ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪರ್ಯಾಯ: ಗೌಡರತ್ತ ಎಲ್ಲರ ಚಿತ್ತ!

ಹಣ ಮತ್ತು ಜಾತಿ, ಇವೆರಡಕ್ಕೇ ರಾಜ್ಯದ ಹಣೆಬರಹ ಬರೆಯುವ ಶಕ್ತಿ ಇದೆ! ಎಂಥಾ ದುರವಸ್ಥೆ ಪ್ರಜಾತಂತ್ರದ್ದು? ಹಣ ಬಲದಿಂದ ಗಣಿಧಣಿಗಳು ಏನು ಬೇಕಾದರೂ ಮಾಡಬಲ್ಲ ತಾಕತ್ತು ಹೊಂದಿದ್ದಾರೆ। ಜಾತಿ ಬಲ ಒಂದರಿಂದಲೇ ರಾಜ್ಯ ನಿಯಂತ್ರಿಸಬಲ್ಲೆ ಎಂದು ಯಡಿಯೂರಪ್ಪ ಕೂತಂತಿದೆ। ಎರಡೂ ಅತಿರೇಕಕ್ಕೆ ಏನು ಹೇಳುವುದು? ಪಕ್ಷಗಳಲ್ಲಿ ಅಥವಾ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸಹಜವೇ। ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಚನಾತ್ಮಕ ಕಾರ್ಯಕ್ಕೆ ಸಂಘಟಿತರಾಗುವುದು ಯಾವುದೇ ಸಂಘಟನೆಗೆ ಅನಿವಾರ್ಯದ ಸೌಹಾರ್ದತೆ। ಕನಿಷ್ಠ ಮಟ್ಟದ ಸೌಹಾರ್ದತೆ ಸಾಧ್ಯವಾಗದಂಥ ಸ್ಥಿತಿಗೆ ಬಂದಾಗ ಸಂಧಾನ, ರಾಜಿ ಮಾರ್ಗ ಹಿಡಿಯುವುದು ಹಾಸ್ಯಾಸ್ಪದವಾಗುತ್ತದೆ। ಪರಸ್ಪರ ಆತಂಕ ಮತ್ತು ಅಭದ್ರತೆಯ ನಡುವೆ ಕೂಡಿ ಬಾಳೋದು ದುಸ್ತರವೇ। ಹಾಗೆ ಅಸಮಾಧಾನಗಳ ನಿಗಿ ನಿಗಿ ಕೆಂಡಗಳನ್ನು ಸೆರಗಿನಲ್ಲಿಟ್ಟಕೊಂಡು ಬಹುದೂರ ಸಾಗಲು ಸಾಧ್ಯವೇ ಆಗುವುದಿಲ್ಲ। ಎಲ್ಲಿ ಲಾಭವಿದೆಯೋ ಅಲ್ಲಿ ಸಂಘರ್ಷ ಇದ್ದದ್ದೇ। ಆರಂಭದಿಂದಲೂ ಕೇವಲ ವಸೀಲಿಬಾಜಿ, ಸಂಖ್ಯೆ ಹೊಂದಾಣಿಕೆಗೆ ಖರೀದಿ ತಂತ್ರ ಬಳಕೆ, ಕಡೆಗೆ ಸ್ಥಾನ ಭದ್ರ ಮಾಡಿಕೊಳ್ಳಲು ಆಪರೇಷನ್ ಕಮಲ್ ಎನ್ನುವ ಕೆಟ್ಟ ರಾಜಕೀಯ ಸಂಪ್ರದಾಯಕ್ಕೆ ಶರಣು... ಇಂಥ ಅತಿರೇಕದ ವರ್ತನೆಯಿಂದ ಸುದ್ದಿಯಲ್ಲೇ ಇದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೆಲ್ಲ ನಿರೀಕ್ಷಿತ ಬೆಳವಣಿಗೆಯೇ। ಆಪರೇಷನ್ ಕಮಲ್ ಯಶಸ್ಸಿನ ಅಮಲಿನಲ್ಲಿ ಯಡಿಯೂರಪ್ಪ ಪಾವರ್ ಫುಲ್ ನಾಯಕರಾಗಲು ಯತ್ನಿಸಿದ

ಸೊಳ್ಳೆ ಮತ್ತು ಹಿಂಸೆ

ರಾತ್ರಿಯೆಲ್ಲ ಕಿವಿಯ ಬಳಿ ಗುಂಯ್ ಎನ್ನುತ್ತ, ನನ್ನ ನಿದ್ರೆ ಮತ್ತು ನೆಮ್ಮದಿಗೆ ಭಂಗ ತರುವ ಸೊಳ್ಳೆಯೊಂದು ತುಂಬ ಕಿರಿ ಕಿರಿ ನೀಡುತ್ತಿತ್ತು. ಮೂಗಿನ ತುಂದಿ ಕಚ್ಚುತ್ತ, ಕಿವಿಯ ಮೆದುತೊಗಲು ಚುಚ್ಚಿ ಹಿಂಸೆ ಕೊಡುತ್ತ ನನ್ನ ಆಟ ಆಡಿಸುತ್ತಿತ್ತು. ಅದನ್ನು ಮುಗಿಸುವುದು ಸೂಕ್ತ ಎಂದು ಪ್ರತಿಹಿಂಸೆಗೆ ಸಿದ್ದವಾದರೆ ಸೊಳ್ಳೆ ಗಾಂಧಿ ತಾತನ ಮೂಗಿನ ಮೇಲೆ ಕೂತುಬಿಡೋದಾ...!

ಜೋಗುಳ ೨೦೦; ತಾಯ್ತನದ ಸಂಭ್ರಮ ಮತ್ತು ಇತರ ನೆನಪುಗಳು

ಜೋಗುಳ... ತಾಯ ಎದೆ ಹಾಡು. ಪ್ರತಿಯೊಬ್ಬನ ಮೊತ್ತ ಮೊದಲ ಮಹಾಕಾವ್ಯ. ಈ ಜಗಕ್ಕೆ ಕಣ್ಣು ತೆರಕೊಳ್ಳುವ ಮುನ್ನ, ಕಿವಿಗೆ ಎಲ್ಲ ಶಬುದಗಳ ಅರ್ಥ ಹೊಳೆಯುವ ಮುನ್ನ ಕೇಳಿಸಿಕೊಳ್ಳುವ ಜೀವಸಂಗೀತವದು. ಅವಳೆದೆಯಾಳದ ಪ್ರೀತಿ ಹಾಡುಗಳಾಗಿ ಕಂದನ ಭಾವಕೋಶದ ಪ್ರತಿ ಜೀವಕಣಕ್ಕೂ ತಾಗುವ ಪರಿಯೇ ಅನನ್ಯ. ನಾವು ಮನುಷ್ಯ ಜೀವವಾಗುವ ಪ್ರಕ್ರಿಯೆಯ ಮೊದಲ ಹಂತವದು. ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ! ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ... ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ... ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು