ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅತ್ಯಾಚಾರವೂ ಒಂದು ಅಸ್ತ್ರ!

ಯುದ್ಧ, ಆಂತರಿಕ ಕಲಹಗಳಿಗೆ ಅಂತಿಮ ಗುರಿ ಗೆಲುವೊಂದೇ. ಎಂಥ ಮತ್ತು ಯಾವ ಗೆಲುವು ಎನ್ನುವುದು ಅವುಗಳಿಗೆ ಮುಖ್ಯವಾಗಲ್ಲ. ಅದು ಎಂಥದೇ ಆಂತರಿಕ ಕಲಹ/ಯುದ್ಧವೇ ಆಗಿರಲಿ ಆಗೆಲ್ಲ ಹಿಂಸೆ, ಅತ್ಯಾಚಾರಗಳು ಯಥೇಛ್ಛವಾಗಿ ನಡೆಯುವುದು ಮುಗ್ಧರ ಮೇಲೆಯೇ. ಅದು ಬಹುತೇಕವಾಗಿ ಅಮಾಯಕ ಹೆಣ್ಣುಗಳ ಮೇಲೆ. ಇದು ಒಂದು ರೆಗ್ಯುಲರ್ ಫೆನಾಮಿನಾ. ಆದರೆ...  "1998ರಲ್ಲಿ ಪುನರ್ ರೂಪಿಸಿದ ನನ್ನ ಆಸ್ಪತ್ರೆಗೆ ಅತ್ಯಾಚಾರಕ್ಕೊಳಗಾದ ಒಂದು ಹೆಣ್ಣನ್ನು ಕರೆತಂದರು. ಅವಳೇ ಆಸ್ಪತ್ರೆಯ ಮೊತ್ತಮೊದಲ ಹೊರರೋಗಿ. ಅತ್ಯಾಚಾರಿಗಳು ಆ ಹೆಣ್ಣು ದೇಹವನ್ನು ತಿಂದು ಮುಗಿಸಿ ಅದರ ಯೋನಿಯೊಳಕ್ಕೆ ಮತ್ತು ತೊಡೆಗಳ ಮೇಲೆ ಹಲ್ಲಿನ ಗಾಯದ ಜತೆಗೆ ಬುಲೆಟ್ ಗಳನ್ನು ಹಾರಿಸಿದ್ದರು. ಅಂಥ ಬರ್ಬರ ಅತ್ಯಾಚಾರದ ಪ್ರಕರಣವನ್ನು ನಾನು ಹಿಂದೆಂದೂ ಕೇಳಿಲ್ಲ. ನೋಡಿಲ್ಲ.. * * *  ಈ ಪ್ರದೇಶದಲ್ಲಿ ಆಗಾಗ ಆಂತರಿಕ ಕಲಹಗಳು, ಜನಾಂಗಿಕ ಸಂಘರ್ಷಗಳು ನಡೆಯುತ್ತಲೇ ಇದ್ದವು. ಇವುಗಳಿಂದ ಹೆಚ್ಚುತ್ತಿದ್ದ ಹಿಂಸೆ, ಅತ್ಯಾಚಾರದ ಪ್ರಕರಣಗಳಲ್ಲಿ ನಲುಗುವ ಹೆಣ್ಣುಗಳಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದಲೇ ಟೆಂಟುಗಳನ್ನು ಬಳಸಿ ಒಂದು ಆಸ್ಪತ್ರೆ ರೂಪಿಸಿದ್ದೆ. 1998ರಲ್ಲಿ ನಡೆದ ಒಂದು ದಾಳಿ ಆಸ್ಪತ್ರೆಯ ಜತೆಗೆ 35 ರೋಗಿಗಳನ್ನೂ ಮುಗಿಸಿಹಾಕಿತ್ತು. ಆದರೂ ಕೆಲವೇ ತಿಂಗಳಲ್ಲಿ ಆಸ್ಪತ್ರೆಯನ್ನು ಪುನರ್ ರೂಪಿಸಿದೆ. ಆಗ ಬಂದ ಮೊದಲ ಪ್ರಕರಣವೇ ಈ ಮೇಲಿನ ಹೆಣ್ಣುಮಗಳದ್ದು. * * *  ಬರೋಬ್ಬರ

ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ: ಜವಾರಿ ಜನರ ದಿಲ್ ದಾರಿ ನಾಡಿಗೆ ಖುಶ್ ಆಮದೀದ್...

