ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್ 1, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾವೆಷ್ಟು ನಾಮರ್ದಗಳಾಗಿದ್ದೇವೆ?

ನಮ್ಮೆಲ್ಲ ಕನಸು, ಆಶಯಗಳ ಪ್ರತೀಕವಾಗಬೇಕಿದ್ದ ನಾವೇ ಆಯ್ಕೆ ಮಾಡಿದ ಸರ್ಕಾರಗಳು 'ಸೆಟ್-ಅಪ್' ಕಲ್ಚರಿಗೆ ಸರಿದು ನಿಂತಿವೆ. ಒಂದು ನಿರ್ಧಿಷ್ಟ ಕೋಮು, ಕಲ್ಟ್, ಜಾತಿ, ಧರ್ಮಕ್ಕೆ ಸೇರಿದವರು ಒಂದು ಗ್ಯಾಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ಬಲಿಷ್ಠ ಕೋಮುಗಳ ಸ್ವಯಂಘೋಷಿತ ರಾಜ್ಯ-ರಾಷ್ಟ್ರೀಯ ಲೀಡರ್ ಗಳು ಪವರ್ ಡೀಲರ್ ಗಳಾಗಿದ್ದಾರೆ. ಅವರನ್ನೆಲ್ಲಾ ನಾವು ಜನನಾಯಕರೆಂದು ನಂಬುತ್ತೇವೆ. ಬಾಟಾ ಬಾಟಿಯ ವ್ಯಾಪಾರಿ ಬುದ್ಧಿ ಇಂದಿನ ಪಾಲಿಟಿಕಲ್ ಕ್ವಾಲಿಫಿಕೇಷನ್ ಆಗಿಹೋಗಿದೆ. ಜಾತಿವಾರು ಲೆಕ್ಕಾಚಾರ, ಸಂಖ್ಯಾಬಲದ ಜೋಡಣೆಗೆ ಫ್ರಂಟ್ ಲೈನ್ ಲೀಡರ್ ಗಳು ಬ್ರೋಕರ್ ಕೆಲಸದಲ್ಲಿ ತೊಡಗಿದ್ದಾರೆ. ಧರ್ಮ ಎನ್ನುವುದು ಇವರು ತೊಡುವ ಹವಾಯಿ ಚಪ್ಪಲಿಗಿಂತ ಕಡೆಯಾಗಿ ಹೋಗಿದೆ. ಯೂಸ್ ಅಂಡ್ ಥ್ರೋ ವಸ್ತುವಾಗಿದೆ. ಧಾರ್ಮಿಕ ನಾಯಕರೆಲ್ಲ ತಮ್ಮ ಅನುಯಾಯಿಗಳನ್ನು ರಾಜಕಾರಣಿಗಳ ಗುಲಾಮರನ್ನಾಗಿ ಪರಿವರ್ತಿಸತೊಡಗಿದ್ದಾರೆ. ಹೀಗೆ ರಾಜಕಾರಣಿಗಳು ಮತ್ತು ಧಾರ್ಮಿಕ ನಾಯಕರ ನಡುವೆ ಒಡಂಬಡಿಕೆಗಳು ಯಾವ ಎಗ್ಗಿಲ್ಲದೆ ನಡೆಯುತ್ತಿವೆ. ಯಾವ ಆಶಾಭಾವದಿಂದ ಇದನ್ನೆಲ್ಲ ಸಹಿಸಿಕೊಂಡಿರಬೇಕೋ... ಇಂಥದೊಂದು ಸಾತ್ವಿಕ ಆಕ್ರೋಶ ಬಹುತೇಕ ಪ್ರಜ್ಞಾವಂತರಲ್ಲಿಯೂ ಮೂಡುತ್ತಿದೆ. ಮತಾಂತರ ವಿರೋಧಿಸುವ ಪಕ್ಷದ ಸರ್ಕಾರ ಪಕ್ಷಾಂತರವನ್ನು ಆಪರೇಷನ್ ಕಮಲ್ ಎನ್ನುವ ಸೋಗಿನಲ್ಲಿ ನಡೆಸುತ್ತಿದೆ. ಯಾವ ನೈತಿಕ ನೆಲೆಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತ