ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾವಿನ ಬಗ್ಗೆ ಗಿಬ್ರಾನ್ ಸಾಲುಗಳು...

ನೀವು ಸಾವಿನ ರಹಸ್ಯ ತಿಳಿಯಲು ಶೋಧನೆ ನಡೆಸಬಹುದು. ಆದರೆ, ಆತ್ಮಶೋಧನೆ ಇಲ್ಲದೇ ಮೃತ್ಯುವಿನ ದರುಶನ ಹೇಗಾದೀತು? ಇರುಳಿಗೆ ಬದ್ಧ ಗೂಬೆ ಕಣ್ಣುಗಳು ಹಗಲು ತೆರಕೊಳ್ಳುವುದೇ ಇಲ್ಲ,  ಬೆಳಕಿನ ಬಣ್ಣಗಳ ರಹಸ್ಯವ  ಅದು ಹೇಗೆ ಪ್ರಕಟಿಸೀತು...! ನಿಮಗೆ ಮೃತ್ಯುವಿನ ನಿಜಸ್ವರೂಪದ ದರುಶನವಾಗಬೇಕೆ? ಹಾಗಿದ್ದರೆ ತೆರೆದುಕೊಳ್ಳಲಿ ನಿಮ್ಮ ಹೃದಯ ಅನಂತದವರೆಗೆ,  ಅದು ಲೀನವಾಗಲಿ ಬದುಕಿನ ಶರೀರದೊಳಗೆ... ಏಕೆಂದರೆ ನದಿ ಮತ್ತು ಸಾಗರದಂತೆ, ಬದುಕು ಮತ್ತು ಮೃತ್ಯುವೂ ಅಭಿನ್ನ. ನಿಮ್ಮ ಆಸೆ, ಆಕಾಂಕ್ಷೆಗಳ ಆಳದಲ್ಲೇ ಪರಲೋಕದ ಮೌನ ಚೇತನ ಮಿಸುಕಾಡುತ್ತಿರುತ್ತದೆ. ಮತ್ತು ನಿಮ್ಮ ಹೃದಯ, ಮಂಜಿನೊಳಗೆ ಹೂತ ಬೀಜದಂತೆ ವಸಂತದ ಕನಸು ಕಾಣುತ್ತಿರುತ್ತದೆ. ಇಂಥ ಕನಸುಗಳ ಮೇಲೆ ನಂಬಿಕೆಯಿಡಿ; ಏಕೆಂದರೆ, ಇಲ್ಲೇ ಅಡಗಿದೆ ದ್ವಾರ, ಅನಂತದೆಡೆಗೆ ತೆರಕೊಳ್ಳುವ ಹಾದಿಗೆ! ಸಾಯುವುದರರ್ಥ, ಗಾಳಿಯಲ್ಲಿ ಲೀನವಾಗುವುದು, ಬಿಸಿಲಲ್ಲಿ ಕರಗುವುದು ಎಂದೇ ಅಲ್ಲವೇ? ನಿಮ್ಮ ಪ್ರಾಣವಾಯುವಿಗೆ ಅಶಾಂತ ಬಿರುಗಾಳಿಯಿಂದ ಮುಕ್ತಿ ಸಿಗುವುದು, ಮತ್ತು ಎತ್ತರೆತ್ತರಕ್ಕೆ ಏರಿ ವಿಸ್ತಾರ ಪಡಕೊಳ್ಳುತ್ತ ಮುಕ್ತಿಮಾರ್ಗ ಹಿಡಿದು ಸೃಷ್ಟಿಕರ್ತನ ಸೇರಿಕೊಳ್ಳುವುದು... ಇಷ್ಟೇ ಅಲ್ಲವೇ ಉಸಿರು ಸ್ತಬ್ದವಾಗುವುದರರ್ಥ? ಪ್ರಶಾಂತ ನದಿಯ ಜಲ ಕುಡಿದಾಗಲೇ ನೀವು ನಿಜವಾಗಲೂ ಹಾಡೋದು! ಶಿಖರ-ಪರ್ವತಗಳ ತುದಿ ತಲುಪಿದ ಮೇಲೇ ನಿಜವಾದ ಆರೋಹಣ ಶುರುವಾಗೋದು... ಭೂಮಿ ಪ್ರತಿ ಅಂಗಾಂಗಗಳ ತಟ್

ದಿಲ್ ಏಕ್ ಮಂದಿರ್ ಹೈ...

'ದಿಲ್' ಪುಟ್ಟ ಗೂಡಿಗೆ ಎರಡು ಪ್ರೇಮ ಹಕ್ಕಿಗಳು ಹಾರಿ ಬಂದಿದ್ದವು. ನಿನ್ನೆ (26/12/2009)  ಒಂದು ಹಗಲು ಮತ್ತು ಒಂದಿಡೀ ರಾತ್ರಿ ಈ ಗೂಡಲ್ಲೇ ತಂಗಿದ್ದವು. ಏನವುಗಳ ಕಲರವ!. ತಮ್ಮ ಪ್ರೇಮ ಪಯಣದ ಹಾದಿಯಲ್ಲಿ ಒಂದಷ್ಟು ಕಾಲ ಈ ಗೂಡಲ್ಲಿ ತಂಗಿದ್ದಕ್ಕೆ ಅದೆಷ್ಟು ಕೃತಜ್ಞತೆ ಹೇಳಲಿ.. ನೋಡಿ ಇಂಟರ್ ನೆಟ್ ಎನ್ನುವ ಮಾಯಾಂಗನೆ ಅದೆಂಥ ಮಾಟ ಮಾಡಿದಳು! ಯಾವುದೋ ಒಂದು ಖಾಲಿ ಭಾವದ ಹೊತ್ತಲ್ಲಿ ಆರ್ಕುಟ್, ಟ್ವಿಟರ್ ಎನ್ನುವ ಸೋಶಿಯಲ್ ತಾಣಗಳಲ್ಲಿ ಹರಿದಾಡಿದ ಮನಸುಗಳಿಗೆ ಎಂಥ ಅದೃಷ್ಟು ಖುಲಾಯಿಸಿತು! ತನ್ನ ಗೆಳತಿಯೊಬ್ಬಳು ನೀಡಿದ ಸಲಹೆಗೆ ಈ ಹುಡಗಿ ಒಂದು ಚಾನ್ಸ್ ನೋಡೋಣ ಎಂದು ಸಂದೇಶ ರವಾನಿಸಲು ಶುರುವಿಟ್ಟುಕೊಂಡಳು. ಆ ಕಡೆಯಿಂದ ಹುಡುಗ ಒಳ್ಳೆಯ ಸ್ಪಂದನೆ ನೀಡಿದ. ಪ್ರೇಮ ಲೋಕ ತೆರಕೊಳ್ಳಲು ಅದೆಷ್ಟು ಸಮಯ ಬೇಕು? ಆನ್ ಲೈನ್ ಪ್ರಣಯದ ಕ್ಷಣಗಳು ಹಾಗೇ ಗರಿಬಿಚ್ಚಿ ನಲಿದಾಡಲು ಆರಂಭಿಸಿದವು. ಆ ಕ್ಷಣಗಳಿಗೆ ಅದೆಂಥ ಮೋಡಿ ಇತ್ತೊ ಅಂತೂ ಒಂದು ಬಂಧ ಗಟ್ಟಿ ಬುನಾದಿ ಪಡಕೊಂಡಿತು. ಹುಡುಗ ಮುಂಬೈನಲ್ಲಿ ಕಂಪೆನಿಯೊಂದರ ಕಾಲ್ ಸೆಂಟರ್ ಉದ್ಯೋಗಿ. ಹುಡುಗಿ ನಾಡಿನ ಹೆಸರಾಂತ ಇಂಗ್ಲಿಷ್ ದೈನಿಕದ ಪತ್ರಕರ್ತೆ. ದೂರದ ಪಶ್ಚಿಮ ಬಂಗಾಳದವಳು. ಒಂದು ದಿನ ಹುಡುಗಿಯನ್ನು ಕಾಣಲು ಹುಡುಗ ಮುಂಬೈನಿಂದ ಬೆಂಗಳೂರಿಗೆ ಬಂದ. ಹುಡುಗಿಗೆ ಏನು ಮಾಡಬೇಕೊ ತೋಚದಾಯಿತು. ಬಂಧ ಗಟ್ಟಿಗೊಳ್ಳುವ ಈ ಪರಿಯ ಸ್ಪೀಡ್ ಗೆ ಆಕೆ ದಿಗಿಲಿಗೊಂಡಿರಬೇಕು. ವಿಷಯ ನನಗೂ ಮನದಟ್ಟು ಮಾಡಿಕೊಟ್

An Important Issue: MUST READ

Politics is not a SERVICE anymore but a PROFESSION!!! An Important Issue! Salary & Govt. Concessions for a Member of Parliament (MP) Monthly Salary : Rs. 12,000/- Expense for Constitution per month : Rs. 10,000/- Office expenditure per month : Rs. 14,000/-   Traveling concession (Rs. 8 per km) : Rs. 48,000/- (eg. For a visit from South India to Delhi & return : 6000 km) Daily DA TA during parliament meets : Rs. 500/day Charge for 1 class (A/C) in train : Free (For any number of times) (All over India )   Charge for Business Class in flights : Free for 40 trips / year (With wife or P...A.) Rent for MP hostel at Delhi : Free. Electricity costs at home : Free up to 50,000 units. Local phone call charge : Free up to 1, 70,000 calls.. TOTAL expense for a MP [having no qualification] per year : Rs.32, 00,000/- [i.e.. 2.66 lakh/month] TOTAL expense for 5 years : Rs. 1, 60, 00,000/- For 534 MPs, the expense for 5 years : Rs. 8,54,40,00,

ಪ್ರೀತಿ ಎನ್ನುವ ದೊಡ್ಡ ಬಾಂಬ್!

ಸ್ಕೂಲ್ ಮಕ್ಕಳ ಸಮಾರಂಭದಲ್ಲಿ ಏನು ಮಾತಾಡಬೇಕು? ಅದೂ ವಾರ್ಷಿಕೋತ್ಸವದಂಥ, ಉತ್ಸವದಂಥ ಸಂದರ್ಭದಲ್ಲಿ?... ಗುಬ್ಬಚ್ಚಿ ಗೂಡುಗಳ ಸುತ್ತ ಸಂಜೆ ಹೊತ್ತಲ್ಲಿ ಕೊಂಚ ಜೋರಾಗೇ ಚಿಲಿ ಪಿಲಿಗುಟ್ಟುವಂತೆ ಮಕ್ಕಳು ಮಾತಾಡ್ತಾನೇ ಇರ್ತಾರೆ. ಹಾಕಿದ ದಿರಿಸು, ಮೇಕಪ್ ಸಮೇತ ತಮ್ಮ ಡಾನ್ಸ್ ಪಾಳಿ ಯಾವಾಗ ಬರುತ್ತೊ ಎನ್ನುವ ಧಾವಂತದಲ್ಲಿರ್ತಾರೆ. ಮಕ್ಕಳು ಬಣ್ಣ ಹಚ್ಕೊಂಡು, ತಮ್ಮ ಜೇಬುಗಳಿಗೆ, ಪರ್ಸ್ ಗಳಿಗೆಲ್ಲ ಅಷ್ಟು ದೊಡ್ಡ ಕತ್ತರಿ ಹಾಕಿ ಖರೀದಿಸಿದ ದಿರಿಸು ಹಾಕ್ಕೊಂಡು ಸ್ಟೇಜ್ ಮೇಲೆ ಹೇಗೆ ಕಾಣ್ತಾರೆ! ಅಂತ ನೋಡುವ ಏಕಮಾತ್ರ ಕುತೂಹಲದಿಂದ ಬಂದ ಪಾಲಕರು, ಪೋಷಕರು ಭಾಷಣ ಕೇಳುವ ತಾಳ್ಮೆಯನ್ನೆಲ್ಲಿ ಹೊತ್ತು ತಂದಿರ್ತಾರೆ?  ಉದ್ದುದ್ದ ಬೋರ್ ಹೊಡಿಸುವ ವಿಷಯಗಳನ್ನು ಚಚ್ಚುವ ಬಹುತೇಕ ಭಾಷಣಕಾರರು ಇಂಥ ಸಮಾರಂಭಗಳಲ್ಲಿ ಕಿರಿ ಕಿರಿ ಹುಟ್ಟಿಸಿ ಭಾಷಣಕಾರರ ಬಗ್ಗೆ  ಭಯ ಹುಟ್ಟಿಸಿಟ್ಟಿದ್ದಾರೆ. ಇನ್ನು ಕೆಲವರು ಜೋಕುಗಳ ಮೂಲಕ, ಚಾಣಾಕ್ಷ ಮಾತುಗಳ ಮೂಲಕ ಪ್ರೇಕ್ಷಕರಿಗೆ ಸರ್ಕಸ್ ಜೋಕರ್, ಪ್ರಾಣಿಗಳ ಕೌಶಲ್ಯದಂತೆ ಪ್ರತಿಭೆ ಮೆರೆದು ಟೈಂ ಪಾಸ್, ಎಂಟರ್ಟೇನ್ಮೆಂಟ್ ಮಟ್ಟಕ್ಕೆ ಭಾಷಣಗಳನ್ನು ಇಳಸಿಬಿಟ್ಟಿದ್ದಾರೆ. ಇನ್ನು ಕೆಲವರು ಬಿಟ್ಟಿ ಪ್ರವಚನ ಹೇಳಿ ದೇವಾಂಶ ಸಂಭೂತರಂಥ, ಡಿಪ್ಲೋಮೆಸಿಯಂಥ ಬರಿಯ ಸೋಗು ಮೆರೆದಿದ್ದಾರೆ.  ಹೀಗಾಗಿ ಇದೆಲ್ಲ ನೆನಪಿಸಿಕೊಂಡು ನನಗೂ ಭಾಷಣ ಎಂದರೆ ಒಂದು ರೀತಿಯ ಭಯ ಹುಟ್ಟಿಕೊಂಡಿದ್ದು ಒಂದು ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ. ಇದರಲ್ಲಿ

