ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 17, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೈಯಕ್ತಿಕವಾದದ ರಾಜಕೀಯ ಇನ್ನೂ ಅನಿವಾರ್ಯವೇ?

ಲೋಕಸಭೆ, ವಿಧಾನಸಭೆಗೆ ನಡೆವ ಚುನಾವಣೆಗಳಲ್ಲಿ ವೈಯಕ್ತಿಕವಾದವೇ ವಿಜೃಂಭಿಸುತ್ತಿದೆ. ಇಡೀ ದೇಶ ಸೋನಿಯಾ, ರಾಹುಲ್, ಅಡ್ವಾಣಿ... ಎನ್ನುವ ಹೆಸರುಗಳ ಆಧಾರದಲ್ಲಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಫಾರೂಕ್, ಓಮರ್ ಅಬ್ದುಲಾ. ಉತ್ತರ ಪ್ರದೇಶದಲ್ಲಿ ಮಾಯಾವತಿ, ಮುಲಾಯಂ. ಗುಜರಾತಿನಲ್ಲಿ ನರೇಂದ್ರ ಮೋದಿ. ಬಿಹಾರದಲ್ಲಿ ಲಾಲೂ ಯಾದವ್, ನಿತೀಶ್ ಕುಮಾರ್. ದಕ್ಷಿಣದ ತಮಿಳುನಾಡಿನಲ್ಲಿ ಕರುಣಾನಿಧಿ, ಜಯಲಲಿತಾ. ಆಂಧ್ರದಲ್ಲಿ ನಾಯ್ಡು, ಚಿರಂಜೀವಿ, ಜಗನ್ ಮತ್ತು ಕರ್ನಾಟಕದಲ್ಲಿ ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ... ಮತ್ತಿತರರ ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯ ಹಿತಾಸಕ್ತಿಗಳೇ ಈಗ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದನ್ನು ಪ್ರಾದೇಶಿಕ ಮಟ್ಟದಲ್ಲೂ ಕಾಣುತ್ತಿದ್ದೇವೆ. ವೈಯಕ್ತಿಕವಾದದ ಹಿತಾಸಕ್ತಿ ಕಾಪಾಡಲು ತಮ್ಮದೇ ಸಿದ್ಧಾಂತಗಳು, ಪಕ್ಷ ಮತ್ತು ಸಮೀಕರಣಗಳನ್ನು ಇವರು ರೂಪಿಸಿಕೊಳ್ಳುತ್ತಾರೆ. ಜಾತಿ, ಹಣ, ತೋಳ್ಬಲಗಳ ಬಳಕೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದೆಲ್ಲ ಪ್ರಜಾಪ್ರಭುತ್ವ ಹೆಸರಲ್ಲಿ ತತ್ವರಹಿತ ರಾಜಕೀಯ. ಅರಸೊತ್ತಿಗೆಯ ಮತ್ತೊಂದು ರೂಪದಂತಿದೆ. * * * ಗುಜರಾತಿನಲ್ಲಿ ಮೋದಿಯಿಂದಾಗಿ ಬಿಜೆಪಿ ಉಳಿದುಕೊಂಡಿದೆ. ಬಿಹಾರದಲ್ಲಿ ನಿತೀಶ್ ಕುಮಾರನಿಂದಾಗಿ ಎನ್ ಡಿ ಎ ಬದುಕುಳಿಯುತ್ತಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯಿಂದಾಗೇ ಬಿಎಸ್ಪಿ ಉಸಿರಾಡುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಉಸಿರಾಡುತ್ತಿ