ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 8, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ.... ಭಾಗ 4

1944. ಆಗ ಅಬ್ಬಾಗೆ ಇಪ್ಪತ್ತರ ಹರೆಯ. ಸಿರಾಜುದ್ದೀನ್ ಅಹ್ಮದ್ ಸಾಹೇಬ್ ಮತ್ತು ತಾಲೀಮುನ್ನೀಸಾ ಅವರ ಮಗಳು ಬಿಲ್ಖೀಸ್ ಅವರನ್ನು ಅಬ್ಬಾ (ಮೊಹಮ್ಮದ್ ರಫೀ) ವಿವಾಹವಾದರು. ನನಗಿದ್ದ ಮಾಹಿತಿಯಂತೆ ಸಿರಾಜುದ್ದೀನ್ ಅವರಿಗೆ ನಾಲ್ವರು ಹೆಂಡತಿಯರು ಮತ್ತು ಒಂಭತ್ತು ಮಕ್ಕಳು. ಹೆಂಡತಿಯರ ಪೈಕಿ ಮೂವರು ಒಬ್ಬರ ನಂತರ ಒಬ್ಬರಂತೆ ಅತ್ಯಂತ ಕಡಿಮೆ ಅಂತರದ ಅವಧಿಯಲ್ಲೇ ನಿಧನರಾಗಿದ್ದರು. ನಾಲ್ಕನೇ ಹೆಂಡತಿಯೇ ತಾಲೀಮುನ್ನೀಸಾ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡುಮಕ್ಕಳು. ಅವರಲ್ಲಿ ಬಿಲ್ಖೀಸ್ ಕೂಡ ಒಬ್ಬರು. ಅಮ್ಮಾಗೆ (ಬಿಲ್ಖೀಸ್) ಆಗ ಕೇವಲ ಹದಿಮೂರರ ವಯಸ್ಸು. ಮದುವೆ ಬಗ್ಗೆ ಏನೂ ತಿಳಿಯದ ವಯಸ್ಸು. 'ಒಂದು ದಿನ ನಾನು ಶಾಲೆಯಿಂದ ವಾಪಸ್ ಬಂದೆ. ಅದೇ ದಿನ ನನಗೆ ಮದುವೆ ಅಂತ ಹೇಳಿದರು. ಮದುವೆ ಗಂಡು ಈ ನಿನ್ನ ಅಬ್ಬಾ. ನಾನಾಗ ನಿನ್ನ ಅಬ್ಬಾನನ್ನು ಭಾಯ್ ಎಂದು ಕರೆಯುತ್ತಿದ್ದೆ' ಎಂದು ಅವರು ಆಗಾಗ ನನ್ನ ಬಳಿ ನೆನಪಿಸಿಕೊಳ್ಳುತ್ತಿದ್ದರು.. ಹಮೀದ್ ಭಾಯ್ ಅಬ್ಬಾ ಅವರ  ಎಲ್ಲಾ ವೃತ್ತೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಹಮೀದ್ ಭಾಯ್ ಕೂಡ ಸಿರಾಜುದ್ದೀನರ ಮಗಳು ಮೆಹರುನ್ನೀಸಾಳನ್ನು ಮದುವೆಯಾದರು. ಈಕೆ ಸಿರಾಜುದ್ದೀನ್ ಅವರ ಮೊದಲ ಪತ್ನಿಯ ಮಗಳು. ಹಮೀದ್ ಭಾಯ್ ಅಬ್ಬಾ ಜತೆ 1950ರವರೆಗೂ ಇದ್ದರು. ಆನಂತರದಲ್ಲಿ ಅವರು ತಮ್ಮ ಪರಿವಾರ ಸಮೇತ ಬೆಂಗಳೂರಿಗೆ ಸ್ಥಳಾಂತರಗೊಂಡರು. ಆಗ ಅಬ್ಬಾ ವ್ಯವಹಾರಗಳನ್ನೆಲ್ಲಾ ಅಮ್ಮಾ ಸಹೋದರ ಜ