ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬನ್ಸಾಲಿಯ ಬದ್‌ಬೂ ಗುಜರಾತ್ ಕೀ...

ಚಿತ್ರ: ಗೋಲಿಯೋಂಕಾ ರಾಸಲೀಲಾ: ರಾಮ್-ಲೀಲಾ ನಿರ್ದೇಶನ: ಸಂಜಯಲೀಲಾ ಬನ್ಸಾಲಿ. ಶೇಕ್ಸ್‌ಪಿಯರ್‌ನ ರೋಮಿಯೋ ಜ್ಯೂಲಿಯಟ್ ನಾಟಕದ ಅಡಾಪ್ಟೇಷನ್ ಸಿನಿಮಾ ಇತಿಹಾಸದಲ್ಲಿ  ಮುಗಿಯದ ಅಧ್ಯಾಯ. ರಾಮಲೀಲಾ ಎನ್ನುವ ನಾಟಕ ನಾರ್ತ್ ಇಂಡಿಯಾದಲ್ಲಿ ಜನಜನಿತ. ಇದು ಪಶ್ಚಿಮೀ ಕ್ಲಾಸಿಕ್ ಪ್ರಜ್ಞೆ ಮತ್ತು ರಾಮಾಯಣ ’ಮಹಾಕಾವ್ಯ’ವನ್ನು ಜನಮಾನಸದಲ್ಲಿ ಶಾಶ್ವತ ಬೀಜವಾಗಿ ಬಿತ್ತುವ ವ್ಯವಸ್ಥಿತ ಸಾಂಸ್ಕೃತಿಕ ರಾಜಕಾರಣದ ಒಂದು ಭಾಗ. ಸಂಜಯಲೀಲಾ ಬನ್ಸಾಲಿ ನಿರ್ದೇಶನದ ‘ಗೋಲಿಯೊಂಕಾ ರಾಸಲೀಲಾ: ರಾಮಲೀಲಾ‘ ಸಿನಿಮಾ ಈ ಎರಡೂ ರಾಜಕೀಯ ನಾಟಕಗಳ ಸಮ್ಮಿಶ್ರಣವನ್ನು ಬೇರೆಯದೇ ನೆಲೆಯಲ್ಲಿ ಕಾಣಲೆತ್ನಿಸಿದೆ. ನನ್ನ ಅಭಿಪ್ರಾಯದಲ್ಲಿ ಇದು ಇಂಡಿಯಾದ ಸಮಾಜೋ-ರಾಜಕೀಯ ಸಂದರ್ಭದಲ್ಲಿ ಬಹುಮುಖ್ಯವಾದ ಪ್ರತಿಕ್ರಿಯಾತ್ಮಕ ಧೋರಣೆಯ  ಸಿನಿಮಾ.  ಅಭಿನಂದನೆಗಳು ಬನ್ಸಾಲಿ.  ಗುಜರಾತ್ ನೆಲಸಂಸ್ಕೃತಿಯೊಳಗಿನ ಅಸಹಿಷ್ಣುತೆ, ವೈಷಮ್ಯ ಮತ್ತು  ಮನುಷ್ಯ ಮತ್ಸರದ ಭಯಾನಕ ಚಿತ್ರಣದೊಂದಿಗೆ ಆರಂಭಗೊಳ್ಳುವ ಸಿನಿಮಾ ಕುತೂಹಲಕಾರಿ. ಗುಜರಾತಿನ ಕೆಲ ಪ್ರದೇಶ, ಮುಖ್ಯವಾಗಿ ಅಲ್ಲಿನ ಕರಾವಳಿಯ ವೈಬ್ರೆನ್ಸಿ ಅಸಹಿಷ್ಣುತೆಯಿಂದ ಕೂಡಿರುವುದರ ಸಂಕೇತದಂತೆ ಚಿತ್ರದಲ್ಲಿ ಧ್ವನಿಸಿದೆ. ಬಂದೂಕು, ಬುಲ್ಲೆಟ್‌ ಎನ್ನುವ ಕೊಲ್ಲುವ ವಸ್ತುಗಳ ವ್ಯಾಪಾರ ನಡೆಸುವ ಅಲ್ಲಿನ ಮಾರುಕಟ್ಟೆ ಸಂಸ್ಕೃತಿ ಮತ್ತು ರಾಜಕೀಯ ಚಿಂತನೆ ಚಿತ್ರದ ವಸ್ತುವಿಗೆ ವಿಶಾಲ ತಳಹದಿಯ ಸಮಾಜೋ-ಆರ್ಥಿಕ ಅಡಿಪಾಯವನ್ನೂ ಒದಗಿಸಿದೆ. ಈ ಅಡಿಪಾಯದ

ಬಂದ್ ದರವಾಜಾ

ಸೂರ್ಯ ಕ್ಷಿತಿಜದ ಬಗಲಿನಿಂದ ಬಿಡಿಸಿಕೊಂಡ. ಮಗುವಿನ ಲಾಲನೆ ಪಾಲನೆ, ಆಹಾ... ಅದೊಂದು ಸ್ನಿಗ್ಧತೆ, ಲಾಲಿ, ಒಂದರ್ಥದ ಅಮಲು ಮತ್ತು ಬೆಳಕು. ನಾನು ಮುಖಮಂಟಪದಲ್ಲಿ ವಿರಾಜಮಾನನಾಗಿದ್ದೆ. ಮಗು ಬಾಗಿಲಿನಿಂದ ಇಣುಕಿತು.  ಮುಗುಳ್ನಕ್ಕು ಬಾ ಎಂದು ಸನ್ನೆ ಮಾಡಿದೆ. ಬಳಿ ಬಂದ ಮಗು ತೊಡೆಯೇರಿ ಕುಳಿತುಕೊಂಡಿತು. ಜೇಬಿನಿಂದ ಪೆನ್ನು ಜಗ್ಗೋದು, ಕಾಗದಕ್ಕೆ ಕೈಹಾಕೋದು.. ಹೀಗೆ ಅದರ ತಮಾಷೆಗಳು ಗರಿಗೆದರತೊಡಗಿದವು. ಮಗುವನ್ನು ಕೆಳಕ್ಕಿಳಿಸಿಬಿಟ್ಟೆ. ಪಾಪ ಅದು ಮೇಜಿನ ಒಂದು ಕಾಲು ಹಿಡಿದುಕೊಂಡು ನನ್ನನ್ನೇ ದಿಟ್ಟಿಸುತ್ತ ನಿಂತುಕೊಂಡಿತು. ಮನೆಯೊಳಕ್ಕೆ ಹೋಗಲಿಲ್ಲ. ಬಾಗಿಲು ತೆರೆದೇ ಇತ್ತು!... ಚಿಂವ್ ಚಿಂವ್ ಎನ್ನುತ್ತಾ ಗುಬ್ಬಿಯೊಂದು ಎದುರಿನ ಕಿಟಕಿ ಸರಳಿಗೆ ಹಾರಿ ಬಂತು. ಮಗುವಿಗೆ ಮನರಂಜನೆಯ ಹೊಸ ಆಟಿಗೆಯೊಂದು ಬಂದಂತೆ. ಖುಷಿಗೊಂಡ ಮಗು ಗುಬ್ಬಚ್ಚಿಯತ್ತ ಜೋರಾಗಿ ಕೈಬೀಸಿತು. ಗುಬ್ಬಚ್ಚಿ ಕೊಂಚವೂ ವಿಚಲಿತಗೊಳ್ಳಲಿಲ್ಲ. ಆಹಾ... ಗರಿಯಂಥ ಈ ಆಟಿಕೆ ವಸ್ತು ಇನ್ನು ನನ್ನ ಕೈಸೇರಿದಂತೆಯೇ ಎಂದುಕೊಂಡಿತು ಮಗು. ತನ್ನೆರಡೂ ಕೈಗಳನ್ನೆತ್ತಿ ಬ್ಬಾ ಬ್ಭಾ ಎಂದು ಗುಬ್ಬಚ್ಚಿಯನ್ನು ಹತ್ತಿರಕ್ಕೆ ಕರೆಯಲೆತ್ನಿಸಿತು. ಗುಬ್ಬಚ್ಚಿ ಚಿಂವ್ ಗುಟ್ಟುತ್ತ ಪುರ್ ಎಂದು ಹಾರಿ ಹೋಯಿತು. ನಿರಾಶಗೊಂಡ ಮಗು ಅಳತೊಡಗಿತು. ಬಾಗಿಲಿನತ್ತ ತಿರುಗಿಯೂ ನೋಡಲಿಲ್ಲ. ಬಾಗಿಲು ತೆರೆದೇ ಇತ್ತು!... * * * ಹಲ್ವಾದ ತಾಜಾ ತಾಜಾ ಸಿಹಿಗಾಳಿ ತೇಲಿ ಬಂತು. ಮಗುವಿನ ಮುಖ ಅರಳತೊಡಗಿತು