ಪ್ರಾಂಜಲ ಮನದ ಚಿತ್ತ–ಭಿತ್ತಿ

ಜಗದ ಅಚ್ಚರಿ, ಸಂಭ್ರಮ ಮತ್ತು ಇತರ ವಿದ್ಯಮಾನಗಳನ್ನು ದಾಖಲಿಸುವ ಮಾಧ್ಯಮ ಲೋಕ ತನ್ನದೇ ಪಾರಿವಾರಿಕ ಸಾಧನೆ, ಸಂಭ್ರಮಗಳನ್ನು ಅಷ್ಟಾಗಿ ದಾಖಲಿಸಿಕೊಳ್ಳುವುದಿಲ್ಲ.  ಇದು ಒಂದರ್ಥದಲ್ಲಿ ಮಾಧ್ಯಮ  ಬದುಕಿನ ಅಘೋಷಿತ ಮೌಲ್ಯ ಕೂಡ. ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಕುಟುಂಬ ವರ್ಗ ಕಳೆದ ಮೂರು ದಶಕಗಳ ನಂತರದಲ್ಲಿ ಒಂದು ಕೌಟುಂಬಿಕ ಸಂಭ್ರಮವನ್ನು (ನವೆಂಬರ್‌ 6, 2016  ಭಾನುವಾರ) ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಸೆಲೆಬ್ರಿಟಿ ಕುಟುಂಬದ ಮದುವೆ ಸಮಾರಂಭ ಎಂದಾಗ ಏನೆಲ್ಲ ವೈಭವ, ಆಡಂಬರ ಕಲ್ಪನೆಗೆ ಬರುತ್ತದೆ! ಆದರೆ ಟಿಪಿಎಂಎಲ್‌ ಸಂಸ್ಥೆಯ  ಪ್ರಜಾವಾಣಿ ಪತ್ರಿಕೆ ಸಂಪಾದಕ ಕೆ.ಎನ್‌. ಶಾಂತಕುಮಾರ್ ಅವರ ಪುತ್ರ ನಿಖಿಲ್‌  ವಿವಾಹ ಸಮಾರಂಭ ಸರಳ, ಸಹಜ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಕೂಡಿತ್ತು. ಭಿನ್ನ ಮತ್ತು ಅರ್ಥಪೂರ್ಣ ಅನ್ನಿಸಿದ್ದು ಸಹಜತೆಯ ಕಾರಣಕ್ಕೆ. ಮಾನವೀಯ ಸ್ಪಂದನೆ ಇಡೀ ಸಮಾರಂಭದ  ಜೀವಕಳೆಯಾಗಿದ್ದು ಅನುಭವಕ್ಕೆ ದಕ್ಕಿದ್ದರಿಂದ.   ಮಾಧ್ಯಮ ಲೋಕದ ದಿಗ್ಗಜ ಕೆ.ಎನ್‌. ಹರಿಕುಮಾರ್‌ ಸರ್‌ (ಕೆ.ಎನ್‌. ಶಾಂತಕುಮಾರ್ ಅವರ ಹಿರಿಯಣ್ಣ) ಸಂಪಾದಕರಾಗಿದ್ದ ಅವಧಿಯಲ್ಲಿ ಅವರ ಜೊತೆ ಸಂದರ್ಶನದ ಸಂದರ್ಭ ಕೆಲ ನಿಮಿಷ ಮಾತನಾಡಿದ್ದು ಬಿಟ್ಟರೆ ಮತ್ತೆ ಯಾವತ್ತೂ ಅಂಥ ಅವಕಾಶವೇ ಬರಲಿಲ್ಲ.  ನಿಖಿಲ್‌ ಮದುವೆ ಸಮಾರಂಭದಲ್ಲಿ ಒಂದೆಡೆ ಹರಿಕುಮಾರ್‌ ಸರ್‌ ತಮ್ಮ ಆಪ್ತರ ಜೊತೆ ಚರ್ಚೆಯ