ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹೊಸ ಬೆಳಕು ಹಬ್ಬಿಸಲು ಕಾದು ಕೂತ ದೀಪಗಳು...

ಈ ಜೀವಜಗತ್ತಿನ ಬಂಡಿ ಸಾಗಿಸುವ ಭಾರವೆಲ್ಲ ಹೆಣ್ಣಿಗೇ ಏಕೆ? ಹಟಕ್ಕೆ ಹೆಸರಾದ ಹೆಣ್ಣು ತಾಯಿಯಾಗುವಾಗ ನಮ್ಮನ್ನೆಲ್ಲ ಸಣ್ಣಗೆ ಅಲುಗಾಡಿಸಿಬಿಡುತ್ತಾಳೆ. ಅದಕ್ಕೇ ಜನಪದ ಮತ್ತು ಎಲ್ಲ ಧರ್ಮ ಗ್ರಂಥಗಳಲ್ಲೂ ತಾಯಿಗೆ ದೊಡ್ಡ ಸ್ಥಾನವಿದೆ. ಖುರಾನ್ ನಲ್ಲೂ. ಒಂದು ಉರ್ದು ಕವಿತೆ ಹೀಗೆ ಬಣ್ಣಿಸಿದೆ. ಈ ಜಗವ ರೂಪಿಸಿದವ ತಾಯಿಗೆಂಥಾ ಶ್ರೇಷ್ಠ ದರ್ಜೆ ಕೊಟ್ಟ ಅವಳ ಒಂದು ಪ್ರಾರ್ಥನೆಯಲ್ಲಿ ಎರಗಿದ ಕಂಟಕ ಪರಿಹರಿಸುವ ಶಕ್ತಿಯನಿತ್ತ! ಖುರಾನ್ ಇವಳ ಮಮತೆಯ ಹೀಗೆ ಬಣ್ಣಿಸಿದೆಯಲ್ಲಾ ದೇವರು ಸ್ವರ್ಗವನ್ನೇ ತಾಯ ಪಾದಕ್ಕೆಸೆದುಬಿಟ್ಟ!  ಅದೆಷ್ಟು ಬರಹಗಾರರು ಹೆಣ್ಣಿನ ತಾಯಿಗುಣ ಬಣ್ಣಿಸಿದ್ದು ಸುಮ್ಮನೇ ಅಲ್ಲ. ಈ ಉಪಖಂಡ ಕಂಡ ಅದ್ಭುತ ಕವಿ ಅಲ್ಲಾಮಾ ಇಕ್ಬಾಲ್ ತಮ್ಮ "ಮಾ ಕಾ ಖ್ವಾಬ್" ಕವಿತೆಯಲ್ಲಿ ತಾಯಿಯ ಕನಸು ಜೀವದ ಒಂದಿಡೀ ಪಯಣವನ್ನೇ ಬಿಚ್ಚಿಡುತ್ತದೆ. ಅಲ್ಲಿ ಜನ್ಮಭೂಮಿ, ದೇಶ, ಜಗತ್ತು ತಾಯಿಪಾದದ ಧೂಳಿನ ಕಣದಂತೆನಿಸಿಬಿಡುತ್ತದೆ. ಇದೇ ಜಾಡಿನಲ್ಲಿ ನಮ್ಮ ಲಂಕೇಶ್ ಕೂಡ... "ಅವ್ವ ನನ್ನವ್ವ ಫಲವತ್ತಾದ ಕಪ್ಪು ನೆಲ..." ಎಂದರಲ್ಲವೇ. ನೆಲವೆಂದರೆ ತಾಯ್ನೆಲವೂ ಹೌದು, ಜಗತ್ತೂ ಹೌದು. ಕೆಲವರಿಗದು ಭಾರತಮಾತೆ, ಕರ್ನಾಟಕಮಾತೆ....  ತಾಯಿ ಒಂದು ಸೀಮಿತ ವ್ಯಾಪ್ತಿಯಲ್ಲ. ಎಲ್ಲದರ ಮೂಲ. ಅದರ ಹರವು ಕ್ಷಿತಿಜದಾಚೆಗೂ....  ಆರ್ಕಿಮಿಡಿಸ್ ಹೇಳುತ್ತಿದ್ದನಂತೆ, ನಿಲ್ಲಲು ಜಾಗ ಮತ್ತು ಸೂಕ್ತ ಹಾರೆ ಸಿಕ್ಕರೆ ಜಗವನ್ನೇ ಅಲುಗಾಡಿಸಬಲ್ಲೆ!.. ನಿಸರ

ರೈಲ್ವೆ: ಕನಿಷ್ಠ ವ್ಯವಸ್ಥೆ ಮತ್ತು ಸೇವಾ ಕಮಿಟಮೆಂಟ್

ಇದು ನಾರ್ವೆ ರಾಜಧಾನಿ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಒಂದು ಪ್ಲ್ಯಾಟಫಾರ್ಮ್. ಹಳಿಯಗುಂಟ ಹುಡುಕಿದರೂ ಕಾಣದ ಒಂಚೂರು ಕೊಳೆ. ಇಲ್ಲಿ ಯಾರೂ ಗಲೀಜು ಮಾಡುವುದಿಲ್ಲ, ಉಗುಳುವುದಿಲ್ಲ. ಜನರೇ ಇಟ್ಟುಕೊಂಡ, ಕಾಯ್ದುಕೊಂಡ ವ್ಯವಸ್ಥೆ. ಆದರೆ ನಾವ್ಯಾಕೆ ಹೀಗೆ ಉಳಿಸಿಕೊಳ್ಳುತ್ತಿಲ್ಲ! ಇಲ್ಲಿ ಯಾರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಜನರೇ ಕಮ್ಮಿ ಇರುವ ಈ ದೇಶದಲ್ಲಿ ಜನಜಂಗುಳಿ ಇರುವುದಿಲ್ಲ. ಈ ಮಾತು ಸತ್ಯವಾದರೂ ಟ್ರೈನ್  ಪ್ರತಿ ಐದು ನಿಮಿಷಗಳಿಗೊಮ್ಮೆ ಕರಾರುವಕ್ಕಾಗಿ ಬರುತ್ತಲೇ ಇರುವುದರಿಂದ ಹಾಗೆ ಜನಜಂಗುಳಿಯಾಗುವುದಕ್ಕೆ ಅವಕಾಶವಾಗುವುದಿಲ್ಲ ಎನ್ನುವುದು ಇಲ್ಲಿನ ವಾಸ್ತವ. ನಮ್ಮ ದೇಶಕ್ಕೆ ಇದನ್ನು ಕಂಪೇರ್ ಮಾಡುವುದಲ್ಲ. ನಾವು ಇಂಥದೊಂದು ವ್ಯವಸ್ಥೆಯನ್ನು ಹೊಂದಲು ಸಾಧ್ಯವಿದೆ ಎನ್ನುವುದಷ್ಟೇ ನನ್ನ ಕಾಳಜಿ. ಇದು ಜನರಲ್ ಟ್ರೈನ್. ನಗರದಿಂದ ದೇಶದ ಪ್ರತಿ ಪ್ರದೇಶಕ್ಕೆ ಇಂಥದೇ ಟ್ರೈನ್ ವ್ಯವಸ್ಥೆ ಇದೆ. ನಾನು ರಾಜಧಾನಿಯಿಂದ ದೂರದ ಸ್ಯಾಂಡ್ ವಿಕಾ ಎನ್ನುವ ಒಂದು ಪುಟ್ಟದಾದ ಸುಂದರ ಪ್ರದೇಶಕ್ಕೆ ಈ ಟ್ರೈನ್ ನಲ್ಲಿ ಪ್ರಯಾಣಿಸಿದೆ. ಅಲ್ಲಿರುವ ಮುರಳಿ ಶರ್ಮಾ, ಸುಜಾತಾ ಎನ್ನುವ ದಂಪತಿ ಮನೆಗೆ ಭೇಟಿ ನೀಡುವುದು ನನ್ನ ಪ್ರಯಾಣದ ಉದ್ದೇಶವಾಗಿತ್ತು. ಅದೊಂದು ಅದ್ಭುತ ಆತಿಥ್ಯ ಕಂಡ ಕ್ಷಣ. ಸ್ಯಾಂಡವಿಕಾ ಬಗ್ಗೆ ಮತ್ತೆ ಬರೆಯುತ್ತೇನೆ. ರಾಜಧಾನಿಯ ಸೆಂಟ್ರಲ್ ಸ್ಟೇಷನ್ ನಿಂದ ಪ್ರತಿಯೊಂದು ಪ್ಲ್ಯಾಟಫಾರ್ಮ್ ಗೆ ಹೀಗೆ ಕನೆಕ್ಟ್ ಮಾಡುವ ಎಸ್ಕೆಲೇಟರ್ ಗಳಿವೆ. ನಿ

ಇದು ನಾವು ಬದುಕುತ್ತಿರುವ ವ್ಯವಸ್ಥೆ... ನಮಗೇನು ಬೇಕು?

ನಮ್ಮದನ್ನು ಇನ್ನಾರೋ ಬಳಿಯಬೇಕು. ನಮ್ಮದಕ್ಕೆ ನಾವೇ ಮೂಗುಮುಚ್ಚಿಕೊಂಡರೂ ಅವರು ಮಾತ್ರ ಮೂಗು, ಬಾಯಿ ತೆರಕೊಂಡೇ ಎಲ್ಲ ಸಹಿಸಿಕೊಂಡು ಬಳಿಯಬೇಕು. ಹೇಲು, ಉಚ್ಚೆ ಬಳಿವ ಕೈಗಳಿಗೆ ಹಣ ದಕ್ಕುವುದಾದರೂ ಎಷ್ಟು? ಅದರ ವಾಸನೆ ಹೋಗುವಂತೆ ಕೈಗೆ ಬಳಿಯಬೇಕಾದ ಸಬಕಾರಕ್ಕೂ ಅದು ಸಾಲದು. ಇನ್ನು ಇವರ ನಂಬಿದವರ ಹೊಟ್ಟೆಗೆ? ಸಾರ್ವಜನಿಕ ಸ್ಥಳಗಳನ್ನು ನಾವು ಬಳಸಿಕೊಳ್ಳುವ ಮತ್ತು ಅದರ ಬಗ್ಗೆ ನಮಗಿರುವ ಕಾಳಜಿಯ ಪರಿ ಇದು. ರೈಲುಗಳಲ್ಲಿ ಹೇಲುವುದಕ್ಕೆ, ಉಚ್ಚೆ ಹೊಯ್ಯುವುದಕ್ಕೆ ಒಂದು ನಮ್ಮದೇ ಮಿತಿ, ರೀತಿ, ರಿವಾಜುಗಳಿರಬೇಕು ಎಂದೆನಿಸುವುದೇ ಇಲ್ಲ. ಅದು ಹೇಳಿ ಕೇಳಿ ಬರುತ್ತದೆಯೇ ಎನ್ನುವ ಮಾತಲ್ಲಿ ಇರುವುದು ನಮ್ಮ ಉಡಾಫೆ ಅಷ್ಟೇ ಅನ್ನೋದು ನಮ್ಮರಿವಿಗೇ ಬರುವುದಿಲ್ಲ. ಅಥವಾ ಇಲಾಖೆಗಳು ಅದರ ನಿರ್ವಹಣೆಯ ಬಗ್ಗೆ ಹೊಸದಾಗಿ ಯೋಚಿಸುವ ಗೋಜಿಗೂ ಹೋಗುವುದಿಲ್ಲ. ಅದನ್ನು ಒಂದೆರಡು ಬೋಗಿಗೆ ಹೋಗಿ ಶೇಖರಣೆಯಾಗುವಂತೆ ನೋಡಿಕೊಳ್ಳುವ ಪೈಪಿಂಗ್ ವ್ಯವಸ್ಥೆ ಮತ್ತು ಅದನ್ನು ಎನರ್ಜಿಯಾಗಿ ಪರಿವರ್ತಿಸುವ ತಂತ್ರಜ್ಞಾನವೂ ನಮಗೆ ಸಾಧ್ಯವಾಗುತ್ತಿಲ್ಲವೆಂದರೆ ಏನು? ಹಸಿದವನಿಗೆ ರಸ್ತೆಯಾದರೇನು ರೈಲ್ವೆ ಟ್ರ್ಯಾಕ್ ಆದರೇನು... ಜನ ಸುತ್ತುವ ಜಾಗವೊಂದಿದ್ದರೆ ಆತ ಭಿಕ್ಷೆ ಬೇಡಿಯಾದರೂ ತನ್ನ ದಿನದ ತೊತ್ತಿನ ಚೀಲ ತುಂಬಿಸಿಕೊಂಡಾನು.. ನಮ್ಮೊಳಗಿನ ಈ ಮಾನವೀಯ ತುಡಿತವನ್ನು ಕಡೆಗಣಿಸುವ ಅಗತ್ಯವೇ ಇಲ್ಲ. ಬಡವರು ಮತ್ತು ಭಿಕ್ಷಾಟನೆ ಇದನ್ನು ಸಮೀಕರಿಸುವುದು ಬೇಡ. ಭಿಕ್ಷಾಟನೆ ನಮ್ಮಲ್ಲಿ

ಹೊರ ನೋಟಕ್ಕೆ ಕಾಣುವ ಬದಲಾವಣೆ ಒಳನೋಟದಲ್ಲೂ ಕಾಣುವುದು ಯಾವಾಗ?

"ನಮ್ಮ ಮೆಟ್ರೊ" ಜನ ಒಪ್ಪಿದರೋ ಬಿಟ್ಟರೋ ಅಂತೂ ಹೊಸದೊಂದು ಅತ್ಯಾಧುನಿಕ (ನಮ್ಮ ಮಟ್ಟಿಗೆ) ಸಂಚಾರ ವ್ಯವಸ್ಥೆಗೆ ಇದೇ ಹೆಸರು ಬಂದುಬಿಟ್ಟಿತು. ಇದಕ್ಕೆ ಮೊದಲ ದಿನವೇ ದಕ್ಕಿದ ಸ್ಪಂದನೆ ನೋಡಿದರೆ ಈ ಹೆಸರು ನಿಜವಾದ ಅರ್ಥದಲ್ಲಿ ಅತ್ಯಂತ ಸೂಕ್ತವೆನಿಸಿತು. ಯುರೋಪ್ ಮತ್ತಿತರ ಮುಂದುವರಿದ ದೇಶದ ಜನರ ಹಾಗೆ ನಾವಿದನ್ನು ಎಷ್ಟರಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆ, ನಮ್ಮದಾಗಿಸಿಕೊಳ್ಳುತ್ತೇವೆ ಅನ್ನೋದು ನಮ್ಮ ಮುಂದಿರುವ ಪ್ರಶ್ನೆ. ಎಂಜಿ ರಸ್ತೆಯುದ್ದಕ್ಕೂ ಅವತ್ತು ಸೇರಿದ ಜನ ಅಬ್ಬಾ! ಟಿಕೆಟ್ ಗಾಗಿ ನಿಂತ ಕ್ಯೂ ಹನುಮಂತನ ಬಾಲದಂತೆ ಬೆಳೆದಿತ್ತು. ಅವತ್ತು ರಾಜಕೀಯ ಮೈಕ್ ಗಳ ಭರಾಟೆ, ಮಾರುಕಟ್ಟೆ ಶಕ್ತಿಗಳಿಗೆಲ್ಲ ಹಬ್ಬ! ಬಹುತೇಕ ಅಂಗಡಿಗಳು ತಮ್ಮನ್ನು ತಾವು ಸಿಂಗರಿಸಿಕೊಂಡು ಹರೆಯದ ಹುಡುಗಿ ಕಾಮದೇವನ ಕಾದುನಿಂತಂತೆ ಕಾಣಿಸುತ್ತಿದ್ದವು. ಅರ್ಧ ಕುಂಡೆ ಕಾಣಿಸುವಂತೆ ಜೀನ್ಸ್ ತೊಟ್ಟ ಲಟಪಟ ಸುತ್ತುತ್ತಿದ್ದ ಸುಂದರಿಯರಂತೆ ಕಾಣಿಸುವ ಹೆಣ್ಣುಗಳು, ಮತ್ತವರ ಹಿಂದೆ ಕಣ್ಣು ಮಿಟುಕಿಸದೇ ಸುತ್ತುವ ಹಪಾಹಪಿ ಹರೆಯದ ಗಂಡುಗಳು... ಏನ್ ಮಜಾ ಅವರದು. ಮತ್ತೆ, ಇದ್ದಬಿದ್ದ ಕೋಟು, ಸೂಟು ಹಾಕಿಕೊಂಡು ಎಂಜಿ ರಸ್ತೆಗಿಳಿದ ರಿಟೈರಮೆಂಟ್ ಹೊಸ್ತಿಲಲ್ಲಿರುವವರು , ಯೌವ್ವನದ ಬಿಡುಬೀಸನ್ನೆಲ್ಲ ಕಳಕೊಂಡರೂ ಚಮಕ್ ಬಿಟ್ಟುಕೊಡದ 40 ಪ್ಲಸ್ ಆಂಟಿಯರು ಮಗಳಿಗೂ ಕಾಂಪಿಟಿಷನ್ ಕೊಡುವವರಂತೆ ಸಿಂಗರಿಸಿಕೊಂಡು ಮೆಟ್ರೋ ರೈಲು ಟಿಕೆಟ್ ಗಾಗಿ ಕಾದಿದ್ದೇ ಕಾದಿದ್ದು. ಇನ್

ಯುರೋಪಿನಲ್ಲಿ ಮೊದಲ ಮೆಟ್ರೊ ಪಯಣ...

