ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2017 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

‘ಬಲ’ಗೊಳ್ಳುತ್ತಿರುವ ರಾಹುಲ್‌

ನೆಹರೂ ನೇತೃತ್ವದ ಕಾಂಗ್ರೆಸ್‌ ತೊರೆದ ಇಂದಿರಾ ಗಾಂಧಿ ಹೊಸ ಕಾಂಗ್ರೆಸ್‌ ಕಟ್ಟಿಕೊಂಡರು. ರಾಜೀವ್‌ ಅದನ್ನೇ ಮುಂದುವರಿಸಿದರು. ಇಬ್ಬರೂ ಕೊಲೆಯಾದರು. ಅಲ್ಲಿಯವರೆಗೂ ಭವ್ಯವಾಗಿದ್ದ ಕಾಂಗ್ರೆಸ್‌ ಎನ್ನುವ ಮಹಲಿಗೆ ಮುದಿ ರಾಜಕಾರಣಿಯೊಬ್ಬ ಹೊಕ್ಕುಬಿಟ್ಟ. ಧ್ವಂಸದ ಅಧ್ಯಾಯ ಆರಂಭಿಸಿ, ‘ಬಳು ಹೊಕ್ಕ ಮನೀ ಅಳು’ ಎನ್ನುವಂತೆ ಕಾಂಗ್ರೆಸ್‌ ಅವಸಾನಕ್ಕೆ ನಾಂದಿ ಹಾಡಿದ. ಅಲ್ಲಿಂದಾಚೆಗೆ ಕಾಂಗ್ರೆಸ್‌  ಶೈತಾನ್‌ ಹೊಕ್ಕ ಮಹಲ್‌ ಆಗಿತ್ತು. ಅಕ್ಷರಶಃ ಭೂತ ಬಂಗಲೆಯಾಗಿತ್ತು.  ತೀವ್ರ ಒತ್ತಡದಲ್ಲಿದ್ದ ಸೋನಿಯಾ ಅಳುಕುತ್ತಲೇ ಮಹಲು ಹೊಕ್ಕರು. ಗಾಂಧಿ ಮನೆತನದ ಸೊಸೆ, ಮೂಲ ಇಟಲಿಯ ಸಮಚಿತ್ತದ ಹೆಣ್ಣುಮಗಳು ಹಲ್ಲಿ, ಬಾವಲಿ, ಹಾವುಗಳಿಂದ ತುಂಬಿದ ಮಹಲನ್ನು ಸ್ವಚ್ಛಗೊಳಿಸಿ ಮತ್ತೆ ವಾಸ ಯೋಗ್ಯವಾಗಿಸಿಕೊಂಡರು. ಅಳಿದುಳಿದ ವಫಾದಾರ್‌ಗಳು ಕೋಠ್ರಿ ಹೊಕ್ಕರು. ಕೆಲವರು ಅಕ್ಷರಶಃ ಕಾವಲಾದರು. ಧ್ವಂಸದಲ್ಲಿ ಹೋದ ಮಹಲಿನ ಮಾನ ಉಳಿಸಿದರು. ರಾಜಕೀಯ ಮತ್ಸರಿಯರ ಮಸಲತ್ತುಗಳ ನಡುವೆಯೂ ಯಶಸ್ಸು ಕಾಲಬುಡಕ್ಕೇ ಬಂದಾಗ ಧಿಕ್ಕರಿಸಿ ಸರದಾರನೊಬ್ಬನಿಗೆ ದೇಶದ ಭವಿಷ್ಯ ಕಟ್ಟುವ ಕೆಲಸ ವಹಿಸಿ ಬೆನ್ನಿಗೆ ನಿಂತರು. ಮನೆಯ ಹಿರಿಯಕ್ಕನಂತೆ ನಿಂತು ಕುಸಿಯಲಿದ್ದ ಮಹಲನ್ನು ಹೆಗಲು ಕೊಟ್ಟು ತಡೆದರು.  ಹಗರಣದ ಆರೋಪ, ಪ್ರತ್ಯಾರೋಪಗಳ ಬೆಂಕಿಮಳೆಗೆ ಮಹಲು ಮತ್ತೆ ತುತ್ತಾಯಿತು.   ದೇಶದ ಒಂದು ಮೂಲೆಯಲ್ಲಿ ಕೋಮು ಗಲಭೆ, ಹಿಂಸೆ. ಪ್ರತಿಹಿಂಸೆ ಎಬ್ಬಿಸಿ ಅದರ ಕಾವನ್ನು ಎಲ್ಲೆಡೆ ಹಬ್ಬಿಸಿದವ

‘ನ್ಯೂಟನ್‌’ ಇಂಡಿಯಾದ ವಾಸ್ತವಿಕ ಚಿತ್ರ

ವ್ಯವಸ್ಥೆ ಸರಿಪಡಿಸುವ ಕೆಲಸ ಎಲ್ಲಿಂದ ಶುರು ಮಾಡೋದು? ಹೇಗೆ ಶುರು ಮಾಡೋದು? ಉತ್ತರ ತುಂಬ ಸುಲಭ. ಎಲ್ಲಿಂದಾದರೂ ಶುರು ಮಾಡಿ, ಹೇಗಾದರೂ ಶುರು ಮಾಡಿ. ಆದರೆ ಇಚ್ಛಾಶಕ್ತಿ ಮತ್ತದಕ್ಕೆ ಚಾಲನೆ ನೀಡುವ ಬದ್ಧತೆ ಬೇಕು. ಅದಕ್ಕೆ ಮುಖ್ಯವಾಗಿ ಎದೆಗಾರಿಕೆ ಬೇಕು. ಅದಕ್ಕೂ ಮುಖ್ಯವಾಗಿ ಕಾಯಕ ಯಾವುದಾದರೂ ಇರಲಿ. ಕಾರ್ಯಕ್ಷಮತೆ ಬೇಕು. ಜೀವಪರ ನ್ಯಾಯ ಬೇಕು. ನಮ್ಮ ನೆಲೆಯಿಂದಲೇ ವ್ಯವಸ್ಥೆ ಬದಲಾವಣೆಗೆ ಆರಂಭ ನೀಡಬಹುದಲ್ಲ! ಒಂದು ಸೇಬು ಹಣ್ಣು ಮೇಲಕ್ಕೆ ಹಾರಿಸಿದರೆ ಅದು ಕೆಳಕ್ಕೇ ಬೀಳುತ್ತದೆ. ಮೇಲೆ ಎಸೆದ ಕಲ್ಲು ಗುಂಡು ಕೂಡ ಬೀಳುವುದು ಕೆಳಕ್ಕೇ. ಒಬ್ಬ ಚಹಾ ಮಾರುವವನು ಮತ್ತು ಅಂಬಾನಿಯಂಥ ಕರೋಡಪತಿ ಮೇಲಿನಿಂದ ನೆಗೆದರೆ ಇಬ್ಬರೂ ಬೀಳುವುದು ಕೇಳಕ್ಕೇ. ಗುರುತ್ವ ಶಕ್ತಿ ನೀಡಿದ ಮೊತ್ತ ಮೊದಲ ಸಮಾನತೆ ಸಂದೇಶ ಅದ್ಭುತ! ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಭೌತಿಕವಾಗಿ ಯಾವುದೂ ತಂತಾನೇ ಪರಿವರ್ತನೆ ಆಗುವುದಿಲ್ಲ ಎನ್ನುವುದು. ವಿಜ್ಞಾನಿ ಸರ್‌ ಐಸಾಕ್‌  ನ್ಯೂಟನ್‌ ಕಂಡುಕೊಂಡ ಈ ವೈಜ್ಞಾನಿಕ ಸತ್ಯವನ್ನು ಸಮಕಾಲೀನ ಸಾಮಾಜಿಕ, ರಾಜಕೀಯ ಸಂದರ್ಭಕ್ಕೂ ಸಮೀಕರಿಸಿದರೆ ಬದಲಾವಣೆ ಎನ್ನುವುದು ತಂತಾನೇ ಘಟಿಸುವುವಂಥದ್ದಲ್ಲ ಎನ್ನುವ ಸ್ಪಷ್ಟತೆ ಮೂಡುತ್ತದೆ. ಇಂಥ ವೈಜ್ಞಾನಿಕ ಮನೋ– ಧೋರಣೆ ಎಂಥ ಬದಲಾವಣೆಯನ್ನಾದರೂ ತರಬಲ್ಲುದು. ಅದಕ್ಕೆ ಕ್ರಿಯೆ ಅಥವಾ ಚಾಲನೆ ಮುಖ್ಯ ಅಷ್ಟೇ.  ‘ವಸ್ತುವಿಗೆ ತನ್ನದೇ ಸ್ಥಿರ ಸ್ಥಿತಿ (state of rest) ಇರುತ್ತದೆ. ಬಾಹ್ಯ ಪ್ರಚೋದನೆ

