ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಾವಿತ್ರ್ಯ ಮತ್ತು ನಿಷೇಧ

ಇಡೀ ಪ್ರಕೃತಿ ದೇವತೆ. ಗೋಮಾತೆಯಂತೆ, ನೆಲವೂ ದೇವತೆ. ಗೋಹತ್ಯೆ ನಿಷೇಧಿಸುವುದಾದರೆ, ಗಣಿಗಾರಿಕೆಯನ್ನೂ ನಿಷೇಧಿಸಲೇಬೇಕು. ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು  ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು. ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು. ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು! ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರತ ಮೂಲದ ವಿಜ್ಞಾನಿ ಸರ್

DILSE: ಕೀ.ರಂ ನೆನಪಿನ ತೇರು...

DILSE: ಕೀ.ರಂ ನೆನಪಿನ ತೇರು... : "ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010) ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮ..."

ಕೀ.ರಂ ನೆನಪಿನ ತೇರು...

ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010)  ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮಾಡಿ ಕಿ.ರಂ ಹೋಗಿಬಿಟ್ರು ಎಂದ. ನಂಬೋಕಾಗಲಿಲ್ಲ. ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ 'ನೀಗಿಕೊಂಡ ಸಂಸ' ಬರೆದ ನಾಟಕಕಾರ, ವಿಮರ್ಶಕ ಸುಮ್ಮನೇ ಮಲಗಿದಂತೆ ಕಾಣಿಸಿದ. ಒಂದಷ್ಟು ಕ್ಷಣ ಮುಂದೆ ನಿಂತು ಮನದಲ್ಲೇ ಆಖರೀ ಸಲಾಂ ಹೇಳಿ ಅಲ್ಲೇ ಇದ್ದ ಗೆಳೆಯರ ಗುಂಪಿಗೆ ಸೇರಿದೆ. ನಾಗತಿಹಳ್ಳಿ ರಮೇಶ್ ವ್ಯಾನ್ ನಲ್ಲಿ ಕ್ರಮೇಷನ್ ಗೆ ಹೋಗೋಣ ನಡೆಯಿರಿ ಎಂದು ತಮ್ಮ ಪಟಾಲಂ ಸೇರಿಸಿದ. ನನ್ನನ್ನೂ ಕರೆದೊಯ್ದರು. 'ಎಂದೂ ಎಲ್ಲೂ ನಿಲ್ಲದ, ಮಾತೇ ಮಾಣಿಕ್ಯ ಎಂದು ನಂಬಿದಂಥ, ದಾರಿಯುದ್ದಕ್ಕೂ ಆಶಯಗಳ ಸಾರುತ್ತ ಹೊರಟ ಸಾರೋ ಐನಾರನ ಹಾಗೆ, ಮೆಚ್ಚಿದ್ದನ್ನು, ಮೆಚ್ಚದೇ ಇದ್ದದ್ದನ್ನು ಏಕತಾರಿ ನಾದದಲ್ಲಿ ಹಾಡುತ್ತ ಹೊರಟ ಫಕೀರ, ದರವೇಶಿಯಂಥ.. ತನ್ನದೇ ಜ್ಞಾನದ ಧುನ್ ನಲ್ಲಿ ಮುಳುಗಿಹೋದ ಸೂಫಿಯಂಥ ಮನುಷ್ಯ ಹೊರಟು ಹೋದನಲ್ಲ...' ಎಂದೆಲ್ಲ ವ್ಯಾಖ್ಯಾನಿಸಲೆತ್ನಿಸಿದೆ. ಹುಟ್ಟು-ಸಾವಿನ ನಿರಂತರ ಪ್ರಕ್ರಿಯೆಯ ಸತ್ಯದೆದುರು, ಒಬ್ಬ ಮನುಷ್ಯ ಇನ್ನಿಲ್ಲ ಎನ್ನುವ ಹೊತ್ತಲ್ಲಿ ಏನು ಹೇಳಿದರೂ ಏನು ಬಂತು!?  ಆ ಎಲೆಕ್ಟ್ರಿಕ್ ಶವಾಗಾರಕ್ಕೆ ನಾನು ಹೋಗಿದ್ದು ಮೊದಲ ಸಲ. ಕಿ.ರಂ ಶರೀರದ ಮುಂದೆ ಬ್ರಾಹ್ಮಣ ಜೋರು ದನಿಯಲ್ಲಿ ಮಂತ್ರಗಳನ್ನೋದಿದ. ತನ್ನ ಲ

ಯಾವುದು ಮುಖ್ಯ?

