ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್ 27, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನನ್ನು ಹೀಗೆ ಕಾಡಿತ್ತು "ಲೈಫ್ ಆಫ್ ಪೈ" ಮಾಯೆ...

ಒಂದು ಕೈವಾರ ತೆಗೆದುಕೊಂಡು ಒಂದು ವರ್ತುಳ ಮೂಡಿಸುತ್ತೇನೆ. ಕೈವಾರದ ಕೇಂದ್ರ ಬಿಂದುವಿನಿಂದ ಎಳೆದ ವೃತ್ತಾಕಾರ ಗೆರೆಯ ಒಂದು ಬದಿವರೆಗೆ ಸರಳ ರೇಖೆ ಎಳೆದೆನೆಂದರೆ ಅದು ಅರ್ಧ ವ್ಯಾಸ. ಪೂರ್ತಿ ಅಂದರೆ ಎರಡೂ ಬದಿ ಎಳೆದರೆ ಅಡ್ಡಳತೆ. ಅದನ್ನು ವ್ಯಾಸ ಅಂತಲೂ ಕರೆಯುತ್ತಾರೆ. ಅರ್ಥಾತ್ ವರ್ತುಲವನ್ನು ಅಡ್ಡ ಸೀಳಿದಂತೆ.  ಈಗ ಈ ಅಡ್ಡಳತೆ ಅಂದರೆ ವರ್ತುಳದ ವ್ಯಾಸವಿದೆಯಲ್ಲ ಇದರ ಮೂರು ಪಟ್ಟಿಗಿಂತ ತುಸು ಹೆಚ್ಚು ಇಡೀ ವರ್ತುಳದ ಪರಿಧಿ ಇರುತ್ತದೆ ಎನ್ನುತ್ತದೆ ಗಣಿತ. ಇದರ ಒಂದು ಅನುಪಾತವೇ 'ಪೈ' ಅಥವಾ 'ಪಾಯ್'. ಇದೊಂದು ಮ್ಯಾಥೆಮ್ಯಾಟಿಕಲ್ ಕಾನಸ್ಟಂಟ್.  | | ಹೀಗೆರಡು ಗೀಟೆಳೆದು ಇವೆರಡರ ಮೇಲೊಂದು __ ಇಂಥ ಗೀಟೆಳೆದರೆ ಅದೇ ಪೈ ಅಥವಾ ಪಾಯ್ ಸಿಂಬಲ್ ಆಗುತ್ತದೆ. * * *   ತಲೆ ತಿಂದೆ ಅಲ್ಲವೇ?. ಇಂಥ ತರ್ಕಬದ್ಧ ನಾಲೇಡ್ಜ್ ಅಥವಾ ಇದನ್ನು ಮೀರಿದ ಇತರ ಲೆಕ್ಕಾಚಾರಗಳು, ಕೌತುಕಗಳು ಮತ್ತು ಕುತೂಹಲಗಳತ್ತ ಗಮನವಹಿಸುವ ಶಾಲಾ ಬಾಲಕನ (ಪೈಸಿನ್ ಮಾಲಿಟಾರ್ ಪಟೇಲ್ ಅರ್ಥಾತ್ ಶಾರ್ಟ್ ಆಗಿ 'ಪೈ' ಎಂದು ಹೆಸರಿಟ್ಟುಕೊಂಡವ) ಮೂಲಕ ಇಡೀ ಬದುಕಿನ ಅಸಲು ಪರಿಧಿಯನ್ನು ತನ್ನ ಮಿತಿಯಲ್ಲಿ ಕಟ್ಟಿಕೊಡಲು ಯತ್ನಿಸಿದ ಚಲನಚಿತ್ರ 'ಲೈಫ್ ಆಫ್ ಪೈ'.   ಅಮೆರಿಕ ನಿವಾಸಿ ಆ್ಯಂಗ್ ಲೀ ಚಿತ್ರದ ನಿರ್ದೇಶಕ. ಈಚೆಗೆ ಚಿತ್ರ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಚಿತ್ರ ನೋಡಿದ ತಕ್ಷಣಕ್ಕೆ ಇದು