ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 10, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೊದಲ ವಿದೇಶ ಪಯಣ ಆರಂಭದ ಕ್ಷಣಗಳು...

ನಾರ್ವೆ ದೇಶಕ್ಕೆ ಹೊರಡುವ ನನ್ನ ತಯಾರಿ ಏನ್ ಕೇಳ್ತಿರಾ... ಚಂದ್ರಲೋಕಕ್ಕೆ ರಾಕೇಶ್ ಶರ್ಮಾ ಹೊರಡುವಾಗಲೂ ಇಷ್ಟು ಚಡಪಡಿಕೆ, ಹಿಂಜರಿಕೆ ಅನುಭವಿಸಿರಲಿಕ್ಕಿಲ್ಲ! ಜತೆಯಲ್ಲಿ ಅಮ್ಮ ಮತ್ತು ನನ್ನ ತಂಗಿಯ ಅತ್ತೆ ಕೂಡ ಹೊರಡಲಿದ್ದರು. ಚಳಿಗಾಲದಲ್ಲಿ ಯುರೋಪ ಹೊರಟುನಿಂತ ನಮ್ಮ ಸಾಹಸಕ್ಕೆ ಗೆಳೆಯರೂ ಬೆಚ್ಚಿದ್ದರು. ಪಾಸಪೋರ್ಟ್ ತೆಗೆಯಿಸಿಕೊಳ್ಳುವುದಕ್ಕೂ ಹಿಂಜರಿದಿದ್ದ ನಾನು ವಿಸಾ, ಟಿಕೆಟ್ ಅಂತೆಲ್ಲಾ ಹೆಣಗಾಡುವುದನ್ನು ನೆನೆದರೆ ನನಗೇ ನಗು ಬರುತ್ತಿತ್ತು. ವಿಮಾನ ಹತ್ತುವ ಮುಂಚಿನ ಕೆಲ ಕ್ಷಣಗಳಿವು... ಎಷ್ಟೋ ವರ್ಷಗಳ ನಂತರ ನನ್ನ ಕೇಶರಾಶಿ ಅಂತೂ ಒಂದು ಸಲೂನಿನ ಕತ್ತರಿ ರುಚಿ ಕಂಡಿತು... ನವದೆಹಲಿಯಲ್ಲಿನ ನಾರ್ವೆ ಕಾನ್ಸುಲೇಟ್ ಆಫೀಸಿನಲ್ಲಿ ವೀಸಾ ಸ್ಟ್ಯಾಂಪ್ ಮಾಡಿಸಿಕೊಂಡು ಪಾಸಪೋರ್ಟ್ ಪಡೆದುಕೊಂಡ ಕ್ಷಣ... ಅಯ್ಯೋ ಅದೊಂದು ಅತ್ಯಂತ ಕಠಿಣ ಸಮಯ! ಯುರೋಪ ಚಳಿಗೆ ಇಲ್ಲಿಂದಲೇ ತಯಾರಿ! ಕನ್ನಡಿ ಮುಂದೆ ನನ್ನ ಮೇಲೆ ನಾನೇ ಜೋಕು ಮಾಡಿಕೊಂಡು ನಕ್ಕಿದ್ದೇ ನಕ್ಕಿದ್ದು. ವೈಯಕ್ತಿಕವಾಗಿ ನಾನೆಂದೂ ವಿದೇಶದ ಸೊಲ್ಲೆತ್ತಿದವನಲ್ಲ. ಈ ಹಿಂದೆ ಒಂದು ಸಾರಿ ಪ್ಯಾರಿಸ್ ಮತ್ತು ದುಬೈ ಹೋಗುವ ಬಗ್ಗೆ ಆಫೀಸಿನ ಮೇಲಧಿಕಾರಿಯಾಗಿದ್ದ ಆರ್ ಪಿ ಜಗದೀಶ್ ಆಹ್ವಾನ ನೀಡಿದಾಗ ಪಾಸಪೋರ್ಟ್ ಇಲ್ಲ ಎನ್ನುವ ನೆವ ಹೇಳಿ ಬಚಾವಾಗಿದ್ದೆ. ಹಾಗೂ ಬೈಸಿಕೊಂಡಿದ್ದೆ. ಈಗ ನಾನು ವಿದೇಶಕ್ಕೆ ತೆರಳಲೇಬೇಕಾದ ಪ್ರಸಂಗ ಬಂದೇಬಿಟ್ಟಿತು. ಜತೆಯಲ್ಲಿ ಹೋಗೋಣ ಎಂದು ಗೆಳೆಯರು ಕೂಡ ಮನಸು