ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ 6, 2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಹಿಳೆ, ಮಕ್ಕಳು ಮತ್ತು ನಾಡ ಕಾಳಜಿ

ತುಂಬ ವರ್ಷಗಳ ಹಿಂದಿನ ದುರಂತವಿದು. ನಾನಾಗ ಕಾಲೇಜು ಸೇರುವ ವಯಸ್ಸಿನ ಹುಡುಗ. ಅವತ್ತೊಂದಿನ ಸರಿ ರಾತ್ರಿಯಲ್ಲಿ ಹೆಣ್ಣುಮಗಳ ನರಳಾಟ. ಅಳು. ನೋಡಿದರೆ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಪರಿಸ್ಥಿತಿ ಗಂಭೀರವಾಗಿತ್ತು. ದವಾಖಾನೆಗೆ ಸಾಗಿಸಲು ಪರದಾಟ ನಡೆದಿತ್ತು.  ಅಂಬ್ಯುಲೆನ್ಸ್‌! ಅಯ್ಯೋ.. ಬಿಡಿ. ಆಟೊ, ಟ್ಯಾಕ್ಸಿಗಳು ಅಲ್ಲಿನ್ನೂ ಬಂದೇ ಇರಲಿಲ್ಲ. ಆ ಸರಿಹೊತ್ತಿನಲ್ಲಿ ಸಮೀಪದಲ್ಲೇ ನಿಲ್ಲಿಸಿದ್ದ ಹಮಾಲರ ಎತ್ತಿನ ಗಾಡಿಯಲ್ಲಿ ಗರ್ಭಿಣಿಯನ್ನು ಹಾಕಿಕೊಂಡು ನಾವೇ ಎತ್ತುಗಳಂತೆ ದರ ದರನೆ ಎಳೆದು ಆಸ್ಪತ್ರೆ ತಲುಪಿಸಿದ್ದೆವು. ಅದು ಸರ್ಕಾರಿ ದವಾಖಾನೆ! ಊರಿಗದೊಂದೇ ದೊಡ್ಡ ದವಾಖಾನೆ.  ತಗ್ಗು, ದಿಣ್ಣೆಯ ಅದ್ವಾನ ರಸ್ತೆ, ಪವರ್ ಬೇರೆ ಕಟ್‌ ಆಗಿತ್ತು. ಮಂದ ಬೆಳಕಿನಲ್ಲಿ ಸಾಗಿ ಆಸ್ಪತ್ರೆ ತಲುಪಿದರೆ ಅಲ್ಲಿ ಇದ್ದದ್ದು ನರ್ಸ್, ಕಂಪೌಂಡರ್. ವಿಚಾರಿಸಿದರೆ ಹೆರಿಗೆ ಹಾಸಿಗೆಗಳು ಖಾಲಿ ಇಲ್ಲ ಎನ್ನುವ ಜವಾಬು. ಎಮರ್ಜೆನ್ಸಿಗೆ ಅಂತ ಒಂದು ಬೆಡ್‌ ಇರುತ್ತಲ್ಲ ಅದು ಖಾಲಿ ಇತ್ತು. ಆದರೆ ಅದಕ್ಕೆ ‘ದೊಡ್ಡ ಬಾಯಾರ’ ಪರ್ಮಿಶನ್‌ ಬೇಕು. ದೊಡ್ಡ ಬಾಯಾರು ಅಂದರೆ ಡಾಕ್ಟರಮ್ಮ.  ಆಸ್ಪತ್ರೆಯ ಆವರಣದಲ್ಲೇ ಆಕೆಗೊಂದು ಸರ್ಕಾರಿ ಮನೆ. ಬಾಗಿಲು ಬಡಿದರೆ ಸದ್ದೇ ಇಲ್ಲ! ಒಂದೇ ಸಮ ಜೋರಾಗಿ ಕೂಗಿದಾಗ ಗಡಸು ದನಿಯೊಂದು ಕಿಟಕಿ ಬಳಿ ಬಂದು ‘ಯಾಕೆ ದನಕ್ಕೆ ಬಡಿದಹಾಗೆ ಬಾಗಿಲು ಬಡೀತಿದೀರಿ ದೊಡ್ಡ ಬಾಯಾರು ಊರಲ್ಲಿಲ್ಲ’ ಎನ್ನುವುದು ಕೇಳಿಸಿತು. ಮತ್ತ