ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 22, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರೈಲ್ವೆ: ಕನಿಷ್ಠ ವ್ಯವಸ್ಥೆ ಮತ್ತು ಸೇವಾ ಕಮಿಟಮೆಂಟ್

ಇದು ನಾರ್ವೆ ರಾಜಧಾನಿ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಒಂದು ಪ್ಲ್ಯಾಟಫಾರ್ಮ್. ಹಳಿಯಗುಂಟ ಹುಡುಕಿದರೂ ಕಾಣದ ಒಂಚೂರು ಕೊಳೆ. ಇಲ್ಲಿ ಯಾರೂ ಗಲೀಜು ಮಾಡುವುದಿಲ್ಲ, ಉಗುಳುವುದಿಲ್ಲ. ಜನರೇ ಇಟ್ಟುಕೊಂಡ, ಕಾಯ್ದುಕೊಂಡ ವ್ಯವಸ್ಥೆ. ಆದರೆ ನಾವ್ಯಾಕೆ ಹೀಗೆ ಉಳಿಸಿಕೊಳ್ಳುತ್ತಿಲ್ಲ! ಇಲ್ಲಿ ಯಾರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಜನರೇ ಕಮ್ಮಿ ಇರುವ ಈ ದೇಶದಲ್ಲಿ ಜನಜಂಗುಳಿ ಇರುವುದಿಲ್ಲ. ಈ ಮಾತು ಸತ್ಯವಾದರೂ ಟ್ರೈನ್  ಪ್ರತಿ ಐದು ನಿಮಿಷಗಳಿಗೊಮ್ಮೆ ಕರಾರುವಕ್ಕಾಗಿ ಬರುತ್ತಲೇ ಇರುವುದರಿಂದ ಹಾಗೆ ಜನಜಂಗುಳಿಯಾಗುವುದಕ್ಕೆ ಅವಕಾಶವಾಗುವುದಿಲ್ಲ ಎನ್ನುವುದು ಇಲ್ಲಿನ ವಾಸ್ತವ. ನಮ್ಮ ದೇಶಕ್ಕೆ ಇದನ್ನು ಕಂಪೇರ್ ಮಾಡುವುದಲ್ಲ. ನಾವು ಇಂಥದೊಂದು ವ್ಯವಸ್ಥೆಯನ್ನು ಹೊಂದಲು ಸಾಧ್ಯವಿದೆ ಎನ್ನುವುದಷ್ಟೇ ನನ್ನ ಕಾಳಜಿ. ಇದು ಜನರಲ್ ಟ್ರೈನ್. ನಗರದಿಂದ ದೇಶದ ಪ್ರತಿ ಪ್ರದೇಶಕ್ಕೆ ಇಂಥದೇ ಟ್ರೈನ್ ವ್ಯವಸ್ಥೆ ಇದೆ. ನಾನು ರಾಜಧಾನಿಯಿಂದ ದೂರದ ಸ್ಯಾಂಡ್ ವಿಕಾ ಎನ್ನುವ ಒಂದು ಪುಟ್ಟದಾದ ಸುಂದರ ಪ್ರದೇಶಕ್ಕೆ ಈ ಟ್ರೈನ್ ನಲ್ಲಿ ಪ್ರಯಾಣಿಸಿದೆ. ಅಲ್ಲಿರುವ ಮುರಳಿ ಶರ್ಮಾ, ಸುಜಾತಾ ಎನ್ನುವ ದಂಪತಿ ಮನೆಗೆ ಭೇಟಿ ನೀಡುವುದು ನನ್ನ ಪ್ರಯಾಣದ ಉದ್ದೇಶವಾಗಿತ್ತು. ಅದೊಂದು ಅದ್ಭುತ ಆತಿಥ್ಯ ಕಂಡ ಕ್ಷಣ. ಸ್ಯಾಂಡವಿಕಾ ಬಗ್ಗೆ ಮತ್ತೆ ಬರೆಯುತ್ತೇನೆ. ರಾಜಧಾನಿಯ ಸೆಂಟ್ರಲ್ ಸ್ಟೇಷನ್ ನಿಂದ ಪ್ರತಿಯೊಂದು ಪ್ಲ್ಯಾಟಫಾರ್ಮ್ ಗೆ ಹೀಗೆ ಕನೆಕ್ಟ್ ಮಾಡುವ ಎಸ್ಕೆಲೇಟರ್ ಗಳಿವೆ. ನಿ

ಇದು ನಾವು ಬದುಕುತ್ತಿರುವ ವ್ಯವಸ್ಥೆ... ನಮಗೇನು ಬೇಕು?

