ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 21, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾ ತುಕಾರಾಂ ಅಲ್ಲ: ಇಳಿಹೊತ್ತಿನಲ್ಲಿ ಕಳೆದುಹೋದ ಕಾಲದ ಮೆಲುಕು

ನಾ ತುಕಾರಾಂ ಅಲ್ಲ ಮೂಲ: ಹೆರ್ಬ್ ಗಾರ್ಡನರ್ ಅವರ   ಐ ಯಾಮ್ ನಾಟ್ ರಾಪಪೋರ್ಟ್ ಕನ್ನಡಕ್ಕೆ:   ಸುರೇಂದ್ರನಾಥ್ ನಾಟಕ ಅಂದರೆ ಕೇವಲ ಸಂಭಾಷಣೆಯೇ? ಅಭಿನಯ ಅನ್ನೋದು ಕೂತಲ್ಲಿಂದಲೇ ಬರಿಯ ಕಾಗೆ ಹಾರಿಸೋದಾ? ಇಲ್ಲಿ ಎರಡು ಪಾತ್ರಗಳು ಹೆಚ್ಚಾಗಿ ಮಾಡೋದು ಇದನ್ನೇ. ಇಬ್ಬರೂ ಪ್ರತಿಭಾನ್ವಿತರು. ಒಬ್ಬರಂತೂ ಅಭಿನಯ ಪಯಣದಲ್ಲಿ ಅನೇಕ ಮೇರು ಕೃತಿಗಳ ಪ್ರಮುಖ ಪಾತ್ರಗಳನ್ನು ತುಂಬ ಸೊಗಸಾಗಿ ಅಭಿನಯಿಸಿದವರು. ಸಾಮಾನ್ಯವಾಗಿ 'ನಾ ತುಕಾರಾಂ ಅಲ್ಲ' ತರಹದ ನಾಟಕಗಳಲ್ಲಿ ವಸ್ತುವಿನ ಭಾವಸಾಂದ್ರತೆಯ ಹರವು ಅಷ್ಟು ವ್ಯಾಪಕವಾಗಿರೋದಿಲ್ಲ. ಒಂದು ಭಾವುಕ ನೆಲೆಯಲ್ಲಿ ಪ್ರೇಕ್ಷಕನಿಗೆ ಏನನ್ನೋ ನೆನಪಿಸಿಕೊಡುವ, ತಲುಪಿಸುವ ಸಣ್ಣ ಹಟಕ್ಕೆ ಇಂಥ ನಾಟಕಗಳು ಬೀಳೋದೇ ಹೆಚ್ಚು. ನಮ್ಮ ನಿಜಜೀವನದ ಅಂದರೆ ನಿತ್ಯಬದುಕಿನ ಬವಣೆಯ ಒಂದಿಷ್ಟು ಪಾಕ ಬಳಸಿಕೊಂಡು, ರಂಗದ ಮೇಲೆ ಅದನ್ನೆಲ್ಲ ಪಾತ್ರಗಳ ಮೂಲಕ ಹರಿಯಬಿಟ್ಟು ಪ್ರೇಕ್ಷಕರ ಮೆಚ್ಚುಗೆ, ಒಂದಷ್ಟು ಕಂಬನಿ, ಮರುಕತನ, ಚಪ್ಪಾಳೆಯನ್ನಷ್ಟೇ ನಿರೀಕ್ಷಿಸುವ ಇಂಥ ನಾಟಕಗಳಿಂದ ಅರಿವಿನ ವಿಸ್ತಾರವಾಗಲಿ, ಭಾವಸಂಘರ್ಷವನ್ನಾಗಲಿ ಅತ್ಯಂತ ಆಳವಾಗಿ ಅಥವಾ ದಟ್ಟವಾಗಿ ಅನುಭವಿಸಲು ಸಾಧ್ಯವಾಗುವುದಿಲ್ಲ. ಮೇಲ್ಪದರದಲ್ಲಿಯೇ ವಸ್ತು ಕ್ಷಣ ಕಾಲ ಕಾಡಿ ಮತ್ತೆ ಮರೆವಿಗೆ ಸಂದಾಯವಾಗಿಬಿಡುತ್ತದೆ. ಅನುಭವದ ಜತೆಗಿನ ಅನುಸಂಧಾನ ಪ್ರೇಕ್ಷಕರಿಗೆ ಅಷ್ಟು ಸಾಧ್ಯವಾಗುವುದಿಲ್ಲ. ಟಿಕೆಟ್ ಕೊಟ್ಟು ಇಂಥ ನಾಟಕಗಳನ್ನು ನೋಡುವುದಾದರೆ ಕೊಟ್ಟ ಕಾಸ