ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್ 30, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತೀಯ ರಂಗಭೂಮಿಯ ವಿಭಿನ್ನ ರಂಗಸಾಹಸಿ ಹುಸೇನ್

ರಾಮಾಯಣ ವಿಶ್ವದ ಒಂದು ದೊಡ್ಡ ಕಥೆ . ಅಂಥ ಕಥೆಯನ್ನು ರಂಗದ ಮೇಲೆ ಭವ್ಯವಾಗಿ ಹೇಳುವುದು ಒಂದು ರಂಗಸಾಹಸ. ನಾಟಕ ಎಂದರೆ ಕಥೆಯನ್ನೇ ಹೇಳಬೇಕಿಲ್ಲ. ಯಥಾವತ್ ಆಗಿ ಕಥೆಯನ್ನು ರಂಗದ ಮೇಲಿಡುವುದೂ ಅಲ್ಲ. ಒಂದು ವಸ್ತು ಪ್ರತಿ ಸಾರಿ ರಂಗದ ಮೇಲೆ ಬಂದಾಗ ಅದು ಹೊಸದೇ ಆಗಬೇಕು. ಹಾಗೆ ಹೊಸದಾಗಿಸುವುದಕ್ಕೆ ರಂಗಭೂಮಿಗೆ ಸಾಧ್ಯವಿದೆ. ಮತ್ತೆ ಇಡೀ ಇತಿಹಾಸ, ಪುರಾಣ ಅಥವಾ ಕಾದಂಬರಿಯ ಕಥೆಯನ್ನು ಅದರ ಪರಿಸರ ಸಮೇತ ಮರುಸೃಷ್ಟಿ ಮಾಡೋದು ಕೂಡ ಒಂದು ದೊಡ್ಡ ಸಾಹಸ. ಒಟ್ಟಿನಲ್ಲಿ ವಿಭಿನ್ನ ರಂಗಾನುಭವ ನೀಡುವ ಯತ್ನ ಪ್ರಶಂಸೆಗೆ ಪಾತ್ರವಾಗುತ್ತದೆ. 'ದಿ ಲೆಜೆಂಡ್ ಆಫ್ ರಾಮ' ಟಿವಿಯಲ್ಲಿ ರಾಮಾಯಣ ಕಥಾಮಂಜರಿ ಪುಸ್ತಕಗಳಲ್ಲಿ ಬರುತ್ತಿದ್ದ ರಾಮಾಯಣ ಕಥಾನಕದ ಯಥಾವತ್ ಸೃಷ್ಟಿಯಂತೇ ಕಾಣಿಸಿತು. ಚಿಕ್ಕಂದಿನಿಂದ ಕಂಡ ಪ್ರಿಂಟೆಡ್ ರಾಮನ ಚಿತ್ರವೇ ಪರದೆ ಮೇಲೆ ಮಾತಾಡುತ್ತಿದೆ ಎನಿಸಿತು. ರಾಮಾಯಣ ಚಿತ್ರಗಳಲ್ಲಿ ಜೀವಂತವಾಗಿ ಇದ್ದಂತೆ ತೆರೆಯ ಮೇಲೆ ಇರಲಿಲ್ಲ. ಪ್ರಿಂಟೆಡ್ ಚಿತ್ರಣದ ತಾಜಾತನ ತೆರೆಯ ಮೇಲಿನ ದೃಶ್ಯಗಳಲ್ಲಿ ಕಾಣೆಯಾಗಿತ್ತು. ಆದರೂ ಜನ ಅದನ್ನು ಸಾಕ್ಷಾತ್ ಶ್ರೀರಾಮಚಂದ್ರನ ದರುಶನದಂತೇ ಭಾವಿಸಿದರು. ಭ್ರಮಿಸಿದರು. ಪೂಜಿಸಿದರು. ಮುದೇನೂರು ಸಂಗಣ್ಣ ಅವರ 'ಚಿತ್ರಪಟ' ನಾಟಕದಂಥ ರಾಮಾಯಣದ ವಿಭಿನ್ನ ನೋಟವಾಗಿ ರಮಾನಂದ ಸಾಗರ್ ಅವರ ರಾಮಾಯಣ ಡಿಡಿಯಲ್ಲಿ ಕಾಣಿಸಲಿಲ್ಲ. ಯಥಾವತ್ ಚಿತ್ರಣದ ಉದ್ದೇಶವಾಗಿದ್ದರಿಂದ ಅದು ಸಾಧ್ಯವೂ ಇರಲಿಲ್ಲ. ಆದರೆ, ಅ