ಇಡ್ಡಿ, ವಡೆ, ಕಾಫಿ ನುಂಗಲು ಬರ್ತಿದೆ ಅಮೆರಿಕನ್ ದರ್ಶಿನಿ!

ಅಮೆರಿಕದ ಬೂಟು, ಬಂದೂಕು ಬಂದ ಹಾಗೆ ಬ್ರೆಡ್, ಬಿಸ್ಕತ್ ಕೂಡ ಇಲ್ಲಿ ಬಂದಾಗಿದೆ. ಶ್ರೀಮಂತ ರಾಷ್ಟ್ರ, ಸೂಪರ್ ಪಾವರ್ ಧಿಮಾಕಿನಿಂದ ಕೊಂಚ ಕೆಳಕ್ಕಿಳಿಯುವಂಥ ಆರ್ಥಿಕ ಹೊಡೆತವನ್ನೂ ಅದು ಎದುರಿಸುತ್ತಿದೆ. ಇನ್ನದು ರಸ್ತೆ ವ್ಯಾಪಾರಕ್ಕೂ ಇಳಿಯುವ ದಿನಗಳು ದೂರವಿಲ್ಲ. ಆದರೂ ವ್ಯಾಪಾರದಲ್ಲಿ ನಮ್ಮ ಮಾರ್ವಾಡಿಗಳ ಮಾವನಂತಿರುವ ಅಮೆರಿಕನ್ನರು ಕಷ್ಟ ಬಂದಾಗ ಕತ್ತೆ ಕಾಲೂ ಹಿಡಿಯುವುದಕ್ಕೆ ಹೇಸುವುದಿಲ್ಲ. ಆ ಮಾತು ಹಾಗಿರಲಿ.  ನಮ್ಮ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸ್ಪೆನ್ಸರ್ ಸೂಪರ್ ಮಾರ್ಕೆಟ್ ನಲ್ಲಿ ಅಮೆರಿಕ ಕಂಪೆನಿಯೊಂದು ಹೊಟೆಲ್ ಆರಂಭಿಸಿದೆ. ಔ ಬಾನ್ ಪೇನ್ ಎನ್ನುವುದು ಹೊಟೇಲ್ ಹೆಸರು. ಇದೊಂದು ಥರ 'ಅಮ್ಯಾರಿಕನ್ ದರ್ಶಿನಿ'!  ಕಾಫಿ, ಟೀ, ಬ್ರೆಡ್ ಜತೆ ಒಂದು ಸಿಂಪಲ್ ಊಟ ಕೂಡ ಅದರ ಮೆನುವಿನಲ್ಲಿದೆ. ಪಾಶ್  ಎನಿಸುವ ಗಾಜಿನ  ಮನೆಯಲ್ಲಿ  ನಮ್ಮ ನ್ನು  ಕೂರಿಸುವ  ನೈಸ್  ಆಗಿ ಬೆಣ್ಣೆ ಹಚ್ಚಿದ ಬ್ರೆಡ್ ಟೇಬಲ್ಲಿಗಿಟ್ಟು ಅಷ್ಟೇ ನೈಸ್ ಆಗಿ ಜೇಬಿಗೆ ಕೈ ಹಾಕುವ ಈ ಹೊಟೇಲು ಅಷ್ಟು ದುಬಾರಿ ಏನಲ್ಲ.  ಆದರೆ,  ಇದರ ಡೌನ್ ಟು ಅರ್ತ್ ಮನೋಧರ್ಮ ನೋಡಿದರೆ ಇನ್ನಿದು ಬೆಂಗಳೂರಿನ ಎಲ್ಲೆಡೆ ದರ್ಶಿನಿಗಳಂತೆ ತನ್ನ ಬ್ರಾಂಚ್ ತೆರೆಯುವುದರಲ್ಲಿ ಸಂದೇಹವೇ ಇಲ್ಲ. ಪಕ್ಕಾ ಅಮೆರಿಕ, ಇಟ್ಯಾಲಿಯನ್, ಫ್ರೆಂಚ್ ಕುವರಿಯಂತೆ ಕಂಗೊಳಿಸುವ ಇದರ ವಿನ್ಯಾಸ, ಟೇಬಲ್ಲಿಗಿಡುವ ಕಾಫಿ ಕಪ್ ಗೆ  ಟೀನೇಜ್ ಹುಡುಗಿಯ ವೈಯ್ಯಾರವಿದೆ. ಇದೆಲ್ಲ  ನೋಡಿದರೆ ನಮ್ಮೂರ  ಹ

ತಾಯ್ತನದ ಸಂಭ್ರಮಕ್ಕೆ ತಿಪ್ಪಣ್ಣ ದಂಪತಿ ಕೊಟ್ಟ ಅರ್ಥಪೂರ್ಣ ಕಳೆ..

ಸಂಬಂಧಗಳಲ್ಲಿ ಮೂಲಭೂತ ಕ್ರಾಂತಿಯುಂಟಾದಾಗ ಎಲ್ಲೂ ಯುದ್ಧವಿರದು. ಮೊದಲು ನಮ್ಮೊಳಗೆ ನಾವೇ ರೂಪಿಸಿಕೊಂಡ ಬಿಂಬಗಳನ್ನು ಒಡೆದು ಹಾಕಬೇಕು. ನಾನು ಮುಸ್ಲಿಂ, ನಾನು ಹಿಂದೂ, ನಾನು ಕ್ರೈಸ್ತ, ನಾನು ಸಿಖ್, ನಾನು ಬೌದ್ಧ... ಎನ್ನುವ ನಮ್ಮ ಬಗ್ಗೆ ನಾವೇ ನಮ್ಮೊಳಗೆ ರೂಪಿಸಿಕೊಂಡ ಈ ಬಿಂಬಗಳನ್ನು ನಾಶಮಾಡಿಕೊಳ್ಳದೇ ನಮಗೆ ಶಾಂತಿ ಇಲ್ಲ... ಹೀಗೆ ಹೆಸರಾಂತ ಬುದ್ಧಿಜೀವಿ ಜೆ. ಕೃಷ್ಣಮೂರ್ತಿ ವಿಚಾರ ಲಹರಿ ಸಾಗುತ್ತದೆ. ಸಂಬಂಧವೆಂದರೇನು? ಸಂಬಂಧವಿರುವುದು ಎಂದರೇನು? ಸಂಬಂಧವೆಂದರೆ ಮತ್ತೊಬ್ಬ ಮನುಷ್ಯ ಜೀವಿಯೊಡನೆ ಸಂಪರ್ಕ. ಒಟ್ಟಾಗಿ ಇರುವುದು, ಅವನ ಎಲ್ಲ ಕಷ್ಟ, ಸಮಸ್ಯೆ, ಕಾರ್ಪಣ್ಯ, ಕಳವಳಗಳೊಡನೆ ಅವು ನಿಮ್ಮವೇ ಎಂಬಂತೆ ತತ್ ಕ್ಷಣ ಸಂಪರ್ಕ ಕಲ್ಪಿಸಿಕೊಳ್ಳೋದು. ಕೃಷ್ಣಮೂರ್ತಿ ಅವರಂತೆ ಅನೇಕರು ಇಂಥ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ನನಗೆ ಅನಿಸೋದು ಇಷ್ಟು. ಮನುಷ್ಯ ಇಂಡಿಪೆಂಡೆಂಟ್ ಅಲ್ಲವೇ ಅಲ್ಲ. ಆತ ಇಂಟರ್ ಡಿಪೆಂಡೆಂಟ್ ಎಂದು ಹೇಳಬಹುದು. ಹೌದು, ಆತನಿಗೆ ಇತರರ ಜತೆಗಿನ ಸಾಂಗತ್ಯ, ಒಡನಾಟ ಇಲ್ಲದಿದ್ದರೆ ಬದುಕೇ ಕಷ್ಟ. ಏಕಾಂಗಿಯಾಗಿರಲು ಸಾಧ್ಯವೇ ಇಲ್ಲ. ಕಡೆಪಕ್ಷ ತನ್ನ ಜತೆಗೆ ತಾನಾದರೂ ಮಾತಾಡಬೇಕು. ಅಂದರೆ ತನ್ನೊಳಗಿನ ಅವನು ಮತ್ತು ಅವನಿಂದ ಕಳಚಿಕೊಂಡು ಎಲ್ಲೊ ಅಲೆದಾಡುತ್ತಿರುವ ಇವನು ಪರಸ್ಪರ ಸ್ಪಂದಿಸಲೇಬೇಕು. ಮಾತಾಡಿಕೊಳ್ಳಲೇಬೇಕು. ಕಲ್ಪಿಸಿಕೊಂಡ ವ್ಯಕ್ತಿತ್ವ ಮತ್ತು ಒಳಗೇ ಇರುವ ಬೈ ಡಿಫಾಲ್ಟ್ ವ್ಯಕ್ತಿತ್ವಗಳೆರಡರ ನಡುವಿನ ತಿಕ್ಕಾ

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

ಅವಧಿಯ ಮೋಹನ್ ಸರ್ ಗೆ ದಿಲ್ ಸೇ ಸಲಾಂ...

ನನ್ನ ಪುಟ್ಟ ಯತ್ನವೊಂದನ್ನು ಗಮನಿಸಿ, ಬೆನ್ನು ತಟ್ಟಿದ್ದಕ್ಕೆ... ಬ್ಲಾಗ್ ದುನಿಯಾದಲ್ಲಿ ಈ ದಿಲ್ ಗೂ ಒಂದಷ್ಟು ಪ್ರೀತಿ ತೋರಿದ್ದಕ್ಕೆ... ಒಟ್ಟಾರೆ ಮೀಡಿಯಾ ಜಗತ್ತಿನಲ್ಲಿ ಅವಧಿ ಮೂಲಕ ಹೊಸದೊಂದು ಸಾಧ್ಯತೆಯನ್ನು ತೆರೆದಿಡುತ್ತಿರುವ ಮೋಹನ್ ಸರ್  ಕಾಳಜಿಗಳಿಗೆ, ಆಶಯಗಳಿಗೆ ...  ಥ್ಯಾಂಕ್ಯೂ.  'ಅವಧಿ'ಯಂಥ ಸುಂದರ, ಅರ್ಥಪೂರ್ಣ ಯತ್ನಗಳು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದಲ್ಲಿ ತೊಡಗಿರುವ ವಿದ್ಯಾರ್ಥಿಗಳಿಗೂ ಬಹುಮುಖ್ಯ ಬೆಳವಣಿಗೆಯಾಗುವುದರಲ್ಲಿ ಸಂದೇಹವಿಲ್ಲ.  ಇಂಥ ಹೊಸ ಸಾಧ್ಯತೆಯ ಮತ್ತು ಅವಕಾಶಗಳ ಬಾಗಿಲುಗಳನ್ನು ತೆರೆದಿಡುವ ತಮ್ಮ ಸುಂದರ ಯತ್ನಕ್ಕೆ 'ದಿಲ್ ಸೇ' ಸಲಾಂ.

