ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 23, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ... ಭಾಗ 5

1968ರಲ್ಲಿ ರಫೀ ಕುಟುಂಬದ ಮೊತ್ತ ಮೊದಲ ಮದುವೆ ಸಮಾರಂಭ. ಮೊದಲ ಮಗಳು ಪರ್ವೀನ್ ಹಸೆಮಣೆ ಹತ್ತುವ ಸಂಭ್ರಮ. ಆ ಸಂದರ್ಭದಲ್ಲೇ ’ನೀಲ್ ಕಮಲ್’ ಚಿತ್ರದ  ’ಬಾಬುಲ್ ಕಿ ದುವಾಯ್ಞೆ ಲೇತಿ ಜಾ...’ ಹಾಡಿನ ರೆಕಾರ್ಡಿಂಗ್ ನಡೆಯಿತು.  ಹಸೆಮಣೆ ಏರಿದ ಮಗಳನ್ನು ತವರು ಮನೆಯಿಂದ ಬೀಳ್ಕೊಡುವ ಸಂದರ್ಭಕ್ಕೆಂದು ಬರೆದ ಹಾಡು ಅದಾಗಿತ್ತು. ಈ ಹಾಡಿನ ರೆಕಾರ್ಡಿಂಗ್ ಸಂದರ್ಭದಲ್ಲೆಲ್ಲ ಅಬ್ಬಾ ಮಗಳ ಬಿದಾಯಿಯನ್ನೇ ನೆನಪಿಸಿಕೊಂಡು ತುಂಬ ಭಾವುಕರಾಗುತ್ತಿದ್ದರು. ಹಾಡಿನ ಪ್ರತಿಯೊಂದು ಪದ ತಂದೆಯೊಬ್ಬನ  ಬಾವತೀವ್ರತೆಯನ್ನು ಧ್ವನಿಸುತ್ತಿತ್ತು.  ಇವತ್ತಿಗೂ ಈ ಹಾಡು ಕೇಳಿದಾಗೆಲ್ಲ ನನ್ನ ಕಣ್ಣುಗಳು ತೇವವಾಗುತ್ತವೆ. ಹಾಡಿನ ರೆಕಾರ್ಡಿಂಗ್ ಕ್ಷಣಗಳನ್ನು ಮೆಲುಕು ಹಾಕುವಾಗಲೆಲ್ಲ ಅಬ್ಬಾ ದನಿ ತಡವರಿಸುತ್ತಿತ್ತು. ಅದರಲ್ಲಿ ತಂದೆಯೊಬ್ಬನ ಮಗಳ ಬಗೆಗಿನ ಕಕ್ಕುಲಾತಿ ಭಾವನೆ ಮಿಡಿಯುತ್ತಿತ್ತು. 1968ರಲ್ಲಿ ಅಬ್ಬಾಗೆ ಇದೇ ಹಾಡಿಗಾಗಿ ನ್ಯಾಷನಲ್ ಅವಾರ್ಡ್ ಅರಸಿ ಬಂತು. ’ಹಮ್ ಕಿಸೀಸೆ ಕಮ್ ನಹೀ’ ಚಿತ್ರದ  ’ಕ್ಯಾ ಹುವಾ ತೇರಾ ವಾದಾ...’ ಎನ್ನುವ ಅದ್ಭುತ ಹಾಡಿಗೆ 1977ರಲ್ಲಿ ಮತ್ತೊಂದು ನ್ಯಾಷನಲ್ ಅವಾರ್ಡ್ ಅಬ್ಬಾ ಮುಡಿಗೇರಿತು. ರಫೀ ಸಾಹೇಬರ ಮಾತೃಭಾಷೆ ಪಂಜಾಬಿ. ಉರ್ದು  ಮಾತನಾಡುವಾಗಲೂ ಅದರಲ್ಲಿ ಪಂಜಾಬಿ ಸೊಗಡೇ ಧ್ವನಿಸುತ್ತಿತ್ತು. ಮನೆಯಲ್ಲಿ ಮಕ್ಕಳ ಜತೆ ಅಬ್ಬಾ ಉರ್ದುವಿನಲ್ಲೇ ಮಾತನಾಡುತ್ತಿದ್ದರು. ಕಾರಣ ಇಷ್ಟೇ, ಅಮ್ಮಾಗೆ ಪಂಜಾಬಿ ಭಾಷೆ ಅರ್ಥವಾಗು