ಸಾಮೂಹಿಕ ವಿವಾಹ, ಸುಷ್ಮಾರಿಂದ ವರಮಹಾಲಕ್ಷ್ಮಿ ವೃತ, ವರಸಿದ್ಧಿ ವಿನಾಯಕ ಪೂಜೆ, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ... ಇವನ್ನೇ ಅಭಿವೃದ್ಧಿ ಅನ್ನುವವರಿಗೆ ಏನು ಹೇಳಬೇಕು? 'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ  ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು. ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ  ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದರ ಭಜನೆ ಮಾಡುತ್ತಾರೆ. ದೇಶಕ್ಕಾಗಿ ಗ

ಹೀಗೊಂದು ಸೌಹಾರ್ದತೆ!

ಅಡಿಗಡಿಗೆ ಭಾಷೆ-ಗಡಿ ಸಮಸ್ಯೆ ಭುಗಿಲೇಳಲೇಬೇಕು! ಮಹಾರಾಷ್ಟ್ರ ಗಡಿ ಸಮಸ್ಯೆಗಂತೂ ಚಾಲನೆ ದಕ್ಕುತ್ತಲೇ ಇರುತ್ತದೆ. ರಾಜಕೀಯದ ಜತೆ ಸಾಹಿತ್ಯಿಕ-ಸಾಂಸ್ಕೃತಿಕ ಲಾಭಕ್ಕೂ! ವಿಪರ್ಯಾಸವಲ್ಲವೇ? ಮತ್ತು ಸೌಹಾರ್ದತೆಯ ಘೋಷವೂ ಮೊಳಗಬೇಕಲ್ಲ! ರಾಜಧಾನಿಯಲ್ಲಿಂದು ಭಾಷಾ ಸೌಹಾರ್ದತಾ ಸಮಾವೇಶ ನಡೆಯಿತು. ಅದಕ್ಕೆಂದು ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶದ ವಿವಿಧ ಭಾಷೆಯ ಹಾಗೂ ವಿಶೇಷವಾಗಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ಗಡಿ ಸಾಹಿತಿಮಣಿಗಳನ್ನು ರಾಜಧಾನಿಗೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಓಗೊಟ್ಟು, ಸಾಹಿತಿಗಳು ತಮ್ಮ ಎಲ್ಲಾ ಬದುಕಿನ ಬಹುಮುಖ್ಯ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು "ದೇಶ-ಭಾಷೆ-ನಾಡ ರಕ್ಷಣೆ" ಮತ್ತು "ಗಡಿ- ಸೌಹಾರ್ದತೆ" ಬಗ್ಗೆ ಒಟ್ಟೊಟ್ಟಿಗೆ ಕಾಳಜಿ ವ್ಯಕ್ತಪಡಿಸಲು, ಸಲಹೆಯನ್ನಿತ್ತಲು ರಾಜಧಾನಿಗೆ ಧಾವಿಸಿದ್ದರು.   ಹಾಗೆ ಸಮಾರಂಭ/ಸೌಹಾರ್ದತೆ ಸಮಾವೇಶಕ್ಕೆಂದೇ ಬಂದ ಗಡಿ ಭಾಗದ ಸಾಹಿತಿ ಮಿತ್ರರೊಬ್ಬರನ್ನು ನಾನು ಬೆಳ್ಳಂ ಬೆಳಿಗ್ಗೆ ಕಾಣಬೇಕಾಗಿ ಬಂದಿತ್ತು. ಇಳಿದುಕೊಳ್ಳಲು ಅವರಿಗೆಂದೇ ಗೊತ್ತು ಮಾಡಿದ್ದ ಲಾಡ್ಜ್ ನ ಒಂದು ರೂಮಿಗೆ ನಾವು ಒಟ್ಟಿಗೇ ಕಾಲಿಟ್ಟೆವು. ಅಲ್ಲಿ  ಅದೇ ಭಾಗದ ಮತ್ತೋರ್ವ ಸಾಹಿತಿ ಆಗಲೇ ವಿರಾಜಮಾನರಾಗಿದ್ದರು. ಥೇಟು 'ಶಿವಾಜಿ ಮಹಾರಾಜ'ರ ಹಾಗೆ! (ಇಬ್ಬರೂ ಮರಾಠಿಯಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಕೊಟ್ಟವರು) ಅವರೊಂದು ಪ್ರಸಂಗ ಹೇಳಿದರು. ಬೆಳಿಗ್ಗೆ ಅವ