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

ಆ ಕನಸಿನ ಬಣ್ಣಗಳು... ಹಾಲ್ಕುರಿಕೆ ಥಿಯೇಟರ್ ಮೂಡಿಸಿದ ಅದ್ಭುತ ರಂಗಹಾದಿ

ಥಿಯೇಟರ್ ಆಫ್ ಎಮೋಷನ್ಸ್... ಬದುಕು ತುಂಬ ಸಂಕೀರ್ಣತೆಗಳಿಂದ ಕೂಡಿರುವಂಥದು. ಯಾವುದೂ ಅಷ್ಟು ಸರಳವಲ್ಲ. ಹಾಗೆ ನೋಡಿದರೆ ಮನುಷ್ಯ ಪ್ರೀತಿ ಮತ್ತು ಒಟ್ಟಾರೆಯಾಗಿ ಬದುಕು ಅತ್ಯಂತ ಸರಳ ಹಾಗೂ ಸಹಜತೆಯಿಂದ ಕೂಡಿರಬೇಕಿತ್ತು. ಹಾಗಾಗುತ್ತಿಲ್ಲ. ಬದುಕು ಇತ್ತೀಚೆಗಂತೂ ತುಂಬ ಸಂಕೀರ್ಣಗೊಳ್ಳುತ್ತ ಸಾಗಿದೆ. ಅದು ಮುಂಚಿನ ಸಹಜ ಸಂಭ್ರಮಗಳಿಂದ ದೂರವಾಗಿ, ಮೈಗೂಡಿಸಿಕೊಂಡ ಚಟ ಮತ್ತು ಖಯಾಲಿಗಳಿಂದ ನರಳುತ್ತಿದೆ.  ಮಟಿರಿಯಲಿಸ್ಟಿಕ್ ಜಗತ್ತು ವಸ್ತುಗಳಲ್ಲಿ ಸುಖವನ್ನು ತೋರಿಸುತ್ತಿದೆ. ಅದನ್ನು ಕೊಂಡುಕೊಳ್ಳುವುದಕ್ಕೇ ನಾವೆಲ್ಲ ಇಷ್ಟು ದುಡಿಯೋದು ಮತ್ತು ಸಂಪಾದಿಸೋದು ಎಂದು ಜಾಹಿರಾತುವಿನ ಮೂಲಕ, ಸೀರಿಯಲ್, ಸಿನಿಮಾ ಮೂಲಕ ಹೇಳುತ್ತಿದೆ. ನಾವದನ್ನು ನಂಬಿ ಕೂತಿದ್ದೇವೆ. ಹೆಚ್ಚು ಸಂಪಾದನೆ ಅಂದರೆ ಹೆಚ್ಚೆಚ್ಚು ಚಾಯ್ಸ್! ವಸ್ತು ಹೊಂದುವುದಕ್ಕೆ ಚಾಯ್ಸ್ ಹೇಗೋ ಸುಖಕ್ಕೂ ವಿವಿಧ ನಮೂನೆಗಳು... ಹಣ ಎಲ್ಲವನ್ನು ತಂದುಕೊಡಲ್ಲ ಎಂದು ನಾವೆಲ್ಲ ಹೇಳಿಕೊಳ್ಳುತ್ತಿದ್ದೆವು. ಆದರೆ, ಇಂದು ಹಣ ಎಲ್ಲವನ್ನು ಸಾಧ್ಯವಾಗಿಸುತ್ತಿದೆಯಲ್ಲ! ಸೆಕ್ಸ್ ಕೂಡ ಎರಡು ಆರ್ಗನ್ ನಡುವಿನ ಸಂಬಂಧ, ಎರಡೂ ಲಿಂಗಗಳಿಗೆ ಪರಸ್ಪರ ಕೊಡುಕೊಳ್ಳುವಿಕೆ ಮಾತ್ರ ಮುಖ್ಯವಾಗಿದೆ. ಅದು  ವಿಜಾತಿ ಮತ್ತು ಸಜಾತಿ ಎರಡೂ ಆದೀತು. ಅದೂ ಸಿಕ್ಕದಿದ್ದರೆ ನೇರವಾಗಿ ನಿಮ್ಮದೇ ಒಂದನ್ನು ಸಿದ್ಧಪಡಿಸಿಕೊಂಡರಾಯ್ತು! ಇಷ್ಟು ಸಿಂಪಲ್ ಆಗಿದೆ ಸುಖದ ಕಲ್ಪನೆ! ದೇಹ ಸಂಬಂಧ ಮತ್ತು ಪ್ರೀತಿ ಎರಡಕ್ಕೂ ಅಂಥ ಸಂಬಂ

ಯಡಿಯೂರಪ್ಪ ಮತ್ತು 'ಮ್ಯಾಕ್ ಬೆತ್'

ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪ ಕಥೆ ಮ್ಯಾಕ್ ಬೆತ್ ದುರಂತ ನಾಟಕದಂತೆ ಸಾಗುತ್ತಿದೆ। ಶೇಕಸ್ಪಿಯರ್ ರಾಜಕೀಯ ದುರಂತ ನಾಟಕಗಳಲ್ಲಿ ತುಂಬ ಮಹತ್ವದ ನಾಟಕ ಮ್ಯಾಕ್ ಬೆತ್। ಶೂರ, ಧೀರ, ದಿಟ್ಟನೂ ಆದ ಮ್ಯಾಕ್ ಬೆತ್ ಹೇಗೆ ದುರಾಸೆಗೆ ಬಿದ್ದು ರಾಜಕಾರಣದ ಅಹಮಿಕೆಯಿಂದ ಪತನವಾಗುತ್ತಾನೆ ಎನ್ನುವುದು ಕಥಾ ಹಂದರ. ಅದರ ಒಳಸುಳಿಗಳೆಲ್ಲ ಮನುಷ್ಯ ದುರಂತವನ್ನು ಹೇಳುತ್ತವೆ। ಅದು ರಾಜಕೀಯ ಅಧಿಕಾರ, ಶಕ್ತಿ, ಯುಕ್ತಿಯ ದುರಂತ। ಒಟ್ಟು ದುರಾಸೆಯ ವ್ಯಕ್ತಿಗಳ ದುರಂತ ... ಮ್ಯಾಕ್ ಬೆತ್ ನಾಟಕ ಸಂಕ್ಷಿಪ್ತವಾಗಿ ಹೀಗಿದೆ: ಸ್ಕಾಟ್ಲೆಂಡಿನ ರಾಜ ಡಂಕಣನನ್ನು ಕೊಲೆ ಮಾಡಿ ಮ್ಯಾಕ್ ಬೆತ್ ರಾಜನಾಗುತ್ತಾನೆ। ವೀರ, ಸಾಹಸಿ ಮತ್ತು ಅತ್ಯಂತ ಸ್ವಾಮಿನಿಷ್ಠನೂ ಆದ ಮ್ಯಾಕ್ ಬೆತ್ ಅತಿಮಾನುಷ ಶಕ್ತಿಗಳ ದುರಾಸೆಗೆ ಬಲಿಯಾಗುತ್ತಾನೆ। ಧೀರ, ದಿಟ್ಟತನ ಬಿಟ್ಟು ಸಂಚು, ವಂಚನೆ, ಕ್ರೌರ್ಯಗಳಿಗೆ ಮನಸ್ಸುಕೊಟ್ಟು ನೀಚನಾಗುತ್ತಾನೆ। ಅವನ ಹೆಂಡತಿ ಇವನನ್ನು ಅತಿವ ಪ್ರೀತಿಸುವವಳು। ರಾಜರ ರಾಜನಾಗಲೆಂಬ ಸಹಜ ಬಯಕೆ ಹೊಂದಿದವಳು। ತಮ್ಮಿಬ್ಬರ ಸಂಚಿನಿಂದ ನಡೆದ ಕೊಲೆಗಳ ಸರಮಾಲೆಯಿಂದ ಕಂಗಾಲಾಗಿ ಮನೋರೋಗಿಯಾಗಿ ಮ್ಯಾಕ್ ಬೆತ್ ಹೆಂಡತಿ ಸಾಯುತ್ತಾಳೆ। ಮ್ಯಾಕ್ ಬೆತ್ ಯಕ್ಷಿಣಿಯರ ಚೆಲ್ಲಾಟ ಅರ್ಥಮಾಡಿಕೊಳ್ಳದೇ ಹೋಗುತ್ತಾನೆ। ಅದು ಅರ್ಥವಾಗುವಷ್ಟೊತ್ತಿಗೆ ಎಲ್ಲ ಕೈಮೀರಿರುತ್ತದೆ। ಮ್ಯಾಕ್ ಡೆಫ್ ನಿಂದ ಮ್ಯಾಕ್ ಬೆತ್ ಕೊಲೆ ನಡೆಯುತ್ತದೆ। ಡಂಕಣನ ಮಗ ಮಾಲ್ಕಂ ರಾಜನಾಗುತ್ತಾನೆ। ಮ್ಯಾಕ್ ಬೆತ್ ಕಥ

ಪರ್ಯಾಯ: ಗೌಡರತ್ತ ಎಲ್ಲರ ಚಿತ್ತ!

ಹಣ ಮತ್ತು ಜಾತಿ, ಇವೆರಡಕ್ಕೇ ರಾಜ್ಯದ ಹಣೆಬರಹ ಬರೆಯುವ ಶಕ್ತಿ ಇದೆ! ಎಂಥಾ ದುರವಸ್ಥೆ ಪ್ರಜಾತಂತ್ರದ್ದು? ಹಣ ಬಲದಿಂದ ಗಣಿಧಣಿಗಳು ಏನು ಬೇಕಾದರೂ ಮಾಡಬಲ್ಲ ತಾಕತ್ತು ಹೊಂದಿದ್ದಾರೆ। ಜಾತಿ ಬಲ ಒಂದರಿಂದಲೇ ರಾಜ್ಯ ನಿಯಂತ್ರಿಸಬಲ್ಲೆ ಎಂದು ಯಡಿಯೂರಪ್ಪ ಕೂತಂತಿದೆ। ಎರಡೂ ಅತಿರೇಕಕ್ಕೆ ಏನು ಹೇಳುವುದು? ಪಕ್ಷಗಳಲ್ಲಿ ಅಥವಾ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಸಹಜವೇ। ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ರಚನಾತ್ಮಕ ಕಾರ್ಯಕ್ಕೆ ಸಂಘಟಿತರಾಗುವುದು ಯಾವುದೇ ಸಂಘಟನೆಗೆ ಅನಿವಾರ್ಯದ ಸೌಹಾರ್ದತೆ। ಕನಿಷ್ಠ ಮಟ್ಟದ ಸೌಹಾರ್ದತೆ ಸಾಧ್ಯವಾಗದಂಥ ಸ್ಥಿತಿಗೆ ಬಂದಾಗ ಸಂಧಾನ, ರಾಜಿ ಮಾರ್ಗ ಹಿಡಿಯುವುದು ಹಾಸ್ಯಾಸ್ಪದವಾಗುತ್ತದೆ। ಪರಸ್ಪರ ಆತಂಕ ಮತ್ತು ಅಭದ್ರತೆಯ ನಡುವೆ ಕೂಡಿ ಬಾಳೋದು ದುಸ್ತರವೇ। ಹಾಗೆ ಅಸಮಾಧಾನಗಳ ನಿಗಿ ನಿಗಿ ಕೆಂಡಗಳನ್ನು ಸೆರಗಿನಲ್ಲಿಟ್ಟಕೊಂಡು ಬಹುದೂರ ಸಾಗಲು ಸಾಧ್ಯವೇ ಆಗುವುದಿಲ್ಲ। ಎಲ್ಲಿ ಲಾಭವಿದೆಯೋ ಅಲ್ಲಿ ಸಂಘರ್ಷ ಇದ್ದದ್ದೇ। ಆರಂಭದಿಂದಲೂ ಕೇವಲ ವಸೀಲಿಬಾಜಿ, ಸಂಖ್ಯೆ ಹೊಂದಾಣಿಕೆಗೆ ಖರೀದಿ ತಂತ್ರ ಬಳಕೆ, ಕಡೆಗೆ ಸ್ಥಾನ ಭದ್ರ ಮಾಡಿಕೊಳ್ಳಲು ಆಪರೇಷನ್ ಕಮಲ್ ಎನ್ನುವ ಕೆಟ್ಟ ರಾಜಕೀಯ ಸಂಪ್ರದಾಯಕ್ಕೆ ಶರಣು... ಇಂಥ ಅತಿರೇಕದ ವರ್ತನೆಯಿಂದ ಸುದ್ದಿಯಲ್ಲೇ ಇದ್ದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಇದೆಲ್ಲ ನಿರೀಕ್ಷಿತ ಬೆಳವಣಿಗೆಯೇ। ಆಪರೇಷನ್ ಕಮಲ್ ಯಶಸ್ಸಿನ ಅಮಲಿನಲ್ಲಿ ಯಡಿಯೂರಪ್ಪ ಪಾವರ್ ಫುಲ್ ನಾಯಕರಾಗಲು ಯತ್ನಿಸಿದ

