ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 26, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾವು...

ಕವಿ ಜಿ.ಎಸ್. ಶಿವರುದ್ರಪ್ಪ ಕಾವ್ಯ ಕಟ್ಟಿದರು. ಅದನ್ನು ಎದೆ ತುಂಬಿ ಹಾಡಿದವರೆಷ್ಟೋ. ಅವರು ಪ್ರೇಮ, ಪ್ರೀತಿಯ ಮಾತು ಹೇಳಿದರು. ಅದೆಷ್ಟೋ ಮಾನವ ಪ್ರೇಮಿಗಳು ಎದೆಗಿಳಿಸಿಕೊಂಡರು. ಕಾವ್ಯ, ಹಾಡು, ಪ್ರೇಮ ... ನಿರಂತರ.   ಇವು ಎಂದೂ ನಿಲ್ಲದ ಧಾರೆಗಳು. ಕವಿತೆಗೆ ಸಾವಿಲ್ಲ, ಕವಿಗೂ... * * *  ಬದುಕಿನೊಟ್ಟಿಗಿನ ಸಂಬಂಧವನ್ನು ಪದ್ಯ, ಗದ್ಯಗಳಲ್ಲಿ ಹಿಡಿದಿಡುವ ಯತ್ನ ಮನುಷ್ಯ ಸೂಕ್ಷ್ಮದ ಸಹಜ ನಡೆ. ಅವನಿಟ್ಟ ಹೆಜ್ಜೆ, ಆಡಿದ ನುಡಿ, ಕನಸಿದ ಭಾವ  ಎಲ್ಲದರ ಪಡಿನೆರಳನ್ನು ಪದ ಪದಗಳಲ್ಲೂ ವಿಸ್ಮಯದಂತೆ ಮೂಡಿಸುವುದು ಕಾವ್ಯಕ್ಕೆ ಸಾಧ್ಯವಿದೆ. ಸಾಲು, ಸಾಲುಗಳ ನಡುವಿನುಸಿರು, ಪಸೆ ಮತ್ತು ಎಲ್ಲ ಎಲ್ಲದರ ಗುಟ್ಟನ್ನು ಒಡಲಲ್ಲಿಟ್ಟುಕೊಂಡ ಕುತೂಹಲ ಧಾರೆಯಂತೆ ಹರಿದು ನಮ್ಮೊಳಗೂ ಇಳಿದಾಗ ಆಗುವ ಅನುಭೂತಿ ... ಭಾವುಕ ಜಗತ್ತನ್ನು ಕಲಾತ್ಮಕಗೊಳಿಸಿದ ಕವಿ ಜಿಎಸ್ಎಸ್ ಜೀವಪ್ರೀತಿಯನ್ನೇ ನೆಚ್ಚಿಕೊಂಡಿದ್ದರು. ಅಂತಃಕರಣ, ಸಹಜತೆ, ಸರಳತೆ ಮತ್ತು ಮುಗ್ಧತೆಯನ್ನು ಕಾವ್ಯಕ್ಕಿಳಿಸಿ ಮಾನವ ಪ್ರೇಮದ ಹೊನಲಾಗಿಸಿದರು. ಕಾವ್ಯ ಒಳಗಿನದೆಲ್ಲವನು ಬಟಾಬಯಲುಗೊಳಿಸಿಕೊಳ್ಳುವ ಕ್ರಿಯೆಯೂ ಹೌದು. ತಮ್ಮ ಮನದಾಳದ ಮಾನವ ಪ್ರೇಮವನ್ನು ಅವರೆಂದೂ ಬಚ್ಚಿಟ್ಟುಕೊಂಡವರಲ್ಲ. ಧಾರೆ ಎರೆದವರು. 'ಪ್ರೀತಿ ಇಲ್ಲದ ಮೇಲೆ...' ಇಲ್ಲಾವುದೂ, ಏನೂ ಇಲ್ಲ  ಎನ್ನುವುದರಲ್ಲಿ ದೊಡ್ಡ ನಂಬಿಕೆ ಇಟ್ಟುಕೊಂಡೇ ಮೊನ್ನೆ ಹೊರಟು ಹೋದರು. ಕಾಣದ ಕಡಲಿನತ್ತ... * * * ವಿಷಾದವೆಂದರೆ ಅ