ಪ್ರಭುತ್ವದ ಹಣಾಹಣಿ ಪ್ರಜೆಗಳಿಗೆ ಮೋಜು..

ಒಂದು ಟಿಪ್ಪಣಿ ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ. ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್‌ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್‌. ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್‌ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್‌ ಅಂಗಳದಲ್ಲಿ  ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್‌(ಫುಲ್‌) ಮಿನಿಸ್ಟರ್‌ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್‌ ಪವರ್‌ ಆಜ್ಞಾಪಾಲಕರಂತೆ ತನಿಖಾ ದಳ ನಾಡಿನ ಮೂ

MOM: ಹುಡುಗಿ ಅತ್ಯಾಚಾರ ಹಿಂಸೆಗೆ ತಾಯಿ ಪ್ರತಿಹಿಂಸೆ, ‘ಬಾಹ್ಯ ಪ್ರಚೋದನೆಗಳ’ ಮೇಲೆ ಆಕ್ರೋಶ

ತನ್ನ ಗಂಡನ ಮೊದಲ ಪತ್ನಿಯ ಮಗಳು ತನ್ನನ್ನು ಯಾವ ರೀತಿಯಲ್ಲೂ ತಾಯಿ ಎಂದು ಒಪ್ಪಿಕೊಳ್ಳದವಳು. ಅಂಥ ಮಗಳು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದಾಗ ತಾಯಿ ಸ್ಥಾನದಲ್ಲಿರುವ ಹೆಣ್ಣೊಬ್ಬಳ ಸ್ಪಂದನೆ ಹೇಗಿರಬಹುದು!  