ಮನುಷ್ಯ ರೂಪಿಸುವ ಸಾಮ್ರಾಜ್ಯ, ಅಧಿಕಾರ, ಕ್ರೌರ್ಯ, ಹಿಂಸೆ... ಕಡೆಗೆ ಕಾಣುವ ಅಂತ್ಯ ಬರಿಯ ಮಣ್ಣು.  ಅದೇ ಪ್ರೀತಿ, ಮಾನವೀಯ ಅಂತಃಕರಣದ  ಗೋಲಗುಂಬಜ್ ಕಲೆಯಾಗಿ, ಸಂವೇದನೆಯಾಗರಳುವುದು ತೆರೆದಂತೆ ಒಳಗಣ್ಣು... ಖುಷ್ ಆಮದೀದ್/ಸ್ವಾಗತ. ಜವಾರಿ ಸೀಮೆಯ ಜನ ಬದುಕು ಅಂದ್ರ ಸ್ವಚ್ಛ ಆಕಾಶ, ಮಳೆ ತರುವ ಮೋಡಗಳ ಅರ್ಬಾಟು, ಸಿಡಿಲು ಮಿಂಚಿನ ಲಕ ಲಕ ಹೊಳಪು, ಸೂರ್ಯನ ಬೆಳಕಿನಂಥ ಹರವು, ನೆಲದೊಡಲಿಂದ ಕುಡಿಯೊಡೆದು ಮುಗಿಲಕಡೆ ಮಾರಿ ಮಾಡಿ ನಿಲ್ಲುವ ಸೂರ್ಯನಿಗೇ ನಿಷ್ಠ ಸೂರೆಪಾನ! ಮಾತು ಮನಂಗಳಲ್ಲಿ ಚಂದಪ್ಪನ ಬೆಳ್ಳಂಬೆಳದಿಂಗಳ ತಂಪು, ಮಲ್ಲಿಗೆಯ ಕಂಪು… ಮನಸು ಅನ್ನೋದು ಮಳೆ ಬರಲಿ, ಬಿರುಗಾಳಿ ಬರಲಿ ಅರಳಬೇಕೆಂದರೆ ಅರಳೇ ಬಿಡುವ ಕಾಡುಮಲ್ಲಿಗೆ! ಮೃದುವಾದರೂ ಅದರ ಅರಳುವ ಸೊಕ್ಕು ಅಬ್ಬಾ!… ಅಂಥ ಸೊಕ್ಕಿನ ಮನೋಧರ್ಮ ಮತ್ತು ಮೃದು ಮನದ ಜನಸಂಸ್ಕೃತಿ ವಿಜಾಪುರಿಗಳದು. * * * ಖ್ವಾಜಾ ಬಂದಾನವಾಜ್ ರಂಥ ಸೂಫಿ ಗಳು,  ಬಸವ ನಂಥ, ಹರಳಯ್ಯ , ಡೋಹರ ಕಕ್ಕಯ್ಯ, ಮಾದಾರ ಚೆನ್ನಯ್ಯ ನಂಥ ಶರಣರು , ಪುರಂದರ, ಸರ್ವಜ್ಞನಂಥ ದಾಸರು, ಇಬ್ರಾಹಿಂ, ಆದಿಲ್ ಶಾಹಿಯಂಥ ದೊರೆಗಳು ನಡದಾಡಿದ ನೆಲದ ಮಣ್ಣ ತುಂಬ ಜೀವಪ್ರೀತಿ ಉಕ್ಕಿಸುವ ಮನುಷ್ಯ ಅಂತಃಕರಣ. ಕತ್ತಿ, ಗುರಾಣಿ ಹಿಡಕೊಂಡು ಈ ನೆಲದ ಮ್ಯಾಲ ಸಾಮ್ರಾಜ್ಯ ಕಟ್ಟ ಬಂದ ಬಹಮನಿ ಸುಲ್ತಾನರು, ಆದಿಲ್ ಶಾಹಿಗಳು ಇಲ್ಲಿನ ನೆಲದ ಮಣ್ಣಿಗೆ ಕರಗಿಹೋಗಿ ನಿಷ್ಠರಾಗಿಬಿಟ್ರು. ಜಗತ್ತೇ ಬೆರಗುಗೊಳ