ನಮ್ಮದನ್ನು ಇನ್ನಾರೋ ಬಳಿಯಬೇಕು. ನಮ್ಮದಕ್ಕೆ ನಾವೇ ಮೂಗುಮುಚ್ಚಿಕೊಂಡರೂ ಅವರು ಮಾತ್ರ ಮೂಗು, ಬಾಯಿ ತೆರಕೊಂಡೇ ಎಲ್ಲ ಸಹಿಸಿಕೊಂಡು ಬಳಿಯಬೇಕು. ಹೇಲು, ಉಚ್ಚೆ ಬಳಿವ ಕೈಗಳಿಗೆ ಹಣ ದಕ್ಕುವುದಾದರೂ ಎಷ್ಟು? ಅದರ ವಾಸನೆ ಹೋಗುವಂತೆ ಕೈಗೆ ಬಳಿಯಬೇಕಾದ ಸಬಕಾರಕ್ಕೂ ಅದು ಸಾಲದು. ಇನ್ನು ಇವರ ನಂಬಿದವರ ಹೊಟ್ಟೆಗೆ? ಸಾರ್ವಜನಿಕ ಸ್ಥಳಗಳನ್ನು ನಾವು ಬಳಸಿಕೊಳ್ಳುವ ಮತ್ತು ಅದರ ಬಗ್ಗೆ ನಮಗಿರುವ ಕಾಳಜಿಯ ಪರಿ ಇದು. ರೈಲುಗಳಲ್ಲಿ ಹೇಲುವುದಕ್ಕೆ, ಉಚ್ಚೆ ಹೊಯ್ಯುವುದಕ್ಕೆ ಒಂದು ನಮ್ಮದೇ ಮಿತಿ, ರೀತಿ, ರಿವಾಜುಗಳಿರಬೇಕು ಎಂದೆನಿಸುವುದೇ ಇಲ್ಲ. ಅದು ಹೇಳಿ ಕೇಳಿ ಬರುತ್ತದೆಯೇ ಎನ್ನುವ ಮಾತಲ್ಲಿ ಇರುವುದು ನಮ್ಮ ಉಡಾಫೆ ಅಷ್ಟೇ ಅನ್ನೋದು ನಮ್ಮರಿವಿಗೇ ಬರುವುದಿಲ್ಲ. ಅಥವಾ ಇಲಾಖೆಗಳು ಅದರ ನಿರ್ವಹಣೆಯ ಬಗ್ಗೆ ಹೊಸದಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಅದನ್ನು ಒಂದೆರಡು ಬೋಗಿಗೆ ಹೋಗಿ ಶೇಖರಣೆಯಾಗುವಂತೆ ನೋಡಿಕೊಳ್ಳುವ ಪೈಪಿಂಗ್ ವ್ಯವಸ್ಥೆ ಮತ್ತು ಅದನ್ನು ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವೂ ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಏನು? ಹಸಿದವನಿಗೆ ರಸ್ತೆಯಾದರೇನು ರೈಲ್ವೆ ಟ್ರ್ಯಾಕ್ ಆದರೇನು... ಜನ ಸುತ್ತುವ ಜಾಗವೊಂದಿದ್ದರೆ ಆತ ಭಿಕ್ಷೆ ಬೇಡಿಯಾದರೂ ತನ್ನ ದಿನದ ತೊತ್ತಿನ ಚೀಲ ತುಂಬಿಸಿಕೊಂಡಾನು.. ನಮ್ಮೊಳಗಿನ ಈ ಮಾನವೀಯ ತುಡಿತವನ್ನು ಕಡೆಗಣಿಸುವ ಅಗತ್ಯವೇ ಇಲ್ಲ. ಬಡವರು ಮತ್ತು ಭಿಕ್ಷಾಟನೆ ಇದನ್ನು ಸಮೀಕರಿಸುವುದು ಬೇಡ. ಭಿಕ್ಷಾಟನೆ ನಮ್ಮಲ್ಲಿ