ಬಳ್ಳಾರಿ ಕೆ ಶೋಲೆ!

ರೆಡ್ಡಿ/ಶ್ರೀರಾಮುಲು ಫೈಲ್: ಖಾಸಗಿ ಫೈನಾನ್ಸ್ (Ennoble Savings and Investment India Pvt. Ltd) ಕಂಪೆನಿ ತೆಗೆದು ಬಳ್ಳಾರಿ ತುಂಬ ರೆಡ್ಡಿ (ಗಾಲಿ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ) ಶ್ರೀಮಂತಿಕೆಯ ಧೂಳು ಎಬ್ಬಿಸಿದ್ದರು. 200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಇಕ್ಕಟ್ಟಿಗೂ ಸಿಕ್ಕಿತ್ತು. ಈಗದು ಇತಿಹಾಸ. ಯಾವಾಗ ಚೀನಾಗೆ ಬಳ್ಳಾರಿಯ ಅದಿರು ಸಾಗತೊಡಗಿತೋ ಇವರ ನಸೀಬೇ ಚೇಂಜ್ ಆಯ್ತು. ಬಿಸಿಲು ನಾಡಿನ ರಸ್ತೆಯ ಮೇಲೇಳುತ್ತಿದ್ದ ಧೂಳು ಆಕಾಶಕ್ಕೆ ಟ್ರಾನ್ಸಫರ್ ಆಯ್ತು. ಅಕ್ರಮ ಅದಿರು ಸಾಗಾಣಿಕೆಯ ಆರೋಪದ ಹಿನ್ನೆಲೆಯಲ್ಲಿ ಇವರನ್ನು 'ಅದಿರುಗಳ್ಳರು' ಎಂದು ಟೀಕಿಸಲಾಗುತ್ತಿದೆ. * * * ಶ್ರೀರಾಮುಲು: ಬಳ್ಳಾರಿ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಪೊಲೀಸರು ಎರಡು ಬಾರಿ ಬಂಧಿಸಿದ್ದರು. ಪ್ರಕರಣಗಳು: 1 ಕಾಂಗ್ರೆಸ್ ಅಭ್ಯರ್ಥಿ ಲಾಡ್ ಕಾರುಗಳನ್ನು ಸುಟ್ಟು ಹಾಕಿದ್ದು. 2 ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರಜ್ಞೆತಪ್ಪುವಂಥ ಸ್ಥಿತಿಗೆ ಬರುವ ಹಾಗೆ ಥಳಿಸಿದ್ದು. ಇವೆರಡೂ ಪ್ರಕರಣಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ , ಶ್ರೀರಾಮುಲು ಬೆನ್ನಿಗೆ ನಿಂತುಕೊಂಡರು. ಗಣಿ ವ್ಯವಹಾರದಲ್ಲೂ ಇಬ್ಬರೂ ಸಾಥಿ. ಶ್ರೀರಾಮುಲು ಹಿಂದುಳಿದ ವರ್ಗಕ್ಕೆ ಸೇರಿದವರು. ರೆಡ್ಡಿ ಪ್ರಬಲ ಕೋಮಿನವರು. ಒಂದೇ ಪರಿವಾರದ ಸದಸ್ಯರಂತಿದ್ದಾರೆ. "ಶೋಲೆ" ಸಿನಿಮಾದ ಧರ್ಮೆಂದ್ರ ಮತ್ತು ಅಮಿತಾಬ್ ಜೋಡಿಯಂ