ಬೆಂಗಳೂರಿನಿಂದ ಪ್ರಯಾಣ ಹೊರಟ ಹೊತ್ತಲ್ಲಿ ನಗರಕ್ಕೆ ಮೆಟ್ರೊ ದಾಂಗುಡಿ ಇಟ್ಟಿತ್ತು. ಅದಕ್ಕೆ ದಕ್ಕಿದ ಅದ್ದೂರಿ ಸ್ವಾಗತಕ್ಕೆ ಎಲ್ಲರೂ ದಂಗಾಗಿದ್ದೆವು. ಇಲ್ಲಿ ಯುರೋಪಿನಲ್ಲಿ ಅದು ಆಗಲೇ ಜನಜೀವನದ ಒಂದು ಭಾಗವೇ ಆಗಿಹೋಗಿದೆ. ಅವರು ಇನ್ನೇನೋ ಹೊಸದು ಯೋಚಿಸುತ್ತಿರುವ ಹೊತ್ತು ಇದು. ಒಸ್ಲೊವಿನ ಮೂಲಕ ಮೊದಲ ಯುರೋಪ್ ಮೆಟ್ರೊ ಪಯಣ (ಅಕ್ಟೋಬರ್ 29, 2011) ಮಜವಾಗಿತ್ತು.

ಒಸ್ಲೊ ಶಹರಿನ ಮೊದಲ 'ಸೊಳ್ಳಿ' ಮುಂಜಾವು....

ನನ್ನ ತಂಗಿಯ ಮನೆಯಿಂದ ಹೊರಕ್ಕೆ ಕಾಲಿಟ್ಟರೆ ಸಾಕು ಒಂದು ಹೊಸ ಲೋಕವೇ ತೆರೆದುಕೊಳ್ಳುತ್ತದೆ. ನಗರದ ಹೃದಯ ಭಾಗವಾಗಿರುವ ಈ ಪ್ರದೇಶದಲ್ಲೇ ಅರಮನೆ ಇದೆ. ಕೂಗಳತೆ ದೂರದಲ್ಲೇ ನೊಬೆಲ್ ಇನಸ್ಟಿಟ್ಯೂಟ್, ಇಬ್ಸೆನ್ ಬಾಳಿ ಬದುಕಿದ ಮನೆ, ನ್ಯಾಷನಲ್ ಥಿಯೇಟರ್ ಇದೆ. ತಂಗಿ ನೆಲೆಸಿರುವ ಅಪಾರ್ಟಮೆಂಟಿನ ಹಿಂದೆ ಬೃಹತ್ ನ್ಯಾಷನಲ್ ಲೈಬ್ರರಿ ಇದೆ. ನಡೆದುಕೊಂಡೇ ಸೆಂಟ್ರಲ್ ಸ್ಟೇಷನ್ ಹೋಗಬಹುದು. ಹಾರ್ಬರ್ ಹತ್ತಿರದಲ್ಲೇ ಇದೆ. ನಡೆದಷ್ಟು ದೂರ ಕಾಣುವುದೆಲ್ಲ ರಮ್ಯ. ಕಣ್ಣಿಗೆ ಬೀಳುವವರೆಲ್ಲ ಬಿಳಿಯ ಚೆಲುವೆಯರು, ಬಿಳಿ ಮೂತಿಗಳು... ಇದಕ್ಕೆ ಸೊಳ್ಳಿ ಎಂದು ಹೆಸರು. ಎಸ್ ಒ ಎಲ್ ಎಲ್ ಐ... ಇಲ್ಲಿನವರು ಸೋಳ್ಳಿ ಎಂದು ಉಲಿದಾಗ ಬಲು ಮಜವೆನಿಸುತ್ತದೆ.

ಭಾವನೆಗಳ ಅಲೆಯಲ್ಲಿ ದಡ ಸೇರುವ ಹೊತ್ತು...