ತುಂಬ ಕಾಡಬಲ್ಲ ಪ್ರಶ್ನೆ ಇದು. ಮನುಷ್ಯ ಹುಟ್ಟು ಅವನ ಒಟ್ಟು ಬದುಕಿನ ಫಿಲಾಸಫಿ ಗಮನಿಸಿದರೆ ಹೊಳೆವ ಸತ್ಯಗಳಲ್ಲಿ ಇಷ್ಟನ್ನು ಈ ಕ್ಷಣಕ್ಕೆ ಹೆಕ್ಕಿಕೊಳ್ಳಬಹುದು.– ಎಲ್ಲ ಸಂಬಂಧಗಳು ಜೈವಿಕ ಆಧಾರದಲ್ಲಷ್ಟೇ ಗಟ್ಟಿಗೊಳ್ಳುವುದಿಲ್ಲ. ತನಗೆ ಹುಟ್ಟಿದ, ತನ್ನ ಜೊತೆ ರಕ್ತ ಹಂಚಿಕೊಂಡ ಜೀವಗಳಷ್ಟೇ ಮನುಷ್ಯ ಜೀವ ಎಂದುಕೊಂಡರೆ ಈ ಜೀವಸಂಬಂಧಕ್ಕೆ ಅರ್ಥವೇನು?  ಒಂದು ಜೀವ ಅಪಾಯಕ್ಕೊಳಗಾದರೆ, ತೊಂದರೆಗೊಳಗಾದರೆ, ಹಲ್ಲೆಗೊಳಗಾದರೆ ಮತ್ತೊಂದು ಜೀವ ಅದಕ್ಕೆ ಸ್ಪಂದಿಸುವುದೇ ನಿಜದ ಮಾನವೀಯತೆ. ಸಹಮಾನವರ ಜೊತೆ ಸಹಾನುಭೂತಿ, ಸಹಿಷ್ಣುತೆ, ಸ್ಪಂದನೆಯೇ ನಿಜದ ಮಾನವ ಧರ್ಮ.  ದ್ವೇಷ, ಮೋಹ, ಮತ್ಸರಗಳೆಲ್ಲವೂ ಮನುಷ್ಯ ಸಹಜವೇ. ಆದರೆ ಅವು ವಿಕೃತಿಗಿಳಿದಾಗಲೇ ಸಂಘರ್ಷ. ಅದರಿಂದ ಹುಟ್ಟುವ ಅಸಹಿಷ್ಣುತೆ, ಅಮಾನವೀಯ ನಡೆಗಳಿಂದಾಗಿ ಅನಾಹುತಗಳು ಸಂಭವಿಸುತ್ತವೆ. ಇದು ಮನುಷ್ಯನೊಳಗಣ ಜಗತ್ತು. ಸಂಘರ್ಷ. ಬಾಹ್ಯಕ್ಕಿಂತ ಆಂತರಿಕ ಪ್ರಚೋದನೆಗಳೇ ಇವಕ್ಕೆ ಮೂಲ. ರವಿ ಉದ್ಯಾವರ ಎನ್ನುವ ಉದಯೋನ್ಮುಖನ ನಿರ್ದೇಶನದ ಮತ್ತು ಖ್ಯಾತ ನಟಿ ಶ್ರೀದೇವಿ ಅಭಿನಯದ ‘ಮಾಮ್‌’ (MOM) ಚಿತ್ರವನ್ನು ಗೆಳೆಯ ಇಟ್ನಾಳ್‌ ಜೊತೆ ನೋಡಿದೆ. ಚಿತ್ರದ ಕೆಲ ಸನ್ನಿವೇಶಗಳು ನನ್ನೊಳಗಿನ ಮನುಷ್