ಸೊಳ್ಳೆ ಮತ್ತು ಹಿಂಸೆ

ರಾತ್ರಿಯೆಲ್ಲ ಕಿವಿಯ ಬಳಿ ಗುಂಯ್ ಎನ್ನುತ್ತ, ನನ್ನ ನಿದ್ರೆ ಮತ್ತು ನೆಮ್ಮದಿಗೆ ಭಂಗ ತರುವ ಸೊಳ್ಳೆಯೊಂದು ತುಂಬ ಕಿರಿ ಕಿರಿ ನೀಡುತ್ತಿತ್ತು. ಮೂಗಿನ ತುಂದಿ ಕಚ್ಚುತ್ತ, ಕಿವಿಯ ಮೆದುತೊಗಲು ಚುಚ್ಚಿ ಹಿಂಸೆ ಕೊಡುತ್ತ ನನ್ನ ಆಟ ಆಡಿಸುತ್ತಿತ್ತು. ಅದನ್ನು ಮುಗಿಸುವುದು ಸೂಕ್ತ ಎಂದು ಪ್ರತಿಹಿಂಸೆಗೆ ಸಿದ್ದವಾದರೆ ಸೊಳ್ಳೆ ಗಾಂಧಿ ತಾತನ ಮೂಗಿನ ಮೇಲೆ ಕೂತುಬಿಡೋದಾ...!

ಜೋಗುಳ ೨೦೦; ತಾಯ್ತನದ ಸಂಭ್ರಮ ಮತ್ತು ಇತರ ನೆನಪುಗಳು

ಜೋಗುಳ... ತಾಯ ಎದೆ ಹಾಡು. ಪ್ರತಿಯೊಬ್ಬನ ಮೊತ್ತ ಮೊದಲ ಮಹಾಕಾವ್ಯ. ಈ ಜಗಕ್ಕೆ ಕಣ್ಣು ತೆರಕೊಳ್ಳುವ ಮುನ್ನ, ಕಿವಿಗೆ ಎಲ್ಲ ಶಬುದಗಳ ಅರ್ಥ ಹೊಳೆಯುವ ಮುನ್ನ ಕೇಳಿಸಿಕೊಳ್ಳುವ ಜೀವಸಂಗೀತವದು. ಅವಳೆದೆಯಾಳದ ಪ್ರೀತಿ ಹಾಡುಗಳಾಗಿ ಕಂದನ ಭಾವಕೋಶದ ಪ್ರತಿ ಜೀವಕಣಕ್ಕೂ ತಾಗುವ ಪರಿಯೇ ಅನನ್ಯ. ನಾವು ಮನುಷ್ಯ ಜೀವವಾಗುವ ಪ್ರಕ್ರಿಯೆಯ ಮೊದಲ ಹಂತವದು. ತಾಯಿಯಾಗುವ ಬಹುದೊಡ್ಡ ಸೌಭಾಗ್ಯ ಹೆಣ್ಣಿಗೆ ಮಾತ್ರ! ಮತ್ತೊಂದು ಜೀವಕ್ಕೆ ಜನ್ಮ ಕೊಡುವ ಸೃಷ್ಟಿಯ ಲೀಲೆಗೆ ಹೆಣ್ಣಿನ ಒಡಲೇ ಬೇಕು! ಪುರುಷಸಿಂಹ ಎನಿಸಿಕೊಳ್ಳುವ ಗಂಡು ಅಪಾರ ಹಣ, ಐಶ್ವರ್ಯ, ಸಂಪತ್ತನ್ನು ಗಳಿಸಬಹುದು... ತನ್ನ ಅಧಿಕಾರದ ಧಿಮಾಕಿನಲ್ಲಿ ಹೂಂಕರಿಸಬಹುದು, ಜಗತ್ತನ್ನು ಗೆಲ್ಲುವ ಸಾಹಸಕ್ಕೂ ಇಳಿಯಬಹುದು, ಪರಾಕ್ರಮಿಯಂತೆ ಮೀಸೆ ತಿರುವಿ, ಸೆಡ್ಡು ಹೊಡೆದು ಈ ಭೂಮಂಡಲವನ್ನೇ ತಿರುಗಿಸಿಡಲೂಬಹುದೇನೋ! (?) ಆದರೆ, ಬಡ್ಡೀಮಗ ತಿಪ್ಪರಲಾಗ ಹಾಕಿದರೂ ತನ್ನೊಡಲಲ್ಲಿ ಒಂದೇ ಒಂದು ಜೀವಕುಡಿಯನ್ನು ಬೆಳೆಸಲಾರ... ಅದೇನಿದ್ದರೂ ಹೆಣ್ಣಿಗೆ ಮಾತ್ರ ಈ ಸೌಭಾಗ್ಯ! ಅದಕ್ಕೇ ತಾಯಿ ಎಂದರೆ ದೈವ. ಮಾ ತುಝೇ ಸಲಾಂ... ಒಡಲೂ ಕೂಡ ಬಾಡಿಗೆ ಕೊಡಬಹುದಂತೆ! ಮೊದಲ ಸಲ ಕೇಳಿದಾಗ ಮೈ ಉರಿದುಹೋಗಿತ್ತು. ಮನೆ, ಜಾಗ, ವಸ್ತು... ಹೀಗೆ ಏನೆಲ್ಲ ಬಾಡಿಗೆ ಕೊಡಬಹುದು. ಆದರೆ, ಒಂದು ಜೀವಕ್ಕೆ ಜನ್ಮ ಕೊಡುವ ಹೆಣ್ಣಿನ ಒಡಲು ಕೂಡ ಬಾಡಿಗೆಗೆ ಕೊಡಬಹುದೇ!... ಮೊದಲ ಬಾರಿಗೆ ಇದನ್ನು ಕೇಳಿದಾಗ ಕ್ಷಣ ಹೊತ್ತು ದಂಗಾದೆ. ಇದರ ಆಳ, ಹರವು

