ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 25, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುಸ್ಲಿಂ ಸಮುದಾಯ ತಂತ್ರಗಾರಿಕೆ ಬದಲಾಯಿಸಿಕೊಳ್ಳುವುದು ಅನಿವಾರ್ಯ

ಎಂಟು ನೂರು ವರ್ಷಗಳ ಕಾಲ ಮುಸ್ಲಿಂ ದೊರೆಗಳು, ಇನ್ನೂರೈವತ್ತು ವರ್ಷಗಳ ಕಾಲ ಕ್ರೈಸ್ತರು ಅಧಿಕಾರದಲ್ಲಿದ್ದರು. ಪ್ರವಾದಿತನ ನಂಬಿಕೆಯ ಸಮುದಾಯಗಳಿವು. ಎರಡರ ನಡುವೆ ರಾಜಕೀಯ ಸಂಘರ್ಷವಿದೆ. ಇವುಗಳ ರಾಜಕೀಯ ನೀತಿ ಮತ್ತು ಸಂಸ್ಕೃತಿಗಳ ಪ್ರಭಾವದಿಂದ ಸಿಂಧೂ ನಾಗರಿಕತೆ ಮತ್ತು ದ್ರಾವಿಡರ ಜೀವನಶೈಲಿಯಲ್ಲಿ ಮಹತ್ತರ ಬದಲಾವಣೆಗಳಾದವು. ಆಡಳಿತದ ಮಾದರಿಗಳಾಗಿದ್ದ ಈ ಸಮುದಾಯಗಳ ಅನುಯಾಯಿಗಳು ಅದೇ ನೆಲದಲ್ಲಿ ರಾಜಕೀಯ ನಿರ್ಲಕ್ಷ್ಯಕ್ಕೊಳಗಾಗಿ ಅಸುರಕ್ಷತಾ ಭಾವ ಎದುರಿಸುವಂತಾಗಿರುವುದು ಈ ಕ್ಷಣದ ವಾಸ್ತವ.  ನೆಹರೂ ಕಾಲದಲ್ಲಿ ವಿಭಜನೆಯ ಹಿಂಸೆ ಇನ್ನೂ ಇತ್ತು. ಭೌಗೋಳಿಕ ಕಾರಣಕ್ಕಾಗಿ ಇಂಡಿಯಾದಲ್ಲಿಯೇ ನೆಲೆ ನಿಂತ ಬಹು ನಂಬಿಕೆಗಳ ಜನರಿಗೆ ಘಾಸಿಯಾಗದಂತೆ ಎಚ್ಚರಿಕೆಯ ನಡೆ ರೂಪಿಸಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಅವರ ರಾಜಕೀಯ ಇತ್ತು. ಸೆಕ್ಯುಲರಿಸಂ ತತ್ವದಡಿ ಸಮಾಜವಾದಿ ಪ್ರಜಾಪ್ರಭುತ್ವ ನೆಲೆಗೊಳಿಸುವ ಯತ್ನ ನಡೆಯಿತು.  ಇಂದಿರಾಗಾಂಧಿ ಇದನ್ನೇ ಮುಂದುವರಿಸಿದರು. ಆಧುನಿಕ ಇಂಡಿಯಾದ ರಾಜಕೀಯ ಇತಿಹಾಸ ಕಣ್ಣಾಡಿಸಿದರೆ ದಕ್ಕುವ ಮುಖ್ಯ ಅಂಶವಿದು.  ಇಂದಿರಾ ಗಾಂಧಿ ‘ಗರೀಬಿ ಹಟಾವೋ’ ಘೋಷಣೆ ಮೊಳಗಿಸಿದರು. ಬ್ಯಾಂಕ್‌ ರಾಷ್ಟ್ರೀಕರಣ, ಭೂಸುಧಾರಣೆಯಂಥ ದಿಟ್ಟ ಕ್ರಮಗಳ ಜೊತೆ ಕುಟುಂಬ ಕಲ್ಯಾಣ ಜಾರಿಗೊಳಿಸಿದರು. ಜನಸಂಖ್ಯೆ ನಿಯಂತ್ರಣದಂಥ ಕ್ರಮಗಳು ಧರ್ಮ ವಿವೇಚನೆಯ (Divine reason) ನೆಲೆಯಲ್ಲಿ ಸಮುದಾಯವೊಂದರ ನಂಬುಗೆಗಳನ್ನು ಮುಜುಗರಕ್ಕೀಡುಮಾಡುವಷ್ಟು ಆಕ್ರಮಣ