ವಿಪರೀತ ದೇಶಭಕ್ತಿ, ಧರ್ಮಮೋಹ ಅಟ್ಟಹಾಸದ ಕಾಲಘಟ್ಟದಲ್ಲಿ ಸಿಜಿಕೆ ರಾಷ್ಟ್ರೀಯ ರಂಗೋತ್ಸವ 2017

ಇಂಡಿಯನ್‌ ಥಿಯೇಟರ್‌ ಜಗತ್ತಿನಲ್ಲಿ ಸಿಜಿಕೆ (ಸಿ.ಜಿ. ಕೃಷ್ಣಸ್ವಾಮಿ) ಅವರದು ದೊಡ್ಡ ಹೆಸರು. ರಂಗ ಕಾಣ್ಕೆಯೂ ಮಹತ್ವದ್ದು. ತಮ್ಮ ಸಾಮಾಜಿಕ ಮತ್ತು ರಾಜಕೀಯ ಬದ್ಧತೆಗಳಿಂದ ಹೊರಹೊಮ್ಮಿದ ವೈಚಾರಿಕತೆಯನ್ನು ಪ್ರಯೋಗಕ್ಕೊಳಪಡಿಸಿ ಆಮೂಲಕ ರಂಗಕ್ಕೆ ವಿಶಿಷ್ಟ ನೆಲೆಗಟ್ಟನ್ನು ರೂಪಿಸುವಲ್ಲಿನ ಅವರ ಪಾತ್ರ ಹಿರಿದು. ಬರಿಯ ಮನರಂಜನಾ ಮಾಧ್ಯವನ್ನಾಗಿ ರಂಗವನ್ನು ದುಡಿಸಿಕೊಳ್ಳುವವರ ಮಧ್ಯೆ ಸಿಜಿಕೆ ಹೊಸ ಆಶಯಗಳು ಮತ್ತು ವೈಚಾರಿಕ ಹರಿತವನ್ನು ಪರಿಣಾಮಕಾರಿಯಾಗಿ ನಿರೂಪಿಸುವ ಸಾಧ್ಯತೆಗಳನ್ನು ತೋರಿಸಿಕೊಟ್ಟವರು. ಬಹು ಹಿಂದೆಯೇ ‘ಇಪ್ಟಾ’ದಂಥ ರಾಷ್ಟ್ರೀಯ ವೇದಿಕೆ ಕೇವಲ ನೌಟಂಕಿಯಲ್ಲೇ ಉಳಿದುಬಿಡಬಹುದಾಗಿದ್ದ ರಂಗಭೂಮಿಗೆ ಸಾಮಾಜಿಕ ಬದ್ಧತೆ ಮತ್ತು ಮೌಲಿಕತೆಯನ್ನು ಎಡಪಂಥೀಯ ನೆಲೆಯಲ್ಲಿ ತುಂಬಿತ್ತು. ಆ ದಾರಿಯಲ್ಲೇ ಸಿಜಿಕೆ ರಂಗ ಬದುಕನ್ನು ಕಟ್ಟಿಕೊಂಡವರು. ಬಲಪಂಥೀಯ ನಡೆಯತ್ತ ವಾಲಿದ್ದೂ ಇದೆ. ಸರಿಪಡಿಸಿಕೊಂಡು ಜೀವಪರ ನಿಲುವಿಗೆ ಗಟ್ಟಿಯಾಗಿ ನಿಂತು ಗಾಂಧಿ ವಿಚಾರಧಾರೆಯನ್ನು ಬಿಂಬಿಸುವ ‘ದಂಡೆ’ ಮತ್ತು ಸಾಮಾಜಿಕ ನ್ಯಾಯ ಪರಿಕಲ್ಪನೆ ಕಟ್ಟಿಕೊಡುವ ‘ಅಂಬೇಡ್ಕರ್‌’ ಮತ್ತಿತರ ಮಹತ್ವದ ನಾಟಕಗಳನ್ನು ರಂಗಕ್ಕೆ ನೀಡಿದ್ದಿದೆ.  ಬಹುವರ್ಷಗಳ ಹಿಂದೆ ‘ಬೆಲ್ಚಿ’,‘ಒಡಲಾಳ’ದಂಥ ಸಾಮಾಜಿಕ ತಲ್ಲಣಗಳನ್ನು ರಂಗದ ಮೇಲೆ ಪರಿಣಾಮಕಾರಿಯಾಗಿ ಇಟ್ಟಿದ್ದು ಸಿಜಿಕೆ. ಅವರ ಗರಡಿಯಲ್ಲಿ ಪಳಗಿದವರಲ್ಲಿ ಸಂವೇದನೆಯ