ಜಾತಿ ಆಧಾರಿತ ತಾರತಮ್ಯ: ಭಾರತಕ್ಕೆ ಸಮ್ಮತ ಸಿದ್ಧಾಂತ?

ಜಾತಿ ಆಧಾರಿತ ತಾರತಮ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸುವ ಮಹತ್ವದ ಚಿಂತನೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಮಹತ್ವದ ಬೆಳವಣಿಗೆ. ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಇದೊಂದು ಅತ್ಯಂತ ಶ್ರೇಷ್ಠ ಹೆಜ್ಜೆ. ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಮ್ಮೇಳನ ಇಂಥದೊಂದು ದಿಟ್ಟ ಕ್ರಮಕ್ಕೆ ಯೋಚಿಸುತ್ತಿರುವುದು ಇಡೀ ವಿಶ್ವವನ್ನು ಆರೋಗ್ಯಕರ ಬದುಕಿನತ್ತ ಕೊಂಡೊಯ್ಯುವಂಥದು. ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ. ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆ

ನಾವೆಷ್ಟು ನಾಮರ್ದಗಳಾಗಿದ್ದೇವೆ?

ನಮ್ಮೆಲ್ಲ ಕನಸು, ಆಶಯಗಳ ಪ್ರತೀಕವಾಗಬೇಕಿದ್ದ ನಾವೇ ಆಯ್ಕೆ ಮಾಡಿದ ಸರ್ಕಾರಗಳು 'ಸೆಟ್-ಅಪ್' ಕಲ್ಚರಿಗೆ ಸರಿದು ನಿಂತಿವೆ. ಒಂದು ನಿರ್ಧಿಷ್ಟ ಕೋಮು, ಕಲ್ಟ್, ಜಾತಿ, ಧರ್ಮಕ್ಕೆ ಸೇರಿದವರು ಒಂದು ಗ್ಯಾಂಗ್ ಮಾಡಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವದ ಹೆಸರಲ್ಲಿ ಬಲಿಷ್ಠ ಕೋಮುಗಳ ಸ್ವಯಂಘೋಷಿತ ರಾಜ್ಯ-ರಾಷ್ಟ್ರೀಯ ಲೀಡರ್ ಗಳು ಪವರ್ ಡೀಲರ್ ಗಳಾಗಿದ್ದಾರೆ. ಅವರನ್ನೆಲ್ಲಾ ನಾವು ಜನನಾಯಕರೆಂದು ನಂಬುತ್ತೇವೆ. ಬಾಟಾ ಬಾಟಿಯ ವ್ಯಾಪಾರಿ ಬುದ್ಧಿ ಇಂದಿನ ಪಾಲಿಟಿಕಲ್ ಕ್ವಾಲಿಫಿಕೇಷನ್ ಆಗಿಹೋಗಿದೆ. ಜಾತಿವಾರು ಲೆಕ್ಕಾಚಾರ, ಸಂಖ್ಯಾಬಲದ ಜೋಡಣೆಗೆ ಫ್ರಂಟ್ ಲೈನ್ ಲೀಡರ್ ಗಳು ಬ್ರೋಕರ್ ಕೆಲಸದಲ್ಲಿ ತೊಡಗಿದ್ದಾರೆ. ಧರ್ಮ ಎನ್ನುವುದು ಇವರು ತೊಡುವ ಹವಾಯಿ ಚಪ್ಪಲಿಗಿಂತ ಕಡೆಯಾಗಿ ಹೋಗಿದೆ. ಯೂಸ್ ಅಂಡ್ ಥ್ರೋ ವಸ್ತುವಾಗಿದೆ. ಧಾರ್ಮಿಕ ನಾಯಕರೆಲ್ಲ ತಮ್ಮ ಅನುಯಾಯಿಗಳನ್ನು ರಾಜಕಾರಣಿಗಳ ಗುಲಾಮರನ್ನಾಗಿ ಪರಿವರ್ತಿಸತೊಡಗಿದ್ದಾರೆ. ಹೀಗೆ ರಾಜಕಾರಣಿಗಳು ಮತ್ತು ಧಾರ್ಮಿಕ ನಾಯಕರ ನಡುವೆ ಒಡಂಬಡಿಕೆಗಳು ಯಾವ ಎಗ್ಗಿಲ್ಲದೆ ನಡೆಯುತ್ತಿವೆ. ಯಾವ ಆಶಾಭಾವದಿಂದ ಇದನ್ನೆಲ್ಲ ಸಹಿಸಿಕೊಂಡಿರಬೇಕೋ... ಇಂಥದೊಂದು ಸಾತ್ವಿಕ ಆಕ್ರೋಶ ಬಹುತೇಕ ಪ್ರಜ್ಞಾವಂತರಲ್ಲಿಯೂ ಮೂಡುತ್ತಿದೆ. ಮತಾಂತರ ವಿರೋಧಿಸುವ ಪಕ್ಷದ ಸರ್ಕಾರ ಪಕ್ಷಾಂತರವನ್ನು ಆಪರೇಷನ್ ಕಮಲ್ ಎನ್ನುವ ಸೋಗಿನಲ್ಲಿ ನಡೆಸುತ್ತಿದೆ. ಯಾವ ನೈತಿಕ ನೆಲೆಯಲ್ಲಿ ಇದನ್ನು ಸಮರ್ಥಿಸಿಕೊಳ್ಳುತ್ತ