ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್ 15, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಾರ್ವೆ ರಾಜಧಾನಿ ಒಸ್ಲೊ ನೆಲಕ್ಕಿಳಿದಾಗ...

ನಾರ್ವೆ ರಾಜಧಾನಿ ಒಸ್ಲೊಗೆ ಪ್ಯಾರಿಸ್ ನಿಂದ ಪಯಣ ಶುರುವಾಯ್ತು. ಈ ಸಲ ನನ್ನವ್ವನಿಗೆ ಕಿಟಕಿ ಇರುವ ಸೀಟು ಸಿಕ್ಕಿತು. ಫ್ಲೈಟ್ ಟೇಕಾಫ್ ಆಗುವ ಮಜಾ ಅವಳಿಗೆ ಮೊದಲ ಸಲ ಸಿಕ್ಕಿರಲಿಲ್ಲ. ಈ ಸಲ ಅವಳು ಥ್ರಿಲ್ ಆದಳು. ಭೂಮಿಯಿಂದ ಮೇಲಕ್ಕೆ ಹಾರುವ ಹಕ್ಕಿಯಂಥ ಅನುಭವ ಆಕೆಗೆ ಆಗಿರಲೇಬೇಕು. ಅಮ್ಮಾ! ಜಮೀನ್, ರಸ್ತಾ, ಘರ್ ಕಿತನೆ ಛೋಟೆ ಲಗ ರಹೇ ಹೈ, ವೋ ದೇಖೋ ಆಸ್ಮಾನ್, ಬಾದಲ್, ಸೂರಜ್... ಗಾಂವ್ ಮೇ ಉಡತಾ ಹುವಾ ಹವಾಯಿಜಹಾಜ್ ಸಿರ್ಫ್ ದೇಖತೆ ಥೇ, ಆಜ್ ಅಸಲಿ ಎಹಸಾಸ್ ಹುವಾ, ಹಮಾರಿ ಬೇಟಿ ಸಪನಾ ಸಚ್ ಕರ್ ದೀ...  ನನ್ನವ್ವನ ಮಾತುಗಳಿವು. ಭೂಮಿ, ಆಕಾಶ, ರಸ್ತೆ, ಮನೆ... ಎಲ್ಲ ಎಷ್ಟು ಸಣ್ಣ ಜಗತ್ತು! ಎಲ್ಲ ಅದೆಷ್ಟು ಹತ್ತಿರ! ನಮ್ಮೂರ ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ದೂರದಿಂದಲೇ ನೋಡಿ ದಂಗಾಗುತ್ತಿದ್ದೆವು... ಅದರಲ್ಲಿ ಹತ್ತುವ ಕನಸು ಮೂಡುತ್ತಿತ್ತು...  ಆ ಕನಸನ್ನು ಮಗಳು ಈಗ ನನಸು ಮಾಡಿಬಿಟ್ಟಳು... ಅವಳ ಕೈಗೆ ಕ್ಯಾಮೆರಾ ಕೊಟ್ಟೆ. ಸಂಕೋಚದಿಂದಲೇ ಕ್ಲಿಕ್ ಮಾಡಲೆತ್ನಿಸಿದಳು. ಅವಳು ತಡಕಾಡುತ್ತಿರುವುದನ್ನೆಲ್ಲ ಅವಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುರೋಪ್ ಹುಡುಗಿ ಗಮನಿಸಿ ನಗುತ್ತಿದ್ದಳು. ನನ್ನತ್ತ ನೋಡಿ ದೊಡ್ಡದಾಗಿ ನಕ್ಕಳು. ಮೈ ಮಾಮ್ ಎಂದೆ, ಯಾ ಐ ಕ್ಯಾನ್ ಅಂಡರಸ್ಟ್ಯಾಂಡ್ ಎಂದು ನಕ್ಕಳು. ನನ್ನವ್ವನನ್ನೇ ನೋಡುತ್ತಿದ್ದಳು, ಕಡೆಗೂ ಆಕೆ ಒಂದಷ್ಟು ಕ್ಲಿಕ್ಕಿಸಿದಳು... ಯಾ ಸೀ ಗಾಟ್ ದಿ ಪಿಕ್ಸ್ ಅಂದಳಾಕೆ... ಅವಳಿಗೆ ಕ್ಯಾಮೆರಾದ ಮ