ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ 18, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭಾರತದ ರಾಜಕೀಯದಲ್ಲಿ ಹೆಣ್ಣು!

ನಮ್ಮ ದೇಶದಲ್ಲಿ ಗಂಡಸರಂತೆ ವರ್ತಿಸುವ ಹೆಣ್ಣುಮಕ್ಕಳನ್ನು "ಗಂಡೆದೆ" ಎಂದು ಮೆಚ್ಚಿಕೊಳ್ಳುತ್ತಾರೆ. ಇಂದಿರಾಗಾಂಧಿಯನ್ನು "ಕಾಂಗ್ರೆಸ್ಸಿನಲ್ಲಿರುವ ಏಕೈಕ ಗಂಡಸು" ಎಂದೇ ಬಣ್ಣಿಸಲಾಗುತ್ತಿತ್ತು. ಸುಂದರಿಯೂ, ದಿಟ್ಟೆಯೂ ಆಗಿದ್ದ ಇಂದಿರಾ ಆ ಕಾಲದ ಬಹುತೇಕ ಕಾಂಗ್ರೆಸ್ಸಿಗರಿಗೆ "ಆತ್ಮೀಯ ಮೇಡಂ" ಆಗಿದ್ದರು. ಗಂಡ ಫಿರೋಜ್ ಸಾವಿನ ನಂತರ ವಿಧವೆ ಎನ್ನುವ ಹಿಂಜರಿಕೆಗಳಿಂದ ಮುಕ್ತವಾಗಿದ್ದ ಇಂದಿರಾ, ಅಪ್ಪ ನೆಹರೂ ಹಬ್ಬಿಸಿಟ್ಟಿದ್ದ ಪಾಲಿಟಿಕ್ಸ್ ನಲ್ಲಿ ಬೆಳೆಯುವುದಕ್ಕೆ ಸಾಕಷ್ಟು ಅವಕಾಶದ ಅಂಗಳ ತೆರಕೊಂಡೇ ಇತ್ತು. ಅದನ್ನು ಅಷ್ಟೂ ತುಂಬಿಕೊಂಡ ಇಂದಿರಾ ತುಳುಕಿದರು. ಆಲದ ಮರದಂತೆ ಹಬ್ಬಿಕೊಂಡರು. ಪಕ್ಕದಲ್ಲಿ ಯಾವ ಬಳ್ಳಿಯೂ ಚಿಗುರೊಡೆಯದಂತೆ ನೋಡಿಕೊಂಡರು. ಚಾಣಾಕ್ಷತೆ, ನೆಹರೂ ಮಗಳೆನ್ನುವ ಟ್ಯಾಗಲೈನ್ ಮತ್ತು ಗಾಂಧಿ ಎನ್ನುವ ಹೆಸರಿನ ವಜನ್ನು ಇಂದಿರಾಗೆ ಪಕ್ಷ ರಾಜಕಾರಣದಲ್ಲಿ ಜಾಗ ಗಟ್ಟಿಗೊಳಿಸಿತ್ತು. ಆ ಕಾಲದ ಜನಸಾಮಾನ್ಯರಲ್ಲಿ ಆಕೆ ಹೆಂಗಸು, ಅದರಲ್ಲೂ ವಿಧವೆ ಎನ್ನುವ ಅನುಕಂಪ ಮನೆ-ಮನದ ಮಾತಾಗಿತ್ತು. ಆ ಸ್ನಿಗ್ಧ ಸೌಂದರ್ಯ, ನಿಲುವು ಕೂಡ ಸೆಳೆದಿತ್ತು. ಪ್ರಧಾನಿ ಪಟ್ಟದಲ್ಲಿ ಆಕೆ ವಿರಾಜಿಸುತ್ತಿದ್ದುದು ಹೇಗೆ ನೋಡಿದರೂ ಚಂದವಾಗೇ ಕಾಣಿಸುತ್ತಿತ್ತು. ದೇಶ ವಿದೇಶದ ಪ್ರಧಾನಿ, ರಾಷ್ಟ್ರಪತಿ, ರಾಯಭಾರಿಗಳಿಗೆಲ್ಲ ಹಸ್ತಲಾಘವ ನೀಡುತ್ತ ನಕ್ಕಳೆಂದರೆ ಸಾಕು ಇಡೀ ಭಾರತದ ಹೆಂಗಸರು ಪುಳಕಗೊಳ್ಳುತ್ತಿದ್ದರು. ಮತಗಟ್ಟ