ಪರದೇಶದಲ್ಲಿ ಕಂಡ ಪಾಕಿ... ಒಸ್ಲೊ ವಿಮಾನ ನಿಲ್ದಾಣದಿಂದ ನಮ್ಮನ್ನು ನಗರಕ್ಕೆ ತಲುಪಿಸಿದ ಟ್ಯಾಕ್ಸಿ ಚಾಲಕ ಪಾಕಿಸ್ತಾನದವ! ಆರಂಭದಲ್ಲಿ ಆತ ನಾರ್ಗಿ ಭಾಷೆಯಲ್ಲೇ ಮಾತನಾಡಿದ. ನನ್ನ ತಂಗಿಯ ಗಂಡ ಖಾನ್ ಗೂ ಆ ಭಾಷೆ ಕೊಂಚ ಗೊತ್ತು. ಇಬ್ಬರೂ ಮಾತನಾಡುವುದನ್ನು ಕಂಡಾಗ ಈತ ಪಾಕಿ ಅನ್ನೋದು ಗೆಸ್ ಮಾಡಲೂ ಸಾಧ್ಯವಾಗಿರಲಿಲ್ಲ. ನನ್ನವ್ವ, |ಭಾವ, ಅವರ ತಾಯಿ ಹಿಂದಿನ ಸೀಟಿನಲ್ಲಿ ಕುಳಿತರೆ, ನಾನು ಚಾಲಕನ ಪಕ್ಕದ ಸೀಟಿನಲ್ಲಿ ಕೂತೆ. ಟ್ಯಾಕ್ಸಿ ಸ್ವಲ್ಪ ದೂರ ಸಾಗುತ್ತಿದ್ದಂತೆ, ಆಪ್ ಪಂಜಾಬ್ ಸೆ ಹೋ... ಎಂದನಾತ. ಅರೇ! ಆಪ್ ಹಿಂದೂಸ್ತಾನೀ ಅಂದೆ. ಹ್ಞಾ ... ಬಗಲ್ ಮೈ ಹೈ ನಾ ಪಾಕಿಸ್ತಾನ್ ವಹಾ ಕಾ ಹ್ಞೂ ಅಂದ. ತೋ ಯಾರ್ ಏ ಹೋ ಗಯೀ ನಾ ಬಾತ್... ಜಿಂದಗೀ ಮೇ ಪೆಹಲೀ ಬಾರ್ ಕೊಯಿ ಪಾಕಿಸ್ತಾನಿ ಸೇ ಮಿಲ್ ರಹಾ ಹ್ಞೂ... ಪಡೋಸಿ... ಎಂದು ನಕ್ಕೆ. ಆತನೂ ಯುರೋಪ್ ಸ್ಟೈಲಿನಲ್ಲಿ ದೊಡ್ಡದಾಗಿ ನಕ್ಕ. ಕಿತನೇ ಸಾಲ್ ಸೇ ಯಹಾ ಹೋ... ಎಂದೆ. ವೈಸೆ ಭಿ ಮೈ ಅಪನೀ ಆಧೀ ಜಿಂದಗೀ ಯುರೋಪ್ ಮೆ ಹೀ ಕಾಟಾ... ಪೆಹಲೆ ಹಾಲಂಡ್ ಮೆ ಥಾ, ಫಿರ್ ಲಂಡನ್, ಪ್ಯಾರಿಸ್ ಫಿರ್ ಯಹ್ಞಾ ಅಂದ... ಅರೇ ಲಂಡನ್ ಛೋಡ್ ಕೆ ಇಧರ್ ಕ್ಯುಂವ್ ಭಾಯ್...  ಅಂದೆ ನಾನು. ಅರೇ ಯಾರ್ ವಹ್ಞಾ ಇತನಾ ಶೋರ್ ಶರಾಬಾ ಹೈ, ಲೋಗ್ ಹಯ್ಯಾಶೀ ಕರತೆ ಹೈ, ಬಹುತ್ ಮಸ್ತಿ ಕರತೇ ಹೈ... ಮುಝೆ ಪಸಂದ್ ನಹೀ ಆಯಾ, ಇಸಿಲಿಯೇ ಇಧರ್ ಆಯಾ. ಯಹ್ಞಾ ಬಹುತ್ ಡೀಸೆನ್ಸಿ ಹೈ, ಪೀಸ್ ಹೈ... ಹ್ಞಾ ಲೋಗ್ ಜಿಯಾದಾ ಡಿಪ್ಲೊಮ್ಯಾಟಿಕ