ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನನ್ನ ಜಿಲ್ಲೆ ನನ್ನ ಅಭಿಮತ: ಬಾಗಲಕೋಟೆ ಲೋಕಸಭೆ ಕ್ಷೇತ್ರದ ವಾಸ್ತವ

ಹೊಸಪೇಟೆಯಿಂದ ಬಾಗಲಕೋಟೆ ಮತ್ತಲ್ಲಿಂದ ವಿಜಾಪುರ, ಸೊಲ್ಲಾಪುರ ಸಂಪರ್ಕದ ಆಲಮಟ್ಟಿ ಹೆದ್ದಾರಿ ಅಂತರರಾಷ್ಟ್ರೀಯ ಗುಣಮಟ್ಟದ್ದು ಎನ್ನುವಷ್ಟು ಅಚ್ಚರಿ ಮೂಡಿಸುತ್ತದೆ. ರಸ್ತೆ, ರಸ್ತೆಗುಂಟ ಕಟ್ಟಿದ ಬೇಲಿ, ಟನಲ್.. ಎಲ್ಲವೂ ಹೌಹಾರುವಂತಿವೆ. ಇಂಡಿಯಾದಲ್ಲಿದೀವಾ ಫಾರೀನ್‌ನಲ್ಲಿದಿವಾ ಅನ್ನುವಷ್ಟು.  ಬಾಗಲಕೋಟೆಯಿಂದ ಬೀಳಗಿ, ಮುಧೋಳ, ಜಮಖಂಡಿ, ವಿಜಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಇಡೀ ಭಾಗವನ್ನು ಬೇರೆಯದೇ ನೆಲೆಯಲ್ಲಿ ನೋಡುವಂತೆ ಪ್ರೇರೇಪಿಸುತ್ತವೆ. ರಸ್ತೆಯ ಇಕ್ಕೆಲಗಳಲ್ಲಿ ಕಬ್ಬು, ದ್ರಾಕ್ಷಿ, ದಾಳಿಂಬೆ ಮತ್ತು ಉಳ್ಳಾಗಡ್ಡಿ ಬೆಳೆ (ಈರುಳ್ಳಿ) ನಳನಳಿಸುತ್ತದೆ. ಜೋಳ, ಗೋಧಿಯ ನೆಲದಲ್ಲಿ ಈಗ ಕಮರ್ಷಿಯಲ್ ಕ್ರಾಪ್‌ಗಳದ್ದೇ ಕಾರುಬಾರು. ಮೇನ್ ರೋಡ್‌ನಿಂದ ಕೊಂಚ ದೂರದಲ್ಲೇ ಸಕ್ಕರೆ, ಸಿಮೆಂಟ್ ಕಾರ್ಖಾನೆಗಳು, ಗ್ರಾನೈಟ್ ಉದ್ಯಮ ಮತ್ತು ವೈನ್ ಪ್ಲ್ಯಾಂಟ್‌ಗಳು ಹೆಜ್ಜೆ ಹೆಜ್ಜೆಗೆ ಅನ್ನುವಷ್ಟಿವೆ. ರಸ್ತೆಗಳು ಮಿರಿ ಮಿರಿ ಮಿಂಚುವುದರ ಹಿಂದಿನ ಹಿಕ್ಮತ್ತು ಇಂಥ ಉದ್ಯಮಗಳದ್ದೇ.  ಬೆಳೆಹಾನಿ, ಬಂಪರ್ ಬೆಲೆ, ಸಬ್ಸಿಡಿ ದಂಧೆ, ಸಾಲ ಮನ್ನಾ ಇಂಥದ್ದರಲ್ಲೇ ಮಿಂದೇಳುವ ಕೆಲ ಮೇಲ್ವರ್ಗದ ಶ್ರೀಮಂತ ರೈತರ ಕಾರು, ಜೀಪು ಮತ್ತು ಬೈಕ್  ಭರಗುಟ್ಟಲು ರೂಪಿಸಿದಂತಿರುವ ರಸ್ತೆಗಳೇ ಅಭಿವೃದ್ಧಿ ಎನ್ನುವ ಭ್ರಮೆ ಹುಟ್ಟಿಸಿವೆ.  ಪುಟ್ಟ ಜಮೀನು ಹೊಂದಿದ ರೈತರ ಎತ್ತಿನ ಗಾಡಿ, ಅಸಂಖ್ಯ ಭೂರಹಿತರು, ಕೂಲಿ ಕಾರ್ಮಿಕರು ಮತ್ತು ಪಾದಚಾರಿಗಳ ಓಡಾ