ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 14, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ಯಾರಿಸ್ ತಲುಪಿದಾಗ...

ನಮ್ಮ ನೆಲದಿಂದ ಮತ್ತೊಂದು ನೆಲಕ್ಕೆ ನಮ್ಮೆಲ್ಲರನ್ನು ಸುರಕ್ಷಿತವಾಗಿ ತಂದಿಳಿಸಿದ ಏರ್ ಫ್ರಾನ್ಸ್ ವಿಮಾನ ಪ್ಯಾರಿಸ್ ನಿಲ್ದಾಣದಲ್ಲಿ... ಪ್ಯಾರಿಸ್ ವಿಮಾನ ನಿಲ್ದಾಣದಲ್ಲಿ ನನ್ನಮ್ಮನನ್ನು ವ್ಹೀಲ್ ಚೇರಿನಲ್ಲಿ ಕರೆತಂದು, ಅವಳ ಜತೆ ನಮ್ಮನ್ನೂ ಕನೆಕ್ಟಿಂಗ್ ಫ್ಲೈಟಿಗೆ ಸಾಗಿಸುತ್ತಿರುವ ಆಫ್ರಿಕನ್ ಯುವಕ ಮತ್ತು ಕಾರು ಓಡಿಸುತ್ತಿರುವ ಬಿಳಿ ಚೆಲುವೆ. ನನ್ನ ಅವ್ವ ಮತ್ತು ತಂಗಿಯ ಅತ್ತೆ, ಇಲ್ಲಿನ ಹೆಣ್ಣುಮಕ್ಕಳು ಭರ್ರನೇ ಕಾರು ಓಡಿಸುವದ ಕಂಡು ದಂಗಾಗಿದ್ದರು. ಆಕೆ ಭರ್ತಿ ಸ್ಪೀಡಿನಲ್ಲಿ ನಮ್ಮನ್ನು ಮುಂದಿನ ವಿಮಾನವಿರುವ ಟರ್ಮಿನಲ್ ಗೆ ಕರೆತಂದಳು. ಅಲ್ಲಿಗೆ ತಲುಪುತ್ತಿದ್ದಂತೆ ಆಕೆ ಹ್ಯಾಪಿ ಜರ್ನಿ ಎಂದಳು. ನಾನೊಂದು ಹೆಮ್ಮೆಯ ಸೆಲ್ಯುಟ್ ಹೇಳಿದೆ. ಆಕೆ ಸುಂದರ ಸ್ಮೈಲ್ ಕೊಟ್ಟಳು... ಪ್ಯಾರಿಸ್ ವಿಮಾನ ನಿಲ್ದಾಣದ ಸೊಬಗನ್ನು ಸವಿಯುತ್ತಿರುವ ನನ್ನವ್ವ ಮತ್ತು ತಂಗಿಯ ಅತ್ತೆ... ನಮ್ಮ ಮೆಜೆಸ್ಟಿಕ್ ನಲ್ಲಿ ಸಿಬಿಟಿ ಬಸ್ ಗಳ ಹಾಗೆ ಸಾಲಂಕೃತವಾಗಿ ನಿಂತ ಡೊಮೆಸ್ಟಿಕ್ ಫ್ಲೈಟ್ ಗಳು. ಪ್ಯಾರಿಸ್ ವಿಮಾನ ನಿಲ್ದಾಣದ ಡೊಮೆಸ್ಟಿಕ್ ಟರ್ಮಿನಲ್ ಗಳಲ್ಲಿ ಒಂದು ಟರ್ಮಿನಲ್ ಇದು. ಇಲ್ಲಿಂದಲೇ ನಾವು ಒಸ್ಲೊ ಗೆ ಪ್ರಯಾಣ ಬೆಳೆಸಿದ್ದು. ಇಲ್ಲೂ ನಾವು ಸರಿ ನಾಲ್ಕು ಗಂಟೆ ಕಾಯಬೇಕಾಗಿ ಬಂತು. ಇಡೀ ಟರ್ಮಿನಲ್ ಸುತ್ತು ಹಾಕಿ ಬಂದೆ. ಕೆಲವೆಡೆ ಫೊಟೊಗ್ರಾಫ್ ತೆಗೆದುಕೊಳ್ಳಲು ಅನುಮತಿ ಇರಲಿಲ್ಲ. ಇಲ್ಲಿನ ಶಾಪ್ ಗಳಲ್ಲೂ ಒಂದು ಸುತ್ತುಹಾಕಿ ಬಂದೆ. ಎಲ್ಲವೂ ತುಂಬಾ ದುಬ