ಮಹಿಳೆ, ಮಕ್ಕಳು ಮತ್ತು ನಾಡ ಕಾಳಜಿ

ತುಂಬ ವರ್ಷಗಳ ಹಿಂದಿನ ದುರಂತವಿದು. ನಾನಾಗ ಕಾಲೇಜು ಸೇರುವ ವಯಸ್ಸಿನ ಹುಡುಗ. ಅವತ್ತೊಂದಿನ ಸರಿ ರಾತ್ರಿಯಲ್ಲಿ ಹೆಣ್ಣುಮಗಳ ನರಳಾಟ. ಅಳು. ನೋಡಿದರೆ ತುಂಬು ಗರ್ಭಿಣಿ ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದಳು. ಪರಿಸ್ಥಿತಿ ಗಂಭೀರವಾಗಿತ್ತು. ದವಾಖಾನೆಗೆ ಸಾಗಿಸಲು ಪರದಾಟ ನಡೆದಿತ್ತು.  ಅಂಬ್ಯುಲೆನ್ಸ್‌! ಅಯ್ಯೋ.. ಬಿಡಿ. ಆಟೊ, ಟ್ಯಾಕ್ಸಿಗಳು ಅಲ್ಲಿನ್ನೂ ಬಂದೇ ಇರಲಿಲ್ಲ. ಆ ಸರಿಹೊತ್ತಿನಲ್ಲಿ ಸಮೀಪದಲ್ಲೇ ನಿಲ್ಲಿಸಿದ್ದ ಹಮಾಲರ ಎತ್ತಿನ ಗಾಡಿಯಲ್ಲಿ ಗರ್ಭಿಣಿಯನ್ನು ಹಾಕಿಕೊಂಡು ನಾವೇ ಎತ್ತುಗಳಂತೆ ದರ ದರನೆ ಎಳೆದು ಆಸ್ಪತ್ರೆ ತಲುಪಿಸಿದ್ದೆವು. ಅದು ಸರ್ಕಾರಿ ದವಾಖಾನೆ! ಊರಿಗದೊಂದೇ ದೊಡ್ಡ ದವಾಖಾನೆ.  ತಗ್ಗು, ದಿಣ್ಣೆಯ ಅದ್ವಾನ ರಸ್ತೆ, ಪವರ್ ಬೇರೆ ಕಟ್‌ ಆಗಿತ್ತು. ಮಂದ ಬೆಳಕಿನಲ್ಲಿ ಸಾಗಿ ಆಸ್ಪತ್ರೆ ತಲುಪಿದರೆ ಅಲ್ಲಿ ಇದ್ದದ್ದು ನರ್ಸ್, ಕಂಪೌಂಡರ್. ವಿಚಾರಿಸಿದರೆ ಹೆರಿಗೆ ಹಾಸಿಗೆಗಳು ಖಾಲಿ ಇಲ್ಲ ಎನ್ನುವ ಜವಾಬು. ಎಮರ್ಜೆನ್ಸಿಗೆ ಅಂತ ಒಂದು ಬೆಡ್‌ ಇರುತ್ತಲ್ಲ ಅದು ಖಾಲಿ ಇತ್ತು. ಆದರೆ ಅದಕ್ಕೆ ‘ದೊಡ್ಡ ಬಾಯಾರ’ ಪರ್ಮಿಶನ್‌ ಬೇಕು. ದೊಡ್ಡ ಬಾಯಾರು ಅಂದರೆ ಡಾಕ್ಟರಮ್ಮ.  ಆಸ್ಪತ್ರೆಯ ಆವರಣದಲ್ಲೇ ಆಕೆಗೊಂದು ಸರ್ಕಾರಿ ಮನೆ. ಬಾಗಿಲು ಬಡಿದರೆ ಸದ್ದೇ ಇಲ್ಲ! ಒಂದೇ ಸಮ ಜೋರಾಗಿ ಕೂಗಿದಾಗ ಗಡಸು ದನಿಯೊಂದು ಕಿಟಕಿ ಬಳಿ ಬಂದು ‘ಯಾಕೆ ದನಕ್ಕೆ ಬಡಿದಹಾಗೆ ಬಾಗಿಲು ಬಡೀತಿದೀರಿ ದೊಡ್ಡ ಬಾಯಾರು ಊರಲ್ಲಿಲ್ಲ’ ಎನ್ನುವುದು ಕೇಳಿಸಿತು. ಮತ್ತ